mobile data prices in india is so cheap ಭಾರತದಲ್ಲಿ ಬೀದಿಬದಿಯಲ್ಲಿ ಸಿಗುವ ಕಾಫಿ, ಟೀ, ಲಸ್ಸಿ ಹಾಗೂ ಟೋಸ್ಟ್‌ಗಿಂತ 1 ಜಿಬಿ ಮೊಬೈಲ್‌ ಡೇಟಾ ದರವೇ ಕಡಿಮೆ ಇದೆ ಎನ್ನುವಂಥ ಪೋಸ್ಟ್‌ಅನ್ನು ಸರ್ಕಾರವೇ ಹಂಚಿಕೊಂಡಿದೆ. 

ನವದೆಹಲಿ (ಆ.3): ಭಾರತದಲ್ಲಿ ಮೊಬೈಲ್‌ ಡೇಟಾ ದರವು ವಿಶ್ವದ ಎಲ್ಲಾ ದೇಶಕ್ಕಿಂತ ಭಾರೀ ಕಡಿಮೆ ಎಂದು ಕೇಂದ್ರ ಸರ್ಕಾರ ಎದೆತಟ್ಟುಕೊಳ್ಳುತ್ತಲೇ ಇರುತ್ತದೆ. ಇತ್ತೀಚೆಗೆ ಸರ್ಕಾರ ಟ್ವಿಟರ್‌ ಅಕೌಂಟ್‌ವೊಂದು, ಭಾರತದಲ್ಲಿ ಸಿಗುವ ಮೊಬೈಲ್‌ ಡೇಟಾ ಎಷ್ಟು ಅಗ್ಗ ಎನ್ನುವುದರ ಬಗ್ಗೆ ಮಾಹಿತಿ ನೀಡಿದೆ. ಇದರ ಪ್ರಕಾರ ಭಾರತದಲ್ಲಿ ಒಂದು ಜಿಬಿ ಮೊಬೈಲ್‌ ಡೇಟಾ ದರವು ಬೀದಿ ಬದಿಯಲ್ಲಿ ಸಿಗುವ ಒಂದು ಕಪ್‌ ಕಾಫಿಗಿಂತಲೂ ಅಗ್ಗವಾಗಿದೆ ಎಂದು ಸರ್ಕಾರ ಹೇಳಿದೆ. ಸ್ಟ್ರೀಟ್‌ ಕೆಫೆಗಳಲ್ಲಿ ಸಿಗುವ ಕಾಫಿ, ಟೀ, ಲಸ್ಸಿ ಹಾಗೂ ಟೋಸ್ಟ್‌ನೊಂದಿಗೆ ಒಂದು ಜಿಬಿ ಮೊಬೈಲ್‌ ಡೇಟಾದ ದರವನ್ನು ಹೋಲಿಕೆ ಮಾಡಿ ಚಿತ್ರವೊಂದನ್ನು ಪೋಸ್ಟ್‌ ಮಾಡಿದೆ. ಇದಕ್ಕೆ ಸಾಕಷ್ಟು ಕಾಮೆಂಟ್‌ಗಳೂ ಕೂಡ ಬಂದಿವೆ. ಭಾರತದಲ್ಲಿ ಒಂದು ಜಿಬಿ ಡೇಟಾ ಬೆಲೆ 9.12 ರೂಪಾಯಿ ಇದೆ. ಇದು ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರ ಎಂದು ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇತ್ತೀಚೆಗೆ ತಿಳಿಸಿದ್ದರು. ಜಿಯೋ, ಏರ್‌ಟೆಲ್‌ ಕಂಪನಿಗಳು ಇತ್ತೀಚೆಗೆ ಮಾಸಿಕ ಮೊಬೈಲ್‌ ಪ್ಲ್ಯಾನ್‌ಗಳ ದರ ಏರಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲಿಯೇ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್‌ಗೆ ಪೋರ್ಟ್‌ ಆಗುವ ಅಭಿಯಾನವೂ ನಡೆದಿತ್ತು.


ಟೆಲಿಕಾಂ ಇಲಾಖೆಯ ಟ್ವಿಟರ್‌ ಹ್ಯಾಂಡಲ್‌ನಿಂದ ಪೋಸ್ಟ್‌ ಮಾಡಲಾಗಿರುವ ಚಿತ್ರಕ್ಕೆ ತರೇಹವಾರಿ ಕಾಮೆಂಟ್‌ಗಳೂ ಬಂದಿವೆ. 'ಪ್ರಮಾಣ ಮುಖ್ಯವಲ್ಲ ಗುಣಮಟ್ಟ ಮುಖ್ಯ. ನನ್ನ ಹಳ್ಳಿಯು ಕಾಕಿನಾಡದ ಸ್ಮಾರ್ಟ್ ಸಿಟಿ ದೂರದಿಂದ 10 ಕಿಮೀ ದೂರದಲ್ಲಿದೆ. ಈಗಲೂ ನಮ್ಮ ಹಳ್ಳಿಯಲ್ಲಿ ನಾವು ಕರೆಗಳು ಮತ್ತು ಡೇಟಾ ಬಳಕೆಯನ್ನು ಮನೆ ಮತ್ತು ರಸ್ತೆಯಲ್ಲಿ ಮಾಡಲು ಸಾಧ್ಯವಿಲ್ಲ, ನಾವು ಮೊಬೈಲ್ ಬಳಸಬೇಕಾದರೆ ನಾವು 1.5 ಕಿಮೀ ಹೋಗಬೇಕು, ಈಗ ಭಾರತವು 5g ನೆಟ್‌ವರ್ಕ್‌ಗೆ ಹೋಗುತ್ತಿದೆ. ಆದರೆ, ನಮ್ಮೂರಿಗೆ ಇನ್ನೂ ಸರಿಯಾಗಿ ನೆಟ್‌ವರ್ಕ್‌ ಸರಿಯಾಗಿ ಸಿಗುತ್ತಿಲ್ಲ..' ಎಂದು ಕಾಮೆಂಟ್‌ ಮಾಡಿದ್ದಾರೆ.

