ಒಪ್ಪಿಗೆಯ ಲೈಂಗಿಕ ಸಂಪರ್ಕದ ಕನಿಷ್ಠ ವಯಸ್ಸು 15 ವರ್ಷ... ಕಾನೂನು ಪಾಸ್!
ಪ್ಯಾರಿಸ್ (ಏ. 16) ಕೊರೋನಾ ನಡುವೆ ಫ್ರಾನ್ಸ್ ಮಹತ್ವದ ಮಸೂದೆಯೊಂದನ್ನು ಪಾಸ್ ಮಾಡಿದೆ. ಒಪ್ಪಿಗೆಯ ಲೈಂಗಿಕ ಸಂಬಂಧ ವಯಸ್ಸನ್ನು 15 ವರ್ಷಕ್ಕೆ ಇಳಿಸಿದೆ! ಆದರೆ ಕಾನೂನುನ ವ್ಯಾಖ್ಯಾನ ಮಾತ್ರ ಭಿನ್ನವಾಗಿದೆ.
ಫ್ರಾನ್ಸ್ ಇದೊಂದು ಐತಿಹಾಸಿಕ ತೀರ್ಮಾನ ರಂದು ಹೇಳಿದೆ. ಫ್ರಾನ್ಸ್ ಸಂಸತ್ತಿನಲ್ಲಿ ಶಾಸನಕ್ಕೆ ಅನುಮೋದನೆ ಸಿಕ್ಕಿದೆ.
ಹದಿನೈದು ವರ್ಷಕ್ಕಿಂತ ಕೆಳಗಿನವರೊಂದಿಗೆ ಸೆಕ್ಸ್ ಮಾಡಿದ್ದು ಗೊತ್ತಾದರೆ ಕಾನೂನು ರೀತಿ ಅಪರಾಧವಾಗಲಿದೆ.
ಮೀಟೂ ಪ್ರಕರಣಗಳು ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ವಿಪರೀತ ದಾಖಲಾಗುತ್ತಿರುವುದು ಸರ್ಕಾರದ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.
15 ವರ್ಷದೊಳಗಿನ ಮಕ್ಕಳೊಂದಿಗೆ ಲೈಂಗಿಕತೆಯನ್ನು ಅತ್ಯಾಚಾರವೆಂದು ಪರಿಗಣಿಸಬೇಕು. ಅಪರಾಧಕ್ಕೆ 20 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
ಈ ಕಾನೂನನ್ನು ಎರಡು ರೀತಿಯಲ್ಲಿ ವ್ಯಾಖ್ಯಾನಿಸಬಹುದಾಗಿದೆ. 15 ವರ್ಷಕ್ಕಿಂತ ಕೆಳಗಿನವರು ಅಪ್ರಾಪ್ತರು ಎಂದು ಪರಿಗಣನೆಗೆ ಬರುತ್ತಾರೆ. ಇನ್ನೊಂದು ಕಡೆ 15 ವರ್ಷ ಮೇಲ್ಪಟ್ಟವರು ಸೆಕ್ಸ್ ಮಾಡಲು ಅಡ್ಡಿ ಇಲ್ಲ ಎಂಬಂತೆಯೂ ಆಗುತ್ತದೆ.
ಇನ್ನೊಂದು ಕಡೆ ನಾವು ಮಕ್ಕಳನ್ನು ಮುಟ್ಟುವುದಿಲ್ಲ ಸಚಿವ ಎರಿಕ್ ಡುಪಾಂಡ್-ಮೊರೆಟ್ಟಿ ಹೇಳಿದ್ದಾರೆ. ಹದಿನೈದು ವರ್ಷ ವಯಸ್ಸು ಮತ್ತು ಲೈಂಗಿಕ ಸಂಪರ್ಕದ ಒಪ್ಪಿಗೆ .. ವ್ಯಕ್ತಿಗೆ ಹದಿನೈದು ವರ್ಷಕ್ಕೆ ಆ ಮಟ್ಟದ ತಿಳಿವಳಿಕೆ ಬಂದಿರುತ್ತದೆಯೇ? ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ.
ಹದಿನಾಲ್ಕವರೆ ವರ್ಷದ ಬಾಲಕಿಯೊಂದಿಗೆ ಸಹಮತದ ಲೈಂಗಿಕ ಸಂಬಂಧ ಹೊಂದಿದ್ದರಿಂದ 18 ವರ್ಷ ವಯಸ್ಸಿನ ಯುವಕನನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂಬ ಪ್ರಕರಣದ ಉತ್ತರವೂ ಅಲ್ಲಿನ ವಿಪಕ್ಷಗಳಿಗೆ ಸಿಕ್ಕಿದೆ.
ಹೊಸ ಕಾನೂನಿನೆ ಪರ ವಿರೋಧದ ಅಭಿಪ್ರಾಯ ಬಂದಿದ್ದು ಇಮ್ಯಾನುಲ್ ಮಾರ್ಕೋನ್ ಸರ್ಕಾರ ಉತ್ತರ ನೀಡುವ ಕೆಲಸ ಮಾಡುತ್ತಿದೆ.'
28 ವರ್ಷದ ವ್ಯಕ್ತಿ ಉದ್ಯಾನವೊಂದರಲ್ಲಿ 11 ವರ್ಷದ ಬಾಲಕಿಯೊಂದಿಗೆ ಒಪ್ಪಿಗೆಯ ಲಯಂಗಿಕ ಸಂಪರ್ಕ ಮಾಡಿದ್ದ. ಈ ಪ್ರಕರಣವನ್ನು ಅತ್ಯಾಚಾರ ಎಂದು ಪರಿಗಣಿಸಬೇಕೇ? ಲೈಂಗಿಕ ದೌರ್ಜನ್ಯ ಎನ್ನಬೇಕೇ? ಎನ್ನುವ ಪ್ರಶ್ನೆಗಳು ಸಹ ಎದ್ದಿದ್ದವು.
15 ವರ್ಷದೊಳಗಿನ ಮಕ್ಕಳೊಂದಿಗೆ ಲೈಂಗಿಕತೆಯನ್ನು ಅತ್ಯಾಚಾರವೆಂದು ಪರಿಗಣಿಸಬೇಕು, ಕ್ರಿಯೆಯಲ್ಲಿ ಭಾಗಿಯಾದ ಇಬ್ಬರ ನಡುವೆ ಸಣ್ಣ ವಯಸ್ಸಿನ ಅಂತರವಿಲ್ಲದಿದ್ದರೆ 20 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎನ್ನುವುದು ಕಾನೂನಿನ ಪ್ರಮುಖ ಅಂಶ. ಒಟ್ಟಿನಲ್ಲಿ ಫ್ರಾನ್ಸ್ ಸರ್ಕಾರ ಹೊಸ ಕಾನೂನು ಪಾಸ್ ಮಾಡಿದೆ.