Summer Health: ಬಿಸಿಲಿನ ಹೊಡೆತದಿಂದ ಕಾಡೋ ಆರೋಗ್ಯ ಸಮಸ್ಯೆಗೆ ಪರಿಹಾರವೇನು?
ಬಿಸಿಲಿನಲ್ಲಿ ಆರೋಗ್ಯ ಸಮಸ್ಯೆ ಕಾಡುವುದು ಹೆಚ್ಚು. ಅತಿಯಾದ ಬಿಸಿಲಿನ ಶಾಖಕ್ಕೆ ನಿಶ್ಯಕ್ತಿ, ಬಾಯಾರಿಕೆ, ತಲೆನೋವು ಮೊದಲಾದ ಸಮಸ್ಯೆ ಕಾಡುತ್ತದೆ. ಚಿಕ್ಕ ಮಕ್ಕಳಿಗೆ, ಗರ್ಭಿಣಿಯರಿಗೆ, ವೃದ್ಧರಿಗೆ ತೊಂದರೆಯಾಗುವುದು ಹೆಚ್ಚು. ಇದಕ್ಕೆ ಪರಿಹಾರವೇನು?
ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲಿನ ತಾಪದಿಂದ ಆರೋಗ್ಯ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. ಈ ಸಲ ಉತ್ತರಾಯಣ ಕಾಲ ಗ್ರೀಷ್ಮ ಋತು ಪ್ರಾರಂಭ ವಾಗುತ್ತಿದ್ದಂತೆ ಅತಿ ಹೆಚ್ಚು ಉಷ್ಣಾಂಶ ಕಂಡುಬರುತ್ತಿದೆ. ಸುಮಾರು 37 ಡಿಗ್ರಿಯಿಂದ 39ರ ವರೆಗೂ ಉಷ್ಣಾಂಶ ಮೊದಲ ಬಾರಿಗೆ ಕಂಡುಬರುತ್ತಿದೆ. ಇದರಿಂದ ನಿರ್ಜಲೀಕರಣ (Dehydrate) ಆಗುವ ಸಂಭವ ಹೆಚ್ಚು ಶಾಖೆಯ ಹೊಡೆತ ಕೂಡ ವೃದ್ಧರಿಗೆ ಚಿಕ್ಕ್ಕಮಕ್ಕಳಿಗೆ. ಹೃದಯರೋಗ. ಮಧುಮೇಹ ರೋಗಿಗೆ ಗರ್ಭಿಣಿಯರಿಗೆ ತೊಂದರೆಯನ್ನುಂಟು ಉಂಟಾಗಬಹುದು.
ಪ್ರಶ್ನೆ 1: ಶಾಖದ ಹೊಡೆತ ಅಂದರೇನು?
ಶಾಖದ ಬಳಲಿಕೆಯು ಶಾಖದ ಸೆಳೆತದಿಂದ ಪ್ರಾರಂಭವಾಗುವ ಶಾಖ ಸಂಬಂಧಿತ ಕಾಯಿಲೆಗಳ ಒಂದು ಭಾಗವಾಗಿದೆ. ಇದು ಶಾಖದ ಹೊಡೆತಕ್ಕೆ ಕಾರಣವಾಗುತ್ತದೆ. ಇದು ಜ್ವರಕ್ಕೆ ಕಾರಣವಾಗಬಹುದು. ಇದು ಆಯಾಸ ಅಥವಾ ದೌರ್ಬಲ್ಯವನ್ನು ಉಂಟುಮಾಡಬಹುದು. ಇದರಿಂದ ಸ್ನಾಯುಗಳಲ್ಲಿ ಶಕ್ತಿ ಕಡಿಮೆಯಾಗುವುದು. ಹೀಟ್ ಸ್ಟ್ರೋಕ್, ಶಾಖದ ನಿಶ್ಯಕ್ತಿ ಮತ್ತು ತೀವ್ರವಾದ ಬಿಸಿಲು ಇವೆಲ್ಲವೂ ದೇಹದ ಉಷ್ಣತೆಯನ್ನು ಜ್ವರದ ರೂಪದಲ್ಲಿ ಹೆಚ್ಚಿಸಬಹುದು. ಶಾಖವನ್ನು ನಿವಾರಿಸಲು ಸಾಕಷ್ಟು ದ್ರವಗಳನ್ನು ಕುಡಿಯಬೇಕು.
