ಶಾಲೆಯಲ್ಲೊಂದು ಹೊಸ ಟ್ರೆಂಡ್, ಮಕ್ಕಳಿಗೆ ನಿದ್ರೆಗೆ ಟೈಮ್ ಟೇಬಲ್ ಫಿಕ್ಸ್!

ಬಿಡುವಿಲ್ಲದ ಆಟ, ಟೈ ಸಿಕ್ಕಾಗ ಸ್ವಲ್ಪ ಓದು, ಮತ್ತೆ ಮೊಬೈಲ್...ಮಕ್ಕಳಷ್ಟು ಯಾರೂ ಎಂಗೇಜೇಡ್ ಆಗಿರೋಲ್ಲ. ಸಹಜವಾಗಿ ಶಾಲೇಲಿ ನಿದ್ರೆ ಬರುತ್ತೆ. ಅದಕ್ಕೊಂದು ಪರಿಹಾರ ಕಂಡು ಕೊಂಡಿದೆ ಚೀನಾ ಶಾಲೆ. 

Students gets time to nap in china for overall mental and physical health kvn

ಮಧ್ಯಾಹ್ನ ಊಟವಾದ್ಮೇಲೆ ನಿದ್ರೆ ಬರುತ್ತೆ. ಮಕ್ಕಳಂತೂ ಮಲಗೇ ಬಿಡ್ತಾರೆ. ನಿದ್ದೆಯಲ್ಲಿ ಪಾಠ ಕೇಳಿದರೆ ತಲಗೇನು ಹೋಗುತ್ತೆ ಹೇಳಿ. ಗಮನ ಬೇರೆಡೆ ಡೀವಿಯೇಟ್ ಆಗೋದು ಸಹಜ. ಅದಕ್ಕೊಂದು ಐಡಿಯಾ ಮಾಡಿವೆ ಚೀನಾ ಶಾಲೆಗಳು. ಏನದು? 

ಮಕ್ಕಳ ಸ್ಮರಣ ಶಕ್ತಿ ಹೆಚ್ಚಿಸಿ, ಏಕಾಗ್ರತೆ ಹೆಚ್ಚಿಸುವ ಜೊತೆಗೆ ಮಾನಸಿಕ ಬೆಳವಣಿಗೆಯನ್ನೂ (Mental Growth) ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಮಧ್ಯಾಹ್ಮ ನಿದ್ರಿಸಲು ಅವಕಾಶ ಮಾಡಿಕೊಡುತ್ತಿವೆ ಚೀನಾ. ಇದರಿಂದ ಸ್ವಲ್ಪ ಹೊತ್ತು ಮಲಗೇಳುವ ಮಕ್ಕಳು ಪೂರ್ತಿ ಫ್ರೆಶ್ ಆಗಿ, ಪಾಠ ಚೆನ್ನಾಗಿ ಕೇಳುವುದಲ್ಲದೇ, ಬೇರೆ ಬೇರೆ ಆ್ಯಕ್ಟಿವಿಟಿಗಳಲ್ಲೂ ಪಾಲ್ಗೊಂಡು, ಒಟ್ಟಾರೆ ಬೆಳವಣಿಗೆಗೆ ಅನುಕೂಲವಾಗುತ್ತಿದೆ. 

ತೂಕಡಿಸಿ ತೂಕಡಿಸಿ ಬೀಳುವ ಮಕ್ಕಳೆಂದರೆ ಟೀಚರ್ಸ್ ಅಸಡ್ಡೆ ತೋರುವುದು ಸಹಜ. ಅಲ್ಲದೇ ಸ್ನೇಹಿತರೂ ಕಾಲೆಳೆದು, ತಮಾಷೆಯ ವಸ್ತುವಾಗಿಸಿಬಿಡುತ್ತಾರೆ. ಇದರಿಂದ ಮಕ್ಕಳೂ ಮಾನಸಿಕವಾಗಿ ಕುಗ್ಗಿ ಬಿಡುತ್ತಾರೆ. ಇವೆಲ್ಲವೂ ತಡೆಯಲು ಏಕೈಕ ಪರಿಹಾರವೆಂದರೆ ಮಕ್ಕಳಿಗೆ ತುಸು ನಿದ್ರಿಯಾಗುವಂತೆ ಮಾಡೋದು. ಎಲ್‌ಕೆಜಿ, ಯುಕೆಜಿ ಮಕ್ಕಳನ್ನು ಸ್ವಲ್ಪ ಓದಿಸಿ, ಆಟವಾಡಿಸಿ ಮಲಗಿಸೋದು ಕಾಮನ್. ಆದರೆ, ಇದೇ ಪಾಲಿಸಿಯನ್ನು ಇದೀಗ ದೊಡ್ಡ ಮಕ್ಕಳಿಗೂ ಅಪ್ಲೈ ಆಗುವಂತೆ ಮಾಡಿರುವುದು ವಿಶೇಷ. 

