ಮಹಾರಾಷ್ಟ್ರ ಚುನಾವಣೆ 2024: 'ಇತಿಹಾಸ್ ಬನಾಯೇಂಗೆ ಸಂವಿಧಾನ ಬಚಾಯೇಂಗೆ' ಓವೈಸಿ ಪಕ್ಷದ ಕ್ಯಾಂಪೇನ್ ಸಾಂಗ್ ವೈರಲ್!
ಅಸಾದುದ್ದೀನ್ ಓವೈಸಿ ಅವರ ಪಕ್ಷ ಎಐಎಂಐಎಂ ಮಹಾರಾಷ್ಟ್ರ ಚುನಾವಣೆಗೆ ಸಿದ್ಧವಾಗಿದ್ದು ಪ್ರಚಾರ ಹಾಡೊಂದನ್ನು ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ 'ನಾವು ಇತಿಹಾಸ ನಿರ್ಮಿಸುತ್ತೇವೆ ಮತ್ತು ಸಂವಿಧಾನ ಉಳಿಸುತ್ತೇವೆ' ಎಂಬ ಸಂದೇಶದೊಂದಿಗೆ ಹಿಜಾಬ್, ಗುಂಪು ಹತ್ಯೆ, ಗಲಭೆ ವಿಚಾರಗಳನ್ನು ವಿಡಿಯೋದಲ್ಲಿ ಎತ್ತಿದೆ.
Maharashtra Election 2024: ಅಸಾದುದ್ದೀನ್ ಓವೈಸಿ ಅವರ ಪಕ್ಷ ಎಐಎಂಐಎಂ ಮಹಾರಾಷ್ಟ್ರ ಚುನಾವಣೆಗೆ ಸಿದ್ಧವಾಗಿದ್ದು ಪ್ರಚಾರ ಹಾಡೊಂದನ್ನು ಬಿಡುಗಡೆ ಮಾಡಿದ ಈ ಹಾಡಿನಲ್ಲಿ 'ನಾವು ಇತಿಹಾಸ ನಿರ್ಮಿಸುತ್ತೇವೆ ಮತ್ತು ಸಂವಿಧಾನ ಉಳಿಸುತ್ತೇವೆ' ಎಂದು ಹೇಳಿಕೊಂಡಿದೆ ಜೊತೆಗೆಗೆ ಹಿಜಾಬ್, ಗುಂಪು ಹತ್ಯೆ, ಗಲಭೆ ವಿಚಾರಗಳನ್ನು ವಿಡಿಯೋದಲ್ಲಿ ಎತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಭಾರೀ ಸಿದ್ಧತೆ ನಡೆಸಿರುವ ಓವೈಸಿ ಪಕ್ಷವು ಈಗಾಗಲೇ ಪ್ರಚಾರ ಸಂಬಂದ 'ಇತಿಹಾಸ್ ಬನಾಯೇಂಗೆ ಸಂವಿಧಾನ ಬಚಾಯೇಂಗೆ' ಎಂಬ ಪ್ರಚಾರ ಹಾಡನ್ನು ಬಿಡುಗಡೆ ಮಾಡಲಾಗಿದ್ದು ವೈರಲ್ ಆಗುತ್ತಿದೆ. ಅಲ್ಲದೆ ಈ ಅಭಿಯಾನದ ಹಾಡಿನ ಮೂಲಕ ಗುಂಪು ಹತ್ಯೆ, ಹಿಜಾಬ್ ಮತ್ತು ಗಲಭೆಗಳ ವಿಷಯವನ್ನು ಎತ್ತಲಾಗಿದೆ. ಈ ವಿಡಿಯೋವನ್ನು ಪಕ್ಷದ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಲಾಗಿದೆ.
ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಬೆರಕೆ ತಪ್ಪು: ಅಸಾದುದ್ದೀನ್ ಒವೈಸಿ
ವಿಡಿಯೋದಲ್ಲೇನಿದೆ?
ಈ ವಿಡಿಯೋದಲ್ಲಿ ಅನ್ಯ ಧರ್ಮದ ವ್ಯಕ್ತಿಯೊಬ್ಬರು ರಸ್ತೆಬದಿಯಲ್ಲಿ ಪೆನ್ನುಗಳನ್ನು ಮಾರಾಟ ಮಾಡುತ್ತಿದ್ದು, ಹೇಗೆ ಕಿರುಕುಳ ನೀಡುತ್ತಿದ್ದಾರೆ ಎಂಬುದನ್ನು ತೋರಿಸಲಾಗಿದೆ. ಅದೇ ಸಮಯದಲ್ಲಿ, ಹಣ್ಣು ಮಾರಾಟಗಾರರೊಬ್ಬರು ವೀಡಿಯೊದಲ್ಲಿ ದುಃಖಿತರಾಗಿ ಕಾಣುತ್ತಾರೆ ಮತ್ತು ದೇಶದಲ್ಲಿ ಗುಂಪು ಹತ್ಯೆಗಳು ನಡೆಯುತ್ತಿವೆ ಆದರೆ ಯಾರೂ ನಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಹೇಳುತ್ತಾರೆ. ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಪಂಕ್ಚರ್ ಮಾಡಿದ ವ್ಯಕ್ತಿಯನ್ನೂ ವಿಡಿಯೋದಲ್ಲಿ ತೋರಿಸಲಾಗಿದೆ. ನಾವು ಶತಮಾನಗಳಿಂದ ತುಳಿತಕ್ಕೊಳಗಾಗಿದ್ದೇವೆ. ನಮಗಾಗಿ ಯಾರೂ ಏನನ್ನೂ ಹೇಳಲಿಲ್ಲ ಎಂದು ದುಃಖಿತರಾಗಿರುವುದು ಕಾಣಬಹುದು.
ಹಿಜಾಬ್ ವಿಚಾರವೂ ಇದೆ:
ಹಿಜಾಬ್ ಧರಿಸಿದ ಮಹಿಳೆಯನ್ನು ಯಾರೋ ಚುಡಾಯಿಸುತ್ತಿದ್ದಾರೆ ಎಂದು ತೋರಿಸಲಾಗಿದೆ ಮತ್ತು ಅವಳು ಪ್ರತಿಭಟಿಸಿದಾಗ, ಅವನು ಅವಳ ಹಿಜಾಬ್ ಅನ್ನು ಕಿತ್ತೆಸೆಯುತ್ತಾನೆ. ಹಿಜಾಬ್ ಧರಿಸುವುದು ಸಂಪ್ರದಾಯಗಳನ್ನು ಗೌರವಿಸಲಾಗುತ್ತದೆ ಮತ್ತು ಅದು ಸಭ್ಯತೆಯ ಸಂಕೇತವಾಗಿದೆ ಎಂದು ಮಹಿಳೆ ಈ ವೀಡಿಯೊದಲ್ಲಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಘಟನೆಯತ್ತ ಕೈ ತೋರಿಸುತ್ತಾ, ನಮ್ಮ ಹಿಜಾಬ್‌ಗಳನ್ನು ಕಳಚಲಾಗಿದೆ ಎಂದು ತಿಳಿಸಿದ್ದಾಳೆ.
ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿ ಆಗೋದು ಖಚಿತ: ಒವೈಸಿ
ವಿಡಿಯೋದಲ್ಲೇ ಈ ಭರವಸೆ ನೀಡಿದೆ
ಎಲ್ಲ ದೃಶ್ಯಗಳ ನಂತರ ಸಂಸತ್ತಿನಲ್ಲಿ ಅಸಾದುದ್ದೀನ್ ಓವೈಸಿ ಮಾಡಿದ ಭಾಷಣದ ಕ್ಲಿಪ್ ಅನ್ನು ಈ ಪ್ರಚಾರದ ವೀಡಿಯೊದಲ್ಲಿ ಸೇರಿಸಲಾಗಿದೆ. ಇದರಲ್ಲಿ ಅವರು ಒಳನುಸುಳುವಿಕೆ ಮತ್ತು ಗುಂಪು ಹತ್ಯೆಯ ವಿಷಯದ ಬಗ್ಗೆ ಮಾತನಾಡಲಾಗಿದೆ ಯಾರು ಮಾತನಾಡದವರ ಬಗ್ಗೆ ನಾವು ಮಾತನಾಡುತ್ತೇವೆ ಎಂದು ಓವೈಸಿ ಹೇಳಿದ್ದಾರೆ. ಎಐಎಂಐಎಂ ಈ ವಿಡಿಯೋ ಮೂಲಕ ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತೇವೆ ಮತ್ತು ಸಂವಿಧಾನವನ್ನು ಉಳಿಸುತ್ತೇವೆ ಹೇಳಲಾಗಿದೆ.
Parliament और Assembly में जो ग़रीबों और मज़लूमों के लिए आवाज़ उठाता है, संविधान बचाने की बात करता है, महाराष्ट्र की जनता उसी का साथ देगी। महाराष्ट्र में AIMIM सबको साथ लेकर आगे बढ़ेगी।@asadowaisi @imtiaz_jaleel @ShabdiMFarooq @MuftiIsmailQsm @FarukShah_MLA @lashkariaraiees… pic.twitter.com/u1d7uUoMHH
— AIMIM (@aimim_national) October 25, 2024