World Hypertension Day 2022: ನೀರು ಕುಡಿಯುವುದರಿಂದಲೂ ಹೈ ಬಿಪಿ ನಿಯಂತ್ರಿಸಬಹುದು
ರಕ್ತದೊತ್ತಡ ೯Blood Pressure) ಕಡಿಮೆ ಮಾಡಿಕೊಳ್ಳಲು ವೈದ್ಯರು ಹಲವು ರೀತಿಯ ಸಲಹೆ ಕೊಡುತ್ತಾರೆ.ಕಡಿಮೆ ಉಪ್ಪನ್ನು ಸೇವಿಸಿ, ಸಂಸ್ಕರಿತ ಆಹಾರ (Food) ಸೇವನೆಯನ್ನು ನಿಯಂತ್ರಿಸಿ, ಹಣ್ಣು, ತರಕಾರಿ (Vegatable), ಧಾನ್ಯಗಳನ್ನು ಹೆಚ್ಚು ತಿನ್ನಿ ಮೊದಲಾದ ಸಲಹೆ ಕೊಡುತ್ತಾರೆ.ಆದ್ರೆ ನೀರು (Waer) ಕುಡಿಯುವುದರಿಂದಲೂ ಬಿಪಿ ನಿಯಂತ್ರಿಸಬಹುದು ಅನ್ನೋದು ನಿಮ್ಗೆ ಗೊತ್ತಾ ?
ಪ್ರತಿ ವರ್ಷ ಮೇ 17ರಂದು ಜಗತ್ತಿನಾದ್ಯಂತ ವಿಶ್ವ ಹೈಪರ್ ಟೆನ್ಶನ್ ದಿನ (World Hypertension Day)ವನ್ನು ಆಚರಿಸಲಾಗುತ್ತದೆ. ಅಧಿಕ ರಕ್ತದೊತ್ತಡ (Blood pressure) ಉಂಟಾಗಲು ಪ್ರಮುಖ ಕಾರಣ ಹೈಪರ್ ಟೆನ್ಶನ್. ಒತ್ತಡದ ಜೀವನಶೈಲಿ (Lifestyle, ಅನಿಯಮಿತ ಆಹಾರಗಳ (Food) ಸೇವನೆ, ಧೂಮಪಾನದ ಅಭ್ಯಾಸ, ಮಾನಸಿಕ ಒತ್ತಡ ಜೊತೆಗೆ ಸರಿಯಾಗಿ ನಿದ್ದೆ (Sleep) ಮಾಡದೇ ಇರುವುದರಿಂದ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಅಪಧಮನಿಗಳ ಮೂಲಕ ರಕ್ತದ ಹರಿವು ಸಾಮಾನ್ಯಕ್ಕಿಂತ ಹೆಚ್ಚಾಗಿರುವ ಸ್ಥಿತಿಯನ್ನು ಅಧಿಕ ರಕ್ತದೊತ್ತಡ ಎನ್ನಲಾಗುತ್ತದೆ. ರಕ್ತದೊತ್ತಡ ಕಡಿಮೆ ಮಾಡಿಕೊಳ್ಳಲು ವೈದ್ಯರು ಹಲವು ರೀತಿಯ ಸಲಹೆ ಕೊಡುತ್ತಾರೆ.ಕಡಿಮೆ ಉಪ್ಪನ್ನು (salt) ಸೇವಿಸಿ, ಸಂಸ್ಕರಿತ ಆಹಾರ ಸೇವನೆಯನ್ನು ನಿಯಂತ್ರಿಸಿ, ಹಣ್ಣು, ತರಕಾರಿ, ಧಾನ್ಯಗಳನ್ನು ಹೆಚ್ಚು ತಿನ್ನಿ. ತೂಕ ನಿರ್ವಹಿಸಿ. ದೈಹಿಕ ವ್ಯಾಯಾಮ (Exercise) ಮಾಡಿ. ಅಲ್ಕೋಹಾಲ್, ಧೂಮಪಾನ (Smoking) ಸೇವನೆಯಿಂದ ದೂರವಿರಿ. ಸಾಕಷ್ಟು ಪ್ರಮಾಣದಲ್ಲಿ ನಿದ್ದೆ ಮಾಡಿ.ನಿಯಮಿತವಾಗಿ ಧ್ಯಾನ, ಯೋಗ ಮಾಡುವ ಮೂಲಕ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ದೂರವಿರಬಹುದು ಎಂದು ಸಲಹೆ ನೀಡುತ್ತಾರೆ. ಆದ್ರೆ ನೀರು ಕುಡಿಯುವುದರಿಂದಲೂ ಬಿಪಿ ನಿಯಂತ್ರಿಸಬಹುದು ಅನ್ನೋದು ನಿಮ್ಗೆ ಗೊತ್ತಾ ?
