ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಗೊತ್ತು, ಹೇಗೆ ತಿಂದ್ರೆ ಒಳ್ಳೆಯದು?

'ಜಾಸ್ತಿ ಸಕ್ಕರೆ(sugar) ತಿನ್ನಬೇಡ ಬೇಗ ಶುಗರ್ ಬಂದು ಹೋಗ್ತೀಯಾ. ಸ್ವೀಟ್ (Sweet) ತಿನ್ನುವುದು ಕಡಿಮೆ ಮಾಡು, ಖಾರ ಸ್ವಲ್ಪ ಜಾಸ್ತಿ ತಿನ್ನು'. ಹೀಗೆ ಹತ್ತು ಹಲವು ಮಾತುಗಳು ದಿನ ನಿತ್ಯ ಕೇಳುತ್ತಿರುತ್ತೇವೆ. ಸಕ್ಕರೆ ತಿಂದ ತಕ್ಷಣ ಡಯಾಬಿಟೀಸ್ (Diabetes) ಬರುತ್ತೆ ಎಂದು ಹಲವರು ತಿಳಿದಿದ್ದಾರೆ. ಅದು ಸುಳ್ಳು. ಡಯಾಬಿಟೀಸ್ ಬರುವುದು ರಕ್ತದಿಂದಲೇ (Blood) ಹೊರತು ಸಕ್ಕರೆಯಿಂದಲ್ಲ. ನಮ್ಮ ದೇಹಕ್ಕೆ ಸಕ್ಕರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. ಸಕ್ಕರೆಯೊಂದು ನಿಮ್ಮ ಜೊತೆ ಇದ್ದರೆ ಸಾಕು ಸುಸ್ತಾದವರು(tired) ಎದ್ದು ಕೂರುವಿರಿ. ಹಾಗದರೆ ಸಕ್ಕರೆಯಲ್ಲಿ ಆ ಮಹತ್ವವಾದ ಗುಣಗಳ ಡೀಟೇಲ್ಸ್ ಇಲ್ಲಿದೆ.

Eating Sugar may help Body if consumed in proper way

ಸಕ್ಕರೆ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಜ್ವರ ಬಂದಾಗ ಮರುಗಟ್ಟಿದ ಬಾಯಿಗೆ ಸಕ್ಕರೆ ಕೊಟ್ಟರೆ ಹೇಗನ್ಸುತ್ತೆ? ಬಿಸಿಲಿನಲ್ಲಿ ಬಂದಾಗ, ಬಾಯಾರಿದಾಗ ಪಾನಕ ಕೊಟ್ಟರೆ ಹೇಗಿರುತ್ತೆ?" ಸಿಹಿ ನಾಲಿಗೆಗೆ ಬಿದ್ದರೆ ಆಯಕ್ಟಿವ್(active) ಆಗುವುದು ಪಕ್ಕ. ಸಕ್ಕರೆ ಎಂದರೆ ಸಿಹಿ. ಅದರ ಗುಣವೇ ಅಂತಹದು. ನಿದ್ದೆ ಮಾಡುತ್ತಿರುವವನಿಗೆ ಬಡಿದೆಬ್ಬಿಸುವ ಗುಣ ಅದರಲ್ಲಿದೆ. ಮರುಗಟ್ಟಿದ ಬಾಯಿಗೆ ಸಿಹಿ ಸಿಕ್ಕರೆ ಅಮೃತ ಎನಿಸುತ್ತೆ. 

ಎಲ್ಲರಲ್ಲೂ ಒಂದು ತಪ್ಪು ಕಲ್ಪನೆ ಇದೆ. ಡಯಾಬಿಟೀಸ್ ಇರುವವರು ಹೆಚ್ಚಾಗಿ ಸಕ್ಕರೆ ತಿನ್ನುತ್ತಾರೆ. ಹಾಗಾಗಿ ಸಕ್ಕರೆ ಖಾಯಿಲೆ ಬಂದಿದೆ ಎಂದು. ಹಾಗಾಗಿ ಅವರನ್ನು ಸಕ್ಕರೆಯಿಂದ ದೂರವಿರಲು ಹೇಳುತ್ತಾರೆ. ಸಕ್ಕರೆಯಿಂದ ಮಾಡಿದ ಪದಾರ್ಥಗಳನ್ನು ಬಿಲ್ಕುಲ್ ಮುಟ್ಟುವಂತಿಲ್ಲ. ಮುಟ್ಟಿದರೆ ಮಾರನೆಯ ದಿನ ಹಾಗಲಕಾಯಿ ಜ್ಯೂಸ್(bitter gourd juice) ಅವರಿಗಾಗಿ ಕಾದಿರುತ್ತೆ. 
ಡಯಾಬಿಟೀಸ್ ಬರುವುದು ರಕ್ತದ ಸಕ್ಕರೆ ಅಂಶದಲ್ಲಿ ಏರುಪೇರಾದಾಗ. ಆದರೆ ಸಕ್ಕರೆ ಸೇವನೆ ನಮ್ಮ ಆರೋಗ್ಯದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. ಸಕ್ಕರೆ ಇಲ್ಲದೆ ಬದುಕುವುದೇ ಅಸಾಧ್ಯ. ಬರೀ ಕೆಟ್ಟದೆಂದು ಕಾಣುವವರಿಗೆ ಒಳ್ಳೆಯ ಗುಣಗಳ ಬಗ್ಗೆ ಇಲ್ಲಿದೆ ಮಾಹಿತಿ.

Health Tips: ಸಕ್ಕರೆ ತಯಾರಿಸುವಾಗ ಮೂಳೆಯ ಪುಡಿ ಸೇರಿಸುತ್ತಾರಾ?

ಗ್ಲೂಕೋಸ್ (Glucose)
 ನಮ್ಮ ಆರೋಗ್ಯಕ್ಕೆ ಬೇಕಾದ ಪ್ರಮುಖ ಅಂಶವೇ ಗ್ಲೂಕೋಸ್(glucose). ಹಾಗಾಗಿ ಸಕ್ಕರೆ ನಮ್ಮ ದೇಹಕ್ಕೆ ಶಕ್ತಿ ಎನರ್ಜಿ(energy) ತುಂಬುತ್ತಲ್ಲದೆ ಇಂಧನದAತೆ(fuel) ಕೆಲಸ ಮಾಡುತ್ತದೆ. ನಮ್ಮ ಒತ್ತಡದ(stress) ಕೆಲಸಗಳ ಮಧ್ಯೆ ಸಕ್ಕರೆಯನ್ನು ಯಾವಾಗಲೂ ಇಟ್ಟುಕೊಳ್ಳುವುದು ಸಾಧ್ಯವಿಲ್ಲ. ಹಾಗಾಗಿ ಡೈರಿ ಪ್ರಾಡಕ್ಟಗಳು(diary product), ಚಾಕೋಲೇಟ್(chocolate), ಹಣ್ಣುಗಳನ್ನು(fruits) ಜೊತೆಯಲ್ಲಿಟ್ಟುಕೊಳ್ಳಬಹುದು. ಇವುಗಳನ್ನು ಸುಸ್ತಾದಾಗ, ತಲೆ ಸುತ್ತು ಬಂದಾಗ ಹೀಗೆ ಬೇಕಾದಾಗ ಸೇವಿಸುವುದರಿಂದ ಎನರ್ಜಿ ತುಂಬುತ್ತದೆ. ಮನಸ್ಸಿಗೆ ಹಾಗೂ ದೇಹಕ್ಕೆ ಚೈತನ್ಯ ತುಂಬುತ್ತದೆ. 

ಮನಸ್ಥಿತಿ ಬದಲಿಸುತ್ತೆ
ಸಿಹಿ ಸೇವನೆಯಿಂದ ಖುಷಿ(happy) ಸಿಗುತ್ತದೆ. ಮಂಕಾಗಿದ್ದಾಗ, ಬೇಸರವಾದಾಗ ಚಾಕೋಲೇಟ್, ಐಸ್ ಕ್ರೀಮ್(Ice cream) ಸೇವನೆ, ಹರ್ಬಲ್ ಟೀಗೆ(herbal tea) ಹೆಚ್ಚು ಸಕ್ಕರೆ ಹಾಕಿಕೊಂಡು ಕಡಿದರೆ ಮನಸ್ಸಿಗೆ ಸಂತೋಷ ನೀಡುತ್ತದೆ. ನಮ್ಮಲ್ಲಿನ ಆತಂಕ, ಹಿಂಜರಿಕೆಯನ್ನು ಹೋಗಲಾಡಿಸುತ್ತದೆ. ಅಲ್ಲದೆ ಆಫ್ ಆಗಿದ್ದ ಮೂಡ್ ಆಯಕ್ಟಿವ್ ಆಗಿ ಸಂತಸದಿAದಿರಲು ಸಹಕರಿಸುತ್ತದೆ.

ಪೌಷ್ಠಿಕಾಂಶ(protein)
ಆರೋಗ್ಯ ಕಾಯ್ದುಕೊಳ್ಳಲು ಪೌಷ್ಟಿಕಾಂಶವಿರುವ ಹಣ್ಣು ತರಕಾರಿಗಳನ್ನು ತಿನ್ನುತ್ತೇವೆ. ಹೀಗಿರುವಾಗ ಅದರಲ್ಲಿ ಸಕ್ಕರೆಯ ಅಂಶಗಳು ಇದ್ದೇ ಇರುತ್ತೆ. ಹೊಟ್ಟೆ ಹಸಿದಾಗ ಒಂದು ಸೇಬು(apple) ತಿಂದರೆ ಸಾಕು ಬಾಡಿದ ಮುಖ ಅರಳಿಬಿಡುತ್ತೆ. ಅಂದರೆ ಹಸಿದ ಹೊಟ್ಟೆಗೆ ಆಹಾರ ಸಿಕ್ಕಿತು. ಅಲ್ಲಿ ದೇಹಕ್ಕೆ ಪೌಷ್ಠಿಕಾಂಶವಿರುವ ನ್ಯಾಚುರಲ್ ಶುಗರ್(natural sugar) ಸಿಕ್ಕಿತು ಎಂದರ್ಥ. ಇವು ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. 

