Asianet Suvarna News Asianet Suvarna News

ಲಾಕ್‌ಡೌನ್‌ ಸಮಯದಲ್ಲಿ ಹುಟ್ಟಿದ ಮಕ್ಕಳು ಸಿಕ್ಕಾಪಟ್ಟೆ ಸ್ಲೋ ನಾ?

ಕೊರೋನಾ ಸೋಂಕು ಹರಡುತ್ತಿದ್ದ ಕಾಲಘಟ್ಟವನ್ನು ಯಾರು ಕೂಡಾ ಮರೆಯಲು ಸಾಧ್ಯವಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುತ್ತಿದ್ದ ಕಣ್ಣಿಗೆ ಕಾಣದ ಮಹಾಮಾರಿಯಿಂದ ಜನರು ಹೈರಾಣಾಗಿದ್ದರು. ಅದೆಷ್ಟೋ ಮಂದಿಯಲ್ಲಿ ಆರೋಗ್ಯ ಸಮಸ್ಯೆಯಿನ್ನೂ ಕಡಿಮೆಯಾಗಿಲ್ಲ. ಹೀಗಿರುವಾಗ ಅಧ್ಯಯನದಿಂದ ಹೊಸತೊಂದು ವಿಚಾರ ತಿಳಿದುಬಂದಿದೆ. ಲಾಕ್​ಡೌನ್​ನಲ್ಲಿ ಹುಟ್ಟಿರುವ ಶಿಶುಗಳು ಬೇರೆ ಶಿಶುಗಳಿಗಿಂತ ಭಿನ್ನವಾಗಿವೆ ಎಂದು ಹೇಳಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Lockdown Babies Slower To MeetSsome Milestones, Study Finds Vin
Author
First Published Oct 15, 2022, 10:34 AM IST

ಕೊರೋನಾ ಸೋಂಕು ಸಂಪೂರ್ಣ ಜಗತ್ತನ್ನೇ ಅಕ್ಷರಶಃ ತಲ್ಲಣಗೊಳಿಸಿತ್ತು. ಸೋಂಕು ಹರಡಿ ಅದೆಷ್ಟೋ ಮಂದಿ ಮೃತಪಟ್ಟರು, ಇನ್ನದೆಷ್ಟೋ ಮಂದಿ ಆಸ್ಪತ್ರೆಗಳಲ್ಲಿ ನರಳಾಡಿದರು. ಕೊರೋನಾ ಸೋಂಕಿನ ಪ್ರಭಾವ ಕಡಿಮೆಯಾಗಿದ್ದರೂ ಜನರಲ್ಲಿ ಆರೋಗ್ಯ ಸಮಸ್ಯೆಯಿನ್ನೂ ಹಾಗೆಯೇ ಇದೆ. ಅದೆಷ್ಟೋ ಮಂದಿ ದೀರ್ಘಾವಧಿಯ ಕೋವಿಡ್ ಲಕ್ಷಣಗಳಿಂದ ಬಳಲುತ್ತಿದ್ದಾರೆ. ಈಗಲೂ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕರ್ಫ್ಯೂ, ಲಾಕ್‌ಡೌನ್‌ನಿಂದ ಜನರು ಮಾನಸಿಕವಾಗಿ ಅನುಭವಿಸಿದ ತೊಂದರೆಗಳು ಬೇರೆಯೇ ಇದೆ. ಒಂಟಿತನದಿಂದ ಅದೆಷ್ಟೋ ಮಂದಿ ಒತ್ತಡ, ಖಿನ್ನತೆ, ಸಾಮಾಜಿಕವಾಗಿ ಬೆರೆಯಲು ಸಾಧ್ಯವಾಗದೆ ಸಮಸ್ಯೆಯನ್ನು ಎದುರಿಸಿದರು. ಆದರೆ ಇವೆಲ್ಲಾ ಅಲ್ಲದೆಯೂ ಲಾಕ್‌ಡೌನ್‌ನಲ್ಲಿರುವ ಶಿಶುಗಳು ಸಹ ಭಿನ್ನವಾಗಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. 

