ಆರೋಗ್ಯ ಟ್ರ್ಯಾಕ್ ಮಾಡುವ ಸ್ಮಾರ್ಟ್‌ವಾಚ್‌ ಕ್ಯಾನ್ಸರ್‌ಗೆ ಕಾರಣವಾಗುತ್ತಾ?

ಮಾರುಕಟ್ಟೆಯಲ್ಲಿ ಹೆಚ್ಚು ರಾರಾಜಿಸುತ್ತಿರುವ ಸ್ಮಾರ್ಟ್ ವಾಚ್ ಗಳಲ್ಲಿ ರೇಡಿಯೇಷನ್‌ ಇದ್ದು, ಸ್ಮಾರ್ಟ್ ವಾಚ್ ಧರಿಸಿ ಹೆಚ್ಚು ವ್ಯಾಯಾಮ ಹಾಗೂ ಕೆಲಸ ಮಾಡುವುದರಿಂದ ಮೆದುಳಿಗೆ ಹಾಗೂ ನಮ್ಮ ಚರ್ಮಕ್ಕೆ ಹಾನಿಯಾಗುವ ಸ್ಕಿನ್ ಕ್ಯಾನ್ವರ್ಗೆ ಕಾರಣವಾಗುತ್ತಾ ಎಂಬ ಗೊಂದಲಗಳಿಗೆ ಇಲ್ಲಿದೆ ಉತ್ತರ.

Explained Do Health tracking smartwatches leads to cancer

ಹಿಂದೆ ಸೂರ್ಯನ ಬೆಳಕನ್ನು ನೋಡಿ ಸಮಯ ಎಷ್ಟಿರಬಹುದು ಎಂದು ನಮ್ಮ ಪೂರ್ವಿಕರು ಕಂಡುಹಿಡಿಯುತ್ತಿದ್ದಂತೆ, ನಂತರದ ದಿನಗಳಲ್ಲಿ ಸಮಯ ನೋಡಲು ಅನೇಕ ಬಗ್ಗೆಯ ಗಡಿಯಾರಗಳು ಆವಿಷ್ಕಾರವಾಗುತ್ತ ಬಂದವು. ಇಂದು ಸ್ಮಾರ್ಟ್ ವಾಚ್ ( smartwatches) ನದ್ದೆ ಜಾಯಾಮಾನವಾಗಿಬಿಟ್ಟಿದೆ. ಯಾರ ಕೈಲಿ ನೋಡಿದರು ಸ್ಮಾರ್ಟ್ ವಾಚ್. ಅದರಲ್ಲೂ  ದಿನೇ ದಿನೇ ಹೊಸ ಹೊಸ ವೈಶಿಷ್ಟ್ಯತೆಯ ಬ್ರ್ಯಾಂಡ್ಗಳು ಬರುತ್ತಲೇ ಇವೆ. 

ಬದಲಾಗುತ್ತಿರುವ ಟ್ರೆಂಡ್‌ ಗೆ ಒಗ್ಗಿಕೊಳ್ಳುತ್ತಿರುವ ಜನರಿಗೆ ಮಾರುಕಟ್ಟೆಯಲ್ಲಿ ಒಂದು ಹೊಸ ಉತ್ಪನ್ನ ಬಂದರೂ ಖರೀದಿಸುವ ಬಯಕೆ ಹೆಚ್ಚಿದೆ.  ವಾಚ್‌ಗಳ ವಿಷಯಕ್ಕೆ ಬಂದರಂತೂ ದಿನೇ ದಿನೇ ಹೊಸ ವೈಶಿಷ್ಟ್ಯತೆ ಹೊಂದಿರುವ ವಾಚ್‌ ಗಳು ಲಭ್ಯವಿದೆ. ಈಗ ವಾಚ್‌ ಗಳ ವಿಷಯದಲ್ಲಿ ಸ್ಮಾರ್ಟ್ ವಾಚ್ ಮುಂದಿದೆ.