World Hypertension Day 2022: ಅಧಿಕ ರಕ್ತದೊತ್ತಡ ನಿಯಂತ್ರಿಸುವುದು ಹೇಗೆ ?
ಅಧಿಕ ರಕ್ತದೊತ್ತಡ ಮತ್ತು ನೀರು ಕುಡಿಯುವುದು
ಒಬ್ಬ ವ್ಯಕ್ತಿಯು ಅಧಿಕ ರಕ್ತದೊತ್ತಡವನ್ನು ಹೊಂದಿರುವಾಗ, ಅಪಧಮನಿಗಳ ಮೂಲಕ ರಕ್ತದ ಹರಿವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಹೀಗಾಗಿ ಆರೋಗ್ಯಕರ ಆಹಾರದ ಜೊತೆಗೆ, ನೀರು (water) ಕುಡಿಯುವುದು ಮತ್ತು ದೇಹವನ್ನು ಸರಿಯಾಗಿ ಹೈಡ್ರೀಕರಿಸಿರುವುದು ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀರು ಕುಡಿಯುವುದರಿಂದ ಹಾಗೂ ದೇಹ ನಿರ್ಜಲೀಕರವಾಗದಂತೆ ನೋಡಿಕೊಂಡರೆ ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳಬಹುದು. ಸಾಮಾನ್ಯವಾಗಿ, ದಿನಕ್ಕೆ ಎಂಟು 3 ರಿಂದ 4 ಲೀ ನೀರನ್ನು ಕುಡಿಯಲು ಸೂಚಿಸಲಾಗುತ್ತದೆ. ಇದರ ಜೊತೆಗೆ ನೀರಿನ ಅಂಶವಿರುವ ಹಣ್ಣುಗಳು ಮತ್ತು ತರಕಾರಿಗಳಂತಹ ಕೆಲವು ಆಹಾರಗಳು ಸೇವನೆ ಕೂಡ ಮುಖ್ಯವಾಗಿರುತ್ತದೆ.
ನಿರ್ಜಲೀಕರಣದಿಂದ ರಕ್ತದೊತ್ತಡ ಹೆಚ್ಚಾಗುವುದು ಹೇಗೆ ?
ಒಟ್ಟಾರೆ ಆರೋಗ್ಯಕ್ಕಾಗಿ ದೇಹವನ್ನು ಹೈಡ್ರೀಕರಿಸಿರುವುದು ಮುಖ್ಯ. ನಿರ್ಜಲೀಕರಣ ಮತ್ತು ರಕ್ತದೊತ್ತಡದ ನಡುವೆ ಸಂಬಂಧವಿದೆ. ದೇಹವು ಸರಿಯಾಗಿ ಹೈಡ್ರೀಕರಿಸಲ್ಪಟ್ಟಾಗ, ಹೃದಯವು ಪರಿಣಾಮಕಾರಿಯಾಗಿ ಪಂಪ್ ಮಾಡಲು ಸಾಧ್ಯವಾಗುತ್ತದೆ ಆದ್ದರಿಂದ ರಕ್ತವು ದೇಹದಾದ್ಯಂತ ಸುಲಭವಾಗಿ ಚಲಿಸುತ್ತದೆ, ಆದರೂ ಈ ವಿಷಯದ ಬಗ್ಗೆ ಹೆಚ್ಚಿನ ಅಧ್ಯಯನಗಳನ್ನು ನಡೆಸಬೇಕಾಗಿದೆ.
