ರಾಜ್ಯಾದ್ಯಂತ ಸರ್ಕಾರ ಲಾಕ್‍ಡೌನ್ ಘೋಷಿಸಿದ್ರೂ ಮನೆಗೆ ಅಗತ್ಯವಾದ ದಿನಸಿ ಸಾಮಗ್ರಿಗಳು, ಹಾಲು, ಹಣ್ಣು ಹಾಗೂ ತರಕಾರಿಗಳನ್ನು ಖರೀದಿಸಲು  ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಮನೆಗೆ ಅಗತ್ಯವಾದ ಸಾಮಗ್ರಿಗಳನ್ನು ತರಲು ಹೊರಹೋಗಲೇಬೇಕಾಗುತ್ತದೆ. ಆದ್ರೆ ಹೊರಗೆ ಹೋಗಿ ದಿನಸಿ ಸಾಮಗ್ರಿಗಳನ್ನು ತರುವ ವ್ಯಕ್ತಿ ಕೆಲವೊಂದು ಮುನ್ನೆಚ್ಚರಿಕ ಕ್ರಮಗಳನ್ನು ವಹಿಸೋದು ಅತ್ಯಗತ್ಯ. ಇಲ್ಲವಾದ್ರೆ ಮನೆಮಂದಿಗೂ ಈ ವೈರಸ್ ಹರಡುವ ಸಾಧ್ಯತೆಯಿದೆ. ಹೊರಗೆ ಹೋಗುವಾಗ ಹಾಗೂ ಮನೆಗೆ ಬಂದ ತಕ್ಷಣ ವಹಿಸಬೇಕಾದ ಮುನ್ನೆಚ್ಚರಿಕ ಕ್ರಮಗಳು ಏನು?

ನೋಡಿ! ಕಡಲನಗರಿ ಭವಿಷ್ಯದ ಮೇಲೆ ಕೊರೋನಾ ಕರಿನೆರಳು

ಮನೆಯ ಒಬ್ಬ ಸದಸ್ಯ ಮಾತ್ರ ಹೊರ ಹೋಗಲಿ
ಮನೆಗೆ ದಿನಸಿ ಸಾಮಗ್ರಿಗಳು ಅಥವಾ ಇನ್ಯಾವುದೋ ಅಗತ್ಯ ವಸ್ತುಗಳನ್ನು ತರಲು ಮನೆಯ ಒಬ್ಬ ಸದಸ್ಯ ಮಾತ್ರ ಹೊರಗೆ ಹೋದ್ರೆ ಸಾಕು. ಮನೆಯಿಂದ ಯಾರಾದ್ರೂ ಹೊರಗೆ ಹೋಗುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಮಕ್ಕಳು ನಾವು ಹೋಗುತ್ತೇವೆ ಎಂದು ಹಟ ಮಾಡಬಹುದು. ಆದ್ರೆ ಯಾವುದೇ ಕಾರಣಕ್ಕೂ ಮಕ್ಕಳನ್ನು ಹೊರಗೆ ಕಳುಹಿಸಬೇಡಿ.

 ಮಾಸ್ಕ್ ಧರಿಸಲು ಮರೆಯಬೇಡಿ
ಮನೆಯಿಂದ ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡೇ ಹೋಗಿ. ಮಾಸ್ಕ್ ಧರಿಸೋದ್ರಿಂದ ಬೇರೆಯವರು ನಿಮ್ಮನ್ನು ನೋಡಿ ಪ್ಯಾನಿಕ್ ಆಗೋದಿಲ್ಲ. ಜೊತೆಗೆ ನಿಮಗೇನಾದ್ರೂ ಶೀತ, ಕೆಮ್ಮು ಇದ್ರೆ ಬೇರೆಯವರಿಗೆ ಅದು ಹರಡುವ ಅಪಾಯವೂ ಕಡಿಮೆಯಿರುತ್ತದೆ. ಮನೆಗೆ ಬಂದ ತಕ್ಷಣ ಮಾಸ್ಕ್ ಅನ್ನು ತೆಗೆದು ಒಂದು ಕವರ್‍ನಲ್ಲಿ ಹಾಕಿ ಕಟ್ಟಿ ಡಸ್ಟ್ಬಿನ್‍ಗೆ ಎಸೆಯಿರಿ. 

ಸ್ಯಾನಿಟೈಸರ್ ಕೊಂಡುಹೋಗಿ
ಹೊರಗೆ ಹೋಗುವಾಗ ಮರೆಯದೆ ಸ್ಯಾನಿಟೈಸರ್ ಕೊಂಡುಹೋಗಿ. ಅಗತ್ಯ ಅನಿಸಿದಾಗ ಸ್ಯಾನಿಟೈಸರ್ ಮೂಲಕ ಕೈಗಳನ್ನು ಸ್ವಚ್ಛಗೊಳಿಸಿ. ದಿನಸಿ ಸಾಮಗ್ರಿಗಳನ್ನು ಮುಟ್ಟಿದ ಬಳಿಕ ಮುಖ, ಮೂಗು, ಬಾಯಿ ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ.  

ಕೊರೋನಾ ಕಾಲದಲ್ಲಿ ಬೆಂದಕಾಳೂರು; ಹೀಗಿದೆ ನೋಡಿ!