ಲಾಕ್​ಡೌನ್ ಸಂದರ್ಭದಲ್ಲಿ ಹುಟ್ಟಿದ ಶಿಶುಗಳು ಇತರೆ ಶಿಶುಗಳಿಗಿಂತ ಭಿನ್ನ
ಕೊರೋನಾ ಕಾಲಘಟ್ಟದಲ್ಲಿ ಜನರಿಗೆ ಅತ್ಯಂತ ಹೆಚ್ಚು ಹಿಂಸೆ ನೀಡಿದ ವಿಚಾರವೆಂದರೆ ಲಾಕ್‌ಡೌನ್‌. ಯಾವಾಗಲೂ ಮಾಲ್‌, ಶಾಪಿಂಗ್‌, ಹೊಟೇಲ್‌, ರೆಸ್ಟೋರೆಂಟ್, ಪಾರ್ಟಿ, ಪಬ್‌, ಮೋಜು ಮಸ್ತಿ ಎಂದು ತಿರುಗಾಡುತ್ತಿದ್ದ ಮಂದಿ ದಿಢೀರ್ ಲಾಕ್‌ಡೌನ್‌ನಿಂದ ಸಂಪೂರ್ಣವಾಗಿ ಹೈರಾಣಾಗಿ ಹೋದರು. ಲಾಕ್‌ಡೌನ್‌ ಹೇರಿಕೆಯಿಂದ ಯಾವುದೇ ಮನೋರಂಜನೆಯಿಲ್ಲದೆ ಜನರು ಕಂಗೆಟ್ಟರು. ಸಾಮಾಜಿಕವಾಗಿ (Social) ಬೆರೆಯಲಾಗದೆ ಜನರು ಒದ್ದಾಡುವಂತಾಯಿತು. ಈ ಸಂದರ್ಭದಲ್ಲಿ ಎಲ್ಲರೂ ಖಿನ್ನತೆ (Anxiety), ಮಾನಸಿಕ ದುರ್ಬಲತೆ ಮೊದಲಾದ ಸಮಸ್ಯೆಗಳನ್ನು ಎದುರಿಸಿದರು.

ಲಸಿಕೆ ಹಾಕಿಸಿಕೊಂಡ್ರೂ ವಾಯುಮಾಲಿನ್ಯದಿಂದ ಹೆಚ್ಚುತ್ತೆ ಕೋವಿಡ್ ಅಪಾಯ

ಹಾಗೆಯೇ ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ಹುಟ್ಟಿದ ಶಿಶುಗಳು (Babies) ಇತರೆ ಶಿಶುಗಳಿಗಿಂತ ಭಿನ್ನವಾಗಿದೆ ಎಂದು ಅಧ್ಯಯನ ಹೇಳಿದೆ. ಲಾಕ್‌ಡೌನ್ ಆದ ಕಾರಣ ಯಾರೊಂದಿಗೂ ಬೆರೆಯಲು ಸಾಧ್ಯವಾಗಲ್ಲಿಲ್ಲ. ತಂದೆ-ತಾಯಿ ಜೊತೆಗಾದರೂ ಮಗು ಎಷ್ಟು ಹೊತ್ತು ಮಾತನಾಡಲಾದೀತು. ಹೀಗಾಗಿ ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ಹುಟ್ಟಿದ ಶಿಶುಗಳು ಇತರೆ ಶಿಶುಗಳಿಗಿಂತ ಭಿನ್ನವಾಗಿದೆ ಎಂದು ಅಧ್ಯಯನ ಹೇಳಿದೆ.

ಮಕ್ಕಳಲ್ಲಿ ಸಂವಹನ ಸಾಮರ್ಥ್ಯ ತುಂಬಾ ಕಡಿಮೆ
ಕೊರೋನಾ ಸಮಯದಲ್ಲಿ ಹುಟ್ಟಿದ ಮಕ್ಕಳಲ್ಲಿ ಸಂವಹನವು ತೀರಾ ಕಳಪೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಾಮಾನ್ಯವಾಗಿ ಮನೆಗೊಂದು ಶಿಶು ಬಂದಿದೆ ಎಂದ ತಕ್ಷಣ ಅಕ್ಕಪಕ್ಕದ ಮನೆಯವರು, ನೆಂಟರಿಷ್ಟರು, ಹಿರಿಯರು, ಸ್ನೇಹಿತರು, ಮಕ್ಕಳು ಒಬ್ಬರಲ್ಲಾ ಒಬ್ಬರು ಸುಮಾರು ಒಂದು ವರ್ಷದವರೆಗೂ ಮನೆಯಲ್ಲೇ ಜತೆಯಲ್ಲೇ ಇರುತ್ತಾರೆ. ಶಿಶು ನಿದ್ರೆ (Sleep) ಮಾಡಿದ ಅವಧಿಯೊಂದು ಬಿಟ್ಟು ಇಡೀ ದಿನವು ಮಗುವಿಗೆ ಅರ್ಥವಾಗುತ್ತೋ ಬಿಡುತ್ತೋ ಆದರೆ ಮಗುವಿನ ಜತೆ ಮಾತನಾಡುತ್ತಲೇ ಇರುತ್ತಾರೆ. ಹಾಗಾಗಿ ಮಕ್ಕಳು ಬೇಗನೇ ಮಾತನಾಡಲು ಕಲಿಯುತ್ತಾರೆ. ಆದರೆ ಲಾಕ್​ಡೌನ್‌ನಿಂದ ಇದ್ಯಾವುದೋ ಸಾಧ್ಯವಾಗಿಲ್ಲ. ಹೀಗಾಗಿ ಮಕ್ಕಳಲ್ಲಿ ಸಂವಹನದ ಕೊರತೆ ಕಂಡುಬಂದಿದೆ.

