Asianet Suvarna News Asianet Suvarna News

ನಿಮ್ಮ ಕನಸಿನ ಮನೆ ನಿರ್ಮಿಸುವಾಗ ಈ ಅಂಶಗಳು ಗಮನದಲ್ಲಿರಲಿ..!

ನಿಮ್ಮ ಮನೆ ನಿಮ್ಮ ಕನಸು, ನೋವು, ನಲಿವುಗಳ ಕೇಂದ್ರವಾಗಿದ್ದು, ನಿಮ್ಮ ಜೀವನದ ಜೊತೆ ಬೆಸೆದುಕೊಂಡಿರುತ್ತದೆ. ನಿಮ್ಮ ಮನೆ ನಿರ್ಮಾಣವಾಗಿರುವ ರೀತಿ, ಅದರ ಸೌಂದರ್ಯ ನಿಮ್ಮ ಬದುಕಿಗೂ ರೂಪ ನೀಡುತ್ತದೆ. ನಿಮ್ಮ ಮನಸಿನ ಮನೆಯನ್ನು ನಿರ್ಮಿಸುವಾಗ ಗಮನದಲ್ಲಿರಿಸಬೇಕಾದ ಕೆಲವು ಪ್ರಮುಖ ವಿಚಾರಗಳು ಇಲ್ಲಿವೆ.
 

important points need to focus while constructing dream home
Author
Bangalore, First Published Jan 9, 2020, 4:10 PM IST
  • Facebook
  • Twitter
  • Whatsapp

ನಿಮ್ಮ ಮನೆ ನಿಮ್ಮ ಕನಸು, ನೋವು, ನಲಿವುಗಳ ಕೇಂದ್ರವಾಗಿದ್ದು, ನಿಮ್ಮ ಜೀವನದ ಜೊತೆ ಬೆಸೆದುಕೊಂಡಿರುತ್ತದೆ. ನಿಮ್ಮ ಮನೆ ನಿರ್ಮಾಣವಾಗಿರುವ ರೀತಿ, ಅದರ ಸೌಂದರ್ಯ ನಿಮ್ಮ ಬದುಕಿಗೂ ರೂಪ ನೀಡುತ್ತದೆ. ನಿಮ್ಮ ಮನಸಿನ ಮನೆಯನ್ನು ನಿರ್ಮಿಸುವಾಗ ಗಮನದಲ್ಲಿರಿಸಬೇಕಾದ ಕೆಲವು ಪ್ರಮುಖ ವಿಚಾರಗಳು ಇಲ್ಲಿವೆ.

ವಿದ್ಯುತ್‌ ಸಂಪರ್ಕ:

ಯಾವುದೇ ಮನೆಯಲ್ಲಿ ಸೂಕ್ತ ಮತ್ತು ಸುರಕ್ಷಿತ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸುವುದು ಅತ್ಯಗತ್ಯದ ಕೆಲಸ. ಮನೆಯಲ್ಲಿ ವಾಸಿಸುವವರಿಗೆ ಆ ಮನೆ ಸುರಕ್ಷಿತವಾಗಿರಬೇಕು. ಹಾಗಾಗಿ ಮನೆಗೆ ಸಂಬಂಧಿಸಿದ ಸುರಕ್ಷಾ ವಿಚಾರಗಳಲ್ಲಿ ರಾಜಿಯಾಗದೆ ಅದಕ್ಕೆ ಆದ್ಯತೆ ಕೊಡುವುದು ಅಗತ್ಯ. ಹಾಗಾಗಿ ಮನೆಯ ವಿದ್ಯುತ್ ಸಂಪರ್ಕ ಅಳವಡಿಸುವಾಗ ಗುಣಮಟ್ಟದ ವಸ್ತುಗಳನ್ನು ಆರಿಸಿಕೊಳ್ಳಬೇಕು.

