ಕಾಠ್ಮಂಡು[ಜ.22]: ನೇಪಾಳ ಪ್ರವಾಸಕ್ಕೆ ತೆರಳಿದ್ದ ಕೇರಳದ ಇಬ್ಬರು ದಂಪತಿಗಳು ಹಾಗೂ ನಾಲ್ಕು ಮಕ್ಕಳು ರೆಸಾರ್ಟ್‌ ಒಂದರಲ್ಲಿ ಸಾವನ್ನಪ್ಪಿದ್ದು, ಗ್ಯಾಸ್‌ ಸೋರಿಕೆಯಿಂದಾಗಿ ಉಸಿರುಗಟ್ಟಿಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. 

ನೇಪಾಳದ ಪ್ರಸಿದ್ದ ಪೋಖ್ರಾ ಹಿಮಾಲಯ ಬೆಟ್ಟಕ್ಕೆ ಪ್ರವಾಸ ತೆರಳಿದ್ದ ಹದಿನೈದು ಮಂದಿಯ ಗುಂಪಿನಲ್ಲಿ ಈ ಎಂಟು ಮಂದಿ ಇದ್ದರು. 

ಪ್ರವಾಸ ಮುಗಿಸಿ ಮರಳುವುದಕ್ಕೂ ಮುನ್ನ ಸೋಮವಾರ ರಾತ್ರಿ ಮಖವಾನ್‌ಪುರ ಜಿಲ್ಲೆಯ ದಮಾನ್‌ನ ಎವರೆಸ್ಟ್‌ ಪನೋರಮ ರೆಸಾರ್ಟ್‌ನ ಒಂದೇ ಈ ರೂಮ್‌ನಲ್ಲಿ ಎಂಟು ಮಂದಿ ತಂಗಿದ್ದರು.

ವಿಶ್ವದ ಅತ್ಯಂತ ಕುಬ್ಜ ಮನುಷ್ಯ ಖಗೇಂದ್ರ ಥಾಪಾ ಇನ್ನಿಲ್ಲ!...

ಈ ವೇಳೆ ಚಳಿಯಿಂದ ರಕ್ಷಣೆ ಪಡೆಯಲು ಗ್ಯಾಸ್‌ ಹೀಟರ್‌ ಚಾಲೂ ಮಾಡಿ ನಿದ್ದೆಗೆ ಜಾರಿದ್ದರು. ಕೋಣೆಯ ಬಾಗಿಲು, ಕಿಟಕಿಗಳನ್ನು ಒಳಗಿನಿಂದ ಬಂದ್‌ ಮಾಡಿದ್ದರಿಂದ ಉಸಿರು ಗಟ್ಟಿಮೃತ ಪಟ್ಟಿರಬಹುದು ಎಂದು ಹೊಟೇಲ್‌ ಮ್ಯಾನೇಜರ್‌ ಹೇಳಿದ್ದಾರೆ.