ಕೊರೋನಾ ಆಸ್ಪತ್ರೆಗಳಲ್ಲಿ ದುಡಿಯುತ್ತಿರುವ ಒಬ್ಬೊಬ್ಬ ನರ್ಸ್‌ಗಳ ಕತೆ ಒಂದೊಂದು. ಪ್ರತಿಯೊಬ್ಬರೂ ಪೇಷೆಂಟ್‌ಗಳ ಆರೋಗ್ಯಕ್ಕಾಗಿ ತಮ್ಮ ಸುಖವನ್ನು ಬಲಿ ಕೊಟ್ಟವರೇ. ಕೆಲವರಿಗೆ ಮನೆ ಗಂಡ ಮಕ್ಕಳೆಲ್ಲ ಯಾವುದೋ ಕನಸಿನಲ್ಲಿ ಕಂಡಂತಿದೆ.

 

ಫೇಸ್‌ಬುಕ್‌ನ ಹ್ಯೂಮನ್ಸ್ ಆಫ್ ಬಾಂಬೇ ಪೇಜ್‌ನಲ್ಲಿ ತಮ್ಮ ಕತೆ ಹಂಚಿಕೊಂಡ ದಾದಿಯೊಬ್ಬರ ಕತೆ ಹೀಗಿದೆ: ನನಗೆ ಇಬ್ಬರು ಮಕ್ಕಳು. ಅವರನ್ನು ನೇರವಾಗಿ ನೋಡದೆ ತಿಂಗಳ ಮೇಲಾಯಿತು. ಆಗಾಗ ವಿಡಿಯೋ ಕಾಲ್ ಮಾಡುವುದು ಬಿಟ್ಟರೆ ಬೇರೆ ಸಂಪರ್ಕವಿಲ್ಲ. ನಂಗೆ ಕೋವಿಡ್ ಸೋಂಕಿತ ರ ಚಿಕಿತ್ಸೆಯ ಡ್ಯೂಟಿ ಇದೆ ಅಂತ ಗೊತ್ತಾದ ಕೂಡಲೆ ಮಕ್ಕಳನ್ನು ತಂಗಿ ಮನೆಗೆ ಕಳಿಸಿದೆ. ಯಾಕಂದ್ರೆ ಮಕ್ಕಳಿಗೆ ಅಪಾಯ ಉಂಟುಮಾಡೋಕೆ ನಂಗೆ ಇಷ್ಟವಿಲ್ಲ. ಅದೇ ಸುರಕ್ಷಿತ. ಗಂಡನಿಗೆ ಬಾಯ್ ಮಾಡಿ ಬರುವಾಗ, ಅವರನ್ಬು ಮುಂದೆ ಯಾವಾಗ ನೋಡಬಹುದು ಎಂಬ ಕಲ್ಪನೆಯೂ ನಂಗಿರಲಿಲ್ಲ.

 

ನಾನು ನನ್ನ ಮನೆಗೇ ಹೋಗದೆ ವಾರಗಟ್ಟಲೆ ಆಸ್ಪತ್ರೆಯಲ್ಲೇ ಇದ್ದೆ.ನನ್ನ ಎಲ್ಲ ಸಹೋದ್ಯೋಗಿಗಳ ಕತೆಯೂ ಇದೇ. ನಾವೆಲ್ಲ ಧೈರ್ಯವಾಗಿ ಇರುವವರಂತೆ ಕೆಲಸ ಮಾಡುತ್ತೇವೆ. ಆದರೆ ಮಧ್ಯಾಹ್ನ ಡೈನಿಂಗ್ ಟೇಬಲ್‌ನಲ್ಲಿ ಕೂತಾಗ ನಮ್ಮ ದುಃಖಗಳು ಹೊರಗೆ ಬರುತ್ತವೆ. ನನ್ನ ಫ್ರೆಂಡ್ ಒಬ್ಬಳು ತನ್ನ ಕಂದನಿಗೆ ಎದೆಹಾಲು ಕೊಡಲು ಸಾಧ್ಯವಾಗದ ತನ್ನ ಸ್ಥಿತಿಗಾಗಿ ಜೋರಾಗಿ ಅತ್ತುಬಿಟ್ಟಳು .

 

 

ಕಳೆದ ವಾರ ನಾನು ಮನೆಗೆ ಹೋದಾಗ ನನ್ನ ಸುತ್ತಮುತ್ತಲಿನ ಮನೆಯವರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಇದೇ ಸ್ವಾಗತ ನನ್ನ ಬೇರೊಬ್ಬರು ಸಹೋದ್ಯೋಗಿಗೆ ದೊರೆಯಲಿಲ್ಲ. ಅವರು ಅವರ ಮನೆಗೆ ಹೋದಾಗ, ಅವರಿಂದ ಅಪಾರ್ಟ್ಮೆಂಟ್‌ನ ಬೇರೆಯವರಿಗೆಲ್ಲ ಸೋಂಕು ಹರಡಬಹುದು ಅಂತ ಉಳಿದವರೆಲ್ಲ ಮನೆಗೆ ಬರಲು ವಿರೋಧಿಸಿದರು. ನಮಗೆಲ್ಲ ಅದು ಭಯದ, ಆತಂಕದ ಕ್ಷಣ. ನಮ್ಮದು ಥ್ಯಾಂಕ್‌ಲೆಸ್ ಜಾಬ್ ಅನಿಸುತ್ತದೆ ಅಂಥ ಹೊತ್ತಿನಲ್ಲಿ.

