Asianet Suvarna News Asianet Suvarna News

ದೆಹಲಿ ಸರ್ಕಾರಿ ಶಾಲೆಗೆ ಮೆಲಾನಿಯಾ ಭೇಟಿ: ಸಿಸೋಡಿಯಾ, ಕೇಜ್ರಿವಾಲ್‌ಗಿಲ್ಲ ಆಹ್ವಾನ!

ದೆಹಲಿ ಶಾಲೆಗೆ ಅಮೆರಿಕಾ ಪ್ರಥಮ ಮಹಿಳೆ ಮೆಲಾನಿಯಾ ಭೇಟಿ| ಕಾರ್ಯಕ್ರಮಕ್ಕಿಲ್ಲ ದೆಹಲಿ ಸಿಎಂ ಕೇಜ್ರೀವಾಲ್, ಡಿಸಿಎಂ ಸಿಸೋಡಿಯಾಗಿಲ್ಲ ಆಹ್ವಾನ| ವಿವಾದಕ್ಕೀಡಾದ ನಡೆ

Arvind Kejriwal and Manish Sisodia Dropped From Melania Trump School Visit says AAP
Author
Bangalore, First Published Feb 22, 2020, 4:35 PM IST

ನವದೆಹಲಿ[ಫೆ.22]: 24, 25 ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪತರ್ನಿ ಮೆಲಾನಿಯಾ ಸೇರಿದಂತೆ ಸರ್ಕಾರಿ ಅಧಿಕಾರಿಗಳೊಂದಿಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಟ್ರಂಪ್ ಪತ್ನಿ ಮೆಲಾನಿಯಾ ದೆಹಲಿಯ ಸರಕಾರಿ ಶಾಲೆಗಳಿಗೆ ಭೇಟಿ ನೀಡಲಿದ್ದಾರೆ. ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಈ ಸರ್ಕಾರಿ ಶಾಲೆಯಲ್ಲಿ 'ಹ್ಯಾಪಿನೆಸ್‌ ಕ್ಲಾಸ್‌' ವೀಕ್ಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೀಗ ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಈ ಕಾರ್ಯಕ್ರಮದಿಂದ ದೆಹಲಿ ಸಿಸೆಂ ಕೇಜ್ರೀವಾಲ್ ಹಾಗೂ ಡಿಸಿಎಂ ಸಿಸೋಡಿಯಾರನ್ನು ಹೊರಗಗಿಡಲಾಗಿದೆ. ಸದ್ಯ ಈ ವಿಚರ ಭಾರೀ ಚರ್ಚೆ ಹುಟ್ಟು ಹಾಕಿಸದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷ ಕೇಂದ್ರ ಸರ್ಕಾರವೇ ಸಿಎಂ ಅರವಿಂದ ಕೇಜ್ರೀವಾಲ್ ಹಾಗೂ ಸಿಸೋಡಿಯಾರನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟಿದೆ. ಆರಂಭದಲ್ಲಿ ತಯಾರಾದ ಪಟ್ಟಿಯನ್ವಯ ಸಿಎಂ ಹಾಗೂ ಡಿಸಿಎಂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದರು ಎಂದಿದೆ. ಫೆಬ್ರವರಿ 25ರಂದು ಮೆಲಾನಿಯಾ ಟ್ರಂಪ್ ದೆಹಲಿಯ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ. 

ಹೀಗಿದ್ದರೂ ಈ ಶಾಲೆ ದೆಹಲಿ ಸರಕಾರದ ಅಧೀನಕ್ಕೊಳಪಡುವುದರಿಂದ ಕಾರ್ಯಕ್ರಮ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದರೂ ಸಿಎಂ ಕೇಜ್ರಿವಾಲ್‌ ಮತ್ತು ಸಿಸೋಡಿಯಾ, ಮೆಲಾನಿಯಾ ಟ್ರಂಪ್‌ ಭೇಟಿ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಸರಕಾರದ ಮೂಲಗಳು ಹೇಳಿವೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ದೆಹಲಿ ಡಿಸಿಎಂ ಸಿಸೋಡಿಯಾ 'ಹ್ಯಾಪಿನೆಸ್‌ ಕ್ಲಾಸ್‌ ಗೆ ಪ್ರಶಂಸೆ ಸಿಕ್ಕರೆ, ನನಗೂ ಬಹಳ ಖುಷಿ. ಒಂದೂವರೆ ವರ್ಷದ ಹಿಂದೆ ಈ ತರಗತಿಗಳು ಆರಂಭವಾಗಿದ್ದು, ಈ ಮೂಲಕ ಮಕ್ಕಳಲ್ಲಿ ತಮ್ಮ ಹೆತ್ತವರ ಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಸಮಾಜದ ಪರ ಒಳ್ಳೆ ಅಭಿಪ್ರಾಯ ಮೂಡುತ್ತದೆ. ಶಿಕ್ಷಣದ ಮೇಲೆ ಗಮನ ಕೇಂದ್ರೀಕೃತವಾಗುತ್ತದೆ. ಮಕ್ಕಳ ವ್ಯಕ್ತಿತ್ವ ವಿಕಸನವಾಗುತ್ತದೆ' ಎಂದಿದ್ದಾರೆ.

Follow Us:
Download App:
  • android
  • ios