Food Tips: ಸಿಹಿತಿಂಡಿಗಳಲ್ಲಿರುವ ಕಾರ್ನ್ ಸಿರಪ್ ಆರೋಗ್ಯಕ್ಕೆ ಸುರಕ್ಷಿತವೇ ?

ಸ್ಕಿನ್ ಸ್ಕçಬ್( skin scrub)
ಸಕ್ಕರೆ ಕೇವಲ ಆರೋಗ್ಯ ಮಾತ್ರವಲ್ಲ ನಮ್ಮ ತ್ವಚೆಯ(skin) ಮೇಲೂ ಪರಿಣಮಾ ಬೀರುತ್ತದೆ. ಹೌದು ನಮ್ಮ ಚರ್ಮಕ್ಕೆ ಬೇಕಾದ ಆಲ್ಫಾ ಹೈಡ್ರಾಕ್ಸಿ ಆಸಿಡ್(Alpha Hydroxy Acid) ಅಂಶ ಸಕ್ಕರೆಯಿಂದ ಸಿಗುತ್ತದೆ. ಇದು ಚರ್ಮದ ಮೇಲ್ಭಾಗದಲ್ಲಿರುವ ಡೆಡ್ ಸ್ಕಿನ್(ded skin) ಅನ್ನು ತೆಗೆದು ಹಾಕಿ ನೈಸರ್ಗಿಕ ಕಾಂತಿಯನ್ನು ಒದಗಿಸುತ್ತದೆ.

ಟೋನ್ಡ್ ಸ್ಕಿನ್(toned skin) ಮೇಲೆ ಪ್ರಭಾವ
ಮಂಡಿ, ಮೊಣಕೈ, ಕಂಕಳುಗಳAತಹ ಜಾಗಗಳಿಗೆ ಎಷ್ಟೇ ಕ್ರೀಮ್‌ಗಳನ್ನು(cream) ಹಚ್ಚಿದರೂ ಅದರ ಮೇಲಿರುವ ಕಲೆ ಹೋಗುವುದಿಲ್ಲ. ಈ ಟೋನ್ಡ್ ಸ್ಕಿನ್‌ಗಳಿಗೆ ಸಕ್ಕರೆ ಪಾಕವನ್ನು ಸ್ಕçಬ್ ಮಾಡಿ ಹಚ್ಚುವುದರಿಂದ ಇರುವ ಕಲೆಗಳು ಹೋಗಲಾಡಿಸಬಹುದು. ಇದರಿಂದ ಸಾಫ್ಟ್(soft) ಹಾಗೂ ಉತ್ತಮ ಚರ್ಮವನ್ನು ಪಡೆಯಬಹುದು.

ಒಳ್ಳೆಯ ನಿದ್ರೆ(sleep)
ಹೆಚ್ಚು ಸಕ್ಕರೆ ಸೇವನೆಯಿಂದ ಒತ್ತವನ್ನು ಹೋಗಲಾಡಿಸುತ್ತದೆ. ಮಲಗುವ ಮೊದಲು ಸಿಹಿ ತಿನ್ನುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ. ಆಯಾಸವಾದ ದೇಹಕ್ಕೆ ಸಕ್ಕರೆ ನೀಡಿದರೆ ಹಾಯ್ ಎನಿಸುತ್ತದೆ.

ಜಸ್ಟ್‌ ಮೂರು ಪದಾರ್ಥ ಇದ್ರೆ ಸಾಕು, ರಸಭರಿತವಾದ ರಸಗುಲ್ಲಾ ಮನೆಯಲ್ಲೇ ಮಾಡ್ಬೋದು

ಮಕ್ಕಳ ಮಿದುಳು(brain) ಬೆಳವಣಿಗೆ
ಮಕ್ಕಳು ಸಿಹಿ ಬೇಕೆಂದರೆ ಕೊಡಿ. ಸಿಹಿ ತಿಂದರೆ ಒಳ್ಳೆಯದೇ. ಮನೆಯಲ್ಲೇ ತಯಾರಿಸಿದ ಸಿಹಿ ತಿಂಡಿಯಾದರೆ ಉತ್ತಮ. ಡಾರ್ಕ್ ಚಾಕೋಲೇ(dark chocolate) ಮಕ್ಕಳಿಗೆ ಒಳ್ಳೆಯದು. ಹಾಗಂತ  ಯಾವಾಗಲೂ ಕೊಡುವ ಬದಲು ಅಪರೂಪಕ್ಕೆ ಕೊಡುವುದು ಒಳ್ಳೆಯದು. ಸಕ್ಕರೆ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ. ಮಿದುಳು, ಮೂಳೆ(bone) ಬೆಳವಣಿಗೆಗ ಸಹಕಾರಿಯಾಗಿದ್ದು, ಯಾವಾಗಲು ಚೈತನ್ಯ ಭರಿತರಾಗಿ, ಆಯಕ್ಟಿವ್ ಆಗಿ ಇರುವಂತೆ ನೋಡಿಕೊಳ್ಳುತ್ತದೆ.

Latest Videos
Follow Us:
Download App:
  • android
  • ios