Summer Health Tips: ಬೇಸಿಗೆಯಲ್ಲಿ ಎಲೆಕ್ಟ್ರೋಲೈಟ್ ವಾಟರ್ ಕುಡೀರಿ ಅನ್ನೋದ್ಯಾಕೆ?
2. ಶಾಖದ ಹೊಡೆತದ ಚಿಹ್ನೆಗಳು ಯಾವುವು?
ವಿಪರೀತ ಬೆವರುವುದು
ಸೆಕೆ ಗುಳ್ಳೆ
ದೌರ್ಬಲ್ಯ
ವಾಕರಿಕೆ
ವಾಂತಿ
ತಲೆನೋವು
ತಲೆತಿರುಗುವಿಕೆ
ಸ್ನಾಯು ಸೆಳೆತ
ಉರಿಯೂತ
ದೇಹದ ಉಷ್ಣತೆಯ ನಿಯಂತ್ರಣವು ವಿಫಲವಾದಾಗ ಶಾಖದ ಬಳಲಿಕೆಯು ಹೀಟ್ ಸ್ಟ್ರೋಕ್‌ಗೆ ಕಾರಣವಾಗಬಹುದು. ವ್ಯಕ್ತಿಯು ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಯಾಗಬಹುದು. ಚರ್ಮವು ಬೆವರುವಿಕೆಯನ್ನು ನಿಲ್ಲಿಸುತ್ತದೆ ಮತ್ತು ದೇಹದ ಉಷ್ಣತೆಯು 106 F (41 C) ಮೀರಬಹುದು. ಇದು ಮಾರಣಾಂತಿಕ ಸ್ಥಿತಿಯಾಗಿದೆ ಮತ್ತು ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ.
ಬೇಸಿಗೆಯಲ್ಲಿ ಬಾತ್ ಟವೆಲ್ ಯಾಕೆ ವಾಸನೆ ಬರುತ್ತದೆ, ಇದನ್ನು ಹೋಗಲಾಡಿಸೋದು ಹೇಗೆ?
3. ಇದರ ಚಿಕಿತ್ಸೆ ಮಾಡುವುದು ಹೇಗೆ?
ಆಹಾರ
ಉಷ್ಣಾಂಶ ಹೆಚ್ಚಾದಾಗ ಚಿಕಿತ್ಸೆ ಪಡೆಯಲು ಆಹಾರ ಮತ್ತು ವಿಹಾರ ಬಹಳ ಮುಖ್ಯ
A)ಮಕ್ಕಳು ಹಾಗೂ ವೃದ್ಧರು ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ ಬೆಳಗ್ಗೆ 11ರಿಂದ ಮಧ್ಯಾಹ್ನ 3 ರ ವರೆಗೆ ಹೊರಗೆ ಹೋಗುವುದನ್ನು ತಪ್ಪಿಸಬೇಕು..
B)ಆದಷ್ಟು ಹಗುರವಾದ ಬಟ್ಟೆಗಳ್ಳನ್ನು ಧರಿಸಬೇಕು.
C)ಒಂದು ಬಕೆಟ್ ನೀರಿನಲ್ಲಿ ಕನಿಷ್ಠ 10 ಪುದೀನಾ ಎಲೆಗಳ್ಳನ್ನು ಅಥವಾ ಬೇವಿನ ಎಲೆ ಅಥವಾ ತುಳಸಿ ಎಲೆಗಳನ್ನು ಬೆರೆಸಿ 2 ಸಲ ಸ್ನಾನ ಮಾಡಬೇಕು. ಅಥವಾ ನೀರಿಗೆ ಕಡ್ಲೆ ಹಿಟ್ಟು ಅಥವಾ ಚಂದನದ ಪುಡಿ ಬೆರೆಸಿ ಸ್ನಾನ ಮಾಡಬಹುದು.
