ಕೊರೋನಾ ಸೋಂಕು ತಡೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಸರ್ಕಾರ ಘೋಷಿಸಿದೆ. ಜನರು ದೊಡ್ಡ ಸಂಖ್ಯೆಯಲ್ಲಿ ಸೇರಬಹುದಾದ ಸಭೆಗಳು,ಕಾರ್ಯಕ್ರಮಗಳು,ಜಾತ್ರೆಗಳನ್ನು ನಡೆಸದಂತೆ ಸರ್ಕಾರ ಸೂಚಿಸಿದೆ. ಮಾಲ್‍ಗಳೆಲ್ಲ ಬಂದ್ ಆಗಿವೆ. ಇನ್ನು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದರೆ, ಕೆಲವು ಕಂಪನಿಗಳು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸಿವೆ. ಇವೆಲ್ಲ ಸಹಜವಾಗಿಯೇ ಸಾರ್ವಜನಿಕರಲ್ಲಿ ಮನೆ ಮಾಡಿರುವ ಭಯವನ್ನು ಇನ್ನಷ್ಟು ಹೆಚ್ಚಿಸಿರುವ ಜೊತೆಗೆ ಸದ್ಯದ ಪರಿಸ್ಥಿತಿಗೆ ಸಂಬಂಧಿಸಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅಂಥ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಸೋಂಕು ಬಾರದಂತೆ ತಡೆಯಲು ಎಷ್ಟು ಅಂತರ ಕಾಯ್ದುಕೊಳ್ಳಬೇಕು?
ಕೊರೋನಾ ವೈರಸ್ ಕೆಮ್ಮು ಹಾಗೂ ಸೀನಿನ ಮೂಲಕ ಹರಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಗುಂಪಿನಲ್ಲಿ ಅಥವಾ ಇನ್ನೊಬ್ಬರೊಂದಿಗೆ ಮಾತನಾಡುವಾಗ, ಬೆರೆಯುವಾಗ ಅಂತರ ಕಾಯ್ದುಕೊಳ್ಳೋದು ಅಗತ್ಯ. ಹಾಗಾದ್ರೆ ಕೊರೋನಾ ಸೋಂಕು ತಾಕಬಾರದೆಂದ್ರೆ ಎಷ್ಟು ಅಂತರ ಕಾಯ್ದುಕೊಳ್ಳಬೇಕು? ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ನೀಡಿರುವ ಸಲಹೆ ಅನ್ವಯ ಸೋಂಕು ಹರಡದಂತೆ ತಡೆಯಲು ಆರು ಅಡಿ ಅಂತರ ಕಾಯ್ದುಕೊಳ್ಳೋದು ಉತ್ತಮ.

ಕಣ್ಣುಗಳಿಂದ ಕೊರೋನಾ ಹರಡಬಹುದಾ?