ರಾಜ್ಯಾದ್ಯಂತ ಮೂರು ಸಾವಿರ ಕೆಪಿಎಸ್ ಶಾಲೆಗಳ ನಿರ್ಮಾಣ, ಎಲ್ಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ: ಮಧು ಬಂಗಾರಪ್ಪ

ಊಟ ಆದ್ಮೇಲೆ ಮಧ್ಯಾಹ್ನ ಬಹುಬೇಗ ನಿದ್ರೆ ಆವರಿಸುತ್ತದೆ. ಆಗ ದೊಡ್ಡವರಿಗಾದರೆ ಒಂದರೆಡು ನಿಮಿಷ ಮಕ್ಕಳಿಗಾದರೆ ಹತ್ತು-ಹದಿನೈದು ನಿಮಿಷ ನಿದ್ರೆ ಮಾಡಿದರೂ ಆಗೋ ರಿಲ್ಯಾಕ್ಸ್ ಅಷ್ಟಿಷ್ಟಲ್ಲ. ಜೊಂಪು ಬಂದು ಹೋದರೂ ಹಾಯ್ ಎಂದೆನೆಸುತ್ತದೆ. 

ಮಧ್ಯಾಹ್ನ ನಿದ್ರೆ ಲಾಭವೇನು? 

ಮಧ್ಯಾಹ್ನದ ನಿದ್ರೆ ಅಂದ್ರೆ ಗಂಟೆಗಟ್ಟಲೆ ಹೊದ್ದು ಮಲಗಿ, ಸಂಜೆ ಹೊತ್ತಿಗೆ ಏಳೋದಲ್ಲ. ಹತ್ತು-ಹದಿನೈದು ನಿಮಿಷ ಮಲಗೆದ್ದರೂ ಸಾಕು. ಜೊಂಪು ಹತ್ತಿದ ಹಾಗೆ ಅದರೂ ಮೈ ಹಗುರವಾಗುತ್ತೆ. ಅದಕ್ಕೆ ಪವರ್ ನಿದ್ರೆ ಎನ್ನುತ್ತಾರೆ. ಇದರಿಂದ ಜೀರ್ಣಕ್ರಿಯೆ ಸುಧಾರಿಸುತ್ತೆ. An apple a day keeps the doctors away ಅನ್ನೋ ಹಾಗೆ, ಮಧ್ಯಾಹ್ನ ಮಾಡೋ ಸಣ್ಣ ನಿದ್ರೆಯಿಂದಲೂ ಅನಾರೋಗ್ಯವನ್ನು ದೂರ ಮಾಡಬಹುದು. No day is so bad it can't be fixed with a nap ಅನ್ನೋ ಮಾತೇ ಇದೆ.

ಈ ಸಣ್ಣ ನಿದ್ರೆಯಾದ ಮೇಲೆ ಮಕ್ಕಳು ಓದಿನಲ್ಲಿ ಸೂಕ್ತವಾಗಿ ತೊಡಗಿಸಿಕೊಂಡರೆ, ದೊಡ್ಡವರು ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು. ಮಕ್ಕಳು ಬುದ್ಧಿಯೂ ಚುರುಕಾಗುತ್ತದೆ. ಒಂದೇ ಕಡೆ ಕೂತು ಕೆಲಸ ಮಾಡೋರು ಹಾಗೂ ಶಾಲಾ-ಕಾಲೇಜಿನಲ್ಲಿ ಪಾಠ ಕೇಳುವ ಮಕ್ಕಳಿಗಂತೂ ಇದು ಅತ್ಯಂತ ಪರಿಣಾಮಕಾರಿ. 

