Asianet Suvarna News Asianet Suvarna News

'ಆ' ಸಾಮರ್ಥ್ಯ ಹೆಚ್ಚಾಗಲು ದಿನಕ್ಕೊಂದು ಬೀಟ್‌ರೂಟ್‌ ಮಸ್ಟ್‌!

ಬೀಟ್‌ರೂಟ್‌ನ ರಕ್ತವರ್ಣ ನಿಮ್ಮನ್ನು ಬೆಚ್ಚಿ ಬೀಳಿಸಬಹುದು. ಆದರೆ ಅದರಂಥ ಹೆಲ್ದಿ ಫುಡ್‌ ಇನ್ನೊಂದಿಲ್ಲ. ಪ್ರತಿದಿನ ಒಂದಿಷ್ಟು ಬೀಟ್‌ರೂಟ್‌ ಸೇವಿಸಿದರೆ ನಿಮ್ಮ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ ಮಾತ್ರವಲ್ಲ, ಮಿಲನದ ಶಕ್ತಿಯೂ ಹೆಚ್ಚಾಗುತ್ತೆ ಅನ್ನೋದು ನಿಮಗೆ ಗೊತ್ತಾ?
 

8 health benefits of having beetroot daily
Author
Bangalore, First Published Jan 9, 2020, 11:48 AM IST

ಅಥ್ಲೆಟಿಕ್‌ ಪರ್‌ಫಾರ್ಮೆನ್ಸ್‌

ನೀವು ಓಟಗಾರರಾದರೆ, ಆಟದಲ್ಲಿ ಹೆಚ್ಚು ಭಾಗವಹಿಸುವವರಾದರೆ ಬೀಟ್‌ರೂಟ್‌ ಜ್ಯೂಸ್‌ ಸೇವಿಸುವುದು ಲಾಭಕರ. ಇದನ್ನು ಸೇವಿಸಿದಾಗ ಹೃದಯದ ಸಾಮರ್ಥ್ಯ‌ ಹೆಚ್ಚುವುದು ಕಂಡುಬಂದಿದೆ. ಅಂದರೆ ಇದನ್ನು ಅಥ್ಲೆಟಿಕ್‌ ಪ್ರದರ್ಶನದ 90 ನಿಮಿಷಗಳಿಗೆ ಮುನ್ನ ಸೇವಿಸಿರಬೇಕು. ಬೀಟ್‌ರೂಟ್‌ ಜ್ಯೂಸ್‌ ಸೇವನೆಯ ನಂತರದ 2-4 ಗಂಟೆಗಳಲ್ಲಿ ಸ್ಪರ್ಧಿಗಳು ಉತ್ತಮ ಸಾಧನೆ ನೀಡಿರುವದು ಅಧ್ಯಯನಗಳಲ್ಲಿ ಕಂಡುಬಂದಿದೆ. ಕಡಿಮೆ ಉಸಿರು ಎಳೆದುಕೊಳ್ಳುತ್ತಿದ್ದರೂ ಹೆಚ್ಚಿನ ದೂರ ಕ್ರಮಿಸಬಹುದು.

ಬೀಟ್ರೂಟ್‌ ರೆಸಿಪಿ: ಹಲ್ವಾ, ಸೂಪ್ ಹಾಗೂ ಸಾಸಿವೆ ಮಾಡೋದ್ಹೀಗೆ!