D)ದಿನಕ್ಕೆ 2 ಬಾರಿ ದೇಹಕ್ಕೆ ಲೋಳೆ ಸರ ಹಚ್ಚಿಕೊಳ್ಳಬೇಕು
E)ಬಾರ್ಲಿ ಅಕ್ಕಿ ಮತ್ತು ಅತಿ ಹೆಚ್ಚು ಮೆಗ್ನೇಸಿಯಂ ಫೈಬರ್ ಇರುವಂತಹ ಪದಾರ್ಥ ಸೇವನೆ ಮಾಡುವದು
D)ಅತಿ ಹೆಚ್ಚು ದ್ರವ ಕುಡಿಯಬೇಕು ಹಾಗೆಯೇ ನೀರಿನಂಶ ಹೆಚ್ಚಿರುವ ಸೌತೆಕಾಯಿ, ಕುಂಬಳ ಕಾಯಿ, ಹಾಗಲಕಾಯಿ. ಹೀರೆಕಾಯಿ, ದ್ರಾಕ್ಷಿಹಣ್ಣು, ಮಾವಿನ ಹಣ್ಣು. ಎಳನೀರು, ಕಲ್ಲಂಗಡಿಯನ್ನು ತಿನ್ನುಬಹುದು
ವಿಹಾರ
ದಿನಕ್ಕೆರಡು ಬಾರಿ ಸ್ನಾನ, ತೆಳು ಹಾಗೂ ಹತ್ತಿವಸ್ತಗಳ ಧಾರಣೆ, ಶೀತ ಗುಣವುಳ್ಳ ಎಣ್ಣೆಯಿಂದ ನಿತ್ಯ ತಲೆಗೆ ತೈಲಾಭ್ಯಂಜನ ಹಾಗೂ ದೇಹದ ದಣಿವನ್ನು ನೀಗಿಸಲು ಹಗಲಿನಲ್ಲಿ 2 ಗಂಟೆ ವಿಶ್ರಾಂತಿಯನ್ನು ತೆಗೆದುಕೊಳ್ಳಬಹುದು.
ಬಿಸಿಲಿನ ತಾಪವನ್ನು ತಪ್ಪಿಸಿ ಆದಷ್ಟು ಬೆಳಗ್ಗೆ ಅಥವಾ ಸಂಜೆ 6 ನಂತರ ವಾಕಿಂಗ್ ಹೋಗುವುದು ಒಳ್ಳೆಯದು.
ಇಂಥಾ ಆಹಾರ ತಿನ್ನಬೇಡಿ
ಅತಿಯಾದ ಖಾರ, ಹುಳಿರಸಗಳ ಸೇವನೆ, ಜಿಡ್ಡಿನ ಪದಾರ್ಥಗಳ ಸೇವನೆ, ಕಷ್ಟಜೀರ್ಣಸಾಧ್ಯ ಆಹಾರಗಳು, ಮದ್ಯಪಾನ, ಧೂಮಪಾನ, ಅತಿಯಾದ ವ್ಯಾಯಾಮ, ಸೂರ್ಯನಿಗೆ ಅತಿಯಾಗಿ ಮೈ ಒಡ್ಡುವುದನ್ನು ತಪ್ಪಿಸಬೇಕು. ನೈಲಾನ್ ಬಟ್ಟೆ ಧರಿಸುವುದು ಒಳ್ಳೆಯದಲ್ಲ ಎಂದು ನ್ಯಾಷನಲ್ ಸೇವಾ ಡಾಕ್ಟರ್ಸ್ ಅಸೋಸಿಯೇಷನ್ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ, ಬೆಂಗಳೂರಿನ HCG ಕ್ಯಾನ್ಸರ್ ಆಸ್ಪತ್ರೆಯ ಡಾ.ಮಂಜುನಾಥ ಹೇಳುತ್ತಾರೆ.