'ಡೇಟಾ ಬಳಕೆ ಮತ್ತು ಅನಿಯಮಿತ ಕರೆ ಅಗತ್ಯವಿಲ್ಲದವರಿಗೆ ಡೇಟಾ ಪ್ರಯೋಜನಗಳು ಮತ್ತು ಅನ್‌ಲಿಮಿಟೆಡ್‌ ಕರೆಗಳನ್ನು ಹೊರತುಪಡಿಸಿ ಕೆಲವು ಕೈಗೆಟುಕುವ ಮೊಬೈಲ್ ಯೋಜನೆಗಳನ್ನು ತನ್ನಿ, ಸೀಮಿತ ಕರೆ ಮತ್ತು ಎಸ್‌ಎಂಎಸ್‌ ಸೌಲಭ್ಯದೊಂದಿಗೆ ಸಕ್ರಿಯ ಸಂಪರ್ಕವನ್ನು ಹೊಂದಿದ್ದರೆ ಸಾಕು..' ಎಂದು ಟ್ರಾಯ್‌ಗೆ ಟ್ಯಾಗ್‌ ಮಾಡಿ ಒಬ್ಬರು ಮನವಿ ಮಾಡಿದ್ದಾರೆ.

'ಇಂಟರ್ನೆಟ್‌ ಕಮ್ಯುನಿಕೇಷನ್‌ಗಿಂತ ನನಗೆ ಹೊಟ್ಟೆ ತುಂಬಿಸಿಕೊಳ್ಳುವುದೇ ಮುಖ್ಯ..' ಎಂದು ಈ ಪೋಸ್ಟ್‌ಗೆ ಒಬ್ಬರು ಕಾಮೆಂಟ್‌ ಮಾಡಿದ್ದಾರೆ. 'ಅದು ಕಡ್ಡಾಯ ಮೊತ್ತವಾಗಿದೆ, ನೀವು ಅದನ್ನು ಬಳಸುತ್ತಿರಲಿ ಅಥವಾ ಬಳಸದಿರಲಿ ನೀವು ಪಾವತಿಸಬೇಕಾಗುತ್ತದೆ… ಬಾಡಿಗೆ ಮತ್ತು 1GB ಯ ವಾಸ್ತವಿಕ ವೆಚ್ಚವು ಇತರ ಯಾವುದೇ ದೇಶಕ್ಕಿಂತ ದುಬಾರಿಯಾಗಿದೆ..' ಎಂದು ಇನ್ನೊಬ್ಬರು ಪೋಸ್ಟ್‌ ಮಾಡಿದ್ದಾರೆ.

ನೀವು ಪೋಸ್ಟ್‌ ಮಾಡಿದ ವಿಷಯ ಅಸಲಿಯೂ ಇರಬಹುದು. ಆದರೆ, ಡೇಟಾ ಬಳಕೆ ಮಾಡಲು ಬೇಕಾದ ನೆಟ್‌ವರ್ಕ್ ನಮ್ಮಲ್ಲಿಲ್ಲ ಎಂದು ಮತ್ತೊಬ್ಬರು ಪೋಸ್ಟ್‌ ಮಾಡಿದ್ದಾರೆ. ಪ್ರತಿ ಗಂಟೆಗೆ ₹100/ಗಂಟೆಗಿಂತ ಕಡಿಮೆ ಇರುವ ಭಾರತದಲ್ಲಿ ಪ್ರತಿ ಗಂಟೆಗೆ ಕಾರ್ಮಿಕರ ವೆಚ್ಚವೂ ಅಗ್ಗವಾಗಿದೆ ಎಂದು ಕಾಮೆಂಟ್‌ ಮಾಡಲಾಗಿದೆ.

ಮೊಬೈಲ್‌ ಪಾಸ್‌ವರ್ಡ್‌ಗೆ ಬಲವಂತ ಮಾಡದಂತೆ ಕೋರ್ಟ್‌ ಹೇಳಿದೆ: ದರ್ಶನ್‌ ವಕೀಲ

ನೀವು ಇಂಟರ್ನೆಟ್‌ ಕೊಡೋದು ಹೌದು, ಆದರೆ, ಈ ಇಂಟರ್ನೆಟ್‌ ಸ್ಪೀಡ್‌ ಕೂಡ ಇರಬೇಕಲ್ವ. 4ಜಿಯಲ್ಲಿ ಮ್ಯಾಕ್ಸಿಮಮ್‌ ಸ್ಪೀಡ್‌ 500 ಕೆಬಿಪಿಎಸ್‌ ಇರುತ್ತದೆ ಎಂದು ಕಾಮೆಂಟ್‌ ಮಾಡಲಾಗಿದೆ. ಭಾರತದಲ್ಲಿ 1 ಜಿಬಿ ಡೇಟಾ ದರ 9.12 ರೂಪಾಯಿಯಲ್ಲ 22 ರೂಪಾಯಿ ಎಂದು ಮತ್ತೊಬ್ಬರು ಬರೆದಿದ್ದಾರೆ.

ಮೊಬೈಲ್‌ ಡೇಟಾ ಶುಲ್ಕ ಹೆಚ್ಚಳ ಕಳ​ವ​ಳ​ಕಾ​ರಿ​: ರಾಜೀವ್‌ ಚಂದ್ರಶೇಖರ್‌

Scroll to load tweet…