ಸ್ಮಾರ್ಟ್ ವಾಚ್ ನಲ್ಲಿ ಇತರ ವಾಚ್‌ ಗಳಿಗಿಂತ ಹೆಚ್ಚು ಸೌಲಭ್ಯಗಳಿವೆ. ಕೇವಲ ಸಮಯ ಮಾತ್ರವಲ್ಲದೆ, ನಮ್ಮ ಹೃದಯ ಬಡಿತ, ರಕ್ತದೊತ್ತಡ, ಒತ್ತಡ ಮಟ್ಟ ಹೀಗೆ ಹಲವು ಪರೀಕ್ಷೆಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಅಲ್ಲದೇ ದೈನಂದಿನ ಚಟುವಟಿಕೆಗಳನ್ನು ದಾಖಲಿಸಿಕೊಳ್ಳಲು ಅವಕಾಶವಿದೆ. ಈ ಎಲ್ಲ ವೈಶಿಷ್ಟತೆಗಳನ್ನು ನೀಡುವ ಕಾರಣಕ್ಕೆ ಸ್ಮಾರ್ಟ್ ವಾಚ್  ಜನರಿಗೆ ಅಚ್ಚು ಮೆಚ್ಚಾಗಿದೆ.

12 ವರ್ಷದ ಬಾಲಕಿಯ ಕ್ಯಾನ್ಸರ್ ಪತ್ತೆ ಹಚ್ಚಿದ ಆಪಲ್ ವಾಚ್!

ಆರೋಗ್ಯ ಸಮಸ್ಯೆ ಕಂಡು ಹಿಡಿಯುವ ಸ್ಮಾರ್ಟ್ ವಾಚ್ ನಿಂದಲೇ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದಾ ? ಎಂಬ ಗೊಂದಲಗಳು ಹಲವರಲ್ಲಿದೆ. ಸ್ಮಾರ್ಟ್ ವಾಚ್ ಧರಿಸಿ ಹೆಚ್ಚು ವ್ಯಾಯಾಮ ಹಾಗೂ ಕೆಲಸ ಮಾಡುವುದರಿಂದ ಮೆದುಳಿಗೆ ಹಾಗೂ ನಮ್ಮ ಚರ್ಮಕ್ಕೆ ಹಾನಿಯಾಗಿ ಸ್ಕಿನ್ ಕ್ಯಾನ್ವರ್  ಬರಬಹುದಾ ? ಹೀಗೆ ಈ ರೀತಿಯ  ಸುಮಾರು ಪ್ರಶ್ನೆಗಳು ಜನರಲ್ಲಿ ಕುತೂಹಲ ಹಾಗೂ ಚಿಂತೆ ಮೂಡಿಸಿದೆ. 

ಸ್ಮಾರ್ಟ್ ವಾಚ್ ಗಳಲ್ಲಿ ವಿಕಿರಣಗಳು ಹೊಂದಿರುವ ಕಾರಣ ವ್ಯಕ್ತಿ ಅದನ್ನು ಧರಿಸಿ  ವ್ಯಕ್ತಿ ಚಟುವಟಿಕೆಗಳನ್ನು ಮಾಡುವುದು ಆರೋಗ್ಯಕ್ಕೆ ಸಮಸ್ಯೆಯಾಗುವ ಸಾಧ್ಯತೆಗಳಿವೆ. ವಿಕಿರಣವನ್ನು ಹೊಂದಿರುವ ವಾಚ್‌ ಗಳು ಚರ್ಮಕ್ಕೆ ಹತ್ತಿರ ಇರುವುದರಿಂದ ರಕ್ತನಾಳಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇರಬಹುದು, ಇದು ಚರ್ಮ ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳಿವೆ ಅನುವು ಮಾಡಿಕೊಡಬಹುದು ಎಂದು ಕೆಲ  ಸಂಶೋಧನೆಗಳು ಮತ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನಾ ಕೆಲ ಅಧ್ಯಯನಗಳು ಸ್ಮಾರ್ಟ್ ವಾಚ್ ಗಳಲ್ಲಿ ಕಡಿಮೆ ವಿಕಿರಣ ಮಟ್ಟವಿರುವುದರಿಂದ ವ್ಯಕ್ತಿಯ ಜೀವಕ್ಕೆ ಸಂಬಂಧಿಸಿದ ಯಾವುದೇ  ತೊಂದರೆಗಳು  ಉಂಟಾಗುವುದಿಲ್ಲ ಎಂದು ಸಾಕಷ್ಟು ಅಧ್ಯಯನಗಳು ಸಾಬೀತುಪಡಿಸಿವೆ. 