ಚಾವಣಿ:

ಮನೆಯ ಛಾವಣಿ ಮನೆಗೆ ರಕ್ಷಾ ಕವಚವಿದ್ದಂತೆ. ಮಳೆ, ಗಾಳಿ, ಬಿಸಿಲು ಮತ್ತು ಹಿಮದಿಂದ ರಕ್ಷಿಸುವ ಸೂರಿನ ಬಗ್ಗೆ ಕಾಳಜಿ ಅಗತ್ಯ. ಪ್ರತಿನಿತ್ಯ ಮನೆಯ ಛಾವಣಿ ಮಳೆ, ಬಿಸಿಲು, ಧೂಳಿಗೆ ಮೈಯೊಡ್ಡುತ್ತದೆ. ವಾತಾವರಣದಲ್ಲಾಗುವ ಪ್ರತಿ ಬದಲಾವಣೆ ನಿಮ್ಮ ಮನೆಯ ಸೂರಿನ ಮೇಲೆ ಪ್ರಭಾವ ಬೀರುತ್ತದೆ. ಬಿರುಕು ಬಿಡುವುದು, ಕ್ರಮೇಣ ದುರ್ಬಲವಾಗುತ್ತಾ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಮನೆಯ ಛಾವಣಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲೇಬೇಕಾಗುತ್ತದೆ.

ಪ್ಲಂಬಿಂಗ್:

ಯಾವುದೇ ಕಟ್ಟಡ ನಿಮರ್ಮಿಸುವಾಗಲೂ ಪ್ಲಂಬಿಂಗ್ ಕೆಲಸ ಬಹಳ ಮುಖ್ಯವಾದದ್ದು. ಒಬ್ಬ ಪ್ಲಂಬರ್‌ನ ಕೈಚಳಕವಿಲ್ಲದಿದ್ದರೆ ಆ ಕಟ್ಟಡವೇ ಅಪೂರ್ಣ. ಪೈಪ್‌ಗಳನ್ನು ಅಳವಡಿಸುವುದು, ಬಳಸಿದ ನೀರು ಹೊರಹೋಗಲು ಸೂಕ್ತ ಚರಂಡಿ ಪೈಪ್‌ಗಳನ್ನು ಅಳವಡಿಸುವುದು, ವಾಲ್ವ್‌ ಮುಂತಾದ ಉಪಕರಣಗಳನ್ನು ಅಳವಡಿಸುವ ಮೂಲಕ ಮನೆಯಲ್ಲಿ ನೀರಿನ ವ್ಯವಸ್ಥೆಯು ನೀಟಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ.

ಲಿವಿಂಗ್ ರೂಮ್:

ಲಿವಿಂಗ್ ರೂಮ್ ಎನ್ನುವುದು ಪ್ರತಿ ಮನೆಯ ಪ್ರಮುಖ ಭಾಗ. ಮನೆಯ ಇತರ ಕೋಣೆಗಳಿಗೆ ಸಂಪರ್ಕವೇರ್ಪಡಿಸುವ  ಜೊತೆ ಮನೆಮಂದಿಯ ನಡುವಿನ ಕೊಂಡಿಯಾಗಿರುತ್ತೆ ಲಿವಿಂಗ್ ಟುಗೆದರ್. ಹಾಗಾಗಿ ಹೆಚ್ಚಾಗಿ ಬಳಕೆಯಾಗುವ ಸ್ಥಳ ಇದು . ಈ ಸ್ಥಳದಲ್ಲಿ ಯಥೇಚ್ಛವಾಗಿ ಗಾಳಿ, ಬೆಳಕು ಬರುವಂತಿರಬೇಕು. ಲಿವಿಂಗ್ ರೂಮ್ ಆದಷ್ಟು ದೊಡ್ಡದಾಗಿದ್ದರೆ ಉತ್ತಮ. ಮನೆಯಲ್ಲಿ ನಡೆಯುವ ಕಾರ್ಯಕ್ರಮ, ಫಂಕ್ಷನ್‌ಗಳಿಗೆ ಲಿವಿಂಗ್‌ ರೂಂ ಅಗತ್ಯವಿರುತ್ತದೆ.
 

Follow Us:
Download App:
  • android
  • ios