ಮಂಕಿಪಾಕ್ಸ್ ಸಾಂಕ್ರಾಮಿಕ ರೋಗ, ಸಿಕ್ಕಾಪಟ್ಟೆ ಡೇಂಜರಸ್‌: ತಜ್ಞರು

ಕೊರೋನಾ ಸೋಂಕು (Corona virus) ತ್ವರಿತವಾಗಿ ಹರಡುತ್ತಿರುವ ಮಧ್ಯೆ ಹಲವು ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ (Monkeypox)​ ವೇಗವಾಗಿ ಹರಡುತ್ತಿದೆ. ಸಾವಿನ ಪ್ರಮಾಣವು ಸಿಡುಬಿಗಿಂತ ತುಂಬಾ ಕಡಿಮೆಯಾದರೂ, ಇದು ಅಪಾಯಕಾರಿ (Dangerous)ಯೆಂದು ಪರಿಗಣಿಸಲಾಗಿದೆ. ಹೀಗಾಗಿ ಮಂಕಿಪಾಕ್ಸ್‌ನ್ನು ವರ್ಲ್ಡ್‌ ಹೆಲ್ತ್ ನೆಟ್‌ವರ್ಕ್‌ (WHN) ಸಾಂಕ್ರಾಮಿಕ ರೋಗ (Pandemic)ವೆಂದು ಘೋಷಿಸಿದೆ.

Monkeypox Declared Pandemic By World Health Network Vin

ಮಂಕಿಪಾಕ್ಸ್ (Monkeypox) ವೈರಸ್ ಪ್ರಪಂಚದ 40ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿದೆ. ಅದರಲ್ಲೂ ಯುರೋಪಿನಲ್ಲಿ ಹೆಚ್ಚಿನ ಸಕ್ರಿಯ ಪ್ರಕರಣಗಳು  ವರದಿಯಾಗಿವೆ. ಕಳೆದ ತಿಂಗಳವರೆಗೆ, ಮಂಕಿಪಾಕ್ಸ್ ಆಫ್ರಿಕಾದಿಂದ ಹೊರಗೆ ಹೆಚ್ಚು ಪ್ರಕರಣಗಳು ಕಂಡು ಬರಲ್ಲಿಲ್ಲ. ಹೀಗಾಗಿ ಜನರು ಸ್ಪಲ್ಪಮಟ್ಟಿಗೆ ನಿರಾಳವಾಗಿದ್ದರು. ಆದರೆ ಕಳೆದ ತಿಂಗಳು ಕಳೆದ ತಿಂಗಳು ಯುರೋಪಿನಲ್ಲಿ ಪ್ರಕರಣಗಳ ಉಲ್ಬಣವು ಸ್ಪೇನ್ ಮತ್ತು ಬೆಲ್ಜಿಯಂನಲ್ಲಿ ಹೆಚ್ಚಾದ ಪ್ರಕರಣವು ಆತಂಕಕ್ಕೆ ಕಾರಣವಾಗಿದೆ. ಸಲಿಂಗಕಾಮಿ ಮತ್ತು ದ್ವಿಲಿಂಗಿ ಪುರುಷರ ನಡುವಿನ ಲೈಂಗಿಕ ಚಟುವಟಿಕೆಯೊಂದಿಗೆ ವೈರಸ್ (Virus) ಸಂಬಂಧ ಹೊಂದಿದೆ ಎಂದು ತಜ್ಞರು ಹೇಳಿದ್ದಾರೆ

58 ದೇಶಗಳಲ್ಲಿ 3,417 ಮಂಕಿಪಾಕ್ಸ್​ ಪ್ರಕರಣಗಳು (Monkeypox Cases) ವರದಿಯಾದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ನೆಟ್‌ವರ್ಕ್ (WHN) ಮಂಕಿಪಾಕ್ಸ್ ರೋಗವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ. ಮಂಕಿಪಾಕ್ಸ್​ ಸಾವಿನ ಪ್ರಮಾಣವು ಸಿಡುಬಿಗಿಂತ ತುಂಬಾ ಕಡಿಮೆಯಾಗಿದ್ದರೂ ಇದರ ಹರಡುವಿಕೆ ಪ್ರಮಾಣವನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮುಂದೆ ಇನ್ನಷ್ಟು ಹೆಚ್ಚು ಅಪಾಯ ಎದುರಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ವೈಜ್ಞಾನಿಕ ಮತ್ತು ನಾಗರಿಕ ತಂಡಗಳ ಜಾಗತಿಕ ಸಹಯೋಗವಾದ ವರ್ಲ್ಡ್ ಹೆಲ್ತ್ ನೆಟ್‌ವರ್ಕ್ (ಡಬ್ಲ್ಯುಎಚ್‌ಎನ್) ಇದನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ.

