ಜಮ್ಮು-ಕಾಶ್ಮೀರ(ಜೂ.02): ಇಲ್ಲಿನ ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳಲು ಯತ್ನಿಸುತ್ತಿದ್ದ, ಶಸ್ತ್ರ ಸಜ್ಜಿತ ಮೂವರು ಪಾಕಿಸ್ತಾನಿ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

ಮೇ 28ರಂದು ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದಿಂದ ನೌಶೆರಾದ ಕಲಾಲ್‌ ಪ್ರದೇಶಕ್ಕೆ ನುಸುಳಲು ಯತ್ನಿಸುತ್ತಿದ್ದ ಮೂವರು ಪಾಕಿಸ್ತಾನಿ ಭಯೋತ್ಪಾದಕರನ್ನು ಸೇನೆ ಕಾರಾರ‍ಯಚರಣೆ ನಡೆಸುವ ಮೂಲಕ ಹತ್ಯೆಗೈದಿದೆ. ಸೋಮವಾರ ಬೆಳಿಗ್ಗೆ ಶೋಧ ತಂಡ ಮೂವರು ಉಗ್ರರ ಶವವನ್ನು ಪತ್ತೆ ಮಾಡಿದೆ. ಆದರೆ ಅಲ್ಲಿ ಶತ್ರುಗಳು ಗುಂಡಿನ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಶವವನ್ನು ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಆದರೆ 2 ಎಕೆ-47, ಎಂ-16ಎ2, 9ಎಂಎಂ ಚೀನಾ ಪಿಸ್ತೂಲು, 6 ಗ್ರೆನೇಡ್‌, ಚಾಕು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಅಷ್ಟೇ ಅಲ್ಲದೆ, ಗುಂಡಿನ ದಾಳಿ ತುತ್ತಾಗಿ ಭಯೋತ್ಪಾದಕರು ಕೈಬಿಟ್ಟಿದ್ದ ದೊಡ್ಡ ಪ್ರಮಾಣದ ಆಹಾರ ವಸ್ತುಗಳು, ಔಷಧಗಳು ಮತ್ತು 17000 ರು. ಗಳನ್ನೂ ವಶಕ್ಕೆ ಪಡೆಯಲಾಗಿದೆ.

ಈ ಪ್ರದೇಶದಲ್ಲಿ ಇನ್ನೂ ಕಾರಾರ‍ಯಚರಣೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.