Asianet Suvarna News Asianet Suvarna News

ಹಾಕಿ: ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ಜಯ

ಭಾರತ ಮಹಿಳಾ ಹಾಕಿ ತಂಡ ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದು, ಈ ವರ್ಷದ ಮೊದಲ ಗೆಲುವು ದಾಖಲಿಸಿದೆ. ನ್ಯೂಜಿಲೆಂಡ್ ವಿರುದ್ಧ ರಾಣಿ ರಾಂಪಾಲ್ ಪಡೆ 4-0 ಅಂತರದ ಜಯಭೇರಿ ದಾಖಲಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

Indian women's Hockey Team begin New Zealand tour with resounding win
Author
Auckland, First Published Jan 26, 2020, 1:22 PM IST

ಆಕ್ಲೆಂಡ್‌(ಜ.26): ಭಾರತ ಮಹಿಳಾ ಹಾಕಿ ತಂಡ, ನ್ಯೂಜಿಲೆಂಡ್‌ ಪ್ರವಾಸವನ್ನು ಜಯದೊಂದಿಗೆ ಆರಂಭಿಸಿದೆ. ಒಲಿಂಪಿಕ್‌ ವರ್ಷದ ಮೊದಲ ಪ್ರವಾಸದ ಪ್ರಥಮ ಪಂದ್ಯದಲ್ಲಿ ರಾಣಿ ರಾಂಪಾಲ್‌ 4-0 ಗೋಲುಗಳಲ್ಲಿ ಗೆದ್ದಿದೆ.

ಕಿವೀಸ್‌ ಪ್ರವಾಸ: ಭಾರತ ಮಹಿಳಾ ಹಾಕಿ ತಂಡ ಪ್ರಕಟ

ಶನಿವಾರ ನಡೆದ ಪಂದ್ಯದಲ್ಲಿ ರಾಣಿ 2 ಆಕರ್ಷಕ ಗೋಲು ಬಾರಿಸಿ ಜಯದಲ್ಲಿ ಮಹತ್ವದ ಪಾತ್ರವಹಿಸಿದರು. ಶರ್ಮಿಳಾ ಮತ್ತು ನಮಿತಾ ಟೊಪ್ಪೊ ತಲಾ 1 ಗೋಲುಗಳಿಸಿ ಜಯದ ಅಂತರವನ್ನು ಹೆಚ್ಚಿಸಿದರು.

ಪ್ರೊ ಲೀಗ್ ಹಾಕಿ: ಶೂಟೌಟಲ್ಲಿ ಗೆದ್ದ ಭಾರತ!

ಈ ಪ್ರವಾಸದಲ್ಲಿ ಭಾರತ ಆತಿಥೇಯ ನ್ಯೂಜಿಲೆಂಡ್‌ ವಿರುದ್ಧ ಒಟ್ಟು 4 ಹಾಗೂ ಗ್ರೇಟ್‌ ಬ್ರಿಟನ್‌ ವಿರುದ್ಧ 1 ಪಂದ್ಯವನ್ನಾಡಲಿದೆ.

Follow Us:
Download App:
  • android
  • ios