ಉಪ್ಪು, ಹುಳಿ, ಖಾರ, ಸಿಹಿ, ಕಹಿ ಬಿಟ್ಟು ಮತ್ತೊಂದು ಟೇಸ್ಟನ್ನೂ ನಾಲಿಗೆ ಕಂಡು ಹಿಡಿಯುತ್ತೆ!
ನಮ್ಮ ದೇಹದ ಅಂಗಗಳ ಬಗ್ಗೆ ತಿಳಿಯೋದು ಸಾಕಷ್ಟಿದೆ. ಕೆಲವೊಂದು ಇನ್ನೂ ರಹಸ್ಯವಾಗೇ ಇದೆ. ಇದ್ರ ಬಗ್ಗೆ ಸಂಶೋಧಕರು ಅಧ್ಯಯನ ನಡೆಸ್ತಿರುತ್ತಾರೆ. ಈಗ ನಾಲಿಗೆ ಬಗ್ಗೆ ಹೊಸ ಸಂಶೋಧನೆ ನಡೆದಿದೆ.
ನಾಲಿಗೆ ರುಚಿ ನೋಡುವ ಕೆಲಸವನ್ನು ಮಾಡುತ್ತದೆ. ಸಿಹಿ, ಹುಳಿ, ಉಪ್ಪು, ಕಹಿ ಮತ್ತು ಖಾರವನ್ನು ಪತ್ತೆ ಹಚ್ಚುತ್ತೆ ಎನ್ನುವುದು ನಮಗೆ ಗೊತ್ತು. ಆದ್ರೆ ವಿಜ್ಞಾನಿಗಳು ಈಗ ನಾಲಿಗೆಗೆ ಸಂಬಂಧಿಸಿದಂತೆ ಮತ್ತೊಂದು ಅಧ್ಯಯನ ನಡೆಸಿದ್ದಾರೆ. ಅದ್ರಲ್ಲಿ ನಾಲಿಗೆ ಈ ಐದು ರುಚಿ ಜೊತೆ ಆರನೇ ರುಚಿ ಪತ್ತೆ ಮಾಡುತ್ತೆ ಎಂಬುದು ಗೊತ್ತಾಗಿದೆ. ನಾಲಿಗೆ ಅಮೋನಿಯಂ ಕ್ಲೋರೈಡ್‌ಗೆ ಪ್ರತಿಕ್ರಿಯಿಸುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ನೇಚರ್ ಕಮ್ಯುನಿಕೇಶನ್ಸ್ ಜರ್ನಲ್‌ನಲ್ಲಿ ಸಂಶೋಧನಾ (Research) ವರದಿ ಪ್ರಕಟಿಸಲಾಗಿದೆ. ಹುಳಿ ರುಚಿಯನ್ನು ಪತ್ತೆಹಚ್ಚಲು ಸಹಾಯ ಮಾಡುವ ನಾಲಿಗೆ, ಅಮೋನಿಯಂ ಕ್ಲೋರೈಡ್ (Ammonium Chloride) ಗೆ ಪ್ರತಿಕ್ರಿಯಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಸ್ಕ್ಯಾಂಡಿನೇವಿಯನ್ (Scandinavian ) ನಲ್ಲಿ ತಯಾರಾಗುವ ಕೆಲ ಮಿಠಾಯಿಗಳಲ್ಲಿ ನಾವು ಇದನ್ನು ಕಾಣ್ಬಹುದು.