ಆರೋಗ್ಯ ಟ್ರ್ಯಾಕ್ ಮಾಡಲು Smart Watch ಬಳಸಿ ಆಸ್ಪತ್ರೆ ಸೇರಿದ ಯುವಕ!

ಸ್ಮಾರ್ಟ್ ವಾಚ್ ನಲ್ಲಿ ವಿಕಿರಣಗಳಿರುವುದಂತೂ ನಿಜ !
 ಸ್ಮಾರ್ಟ್ ವಾಚ್ಗಳು ಬ್ಲೂಟೂತ್ ಮೂಲಕ ತಮ್ಮ ಸ್ಮಾರ್ಟ್ಫೋನ್ ಗೆ ಕನೆಕ್ಟ್ ಮಾಡಲಾಗುತ್ತದೆ ಹಾಗೂ ವೈಫೈ ನ ಸಹಾಯದಿಂದ ಇಂಟರ್ನೆಟ್ ಗೆ ಕನೆಕ್ಟ್ ಮಾಡಬೇಕಾಗುತ್ತದೆ. ಬ್ಲೂಟೂತ್ ಹಾಗೂ ವೈಫೈ ಅಯಾನೀಕರಿಸಿದ ವಿಧದ ರೇಡಿಯೊ ಆವರ್ತನಯಿಂದ ಕೆಲಸ ಮಾಡಲು ವಿಕಿರಣಗಳು ಮುಖ್ಯ. ಆದರೆ  ಹೆಚ್ಚಿನ ಮೀರಿದ ವಿಕಿರಣಗಳನ್ನು   ಹೊಂದಿರುವುದಿಲ್ಲ.

 

ಒಟ್ಟಾರೆ ಮಿತಿಯಲ್ಲಿ ಹೊಂದಿರುವ ಸ್ಮಾರ್ಟ್ ವಾಚ್ ನ ರೇಡಿಯೇಶನ್ ನಿಂದ ಯಾವುದೇ ರೀತಿಯ ಕ್ಯಾನ್ಸರ್ ಅಥವಾ ಗಂಭೀರ ಸಮಸ್ಯೆಗಳು ಕಾಣಿಸದೆ ಹೋದರೂ ವಿಪರೀತ ಬಳಕೆಯು  ಚರ್ಮ  ಮತ್ತು ಮೆದುಳಿಗೆ ಸಂಬಂಧ ಪಟ್ಟ ಗಂಭೀರ ಸಮಸ್ಯೆಗಳನ್ನು ತಂದೊಡ್ಡಬಹುದಾಗಿದೆ. ಸ್ಮಾರ್ಟ್ ವಾಚ್ ಗಳಲ್ಲಿ ಹಲವು ಅನುಕೂಲಗಳಿದ್ದರೂ,ಅದರ ಅನಾನುಕೂಲವನ್ನು ನಾವು ಮರೆಯದೆ ಅದರ ಬಗ್ಗೆಯು ಜಾಗೃತಿಯನ್ನು ಹೊಂದಿರುವುದು ಉತ್ತಮ.

ಪಿ ಶುಭ ರಾವ್, ಬೆಂಗಳೂರು

Latest Videos
Follow Us:
Download App:
  • android
  • ios