ಮಗು ವರ್ಷ ಕಳೆದರೂ ಪೋಷಕರೊಂದಿಗೆ ಉತ್ತಮವಾಗಿ ಸ್ಪಂದಿಸುತ್ತಿಲ್ಲ. ಮಾತನಾಡುವುದು ಕೂಡ ತಡವಾಗಿದೆ ಎಂದು ಸಂಶೋಧನೆ ಹೇಳಿದೆ. ಮಾರ್ಚ್ ಮತ್ತು ಮೇ 2020 ರ ನಡುವೆ ಮೂರು ತಿಂಗಳ ಅವಧಿಯಲ್ಲಿ ಜನಿಸಿದ 309 ಮಕ್ಕಳನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ.

ಮಾಸ್ಕ್ ಹಾಕ್ಕೊಳ್ಳಿ, ಹರಡ್ತಿದೆ ಓಮಿಕ್ರಾನ್ ರೂಪಾಂತರದ ತಳಿ BA.4.6

2020 ರಲ್ಲಿ ಬ್ರಿಟನ್‌ನಲ್ಲಿ ಸುಮಾರು 600,000 ಶಿಶುಗಳು ಮತ್ತು ಐರ್ಲೆಂಡ್‌ನಲ್ಲಿ ಇನ್ನೂ 60,000 ಶಿಶುಗಳು ಜನಿಸಿದವು.  ಕೋವಿಡ್ ನಿರ್ಬಂಧಗಳು ಮತ್ತು ಮುಖವಾಡಗಳನ್ನು ಧರಿಸುವುದರಿಂದ ಅಂಬೆಗಾಲಿಡುವ ಪ್ರಾಸ-ಸಮಯಗಳು, ಪ್ರಸವಪೂರ್ವ ಗುಂಪು ವಿಹಾರಗಳು ಮತ್ತು ಅಜ್ಜಿಯರೊಂದಿಗೆ ಮುದ್ದಾಡುವುದು ಸೇರಿದಂತೆ ಅನೇಕ ಸಾಮಾಜಿಕ ಚಟುವಟಿಕೆಗಳನ್ನು ನಿಲ್ಲಿಸಿದಾಗ. ಅಂದಿನಿಂದ, ಶಿಶುಗಳ ಸಾಮಾಜಿಕ ಬೆಳವಣಿಗೆಯ ಮೇಲೆ ಅಂತಹ ಬಲವಂತದ ಪ್ರತ್ಯೇಕತೆಯ ಪರಿಣಾಮವನ್ನು ಪೋಷಕರು ಮತ್ತು ಮನಶ್ಶಾಸ್ತ್ರಜ್ಞರು ಕಂಡು ಹಿಡಿದಿದ್ದಾರೆ. 

ತಡವಾಗಿ ನಿಲ್ಲಲು, ಮಾತನಾಡಲು ಕಲಿತ ಮಕ್ಕಳು
ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ಚಟುವಟಿಕೆಗಳು ಕೊರೋನಾ ಸಮಯದಲ್ಲಿ ಹುಟ್ಟಿದ ಮಕ್ಕಳಲ್ಲಿ ಭಿನ್ನವಾಗಿದೆ. ಹೆಜ್ಜೆ ಹಾಕುವುದು, ತಾವೇ ಎದ್ದು ನಿಲ್ಲುವುದು, ವಸ್ತುಗಳನ್ನು ಹಿಡಿದುಕೊಳ್ಳುವುದು, ಆಹಾರ ಸೇವನೆ, ತಮ್ಮದೇ ಹೆಸರನ್ನು ತಿಳಿದುಕೊಳ್ಳುವುದು, ವಸ್ತುಗಳನ್ನು ಗುರುತಿಸುವುದು ಎಲ್ಲನ್ನೂ ಮಕ್ಕಳು ತುಂಬಾ ತಡವಾಗಿ ಕಲಿತುಕೊಂಡಿದ್ದಾರೆ. ಮಾಸ್ಕ್​ ಧರಿಸುವುದು, ಮಕ್ಕಳಿಂದ ಅಂತರ ಕಾಯ್ದುಕೊಳ್ಳುವುದು ಮಕ್ಕಳ ಮಾನಸಿಕತೆ ಮೇಲೂ ಪರಿಣಾಮ ಬೀರುತ್ತದೆ. ಮಕ್ಕಳು ಜನರನ್ನು ಬಹುಬೇಗ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಲಾಕ್​ಡೌನ್​ ಸಮಯದಲ್ಲಿ ಜನಿಸಿರುವ ಶಿಶುಗಳು ತುಂಬಾ ಜನರು ಸೇರಿರುವ ಶುಭ ಕಾರ್ಯಗಳಲ್ಲಿ ಭಾಗವಹಿಸಲು ಹಿಂಜರಿಯುತ್ತಾರೆ. ಗುಂಪನ್ನು ನೋಡಿದಾಗ ಭಯ ಬೀಳುತ್ತಾರೆ.

Follow Us:
Download App:
  • android
  • ios