Asianet Suvarna News Asianet Suvarna News

ಕಿವುಡುತನದ ಬಗ್ಗೆ ಜಾಗೃತಿ ಮೂಡಿಸಲು ಶುರುವಾಯ್ತು World Hearing Day

ಶ್ರವಣ ದೋಷ ಅಥವಾ ಕಿವುಡುತನವೆಂದ್ರೆ ಒಬ್ಬ ವ್ಯಕ್ತಿ, ಕೇಳುವ ಸಾಮರ್ಥ್ಯವನ್ನು ಕಳೆದುಕೊಳ್ಳುವ ಸ್ಥಿತಿ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗ್ತಿದೆ. ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಶ್ರವಣ ದಿನವನ್ನು ಆಚರಿಸುತ್ತಿದೆ.
 

History And Significance Of World Hearing Day 2022
Author
Bangalore, First Published Mar 2, 2022, 6:38 PM IST

ಪ್ರತಿ ವರ್ಷ ಮಾರ್ಚ್ 3ರಂದು ವಿಶ್ವ ಶ್ರವಣ ದಿನ (World Hearing Day)ವನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ನೇತೃತ್ವದಲ್ಲಿ ಪ್ರತಿ ವರ್ಷ ಆಚರಣೆ ನಡೆಯುತ್ತದೆ. ಹೆಚ್ಚುತ್ತಿರುವ ಕಿವುಡುತನ (Deafness)ದ ಅಪಾಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ಆಚರಣೆಯ  ಉದ್ದೇಶವಾಗಿದೆ. ಪ್ರತಿ ವರ್ಷ ಒಂದೊಂದು ಥೀಮ್ (Theme) ನೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಶ್ರವಣ ದಿನವನ್ನು ಆಚರಿಸುತ್ತದೆ. ಅದಕ್ಕೆ ಸಂಬಂಧಿಸಿದಂತೆ  ಕರಪತ್ರಗಳು, ಪೋಸ್ಟರ್‌ಗಳು, ಬ್ಯಾನರ್‌ಗಳನ್ನು ಜನರಿಗೆ ನೀಡುತ್ತದೆ.
ವಿಶ್ವ ಶ್ರವಣ ದಿನದ ಇತಿಹಾಸ : ಮಾರ್ಚ್ 3, 2007 ರಂದು ಮೊದಲ ಬಾರಿಗೆ ವಿಶ್ವ ಶ್ರವಣ ದಿನವನ್ನು ಆಚರಿಸಲಾಯಿತು. ಆದ್ರೆ ಆಗ ಅದಕ್ಕೆ ಶ್ರವಣ ದಿನವೆಂದು ನಾಮಕರಣ ಮಾಡಿರಲಿಲ್ಲ. ಅದಕ್ಕೆ ಅಂತರಾಷ್ಟ್ರೀಯ ಕಿವಿ ಆರೈಕೆ ದಿನ (Ear Care Day) ವೆಂದು ಕರೆಯಲಾಗಿತ್ತು. 2016 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ,ವಿಶ್ವ ಶ್ರವಣ ದಿನ ಎಂದು ಘೋಷಿಸಲು ನಿರ್ಧರಿಸಿತು. ಜನರಿಗೆ ಕಿವಿ ಸಮಸ್ಯೆ ಬಗ್ಗೆ ಶಿಕ್ಷಣ ನೀಡುವುದು ಮತ್ತು ಅವರ ಹಕ್ಕುಗಳ ಬಗ್ಗೆ ಅವರಿಗೆ ಕಲಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. 

ವಿಶ್ವ ಶ್ರವಣ ದಿನ 2022 : ವಿಶ್ವಸಂಸ್ಥೆ ಘೋಷಣೆ ನಂತ್ರ ಮಾರ್ಚ್ 3 ರಂದು ವಿಶ್ವದಾದ್ಯಂತ ವಿಶ್ವ ಶ್ರವಣ ದಿನವನ್ನು ಆಚರಿಸುತ್ತ ಬರಲಾಗಿದೆ. 2050 ರ ವೇಳೆಗೆ 700 ಮಿಲಿಯನ್ ಜನರು ಶ್ರವಣ ದೋಷದಿಂದ ಬಳಲುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು 2021 ರ ವಿಶ್ವ ಶ್ರವಣ ದಿನದಂದು ಇದಕ್ಕೆ ಸಂಬಂಧಿಸಿದ ವರದಿಯನ್ನು ಬಿಡುಗಡೆ ಮಾಡಿತ್ತು. ಅದರ ಅಂಕಿಅಂಶಗಳು ಆಘಾತಕಾರಿಯಾಗಿದ್ದವು. ವರದಿಗಳ ಪ್ರಕಾರ 400 ಮಿಲಿಯನ್ ಜನರು ಸದ್ಯ ತಮ್ಮ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಾರೆ. ಪ್ರಾಚೀನ ಕಾಲದಲ್ಲಿ ಜನರ ಕೇಳುವ ಸಾಮರ್ಥ್ಯ ಜಾಗೃತವಾಗಿತ್ತು. ತಾಯಿಯ ಗರ್ಭದಲ್ಲೇ ಚಕ್ರವ್ಯೂಹ ಭೇದಿಸುವ ಕಲೆ ಕಲಿತ ಅಭಿಮನ್ಯು ಇದಕ್ಕೆ ಉದಾಹರಣೆ.