ಜನರಿಂದ ಅಂತರ ಕಾಯ್ದುಕೊಳ್ಳಿ
ದಿನಸಿ ಸಾಮಗ್ರಿ ಅಥವಾ ತರಕಾರಿಗಳನ್ನು ಖರೀದಿಸುವಾಗ ಜನರಿಂದ ಆದಷ್ಟು ಅಂತರ ಕಾಯ್ದುಕೊಳ್ಳಿ. ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳೋದು ಅಗತ್ಯ. ಹೊರಗಡೆ ಹೋಗಿದ್ದೀರಿ ಎಂಬ ಕಾರಣಕ್ಕೆ ಹೆಚ್ಚು ಸಮಯವನ್ನು ಅಲ್ಲೇ ಕಳೆಯಲು ಪ್ರಯತ್ನಿಸಬೇಡಿ. ನಿಮಗೆ ಅಗತ್ಯವಾದ ವಸ್ತುಗಳನ್ನು ಥಟ್ಟನೆ ತೆಗೆದುಕೊಂಡು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮನೆಗೆ ಮರಳಿ. 

ಮನೆಗೆ ಬಂದ ತಕ್ಷಣ ಸೀದಾ ಬಾತ್‍ರೂಮ್‍ಗೆ ಹೋಗಿ
ಮನೆಗೆ ಹಿಂತಿರುಗಿದ ತಕ್ಷಣ ವಸ್ತುಗಳನ್ನು ಒಂದು ಕಡೆಯಿಟ್ಟು ನೇರವಾಗಿ ಬಾತ್‍ರೂಮ್‍ಗೆ ಹೋಗಿ ಸ್ನಾನ ಮಾಡಿ. ಸೋಪ್ ಬಳಸಿ ಕೈಗಳನ್ನು ಚೆನ್ನಾಗಿ ತಿಕ್ಕಿ ತೊಳೆಯಲು ಮರೆಯಬೇಡಿ. ಸ್ನಾನದ ಬಳಿಕ ಒಗೆದಿಟ್ಟಿರುವ ಬಟ್ಟೆಗಳನ್ನೇ ಧರಿಸಿ. 

ಬಟ್ಟೆಗಳನ್ನು ಸೋಪ್ ನೀರಿನಲ್ಲಿ ನೆನೆಸಿ, ವಾಷ್ ಮಾಡಿ
ಹೊರಗೆ ಹೋಗುವಾಗ ಧರಿಸಿಕೊಂಡು ಹೋದ ಬಟ್ಟೆಗಳನ್ನು ಸೋಪ್ ನೀರಿನಲ್ಲಿ ನೆನೆಸಿಡಿ. ಅರ್ಧ ಗಂಟೆ ಬಳಿಕ ಅದನ್ನು ಒಗೆದು ಡೆಟಾಲ್ ಹಾಕಿದ ನೀರಿನಲ್ಲಿ ಅದ್ದಿದ ಬಳಿಕ ಬಿಸಿಲಿನಲ್ಲಿ ಒಣಗಿಸಿ. 

ಸಾಮಾನ್ಯ ಶೀತ, ನೆಗಡಿಗೂ ಕೊರೊನಾ ವೈರಸ್ಸೇ ಕಾರಣ ಗೊತ್ತಾ?

ಸ್ನಾನವಾದ ಬಳಿಕವೇ ಮನೆ ಸದಸ್ಯರನ್ನು ಮುಟ್ಟಿ 
ಸ್ನಾನಕ್ಕೂ ಮುನ್ನ ಯಾವುದೇ ಕಾರಣಕ್ಕೂ ಮನೆ ಸದಸ್ಯರನ್ನು ಮುಟ್ಟಲು ಹೋಗಬೇಡಿ. ಪುಟ್ಟ ಮಕ್ಕಳಿದ್ದರೆ ನೀವು ಮನೆ ಪ್ರವೇಶಿಸಿದ ತಕ್ಷಣ ನಿಮ್ಮನ್ನು ಅಪ್ಪಿಕೊಳ್ಳಲು ಬರಬಹುದು. ಈ ಬಗ್ಗೆ ಜಾಗ್ರತೆ ವಹಿಸಿ. ಒಂದು ವೇಳೆ ಅವರು ನಿಮ್ಮನ್ನು ಮುಟ್ಟಿದರೂ ತಕ್ಷಣ ಸೋಪ್ ಬಳಸಿ ಅವರ ಕೈಗಳನ್ನು ಚೆನ್ನಾಗಿ ತೊಳೆಯುವಂತೆ ಮನೆಯ ಇತರ ಸದಸ್ಯರಿಗೆ ತಿಳಿಸಿ. 

ಸೀಲ್ಡ್ ಪ್ಯಾಕ್‍ಗಳನ್ನು ತೊಳೆಯಿರಿ
ಮಕ್ಕಳಿಗೆ ನೀಡುವ ಚಿಪ್ಸ್, ಬಿಸ್ಕೆಟ್, ಕೆಲವೊಂದು ಧಾನ್ಯಗಳ ಪ್ಯಾಕ್‍ಗಳನ್ನು ನೀರಿನಲ್ಲಿ ತೊಳೆದು ಒಂದು ಬಟ್ಟೆಯಲ್ಲಿ ಒರೆಸಿ ಆ ಬಳಿಕ ಬಳಸಿ. ಹೊರಗಡೆಯಿಂದ ತಂದ ಸಾಮಗ್ರಿಗಳನ್ನು ಮುಟ್ಟಿದ ಬಳಿಕ ಮರೆಯದೆ ಸೋಪ್ ಬಳಸಿ ನೀರಿನಿಂದ ಚೆನ್ನಾಗಿ ಕೈಗಳನ್ನು ತೊಳೆಯಿರಿ.