Asianet Suvarna News Asianet Suvarna News

ಭಿಕ್ಷುಕ ಮುಕ್ತ ಭಾರತಕ್ಕೆ ಮುಂದಾದ ಕೇಂದ್ರ ಸರ್ಕಾರ, 30 ನಗರಗಳಲ್ಲಿ ಸ್ಮೈಲ್‌ ಯೋಜನೆ ಜಾರಿ!

ದೇಶದಲ್ಲಿ ಭಿಕ್ಷಾಟನೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ನಿಟ್ಟಿನಲ್ಲಿ  ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಜಾರಿ ಮಾಡಲಿದೆ. 2026ರ ವೇಳೆಗೆ ಭಾರತ ಭಿಕ್ಷಾ ವೃತ್ತಿಯಿಂದ ಮುಕ್ತವಾಗಬೇಕು ಎನ್ನುವ ನಿಟ್ಟಿನಲ್ಲಿ ಸ್ಮೈಲ್‌ ಯೋಜನೆ ಆರಂಭಿಸುವ ಸೂಚನೆ ನೀಡಿದೆ.

Bhiksha Vritti Mukt Bharat Centre gears up to eradicate begging in 30 cities by 2026 san
Author
First Published Jan 29, 2024, 1:00 PM IST | Last Updated Jan 29, 2024, 1:00 PM IST

ನವದೆಹಲಿ (ಜ.29): ಭಿಕ್ಷಾಟನೆಯನ್ನು ದೇಶದಲ್ಲಿ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಜಾರಿ ಮಾಡಲಿದೆ. ಭಾರತವನ್ನು ಭಿಕ್ಷಾ ವೃತ್ತಿ ಮುಕ್ತ ಭಾರತ (ಭಿಕ್ಷುಕರಿಲ್ಲದ ಭಾರತ) ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಭಿಕ್ಷಾಟನೆಯಲ್ಲಿ ತೊಡಗಿರುವ ವಯಸ್ಕರು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಸಮಗ್ರ ಸಮೀಕ್ಷೆ ಮತ್ತು ಪುನರ್ವಸತಿ ಉಪಕ್ರಮಕ್ಕಾಗಿ ದೇಶಾದ್ಯಂತ 30 ನಗರಗಳನ್ನು ಗುರುತಿಸಿದೆ.  ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 2026 ರ ವೇಳೆಗೆ ಈ ನಗರಗಳಲ್ಲಿ ಭಿಕ್ಷಾಟನೆಯ 'ಹಾಟ್‌ಸ್ಪಾಟ್‌ಗಳನ್ನು' ಗುರುತಿಸುವಲ್ಲಿ ಮತ್ತು ಪರಿಹರಿಸುವಲ್ಲಿ ಜಿಲ್ಲಾ ಹಾಗೂ ಪುರಸಭೆಯ ಅಧಿಕಾರಿಗಳಿಗೆ ಬೆಂಬಲ ನೀಡಲಿದೆ.  ಸಚಿವಾಲಯದ ಈ ಸಹ ಯೋಜನೆಯನ್ನು 'ಸಪೋರ್ಟ್‌ ಫಾರ್‌ ಮಾರ್ಜನಲೈಸ್ಡ್ ಇಂಡಿವಿಜುವಲ್‌ ಫಾರ್‌ ಲೈವ್ಲಿಹುಡ್‌ ಆಂಡ್‌ ಎಂಟರ್‌ಪ್ರೈಸಸ್‌' (SMILE-ಸ್ಮೈಲ್‌) ಎಂದು ಹೆಸರಿಸಿದೆ. ಉತ್ತರದಲ್ಲಿ ಅಯೋಧ್ಯೆಯಿಂದ ಪೂರ್ವದ ಗುವಾಹಟಿಯವರೆಗೆ, ಪಶ್ಚಿಮದಲ್ಲಿ ತ್ರಯಂಬಕೇಶ್ವರದಿಂದ ದಕ್ಷಿಣ ತಿರುವನಂತಪುರದವರೆಗೆ ಈ ನಗರಗಳನ್ನು ಅವುಗಳ ಧಾರ್ಮಿಕ, ಐತಿಹಾಸಿಕ ಅಥವಾ ಪ್ರವಾಸೋದ್ಯಮದ ಪ್ರಾಮುಖ್ಯತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.

ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು ಹಾಗೂ ಪ್ರತಿ ಹಂತದಲ್ಲಿ ಇದರ ಮೇಲ್ವಿಚಾರಣೆ ಆಗಬೇಕು ಎನ್ನುವ ನಿಟ್ಟಿನಲ್ಲಿ ಫೆಬ್ರವರಿ ಮಧ್ಯದ ವೇಳೆ ರಾಷ್ಟ್ರೀಯ ಪೋರ್ಟ್‌ ಹಾಗೂ ಮೊಬೈಲ್‌ ಅಪ್ಲಿಕೇಶ್‌ಅನ್ನೂ ಕೂಡ ಕೇಂದ್ರ ಸರ್ಕಾರ ಆರಂಭಿಸಿದೆ. ಈ ಅಪ್ಲಿಕೇಶ್‌ಗಳು ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ರಿಯಲ್‌ ಟೈಮ್‌ ಡೇಟಾದ ಅಪ್‌ಡೇಟ್‌ ನೀಡಲು ಸಹಾಯ ಮಾಡಲಿದೆ. ಅದರೊಂದಿಗೆ ಭಿಕ್ಷುಕ ವೃತ್ತಿಯಲ್ಲಿ ತೊಡಗಿರುವ ವ್ಯಕ್ತಿಗಳ ಮಾಹಿತಿಯನ್ನು ಸಮನ್ವಯ ಸಾಧಿಸಲು ನೆರವಾಗಲಿದೆ. ಈಗಾಗಲೇ 25 ನಗರಗಳಿಂದ ಕ್ರಿಯಾ ಯೋಜನೆಗಳನ್ನು ಸ್ವೀಕರಿಸಲಾಗಿದ್ದು. ಕಾಂಗ್ರಾ, ಕಟಕ್, ಉದಯಪುರ ಮತ್ತು ಕುಶಿನಗರದಿಂದ ಒಪ್ಪಿಗೆ ಬಾಕಿಯಿದೆ. ವಿಶೇಷವಾಗಿ ಸಾಂಚಿ ನಗರದ ಅಧಿಕಾರಿಗಳು ತಮ್ಮ ಪ್ರದೇಶದಲ್ಲಿ ಭಿಕ್ಷೆ ಬೇಡುವ ಯಾವುದೇ ನಿದರ್ಶನಗಳನ್ನು ವರದಿ ಮಾಡಿಲ್ಲ. ಇದರಿಂದಾಗಿ ಸಾಂಚಿಯ ಬದಲು ಬೇರೆ ನಗರ ಆಯ್ಕೆಯಾಗುವ ಸಾಧ್ಯತೆ ಇದೆ.  ಇನ್ನೊಂದೆಡೆ ಕೋಝಿಕ್ಕೋಡ್, ವಿಜಯವಾಡ, ಮಧುರೈ ಮತ್ತು ಮೈಸೂರು ನಗರಗಳು ಈಗಾಗಲೇ ತಮ್ಮ ಸಮೀಕ್ಷೆಯನ್ನು ಪೂರ್ಣಗೊಳಿಸಿವೆ.

ಕಾರ್ಯಕ್ರಮದ ಅನುಷ್ಠಾನ ವಿವರಗಳು ವಿವಿಧ ಹಂತಗಳಲ್ಲಿ ಇರುತ್ತದೆ. ಆರಂಭದಲ್ಲಿ ಸರ್ವೇ ನಡೆಯಲಿದ್ದರೆ, ನಂತರ ಗುರುತಿಸುವಿಕೆ ಹಾಗೂ ಭಿಕ್ಷಕುರ ರಕ್ಷಣಾ ಕಾರ್ಯ ಮತ್ತು ಪುನರ್ವಸತಿಯನ್ನು ಒಳಗೊಂಡಿರಲಿದೆ. ಪುನರ್‌ವಸತಿಯ ವೇಳೆ ಅವರಿಗೆ ಶಿಕ್ಷಣ, ಕೌಶಲ್ಯ ಅಭಿವೃದ್ಧಿಯನ್ನು ನೀಡುವುದರೊಂದಿಗೆ ಮುಖ್ಯವಾಹಿನಿಯ ಸಮಾಜದೊಂದಿಗೆ ಬೆರೆಯುವ ನಿಟ್ಟಿನಲ್ಲಿ ಅವರಿಗೆ ಉದ್ಯೋಗಾವಕಾಶಗಳನ್ನು ನೀಡಲಾಗುತ್ತದೆ.

ಅಂದು ಬಾಲಿವುಡ್ ಕ್ಯೂಟ್​ ನಟಿ​, ಇಂದು ಭಿಕ್ಷುಕಿ: ತುತ್ತು ಅನ್ನಕ್ಕೂ ಪರದಾಡಿದ ಸುಂದರಿಯ ಕರಾಳ ಸ್ಟೋರಿ ಇದು!

ಸಲ್ಲಿಸಿದ ಕ್ರಿಯಾ ಯೋಜನೆಗಳ ಆಧಾರದ ಮೇಲೆ ಅನುಷ್ಠಾನಗೊಳಿಸುವ ಜಿಲ್ಲಾ ಮತ್ತು ಪುರಸಭೆಯ ಅಧಿಕಾರಿಗಳಿಗೆ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ, ಉಪಕ್ರಮವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಸಾಕಷ್ಟು ಸಂಪನ್ಮೂಲಗಳನ್ನು ಈಗಾಗಲೇ ಕ್ರೋಢಿಕರಿಸಲಾಗಿದೆ.  ಕೇಂದ್ರದ ಪೂರ್ವಭಾವಿ ವಿಧಾನವು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಮಾಜದ ಕೊನೆಯ ಸ್ಥರದಲ್ಲಿರುವ ವ್ಯಕ್ತಿಗಳ ಜೀವನವನ್ನು ಸುಧಾರಿಸಲು ಇರುವ ಬದ್ಧತೆಯನ್ನು ಒತ್ತಿಹೇಳುತ್ತದೆ. ಭಿಕ್ಷಾಟನೆಯನ್ನು ಅದರ ಮೂಲದಲ್ಲಿ ಪರಿಹರಿಸುವ ಮೂಲಕ, ಭಿಕ್ಷುಕ ಮುಕ್ತ ಭಾರತಕ್ಕೆ ಅಡಿಪಾಯ ಹಾಕುವ ಗುರಿಯನ್ನು ಸರ್ಕಾರ ಹೊಂದಿದೆ.

ಚಿಲ್ಲರೆಗಳನ್ನೇ ನೀಡಿ ಐಫೋನ್‌ ಖರೀದಿಸಿದ ಭಿಕ್ಷುಕ, Mobile Store ರಿಯಾಕ್ಷನ್‌ ಹೀಗಿತ್ತು!

Latest Videos
Follow Us:
Download App:
  • android
  • ios