ಬೆಂಗಳೂರು ವಿಶ್ವವಿದ್ಯಾಲಯ ಸಾಧನೆಗೆ ಮತ್ತೊಂದು ಗರಿ: NIRF ಶ್ರೇಯಾಂಕದಲ್ಲಿ 81ನೇ ಸ್ಥಾನ!

ಊಟ ಆದ್ಮೇಲೆ ಮಲಗೋದರಿಂದ ನಿಮ್ಮನ್ನು ಚುರುಕಾಗಿರುವಂತೆ ಮಾಡುವುದಲ್ಲದೇ, ಪ್ರೊಡಕ್ಟಿವಿಟಿ ಸಹ ಹೆಚ್ಚುತ್ತದೆ. ಕೆಲವು ಕಂಪನಿಗಳಲ್ಲೂ ಉದ್ಯೋಗಿಗಳಿಗೆ ಹೀಗೆ ಸಣ್ಣ ನಿದ್ರೆ ತೆಗೆಯಲು ಅವಕಾಶವಿದ್ದು, ಇದರಿಂದ ಪ್ರೊಡಕ್ಟಿವಿಟಿ ಹೆಚ್ಚಾಗಲಿದೆ ಎಂಬುವುದು ಪ್ರೂವ್ ಆಗಿದೆ. ಅದರ ಬದಲಾಗಿ ಶಾಲಾ-ಕಾಲೇಜುಗಳಲ್ಲಿಯೇ ಅತವಾ ಕಚೇರಿಗಳಲ್ಲಿಯೇ ಸಣ್ಣ ಧ್ಯಾನ ಸೆಷನ್ ಅಥವಾ ಯೋಗ ನಿದ್ರೆಯಂಥ ಆ್ಯಕ್ಟಿವಿಟಿ ಮಾಡಿಸಿದರೆ ಕೊಡುವ ಈ ಅವಕಾಶ ಮಿಸ್ ಆಗದಂತೆ ನೋಡಿಕೊಳ್ಳಬಹುದು ಎಂಬುವುದು ಕೆಲವರ ಯೋಚನೆ. ಇದು ಎಲ್ಲರೂ ಅನುಭವಿಸುವ ಸ್ಟ್ರೆಸ್ ಕಡಿಮೆ ಮಾಡಲೂ ಬಹಳ ಉಪಕಾರಿ. ಅಲ್ಲದೇ ಉದ್ಯೋಗಿಗಳ ಮಾನಸಿಕ ಆರೋಗ್ಯದೊಂದಿಗೆ, ಸಹೋದ್ಯೋಗಿಗಳೊಂದಿಗೆ ಅತ್ಯುತ್ತಮ ಬಾಂಧವ್ಯ ಕಾಪಾಡಿಕೊಳ್ಳಲು ನೆರವಾಗುವುದರಲ್ಲಿ ಅನುಮಾನವೇ ಇಲ್ಲ. 

ಈ ಎಲ್ಲಾ ಆರೋಗ್ಯ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು, ಚೀನಾ ಶಾಲೆಗಳು ಮಕ್ಕಳಿಗೆ ಮಧ್ಯಾಹ್ನ ಊಟವಾದ್ಮೇಲೆ ನಿದ್ರಿಸಲು ಅವಕಾಶ ಕಲ್ಪಿಸಿದ್ದು, ಇದು ರಾತ್ರೀ ಮತ್ತೆ ಮಕ್ಕಳು ಮಲಗೋವರೆಗೂ ಆ್ಯಕ್ಟಿವ್ ಆಗಿರುವಂತೆ ನೋಡಿಕೊಳ್ಳುತ್ತದೆ. ಮಕ್ಕಳು ಹೀಗೆ ಶಾಲಾ ಕೊಠಡಿಯಲ್ಲೇ ಮಲಗೋ ವೀಡಿಯೋ ಈ ಹಿಂದೆಯೇ ವೈರಲ್ ಆಗಿತ್ತು. ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. 
 

Latest Videos
Follow Us:
Download App:
  • android
  • ios