ಮಂಕಿಪಾಕ್ಸ್ ಸೋಂಕು ಲೈಂಗಿಕ ಸಂಪರ್ಕದಿಂದ ವೇಗವಾಗಿ ಹರಡ್ತಿದೆ ; ವಿಶ್ವ ಆರೋಗ್ಯ ಸಂಸ್ಥೆ

ಮಂಕಿಪಾಕ್ಸ್​ ಸಾಂಕ್ರಾಮಿಕವಾಗಿ ಎಲ್ಲ ದೇಶಗಳಿಗೂ ಹರಡಿದರೆ ಮಿಲಿಯನ್​ಗಟ್ಟಲೆ ಜನರು ಸಾಯುತ್ತಾರೆ, ಅನೇಕರು ಕುರುಡರು ಮತ್ತು ಅಂಗವಿಕಲರಾಗುತ್ತಾರೆ ಎಂದು ವಿಶ್ವ ಆರೋಗ್ಯ ನೆಟ್​ವರ್ಕ್ ಹೇಳಿದೆ. ಇದು ನಡೆಯುತ್ತಿರುವ ಹರಡುವಿಕೆಯನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಂಕಿಪಾಕ್ಸ್​ನಿಂದ ಆಗುವ ವ್ಯಾಪಕ ಹಾನಿಯನ್ನು ತಡೆಗಟ್ಟಲು ಅನೇಕ ದೇಶಗಳಲ್ಲಿ ಅಥವಾ ಪ್ರಪಂಚದಾದ್ಯಂತ ಸಂಘಟಿತ ಪ್ರಯತ್ನವನ್ನು ಸಾಧಿಸುವುದು ಮಂಕಿಪಾಕ್ಸ್ ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸುವುದರ ಹಿಂದಿರುವ ಉದ್ದೇಶವಾಗಿದೆ.

ಈಗ ಮಂಕಿಪಾಕ್ಸ್ ಪ್ರಕರಣಗಳು ಪ್ರಪಂಚದಾದ್ಯಂತದ ಜನರ ಆತಂಕಕ್ಕೆ ಕಾರಣವಾಗಿರುವುದರಿಂದ, ಇದು ಹರಡುವುದು ಹೇಗೆ, ಇದರ ರೋಗ ಲಕ್ಷಣಗಳೇನು ? ಚಿಕಿತ್ಸೆ ಪಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಮಂಕಿಪಾಕ್ಸ್ ಕಾಯಿಲೆ ಎಂದರೇನು ?
ಯುನೈಟೆಡ್ ಸ್ಟೇಟ್ಸ್‌ನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಪ್ರಕಾರ, ಮಂಕಿಪಾಕ್ಸ್ ವೈರಸ್ ಸೋಂಕಿನಿಂದ ಉಂಟಾಗುವ ಅಪರೂಪದ ಕಾಯಿಲೆಯಾಗಿದೆ. ಮಂಕಿಪಾಕ್ಸ್ ವೈರಸ್ ಪಾಕ್ಸ್‌ವಿರಿಡೆ ಕುಟುಂಬದಲ್ಲಿ ಆರ್ಥೋಪಾಕ್ಸ್‌ವೈರಸ್ ಕುಲಕ್ಕೆ ಸೇರಿದೆ ಎಂದು ಅದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಝೂನೋಟಿಕ್ ಕಾಯಿಲೆಯು ಪ್ರಾಥಮಿಕವಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಉಷ್ಣವಲಯದ ಮಳೆಕಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ ಮತ್ತು ಸಾಂದರ್ಭಿಕವಾಗಿ ಇತರ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ.

