ಲಾರ್ಡ್ಸ್[ಜು.14]: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ಹಾಲಿ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ರೋಚಕ ಕಾದಾಟ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಏಕದಿನ ಕ್ರಿಕೆಟ್ ವಿಶ್ವಕಪ್: ಲಾರ್ಡ್ಸ್‌ನಲ್ಲಿಂದು ಹೊಸ ಚಾಂಪಿಯನ್ ಉಗಮಕ್ಕೆ ಕ್ಷಣಗಣನೆ ಆರಂಭ

1992ರ ಬಳಿಕ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಆತಿಥೇಯ ಇಂಗ್ಲೆಂಡ್ ತಂಡ ಚೊಚ್ಚಲ ಏಕದಿನ ವಿಶ್ವಕಪ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ತವರಿನ ಅಭಿಮಾನಿಗಳೆದುರು ಕಿವೀಸ್ ಕಿವಿ ಹಿಂಡಲು ಇಯಾನ್ ಮಾರ್ಗನ್ ಪಡೆ ಸಜ್ಜಾಗಿದೆ. ಅದರಲ್ಲೂ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಬಗ್ಗುಬಡಿದು ಫೈನಲ್ ಪ್ರವೇಶಿಸಿರುವ ಇಂಗ್ಲೆಂಡ್ ಮೇಲ್ನೋಟಕ್ಕೆ ಸಮತೋಲನದಿಂದ ಕೂಡಿದ್ದರೂ ಫೈನಲ್ ಪಂದ್ಯಕ್ಕೆ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಸೆಮಿಫೈನಲ್’ನಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದ ಲಿಯಾಮ್ ಫ್ಲಂಕೆಟ್ ಕೈಬಿಟ್ಟು, ಆಲ್ರೌಂಡರ್ ಮೊಯಿನ್ ಅಲಿಗೆ ಮಣೆ ಹಾಕುವ ಸಾಧ್ಯತೆಯಿದೆ. 

ಈ ಸಂದರ್ಭದಲ್ಲಿ ಸುವರ್ಣನ್ಯೂಸ್.ಕಾಂ ಆಯ್ಕೆ ಮಾಡಿದ ಇಂಗ್ಲೆಂಡ್ ಸಂಭಾವ್ಯ ಹೀಗಿದೆ ನೋಡಿ...

ಆರಂಭಿಕರಾಗಿ: ಜೇಸನ್ ರಾಯ್, ಜಾನಿ ಬೇರ್’ಸ್ಟೋ

ಮಧ್ಯಮ ಕ್ರಮಾಂಕ: ಜೋ ರೂಟ್, ಇಯಾನ್ ಮಾರ್ಗನ್, ಜೋಸ್ ಬಟ್ಲರ್

ಆಲ್ರೌಂಡರ್: ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್

ಬೌಲರ್: ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್