ಆರೋಗ್ಯವಾಗಿರುವ ವ್ಯಕ್ತಿ ಕೂಡ ಮನೆಯಲ್ಲೇ ಇರಬೇಕಾ? 
ಇದು ಸದ್ಯಕ್ಕೆ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ನಾನು ಆರೋಗ್ಯವಾಗಿದ್ದೇನೆ, ಹೀಗಿರುವಾಗ ಹೊರಗಡೆ ಹೋಗಿ ನಿತ್ಯದ ಕೆಲಸ ಮಾಡೋದ್ರಿಂದ ಏನೂ ತೊಂದರೆಯಾಗದು ಎಂಬ ಅಭಿಪ್ರಾಯ ಬಹುತೇಕರಲ್ಲಿದೆ. ಆದ್ರೆ ಕೊರೋನಾ ಸೊಂಕು ಎಷ್ಟರ ಮಟ್ಟಿಗೆ ಜಗತ್ತನ್ನು ತಲ್ಲಣಗೊಳಿಸಿದೆ ಎಂಬುದನ್ನು ಗಮನಿಸಬೇಕಾದ ಅಗತ್ಯವಿದೆ. ಹೊರಗಡೆ ಹೋದ ತಕ್ಷಣ ಕೊರೋನಾ ಸೋಂಕು ತಗಲುತ್ತದೆ ಎಂದಲ್ಲ, ಆದ್ರೆ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ಕೈಗೊಂಡ್ರೆ ಮಾತ್ರ ನಾವು ಈ ಮಹಾಮಾರಿಯನ್ನು ದೇಶದಿಂದ ಹೊರಹಾಕಲು ಸಾಧ್ಯ. ಆದಕಾರಣ ನೀವು ಅದೆಷ್ಟೇ ಆರೋಗ್ಯವಂತರಾಗಿದ್ರೂ ಹೊರಗಡೆ ಹೋದಾಗ ಅಂತರ ಕಾಯ್ದುಕೊಳ್ಳಲು ಮರೆಯಬೇಡಿ. ನಿಮ್ಮೊಂದಿಗೆ ಮರೆಯದೆ ಸ್ಯಾನಿಟೈಸರ್ ತೆಗೆದುಕೊಂಡು ಹೋಗಿ. ಆಗಾಗ ಕೈಗಳನ್ನು ಸ್ಯಾನಿಟೈಸರ್‍ನಿಂದ ಸ್ವಚ್ಛಗೊಳಿಸಿ. ಯಾರಿಗೂ ಶೇಕ್‍ಹ್ಯಾಂಡ್ ಮಾಡಬೇಡಿ. ಹೊರಗೆ ಹೋಗಿ ಮನೆಗೆ ಬಂದ ತಕ್ಷಣ ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ. ನೀವು ಅದೆಷ್ಟೇ ಆರೋಗ್ಯವಾಗಿದ್ರೂ ಕೊರೋನಾ ದೇಶದಿಂದ ಸಂಪೂರ್ಣ ಮರೆಯಾಗುವ ತನಕ ಇಂಥ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. 

ಹೋಟೆಲ್‍ನಲ್ಲಿ ಊಟ ಮಾಡಬಹುದಾ?
ಕೊರೋನಾ ವೈರಸ್ ಆಹಾರದ ಮೂಲಕ ಹರಡಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಆದರೂ ಹೋಟೆಲ್‍ಗಳನ್ನು ಆಯ್ಕೆ ಮಾಡುವಾಗ ಎಚ್ಚರವಿರಲಿ. ಸ್ವಚ್ಚತೆ ಹಾಗೂ ನೈರ್ಮಲ್ಯವನ್ನು ಕಾಪಾಡುವ ಹೋಟೆಲ್‍ಗಳನ್ನೇ ಆರಿಸಿ. ಹೋಟೆಲ್‍ನಲ್ಲಿ ಬೇರೆ ವ್ಯಕ್ತಿಗಳೊಂದಿಗೆ 6 ಅಡಿ ಅಂತರ ಕಾಯ್ದುಕೊಳ್ಳಿ. ಇನ್ನೊಬ್ಬರು ಮುಟ್ಟಿರುವ ಟೇಬಲ್, ಮ್ಯಾಟ್ಸ್ ಹಾಗೂ ಬಾಟಲ್‍ಗಳನ್ನು ನೀವು ಮುಟ್ಟಬೇಕಾಗುತ್ತದೆ. ಹೀಗಾಗಿ ಊಟಕ್ಕೂ ಮುನ್ನ ಕೈಗಳನ್ನು 20 ಸೆಕೆಂಡ್‍ಗಳ ಕಾಲ ಸೋಪ್ ಅಥವಾ ಹ್ಯಾಂಡ್‍ವಾಷ್ ಬಳಸಿ ಕ್ಲೀನಾಗಿ ತೊಳೆದುಕೊಳ್ಳಿ. ಯಾವುದೇ ವಸ್ತುವನ್ನು ಮುಟ್ಟಿದರೂ ಆ ಬಳಿಕ ಸ್ಯಾನಿಟೈಸರ್‍ನಿಂದ ಕೈಗಳನ್ನು ಸ್ವಚ್ಛಗೊಳಿಸಿ. 