ಕನಿಷ್ಠ 20ನೇ ಶತಮಾನದ ಆರಂಭದಿಂದಲೂ ಕೆಲವು ಉತ್ತರ ಯುರೋಪಿಯನ್ ದೇಶಗಳಲ್ಲಿ ಸಾಲ್ಟ್ ಲೈಕೋರೈಸ್ ಜನಪ್ರಿಯ ಕ್ಯಾಂಡಿ. ಸ್ಯಾಲಿಸಿಲಿಕ್ ಉಪ್ಪು ಅಥವಾ ಅಮೋನಿಯಂ ಕ್ಲೋರೈಡ್ ಅನ್ನು ಇದನ್ನು ತಯಾರಿಸಲು ಬಳಸ್ತಾರೆ. ಸ್ಕ್ಯಾಂಡಿನೇವಿಯನ್ ದೇಶದಲ್ಲಿ ವಾಸಿಸುತ್ತಿದ್ದರೆ ನೀವು ಈ ಅಮೋನಿಯಂ ಕ್ಲೋರೈಡ್ ಪರಿಮಳ ತಿಳಿದಿರುತ್ತೀರಿ ಹಾಗೇ ಈ ಪರಿಮಳವನ್ನು ಇಷ್ಟಪಡುತ್ತೀರಿ ಎಂದು ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ನರವಿಜ್ಞಾನಿ ಅಧ್ಯಯನದ ಲೇಖಕಿ ಎಮಿಲಿ ಲೈಮನ್ ಹೇಳಿದ್ದಾರೆ. ನಾಲಿಗೆಯು ಅಮೋನಿಯಂ ಕ್ಲೋರೈಡ್‌ಗೆ ಕೆಲವು ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂದು ಈ ಹಿಂದೆಯೇ ವಿಜ್ಞಾನಿಗಳು ಪತ್ತೆ ಮಾಡಿದ್ದರು. ಆದ್ರೆ ಎಷ್ಟು ನಿರ್ದಿಷ್ಟ ಪ್ರಮಾಣದಲ್ಲಿ ಅದು ಪ್ರತಿಕ್ರಿಯಿಸುತ್ತದೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.
ಬ್ರಾ ಧರಿಸೋದ್ರಿಂದ ಸ್ತನ ಕ್ಯಾನ್ಸರ್ ಬರೋ ಚಾನ್ಸ್ ಇರುತ್ತಾ?
ಇತ್ತೀಚಿನ ಸಂಶೋಧನೆಯು, ಒಟಿಒಪಿ1 ಎಂಬ ನಾಲಿಗೆಯಲ್ಲಿರುವ ಪ್ರೋಟೀನ್ ಗ್ರಾಹಕದ ಮೂಲಕ ಹುಳಿ ರುಚಿಯನ್ನು ಪತ್ತೆ ಹಚ್ಚಲು ಕಾರಣವಾದ ಪ್ರೋಟೀನ್ (Protein) ಪತ್ತೆ ಮಾಡಿದೆ. ಆ ನಂತ್ರ ಈ ಸಂಶೋಧನೆಗೆ ಒಂದು ಸ್ಪಷ್ಟತೆ ಸಿಕ್ಕಂತಾಗಿದೆ.
ಈ ಪ್ರೋಟೀನ್ ನಾಲಿಗೆಯಲ್ಲಿನ ಜೀವಕೋಶಗಳ ಪೊರೆಗಳೊಳಗೆ ಇರುತ್ತದೆ. ಸಿಟ್ರಿಕ್ ಮತ್ತು ಆಸ್ಕೋರ್ಬಿಕ್ ಆಮ್ಲ ಸಮೃದ್ಧವಾಗಿರುವ ನಿಂಬೆ ಪಾನಕದ ಹಿಂದೆ ಒಟಿಒಪಿ1 ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ವಿನೆಗರ್‌ನಂತಹ ಇತರ ಆಮ್ಲೀಯ ಆಹಾರಗಳು ನಾಲಿಗೆಗೆ ತಗುಲಿದಾಗ ಹುಳಿ ಅನುಭವವಾಗುತ್ತದೆ. ಅಮೋನಿಯಂ ಕ್ಲೋರೈಡ್ ಜೀವಕೋಶದೊಳಗಿನ ಹೈಡ್ರೋಜನ್ ಅಯಾನುಗಳ ಸಾಂದ್ರತೆಯ ಮೇಲೆ ಪರಿಣಾಮ ಬೀರುವುದರಿಂದ, ಇದು ಕೂಡ ಒಟಿಪಒಪಿ1 ಅನ್ನು ಪ್ರಚೋದಿಸುತ್ತದೆ ಎಂದು ವಿಜ್ಞಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮೆದುಳಲ್ಲಿ ಸೂಜಿ ಇಟ್ಕೊಂಡೇ 80 ವರ್ಷ ಬದುಕಿದ್ದಾಳಂತೆ ಈ ಮಹಿಳೆ!