ಲೈಂಗಿಕ ಸಂಪರ್ಕದ ಮೂಲಕವೂ ಹರಡುತ್ತಂತೆ ಮಂಕಿಪಾಕ್ಸ್ ವೈರಸ್ !

ಮಕ್ಕಳಲ್ಲಿ ಮಂಕಿಪಾಕ್ಸ್ ರೋಗ ಲಕ್ಷಣಗಳೇನು ?
ಮಂಕಿಪಾಕ್ಸ್ ಸೋಂಕು ಊತ ಮತ್ತು ತೀವ್ರ ನಿಶ್ಶಕ್ತಿಗಳನ್ನು ಸಹ ಹೊಂದಿದೆ. ದದ್ದು ಉಳಿದ ಪಾಕ್ಸ್‌ ರೋಗಗಳ ದದ್ದಿಗಿಂತ ಭಿನ್ನ. ಇದು ಮುಖದಿಂದಲೇ ಆರಂಭವಾಗುತ್ತದೆ. ನಂತರ ಅಂಗೈಗಳು ಮತ್ತು ಪಾದಗಳಿಗೆ ಹರಡುತ್ತದೆ ಮತ್ತು ದ್ರವದಿಂದ ತುಂಬಿದ ಗುಳ್ಳೆಗಳಲ್ಲಿ ಇವು ಇರುತ್ತವೆ. ಅಂತಿಮವಾಗಿ ಉದುರಿಹೋಗುತ್ತದೆ. ರೋಗಲಕ್ಷಣಗಳು 2-4 ವಾರಗಳವರೆಗೆ ಇರುತ್ತದೆ ಎಂದು ಡಾ. ಅರೋರಾ ಹೇಳುತ್ತಾರೆ.

ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ, ಜ್ವರವು ಸಾಮಾನ್ಯವಾಗಿ 2-3 ನೇ ದಿನ (102 ಡಿಗ್ರಿ ತಲುಪುತ್ತದೆ) ಹೆಚ್ಚಾಗುತ್ತದೆ. ದದ್ದುಗಳು ಸಾಮಾನ್ಯವಾಗಿ 3 ಅಥವಾ 4ನೇ ದಿನದಿಂದ ಪ್ರಾರಂಭವಾಗಿ, ಉಲ್ಬಣವಾಗಿ ನಂತರ ಕ್ಷೀಣಿಸುತ್ತದೆ. ಮಕ್ಕಳಲ್ಲಿ, ಇದರಿಂದಾಗಿ ಬಳಲಿಕೆ ಮತ್ತು ಸುಸ್ತುಗಳಿಂದ ಕೂಡಿದ ಆರೋಗ್ಯ ಸಮಸ್ಯೆ ಕಾಣಿಸುತ್ತದೆ. ಜ್ವರನಿವಾರಕಗಳೊಂದಿಗೆ ಜಲಸಂಚಯನ ಮತ್ತು ದ್ರವದ ನಿರ್ವಹಣೆ ಮಕ್ಕಳಿಗೆ ಅವಶ್ಯಕ ಎಂದು ಡಾ. ಅರೋರಾ ವಿವರಿಸಿದರು.

ಮಂಕಿಪಾಕ್ಸ್ ಸೋಂಕು ಹರಡುವುದನ್ನು ತಡೆಗಟ್ಟಲು ಏನು ಮಾಡಬೇಕು ?

* ಯಾವಾಗಲೂ  ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವುದು. ಸಾಬೂನು ಮತ್ತು ನೀರು ಅಥವಾ ಅಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್‌ನಿಂದ ಕೈಗಳನ್ನು ತೊಳೆಯುತ್ತಿರುವುದು

* ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದನ್ನು ತಡೆಗಟ್ಟಬೇಕು.

* ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು

* ರಾಶಸ್‌ ಹೊಂದಿರುವವರೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳಬಾರದು

* ಅನಾರೋಗ್ಯದ ರೋಗಿಯ ಯಾವುದೇ ದ್ರವ ಅಥವಾ ವಸ್ತುವಿನ ಸಂಪರ್ಕ ಮಾಡಬಾರದು.

Latest Videos
Follow Us:
Download App:
  • android
  • ios