Asianet Suvarna News Asianet Suvarna News

ಮುಟ್ಟುಗೋಲು ಹಾಕಿದ ಮದ್ಯದ ಮೇಲೆ ಭಾರೀ ಡಿಸ್ಕೌಂಟ್!

ಮುಟ್ಟುಗೋಲು ಹಾಕಿಕೊಳ್ಳಲಾದ ಮದ್ಯದ ಮೇಲೆ ಭಾರೀ ಡಿಸ್ಕೌಂಟ್ ನೀಡಲಾಗುತ್ತಿದೆ. 

25 percent Discount On Seized Liquor
Author
Bengaluru, First Published Dec 9, 2019, 8:38 AM IST

ನವದೆಹಲಿ [ಡಿ.09]: ಮದ್ಯ ಪ್ರಿಯರಿಗೆ ದೆಹಲಿ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ಇಲಾಖೆಗಳು ಮುಟ್ಟುಗೋಲು ಹಾಕಿದ ಮದ್ಯವನ್ನು ನಾಶ ಮಾಡುವ ಬದಲು ಅದನ್ನು ಶೇ.25ರಷ್ಟುರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.

ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳು ದಾಳಿ ವೇಳೆ ವಶಪಡಿಸಿಕೊಂಡ ಭಾರತದಲ್ಲಿ ತಯಾರಿಸಿದ ವಿದೇಶಿ ಮದ್ಯಗಳನ್ನು ಪರೀಕ್ಷೆಗೊಳಪಡಿಸಿ, ಸೇವಿಸಲು ಯೋಗ್ಯವಾಗಿರುವ ಮದ್ಯಗಳನ್ನು ಮುಟ್ಟುಗೋಲು ಹಾಕಿದ ಏಳು ದಿನದ ಒಳಗಾಗಿ ಮಾರಾಟ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೆ ಕಾನೂನು ಪ್ರಕ್ರಿಯೆಗಳೆಲ್ಲಾ ಮುಗಿದ ಬಳಿಕ, ಅಧಿಕಾರಿಗಳ ಸಮ್ಮುಖದಲ್ಲಿ ಅವುಗಳನ್ನು ನಾಶ ಮಾಡಲಾಗುತ್ತಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವಿಧಾನ ಅಳವಡಿಸಿಕೊಂಡ ಮೊದಲ ರಾಜ್ಯ ದೆಹಲಿ ಆಗಲಿದ್ದು, ಪ್ರಥಮ ಹಂತವಾಗಿ ಏಳು ಮಾರಾಟಗಾರರಿಗೆ ವಶ ಪಡಿಸಿಕೊಂಡ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ. ಹೀಗೆ ಮಾರಾಟ ಮಾಡುವ ಮದ್ಯಗಳ ಮೇಲೆ ‘ಅಧಿಕೃತ ಜಪ್ತಿ ಮದ್ಯ’, ‘ದೆಹಲಿಯಲ್ಲಿ ಮಾರಾಟಕ್ಕೆ ಮಾತ್ರ’ ಎಂದು ನಮೂದಿಸುವುದು ಕಡ್ಡಾಯ.

ಕಡಿಮೆ ದರದಲ್ಲಿ ಮದ್ಯ ಸಿಗುವ ಹರ್ಯಾಣದಿಂದ ಕಳ್ಳ ಸಾಗಣಿಕೆ ಮಾಡುವ ವೇಳೆ ಹಾಗೂ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಮಳಿಗೆಗಳಿಂದ ವಶ ಪಡಿಸಿಕೊಂಡ ಮದ್ಯಗಳ ಪ್ರಮಾಣ ಹೆಚ್ಚಿದ್ದು, 2018-19ರ ಅವಧಿಯಲ್ಲಿ 15 ಕೋಟಿ ಮೌಲ್ಯದ 2.5 ಲಕ್ಷ ಬಾಟಲ್‌ ಮದ್ಯ ವಶ ಪಡಿಸಿಕೊಳ್ಳಲಾಗಿತ್ತು.

Follow Us:
Download App:
  • android
  • ios