ಇದನ್ನು ಅಧ್ಯಯನ ಮಾಡಲು ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಸೃಷ್ಟಿ ಮಾಡಿದ ಮಾನವ ಜೀವಕೋಶಗಳಿಗೆ, ಒಟಿಒಪಿ1 ಗ್ರಾಹಕದ ಹಿಂದಿನ ಜೀನ್ ಅನ್ನು ಪರಿಚಯಿಸಿದರು. ಇದರಿಂದಾಗಿ ಜೀವಕೋಶಗಳು ಒಟಿಒಪಿ1 (OTOP1) ಗ್ರಾಹಕವನ್ನು ಉತ್ಪಾದಿಸಬಹುದೇ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯಿತು. ಆ ನಂತ್ರ ಸಂಶೋಧಕರು ಈ ಕೋಶಗಳನ್ನು ಆಮ್ಲ ಅಥವಾ ಅಮೋನಿಯಂ ಕ್ಲೋರೈಡ್‌ಗೆ ಒಡ್ಡಿದರು. ನಾಲಿಗೆ ನೀಡಿದ ಪ್ರತಿಕ್ರಿಯೆಯನ್ನು ಪತ್ತೆ ಮಾಡಿದ್ರು.
ಅಮೋನಿಯಂ ಕ್ಲೋರೈಡ್ ಒಟಿಒಪಿ1 ಅನ್ನು ಪ್ರಬಲವಾದ ಆಕ್ಟಿವೇಟ್ ಮಾಡುತ್ತದೆ. ಇದು ಆಮ್ಲಗಳಿಗಿಂತ ಉತ್ತಮವಾಗಿ ಪ್ರತಿಕ್ರಿಯಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಅಮೋನಿಯಂ ಕ್ಲೋರೈಡ್‌ನಿಂದ ಕೋಶದೊಳಗೆ ಅಲ್ಪ ಪ್ರಮಾಣದ ಅಮೋನಿಯಾ ಹೋಗುತ್ತಿರುವುದು ಕಂಡುಬಂದಿದೆ. ಅಮೋನಿಯಾ ಕ್ಷಾರೀಯವಾಗಿರುವುದರಿಂದ, ಇದು ಹೈಡ್ರೋಜನ್ ಅಯಾನುಗಳನ್ನು ಕಡಿಮೆ ಮಾಡುವ pH ಅನ್ನು ಹೆಚ್ಚಿಸುತ್ತದೆ. ಈ pH ವ್ಯತ್ಯಾಸವು ಒಟಿಒಪಿ1 ಮೂಲಕ ಹೈಡ್ರೋಜನ್ ಅಯಾನುಗಳ ಹರಿವನ್ನು ಪ್ರೇರೇಪಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಸಂಶೋಧಕರು ಇಲಿಗಳ ಮೇಲೂ ಪ್ರಯೋಗ ನಡೆಸಿದ್ದಾರೆ. ಒಟಿಒಪಿ1 ಕೊರತೆ ಇರುವ ಇಲಿಗಳು ಅಮೋನಿಯಂ ಕ್ಲೋರೈಡ್ ರುಚಿ ಪತ್ತೆ ಹೆಚ್ಚುವಲ್ಲಿ ವಿಫಲವಾದವು ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಸಂಶೋಧನೆ ಪ್ರಕಾರ, ಅಮೋನಿಯಂಗೆ ನಾಲಿಗೆ ಪ್ರತಿಕ್ರಿಯೆ ನೀಡ್ಬೇಕೆಂದ್ರೆ ಒಟಿಒಪಿ1 ಚಾನಲ್ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.