ಮಹಾರಾಷ್ಟ್ರದ ಏಳು ವರ್ಷದ ಬಾಲಕಿಯಲ್ಲಿ ಝಿಕಾ ವೈರಸ್ ಪತ್ತೆ
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಝೈನಲ್ಲಿರುವ ಆಶ್ರಮಶಾಲಾದಲ್ಲಿ 7 ವರ್ಷದ ಬಾಲಕಿಗೆ ಝಿಕಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಬಾಲಕಿಯನ್ನು ಪ್ರತ್ಯೇಕಿಸಿ, ಚಿಕಿತ್ಸೆ ನೀಡಲಾಗುತ್ತಿದ್ದು ಆರೋಗ್ಯ ಇಲಾಖೆ ಈ ಬಗ್ಗೆ ಕಟ್ಟೆಚ್ಚರ ವಹಿಸಿದೆ.
ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಏಳು ವರ್ಷದ ಬಾಲಕಿಗೆ ಝಿಕಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಬಾಲಕಿ ಪಾಲ್ಘರ್ ಜಿಲ್ಲೆಯ ಝೈನಲ್ಲಿರುವ ಆಶ್ರಮಶಾಲಾ ನಿವಾಸಿ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಆರೋಗ್ಯ ಸಿಬ್ಬಂದಿಗಳು ಬಾಲಕಿಯ ಮೇಲೆ ನಿಗಾ ಇಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮಹಾರಾಷ್ಟ್ರ ಆರೋಗ್ಯ ಇಲಾಖೆಯು ರಾಜ್ಯದಲ್ಲಿ ಸೋಂಕಿನ ಬಗ್ಗೆ ಕಣ್ಗಾವಲು, ವೆಕ್ಟರ್ ನಿರ್ವಹಣೆ, ಚಿಕಿತ್ಸೆ ಮತ್ತು ಆರೋಗ್ಯ ಶಿಕ್ಷಣದ ಪ್ರಯತ್ನಗಳ ವಿಷಯದಲ್ಲಿ ತಡೆಗಟ್ಟುವ ಮತ್ತು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಈ ಹಿಂದೆ ಜುಲೈ 2021 ರಲ್ಲಿ ಪುಣೆಯಲ್ಲಿ ಮೊದಲ ಬಾರಿಗೆ ವ್ಯಕ್ತಿಯೋರ್ವನಲ್ಲಿ ಝಿಕಾ ವೈರಸ್ ಪತ್ತೆಯಾಗಿತ್ತು. ಇದರ ನಂತ್ರ, 2ನೇ ಪ್ರಕರಣ ಮಹಾರಾಷ್ಟ್ರದಲ್ಲಿ ಕಂಡುಬಂದಿದೆ.
ಝಿಕಾ ವೈರಸ್ ಎಂದರೇನು ?
ಝಿಕಾ ವೈರಸ್ (Zika virus) ಎಂಬುದು ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು, ಅದು ಸೋಂಕಿತ ಈಡಿಸ್ ಜಾತಿಯ ಸೊಳ್ಳೆಗಳ (Mosquito) ಕಡಿತದ ಮೂಲಕ ಹರಡುತ್ತದೆ. ಹಗಲಿನಲ್ಲೂ ಇದು ಜನರಿಗೆ ಕಚ್ಚುವ ಕಾರಣ ಜನರು ಸುಲಭವಾಗಿ ರೋಗಕ್ಕೆ ತುತ್ತಾಗುತ್ತಾರೆ. ಗಮನಾರ್ಹವಾಗಿ, ವೈರಸ್ ಗರ್ಭಿಣಿ ಮಹಿಳೆಯಿಂದ ಅವಳ ಭ್ರೂಣಕ್ಕೆ ಹರಡಬಹುದು ಮತ್ತು ಶಿಶುಗಳು ಮೈಕ್ರೊಸೆಫಾಲಿ ಮತ್ತು ಇತರ ಜನ್ಮಜಾತ ವಿರೂಪಗಳೊಂದಿಗೆ ಜನಿಸಲು ಕಾರಣವಾಗಬಹುದು.
ಮಾರ್ಬರ್ಗ್ ವೈರಸ್‌ನ 2 ಶಂಕಿತ ಪ್ರಕರಣಗಳು ಪತ್ತೆ; WHO ಎಚ್ಚರಿಕೆ
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಝಿಕಾ ವೈರಸ್ ಸೋಂಕಿತ ಜನರು ತಮ್ಮ ಲೈಂಗಿಕ ಪಾಲುದಾರರಿಗೆ ಸಹ ರೋಗವನ್ನು ಹರಡಬಹುದು.