ಶಕ್ತಿ ಸಾಮರ್ಥ್ಯ‌ ಹೆಚ್ಚಳ

ದೈಹಿಕ ಶ್ರಮದ ಕೆಲಸ ಕಾರ್ಯ ಮಾಡುವವರಿಗೂ ಬೀಟ್‌ರೂಟ್‌ ತುಂಬ ಪ್ರಯೋಜನಕಾರಿ. ಇದನ್ನು ಸೇವಿಸಿದಾಗ ರಕ್ತದಲ್ಲಿ ನೈಟ್ರೇಟ್‌ನ ಅಂಶ ದುಪ್ಪಟ್ಟಾಗುತ್ತದೆ. ಈ ನೈಟ್ರೇಟ್‌ಗಳು, ಮೂಳೆಗಳು ತಮ್ಮ ಶಕ್ತಿಯ ಮೂಲವನ್ನು ವ್ಯಯ ಮಾಡುವುದನ್ನು ತಡೆಗಟ್ಟುತ್ತವೆ. ಶ್ರಮದ ಕೆಲಸದ ವೇಳೆ ಸ್ನಾಯುಗಳಿಗೆ ಹೆಚ್ಚಿನ ಆಮ್ಲಜನಕ ಬೇಕು. ಆದರೆ ಆಮ್ಲಜನಕದ ಹೆಚ್ಚಿನ ಅಗತ್ಯವಿಲ್ಲದಂತೆ ಬೀಟ್‌ರೂಟ್‌ ಮಾಡುತ್ತದೆ. ಅಂದರೆ ಆಕ್ಸಿಜನ್‌ ತೆಗೆದುಕೊಳ್ಳುವಿಕೆ ಕೂಡ ಕಡಿಮೆ ಸಾಕು. ಓಟದ ವೇಳೆ ಏದುಸಿರು ಬರುವುದಿಲ್ಲ.

ಆರೋಗ್ಯಕರ ದೇಹತೂಕ

ನಿಮ್ಮ ದೇಹತೂಕವನ್ನು ನಿಯಂತ್ರಣದಲ್ಲಿಡಲು ಬೀಟ್‌ರೂಟ್‌ ಸಹಾಯಕಾರಿ. ದಿನಕ್ಕೊಂದು ಬೀಟ್‌ರೂಟ್‌ ಸೇವಿಸಿದರೆ ಸಾಕಷ್ಟು ಕ್ಯಾಲೊರಿ ಬಾಡಿಗೆ ಸಿಗುತ್ತದೆ. ಇತರ ಆಹಾರಗಳನ್ನು ಒಂದು ಮಿತಿಗಿಂತ ಹೆಚ್ಚಾಗಿ ಸೇವಿಸುವ ಅಗತ್ಯ ಬೀಳುವುದಿಲ್ಲ. ಹೀಗಾಗಿ ದೇಹದಲ್ಲಿ ಅನಗತ್ಯ ಕೊಬ್ಬು ಶೇಖರವಾಗುವುದು ತಪ್ಪುತ್ತದೆ.

ಬೀಟ್ರೂಟ್‌ನಿಂದ ಕೂದಲನ್ನು ಕಲರ್ ಮಾಡಿಕೊಳ್ಳುವುದು ಹೀಗೆ!

ಬ್ಲಡ್‌ಪ್ರೆಶರ್‌ ಕಡಿಮೆಯಾಗುತ್ತೆ

ಆರೋಗ್ಯಕರ ದೇಹತೂಕ ಹಾಗೂ ಪ್ರತಿನಿತ್ಯ ವ್ಯಾಯಾಮ ಮಾಡುತ್ತಿದ್ದರೆ ಬ್ಲಡ್‌ಪ್ರೆಶರ್‌ ಹತೋಟಿಯಲ್ಲಿರುತ್ತದೆ. ಆದರೆ ಅಷ್ಟೆಲ್ಲ ಮಾಡುವುದರ ಬದಲು ಬೀಟ್‌ರೂಟ್‌ನ್ನೂ ಸೇವಿಸಿ ಬಿಪಿ ಇಳಿಸಿಕೊಳ್ಳಬಹುದು. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಇನ್‌ಆಗ್ರ್ಯಾನಿಕ್‌ ನೈಟ್ರೇಟ್‌ (ಎನ್‌ಒ3) ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದು ಡಯಾಬಿಟಿಸ್‌ನ ಹೊಸ್ತಿಲಿನಲ್ಲಿರುವವರಿಗೆ ಶುಭಸುದ್ದಿ.

ಆ ಶಕ್ತಿ ಹೆಚ್ಚುತ್ತದೆ!