ಕೊರೋನಾವೈರಸ್‌ ಸೋಂಕು ಪತ್ತೆಗೆ ಗೂಗಲ್‌ನಿಂದ ಹೊಸ ವೆಬ್‌ಸೈಟ್‌ ಶುರು

ಪಾರ್ಕ್, ಜಿಮ್‍ಗೆ ಹೋದ್ರೆ ಏನ್ ಪ್ರಾಬ್ಲಂ?
ಈ ಸಮಯದಲ್ಲಿ ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳೋದು ಒಳ್ಳೆಯದು. ಅದ್ರಲ್ಲೂ ಮಕ್ಕಳನ್ನು ಪಾರ್ಕ್‍ಗೆ ಆಟವಾಡಲು ಕರೆದುಕೊಂಡು ಹೋಗುವ ಅಭ್ಯಾಸವಿದ್ರೆ ಸ್ವಲ್ಪ ದಿನಗಳ ಮಟ್ಟಿಗೆ ನಿಲ್ಲಿಸುವುದು ಉತ್ತಮ. ಮಕ್ಕಳಿಗೆ ಮನೆಯೊಳಗೆ ಆಡಬಹುದಾದಂತಹ ಆಟಗಳನ್ನು ಹೇಳಿಕೊಡಿ. ಪೇಂಟಿಂಗ್, ಕ್ರಾಫ್ಟ್ ಮುಂತಾದ ಚಟುವಟಿಕೆಗಳ ಮೂಲಕ ಅವರನ್ನು ಎಂಗೇಜ್ ಮಾಡಿ. ಸ್ವಚ್ಛತೆಯ ದೃಷ್ಟಿಯಿಂದ ಸ್ವಲ್ಪ ದಿನಗಳ ಕಾಲ ಜಿಮ್‍ಗೆ ಹೋಗದೇ ಇರೋದೆ ಒಳ್ಳೆಯದು. 

ಡೆಲಿವರಿ ಸೇವೆಗಳನ್ನು ಬಳಸಬಹುದಾ?
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಡೆಲಿವರಿ ಸೇವೆಗಳನ್ನು ಬಳಸಿಕೊಳ್ಳುವುದು ಒಳ್ಳೆಯ ಯೋಚನೆ. ಡೆಲಿವರಿ ಬಾಯ್ ಜೊತೆಗೆ ನೀವು ಸಂಪರ್ಕಕ್ಕೆ ಬಂದರೂ ಕಡಿಮೆ ಅವಧಿಯದ್ದಾಗಿದ್ದು, ಅಂತರ ಕಾಯ್ದುಕೊಳ್ಳುವ ಮೂಲಕ ಎಚ್ಚರ ವಹಿಸಬಹುದು. ಇಲ್ಲವೆ ಬಾಗಿಲ ಬಳಿ ಪಾರ್ಸೆಲ್ ಅನ್ನು ಇಟ್ಟು ಹೋಗುವಂತೆ ತಿಳಿಸಬಹುದು. ಆನ್‍ಲೈನ್ ಶಾಪಿಂಗ್ ಮಾಡೋದು ಈ ಸಮಯದಲ್ಲಿ ಅತ್ಯುತ್ತಮ ಮಾರ್ಗ. ಆದ್ರೆ ಇಲ್ಲೂ ಸ್ವಚ್ಛತೆಯ ನಿಯಮಗಳನ್ನು ಪಾಲಿಸಲು ಮರೆಯಬಾರದಷ್ಟೆ. 

ಕೊರೋನಾ ವೈರಸ್‌ ಹೇಗೆ ಹರಡುತ್ತದೆ? ಇದರ ಲಕ್ಷಣಗಳೇನು?

ಯಾವಾಗ ಸ್ವಯಂ ನಿರ್ಬಂಧ ವಿಧಿಸಿಕೊಳ್ಳಬೇಕು?
ನೀವು ಆರೋಗ್ಯವಂತರಾಗಿದ್ರೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಹೊರಗೆ ಹೋಗಿ ಬರಬಹುದು. ಇದರಿಂದ ಯಾವುದೇ ತೊಂದರೆಯಿಲ್ಲ. ಆದ್ರೆ ಶೀತ, ಕೆಮ್ಮು, ಜ್ವರ ಸೇರಿದಂತೆ ಕೊರೋನಾಕ್ಕೆ ಸಂಬಂಧಿಸಿದ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೂ ಮನೆ ಬಿಟ್ಟು ಹೊರಗೆ ಹೋಗಬೇಡಿ. ಹಾಗೆಯೇ ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ. ಹೊರಗೆ ಹೋಗಲೇಬೇಕಾದ ಅನಿವಾರ್ಯತೆ ಎದುರಾದ್ರೆ ಮರೆಯದೆ ಮಾಸ್ಕ್ ಧರಿಸಿ.