ಝಿಕಾ ವೈರಸ್‌ನ ರೋಗ ಲಕ್ಷಣಗಳೇನು ?
ಅಸ್ವಸ್ಥತೆ ಅಥವಾ ತಲೆನೋವು
ಸೌಮ್ಯ ಜ್ವರ
ದೇಹದಲ್ಲಿ ದದ್ದುಗಳು
ಸ್ನಾಯು ಮತ್ತು ಕೀಲು ನೋವು,
ಝಿಕಾ ವೈರಸ್‌ನ ಕಾವು ಕಾಲಾವಧಿಯು 3 ರಿಂದ 14 ದಿನಗಳು ಎಂದು ಅಂದಾಜಿಸಲಾಗಿದೆ. ತಜ್ಞರ ಪ್ರಕಾರ ರೋಗಲಕ್ಷಣಗಳು (Symptoms) ಸಾಮಾನ್ಯವಾಗಿ 2ರಿಂದ 7 ದಿನಗಳವರೆಗೆ ಇರುತ್ತದೆ. ಹೀಗಿದ್ದೂ, ವಿಶ್ವ ಆರೋಗ್ಯ ಸಂಸ್ಥೆ (WHO)ಯ ಪ್ರಕಾರ ಕೆಲವೊಬ್ಬರಲ್ಲಿ ಯಾವುದೇ ರೋಗಲಕ್ಷಣ ಸಹ ಕಂಡು ಬರುವುದಿಲ್ಲ.
ಝಿಕಾ ವೈರಸ್‌ಗೆ ಚಿಕಿತ್ಸೆ ಏನು ?
ಝಿಕಾ ವೈರಸ್‌ಗೆ ಯಾವುದೇ ನಿರ್ದಿಷ್ಟ ಔಷಧಿ (Medicine) ಅಥವಾ ಲಸಿಕೆ ಇಲ್ಲ. ಹೀಗಾಗಿ ರೋಗನಿರ್ಣಯ ಕಂಡು ಬಂದರೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಸಾಕಷ್ಟು ಪ್ರಮಾಣದಲ್ಲಿ ವಿಶ್ರಾಂತಿ ಪಡೆದುಕೊಳ್ಳಬೇಕು. ಸಾಕಷ್ಟು ದ್ರವಗಳನ್ನು ಕುಡಿದು ದೇಹವನ್ನು ಹೈಡ್ರೇಟ್ (Hydrate) ಆಗಿಟ್ಟುಕೊಳ್ಳಬೇಕು. ಜ್ವರ ಮತ್ತು ನೋವನ್ನು ಕಡಿಮೆ ಮಾಡಲು ಅಸೆಟಾಮಿನೋಫೆನ್ ನಂತಹ ಔಷಧವನ್ನು ತೆಗೆದುಕೊಳ್ಳಬಹುದು. ರಕ್ತಸ್ರಾವದ ಅಪಾಯವನ್ನು ಕಡಿಮೆ ಮಾಡಲು ಸ್ಟಿರಾಯ್ಡ್ ಅಲ್ಲದ ಉರಿಯೂತದ ಔಷಧಗಳನ್ನು ತೆಗೆದುಕೊಳ್ಳಲು ಹೋಗಬಾರದು. ಬೇರೆ ಯಾವುದೇ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ವೈದ್ಯರ ಸಲಹೆ ಪಡೆಯವುದು ಉತ್ತಮ.
ದೀರ್ಘಾವಧಿಯ ಕೋವಿಡ್‌ನಿಂದ ಬಳಲ್ತಿದ್ದೀರಾ? ತಿನ್ನೋ ಆಹಾರ ಹೀಗಿರಲಿ
ಝಿಕಾ ವೈರಸ್ ಈ ಹಿಂದೆ ಈ ರಾಜ್ಯಗಳಲ್ಲಿ ಪತ್ತೆಯಾಗಿತ್ತು
ಜನವರಿ 2016 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ಝಿಕಾ ವೈರಸ್ ಗುಜರಾತ್ (2017), ತಮಿಳುನಾಡು (2017), ರಾಜಸ್ಥಾನ (2018), ಮಧ್ಯಪ್ರದೇಶ (2018) ನಲ್ಲಿ ಪತ್ತೆಯಾಗಿದೆ. . 2017ರಲ್ಲಿ ಕೇರಳ, ದೆಹಲಿ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಿಂದ ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದವು.