ಅಗರ್ತಲಾ(ನ.01): 90 ವರ್ಷದ ವೃದ್ಧೆ ಮೇಲೆ ಇಬ್ಬರು ದುರುಳರು ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ತ್ರಿಪುರಾ ಕಾಂಚನಪುರ ಎಂಬಲ್ಲಿಂದ ವರದಿಯಾಗಿದೆ.

ಅ.24ರಂದು ಉತ್ತರ ತ್ರಿಪುರಾ ಜಿಲ್ಲೆಯ ಕಾಂಚನಪುರ ಉಪ ವಿಭಾಗದ ಬರಹಲ್ದಿ ಎಂಬ ಹಳ್ಳಿಯಲ್ಲಿ ಘಟನೆ ನಡೆದಿದ್ದು, ಅ.29 ದೂರು ದಾಖಲಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.

ಮನೆಯಲ್ಲಿ ವೃದ್ಧೆ ಒಬ್ಬಳೇ ಇದ್ದು, ಆರೋಪಿಗಳಲ್ಲಿ ಒಬ್ಬ ಆಕೆಯನ್ನು ಅಜ್ಜಿ ಎಂದು ಸಂಭೋಧಿಸುತ್ತಿದ್ದ. ಘಟನೆ ನಡೆದ ದಿನ ಇಬ್ಬರು ಮನೆಗೆ ನುಗ್ಗಿ ವೃದ್ಧೆಯ ಮೇಲೆ ಆತ್ಯಾಚಾರ ಎಸಗಿದ್ದಾರೆ.