ನಮ್ಮಲ್ಲಿಗೆ ಬರುವ ಎಲ್ಲ ರೋಗಿಗಳೂ ಒಂದೇ ಥರ ಇರುವುದಿಲ್ಲ. ಬೇರೆ ಬೇರೆ ಸ್ವರೂಪದವರು ಇರ್ತಾರೆ. ಮೊನ್ನೆ ಒಬ್ಬ ರೆಸ್ಟಾರೆಂಟ್ ಶೆಫ್ ತನಗೆ ಕೊಟ್ಟ ಆಹಾರವನ್ನು ಎಸೆದುಬಿಟ್ಟ. ''ಇದೆಂಥಾ ಫುಡ್ಡು. ನಿಮ್ಮ ಅಡುಗೆಯವನಿಗೆ ಅಡುಗೆ ಮಾಡೋಕೇ ಬರಲ್ಲ'' ಅಂತ ಕೂಗಾಡಿದ. ನಾವು ಫೈವ್‌ಸ್ಟಾರ್ ಹೋಟೆಲ್‌ನ ಆಹಾರ ಕೊಡ್ತಿಲ್ಲದೆ ಇರಬಹುದು. ಆದ್ರೆ ಒಳ್ಳೆಯ ಆಹಾರವನ್ನಂತೂ ಕೊಡ್ತೀವಿ. 

 

ಈ ಸಮಸ್ಯೆ ಇರುವವರು ಜಗತ್ತಿನಲ್ಲಿ ಹತ್ತಿರತ್ತಿರ ನೂರು ಮಂದಿ ಮಾತ್ರ!

 

ಒಳ್ಳೆಯ ಅನುಭವಗಳೂ ಸಾಕಷ್ಟು ಆಗಿವೆ. ಮೊನ್ನೆ ಒಬ್ಬರು ವೃದ್ಧರು ತಲೆನೋವಿನಿಂದ ನರಳುತ್ತಿದ್ದರು. ತನಗೆ ಕೋವಿಡ್ ಬಂದಿರಬಹುದು ಎಂದು ಅವರಿಗೆ ಆತಂಕ ಶುರುವಾಗಿತ್ತು. ಆದರೆ ಅವರಿಗೆ ಕೋವಿಡ್ ಇರಲಿಲ್ಲ. ನಾನು ಅವರ ಪಕ್ಕ ಕುಳಿತು ಅವರಿಗೆ ಕೌನ್ಸೆಲಿಂಗ್ ಮಾಡಿದೆ. ಕೋವಿಡ್ ಕುರಿತ ಭಯ, ಒತ್ತಡದ ಪರಿಣಾಮ ಈ ತಲೆನೋವು ಎಂದು ವಿವರಿಸಿದೆ. ಇದಾದ ನಂತರ ಅವರಿಗೆ ತಲೆನೋವು ಮಾಯವಾಯಿತು.

 

ಧ್ಯಾನದಿಂದ ಆರೋಗ್ಯ, ನೆಮ್ಮದಿ: ಇಂದು ವಿಶ್ವ ಧ್ಯಾನ ದಿನ

 

ಎಷ್ಟೋ ಮಂದಿ ನರ್ಸ್ಗಳು ನನಗಿಂತಲೂ ಕಷ್ಟದ ಸ್ಥಿತಿಯಲ್ಲಿ ಇದ್ದಾರೆ. ತಾವೇ ಸ್ವತಃ ಗರ್ಭಿಣಿಯಾಗಿದ್ದರೂ ರಿಸ್ಕ್ ತಗೊಂಡು ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿರೋರು, ನವಜಾತ ಶಿಶು ಇದ್ದರೂ ಅದಕ್ಕೆ ಎದೆಹಾಲು ಕೊಡೋಕೆ ಸಾಧ್ಯವಾಗದೆ ದಿನಗಟ್ಟಲೆ ಆಸ್ಪತ್ರೆಯಲ್ಲಿ ಇರೋರು, ಮನೆಯಲ್ಲಿ ವಯಸ್ಸಾದ ಕಾಯಿಲೆಬಿದ್ದ ಅಪ್ಪ ಅಮ್ಮ ಇರೋರು- ಹೀಗೆ ನಾನಾ ಬಗೆಯ ತೊಂದರೆ ಇರೋರು ಸಾಕಷ್ಟು ಮಂದಿ. ಆದ್ರೆ ನಾವೆಲ್ಲರೂ ಕೊರೋನಾ ಎಂಬ ಮಹಾಮಾರಿಯ ವಿರುದ್ಧ ಹೋರಾಟ ಮಾಡ್ತಿದೀವಿ ಅನ್ನುವ ಸಂಘಟಿತ ಪ್ರಜ್ಞೆಯಿಂದಾಗಿ ಒಂದಾಗಿ ನಿಂತಿದೇವೆ.

 

ಬೇಡದ ಸ್ಥಳದಲ್ಲಿ ಬೆಳೆವ ಕೂದಲಿಗೂ ಉದ್ದೇಶವಿದೆ!

 

ನೀವೂ ಮನೆಯಲ್ಲಿರಿ. ಹೋರಾಟ ಕೈ ಬಿಡಬೇಡಿ. ನಮಗಾಗಿ ಪ್ರಾರ್ಥಿಸಿ. ನಾವೂ ನಿಮಗಾಗಿ ದುಡಿಯುತ್ತೇವೆ.