ದೇಹದಲ್ಲಿ ಬಿಪಿ ಇಳಿಕೆಯಾದಂತೆ, ಆರೋಗ್ಯಕರ ರಕ್ತ ಪರಿಚಲನೆಯೂ ಹೆಚ್ಚುತ್ತದೆ. ಮಿಲನದ ಸಂದರ್ಭದಲ್ಲಿ ನಿಮ್ಮ ದೇಹದ ಹಲವು ಭಾಗಗಳಿಗೆ ರಕ್ತ ಹೆಚ್ಚು ಮಟ್ಟದಲ್ಲಿ ಪೂರೈಕೆಯಾಗುತ್ತದೆ ಎಂಬುದನ್ನು ನೀವು ಕಂಡಿದ್ದೀರಲ್ಲವೇ? ಆ ಸಾಮರ್ಥ್ಯ‌ ವೃದ್ಧಿಯಾಗಬೇಕಿದ್ದರೆ ಬೀಟ್‌ರೂಟ್‌ ತಿನ್ನಬಹುದು. ಇದರಿಂದ ಪುರುಷರ ಕಾಮಾಸಕ್ತಿ ಮತ್ತು ಶಕ್ತಿ ಎರಡೂ ವೃದ್ಧಿಯಾಗುತ್ತದೆ ಎಂದು ಅಧ್ಯಯನದಿಂದ ಹೇಳಿದವರಿದ್ದಾರೆ.

ಜೀರ್ಣಶಕ್ತಿಯ ಹೆಚ್ಚಳ

ಎಲ್ಲ ಗಡ್ಡೆಗಳಲ್ಲಿ ಇರುವಂತೆ ಬೀಟ್‌ರೂಟ್‌ನಲ್ಲಿ ಕೂಡ ನಾರಿನ ಅಂಶ ಹೆಚ್ಚು ಇದೆ. ಒಂದು ಕಪ್‌ ಬೀಟ್‌ರೂಟ್‌ ಹೋಳಿನಲ್ಲಿ 3.6 ಗ್ರಾಂನಷ್ಟು ಫೈಬರ್‌ ಇರುತ್ತೆ. ಇದು ದಿನನಿತ್ಯದ ನಾರಿನಂಶದ ಅಗತ್ಯದ 15 ಶೇಕಡದಷ್ಟು. ನಾರಿನಂಶ ನಿಮ್ಮ ಜೀರ್ಣಾಂಗವ್ಯೂಹ ನಾಲಿಗೆಯಿಂದ ದೊಡ್ಡ ಕರುಳಿನವರೆಗೂ ಸಲೀಸಾಗಿ ಕಾರ್ಯ ಎಸಗುವಂತೆ ಮಾಡುತ್ತದೆ.

ಬೀಟ್‌ರೂಟ್ ಚಹಾ ಎಂಬ ಗರ್ಭಿಣಿಗೆ ಅದ್ಭುತ ಮದ್ದು!

ನಿದ್ರೆಯ ಸುಖ

ಬೀಟ್‌ರೂಟ್‌ನಲ್ಲಿರುವ ಇನ್ನೊಂದು ಮಹತ್ವದ ಪೋಷಕಾಂಶ ಕೋಲೈನ್‌. ಇದು ಮೆದುಳಿನ ಜೀವಕೋಶಗಳಿಗೆ ಅತ್ಯಂತ ಅಗತ್ಯವಾಗಿ ಬೇಕಾದ ಪೋಷಕಾಂಶ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ, ಮಲಗಿದ ಕೂಡಲೇ ನಿದ್ರೆ ಬರುವಂತೆ ಮಾಡುತ್ತದೆ. ನಿದ್ರೆಯಲ್ಲಿ ಮೆದುಳಿನ ಜೀವಕೋಶಗಳು ಆರಾಮಾಗಿ ಬೆಳೆಯುತ್ತವೆ. ಹಲವು ದಿನಗಳಿಂದ ಕಾಡುವ ಸಣ್ಣ ಸಣ್ಣ ನೋವುಗಳು ಮಾಯವಾಗುತ್ತವೆ.

ಆದರೆ ಎಚ್ಚರಿಕೆ ಇರಲಿ

ಹಾಗೆಂದು ಅತಿಯಾದ ಬೀಟ್‌ರೂಟ್‌ ಸೇವನೆ ಕೂಡ ಹಾನಿಕರ. ಒಂದು ಮಿತಿಗಿಂತ ಅಧಿಕ ಪ್ರಮಾಣದಲ್ಲಿ ಇವನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಕಬ್ಬಿಣ, ತಾಮ್ರ, ಮ್ಯಾಗ್ನೀಶಿಯಂನಂಥ ಖನಿಜಾಂಶಗಳು ಪ್ರಮಾಣಕ್ಕಿಂತ ಅಧಿಕ ಸಂಗ್ರಹವಾಗಬಹುದು. ಅದು ಅಪಾಯಕಾರಿ.

Follow Us:
Download App:
  • android
  • ios