ಐಸ್‌ಕ್ರೀಂ ತಿಂದಾಗ ತಲೆನೋವಾಗುತ್ತಾ ? ಕಾರಣವೇನು ತಿಳ್ಕೊಳ್ಳಿ
ದೇಹವು ನಿರ್ಜಲೀಕರಣಗೊಂಡಾಗ, ಹೃದಯವು ಹೆಚ್ಚು ಬಲವನ್ನು ಬಳಸಬೇಕು ಮತ್ತು ದೇಹದಾದ್ಯಂತ ರಕ್ತವನ್ನು ವಿತರಿಸಲು ಗಟ್ಟಿಯಾಗಿ ಪಂಪ್ ಮಾಡಬೇಕು. ರಕ್ತವು ಅಂಗಾಂಶಗಳು ಮತ್ತು ಅಂಗಗಳಿಗೆ ಹೋಗಲು ಹೆಚ್ಚು ಶ್ರಮ ಬೇಕಾಗುತ್ತದೆ. ನಿರ್ಜಲೀಕರಣವು ಕಡಿಮೆ ರಕ್ತದ ಪರಿಮಾಣಕ್ಕೆ ಕಾರಣವಾಗುತ್ತದೆ, ಇದು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಹೀಗಾಗಿ ಹೆಚ್ಚು ನೀರು ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿರುತ್ತದೆ. ರಕ್ತದೊತ್ತಡವೂ ನಿಯಂತ್ರಣದಲ್ಲಿರುತ್ತದೆ.
ನಿರಂತರ ನಿರ್ಜಲೀಕರಣದಿಂದಾಗಿ ಈ ಪರಿಣಾಮಗಳು ದೇಹದಲ್ಲಿ ಸ್ಥಿರವಾಗಿದ್ದರೆ, ಮೆದುಳು ಸಾಮಾನ್ಯಕ್ಕಿಂತ ಹೆಚ್ಚಿನ ರಕ್ತದೊತ್ತಡವನ್ನು ನಿರ್ವಹಿಸಲು ಸ್ವತಃ ತರಬೇತಿ ನೀಡುತ್ತದೆ, ಇದರಿಂದಾಗಿ ಅಂಗಗಳು ರಕ್ತ ಪೂರೈಕೆಯನ್ನು ಪಡೆಯುತ್ತವೆ. ದೀರ್ಘಕಾಲದವರೆಗೆ ಈ ಬದಲಾವಣೆಗಳು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತವೆ. ಅನಿಯಂತ್ರಿತ ಅಧಿಕ ರಕ್ತದೊತ್ತಡಕ್ಕೆ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆಯ ಅಗತ್ಯವಿರುತ್ತದೆ.
ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದು ಒಳ್ಳೆಯದು
ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಲೇಬೇಕಾದ ಒಳ್ಳೆಯ ಅಭ್ಯಾಸ ಎಂದರೆ ಪ್ರತಿದಿನ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರನ್ನು ಸೇವಿಸುವುದು. ಖಾಲಿ ಹೊಟ್ಟೆಯಲ್ಲಿ ನೀರನ್ನು ಸೇವನೆ ಮಾಡುವುದರಿಂದ ದೇಹದಲ್ಲಿನ ಕಲ್ಶಶ ಸ್ವಚ್ಛವಾಗುತ್ತದೆ. ಅನುಪಯುಕ್ತ ವಸ್ತುಗಳು ದೇಹದಿಂದ ಹೊರಹೋಗಲು ನೀರು ಸಹಾಯ ಮಾಡುತ್ತದೆ. ಇದರಿಂದ ದೇಹ ಆರೋಗ್ಯಕರವಾಗಿರುತ್ತದೆ. ರಕ್ತದ ಹರಿವು ಕೂಡ ಸಮತೋಲನದಲ್ಲಿರುತ್ತದೆ.