ತಲೆನೋವೆಂದು ಮಾತ್ರೆ ತಿನ್ನೋದೇ 'ದೊಡ್ಡ ತಲೆನೋವು' ಆಗಬಹುದು!

ವಿಶ್ವ ಶ್ರವಣ ದಿನ 2022 ಥೀಮ್ : 2022 ರ ವಿಶ್ವ ಶ್ರವಣ ದಿನಾಚರಣೆಯ ಥೀಮ್ “ಜೀವನಕ್ಕಾಗಿ ಕೇಳು, ಎಚ್ಚರಿಕೆಯಿಂದ ಆಲಿಸು” (To Hear For Life, Listen With Care). ಈ ಪ್ರಮುಖ ಸಂದೇಶದ ಮೂಲಕ  ಶ್ರವಣ ನಷ್ಟವನ್ನು ತಡೆಗಟ್ಟುವುದರ ಪ್ರಾಮುಖ್ಯತೆ ಮತ್ತು ವಿಧಾನಗಳ ಮೇಲೆ ಥೀಮ್ ಕೇಂದ್ರೀಕೃತವಾಗಿದೆ.

ಇಡೀ ದಿನ ಅನೇಕ ಸಂಸ್ಥೆಗಳು ಶ್ರವಣ ಶಕ್ತಿ,ಅದ್ರ ಆರೋಗ್ಯದ ಬಗ್ಗೆ ಜನರಿಗೆ ಮಾಹಿತಿ ನೀಡಲಿವೆ. ಕೆಲ ಶ್ರವಣ ನಷ್ಟ ಸಮಸ್ಯೆಯನ್ನು ತಡೆಯಬಹುದು. ಅದ್ರಲ್ಲಿ, ದೊಡ್ಡ ಶಬ್ಧದಿಂದಾಗುವ ಶ್ರವಣ ನಷ್ಟವೂ ಸೇರಿದೆ. ಸರ್ಕಾರ,ಉದ್ಯಮ ಪಾಲುದಾರರು ಹಾಗೂ ಜನರಿಗೆ ಶ್ರವಣದ ಆರೋಗ್ಯ ಕಾಪಾಡುವ ಬಗ್ಗೆ ಜಾಗೃತಿ ಮೂಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಮನವಿ ಮಾಡುತ್ತಲೇ ಬಂದಿದೆ.

Cannabis Hangover: ಮನೆಯಲ್ಲೇ ಭಂಗಿಯ ಮತ್ತು ಕಮ್ಮಿ ಮಾಡ್ಕೊಳಿ

ಕಾರ್ಯಕ್ರಮಗಳನ್ನು ಹೊರತುಪಡಿಸಿ, ಶ್ರವಣ ನಷ್ಟಕ್ಕೊಳಗಾದವರ ಸಂಖ್ಯೆ ತಿಳಿಯಲು ಹಾಗೂ ಅಗತ್ಯವಿರುವ ಸಹಾಯ ನೀಡುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆ ವರದಿಯನ್ನು ತಯಾರಿಸುತ್ತದೆ. ಶ್ರವಣ ಯಂತ್ರಗಳು ದುಬಾರಿಯಾಗಿರುತ್ತವೆ. ಅಗತ್ಯವಿರುವ ಜನರಿಗೆ ಇದನ್ನು ಕಡಿಮೆ ದರದಲ್ಲಿ ನೀಡುವುದು ಕೂಡ ಈ ವರದಿಯ ಹಾಗೂ ಈ ದಿನಾಚರಣೆಯ ಉದ್ದೇಶವಾಗಿದೆ.  

ಕಿವುಡುತನಕ್ಕೆ ಮುಖ್ಯ ಕಾರಣ : ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಶ್ರವಣ ಸಮಸ್ಯೆಗೆ ಮುಖ್ಯ ಕಾರಣವೆಂದರೆ ದೀರ್ಘಕಾಲದವರೆಗೆ ದೊಡ್ಡ ಧ್ವನಿಯಲ್ಲಿ,ಇಯರ್ ಫೋನ್ ಮೂಲಕ ಸಂಗೀತವನ್ನು ಕೇಳುವುದು. ಜಗತ್ತಿನಾದ್ಯಂತ ಶೇಕಡಾ 60ರಷ್ಟು ಯುವಕರಲ್ಲಿ ಈ ಸಮಸ್ಯೆ ಕಂಡು ಬರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 
ಕಿವುಡುತನದ ಸಮಸ್ಯೆಯು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.ವಿಶ್ವದಲ್ಲಿ  ಕಿವುಡುತನ ಹೆಚ್ಚಾಗಿದ್ದು,ಸದಸ್ಯ ರಾಷ್ಟ್ರಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ.
 

Follow Us:
Download App:
  • android
  • ios