20 ಮಕ್ಕಳ ಅನಾಥರನ್ನಾಗಿಸಿದ ISIS, ನವಜಾತ ಶಿಶುಗಳಿಗೆ ಹಾಲುಣಿಸುತ್ತಿದ್ದಾಳೆ ಫಿರೋಜಾ!

First Published 16, May 2020, 11:23 AM

ಉಗ್ರರಿಗೆ ಹೃದಯವೇ ಇರಲ್ಲ. ಧರ್ಮದ ಹೆಸರಲ್ಲಿ ಯಾರನ್ನು ಬೇಕಾದರೂ ಸಾಯಿಸಲು ಹೇಸದ ಉಗ್ರರು ಮಾರ್ಚ್ 12 ರಂದು ಅಫ್ಘಾನಿಸ್ತಾನದ ಕಬೂಲ್‌ನಲ್ಲಿ ಸಾವಿನ ತಾಂಡವವಾಡಿದ್ದಾರೆ. ಇಲ್ಲಿನ ಮ್ಯಟರ್ನಿಟಿ ವಿಭಾಗಕ್ಕೆ ನುಗ್ಗಿದ ಉಗ್ರರು 24 ಮಂದಿಯನ್ನು ಬಲಿ ಪಡೆದಿದ್ದಾರೆ. ಗುಂಡಿನ ಮಳೆಗೆ ಎರಡು ನವಜಾತ ಶಿಶು ಸೇರಿ ಒಟ್ಟು 24 ಮಂದಿ ಬಲಿಯಾಗಿದ್ದಾರೆ. ಘಟನೆ ಬಳಿಕ 20 ನವಜಾತ ಶಿಶುಗಳು ತಮ್ಮ ತಾಯಿಯನ್ನು ಕಳೆದುಕೊಂಡಿವೆ. ಆದರೆ ಇಂತಹಹ ಸಂಕಷ್ಟದ ಸಮಯದಲ್ಲಿ ಮಕ್ಕಳ ಪಾಲಿಗೆ ದೇವತೆಯಂತೆ ಬಂದಿದ್ದು, ಫಿರೋಜಾ ಯೂನಿಸ್ ಓಮರ್. ಈ ಮಹಿಳೆ ಸದ್ಯ ಆಸ್ಪತ್ರೆಯಲ್ಲಿರುವ ಶಿಶುಗಳಿಗೆ ತನ್ನ ಎದೆ ಹಾಲು ಕುಡಿಸುತ್ತಿದ್ದಾರೆ. ಜನರೀಗ ಈ ಮಹಿಳೆಯನ್ನು ಅಸಲಿ ಹೀರೋ ಎನ್ನುತ್ತಿದ್ದಾರೆ.

ಈ ಅಫ್ಘಾನಿ ತಾಯಿ ಆಸ್ಪತ್ರೆಯಲ್ಲಿ 20 ನವಜಾತ ಶಿಶುಗಳಿಗೆ ತನ್ನ ಹಾಲುಣಿಸುತ್ತಿದ್ದಾರೆ. ಕಬೂಲ್ ಮ್ಯಾಟರ್ನಿಟಿ ವಿಭಾಗದಲ್ಲಿ ನಡೆದ ಉಗ್ರರ ದಾಳಿ ಬಳಿಕ ಈ ಮಹಿಳೆಯೇ ಈ ಅನಾಥ ಮಕ್ಕಳಿಗೆ ದೇವತೆಯಾಗಿದ್ದಾರೆ.

ಈ ಎಲ್ಲಾ ಮಕ್ಕಳು ಮೇ 12 ರಂದು ಅಫ್ಘಾನಿಸ್ತಾನದ ರಾಜಧಾನಿ ಕಬೂಲ್‌ನ ಒಂದು ಆಸ್ಪತ್ರೆಯಲ್ಲಿ ಮ್ಯಾಟರ್ನಿಟಿ ವಿಭಾಗಕ್ಕೆ ನುಗ್ಗಿದ್ದ ಉಗ್ರರಿಂದ ಅನಾಥರಾಗಿದ್ದಾರೆ. ಈ ವಿಭಾಗಕ್ಕೆ ನುಗ್ಗಿದ ಉಗ್ರರು ಅಲ್ಲಿ ಹೆರಿಗೆ ನೋವಿನಿಂದ ಇನ್ನೂ ಸುಧಾರಿಸಿಕೊಳ್ಳದೇ ಮಲಗಿದ್ದ ತಾಯಿಯರ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ.

ಈ ಉಗ್ರ ದಾಳಿಯಲ್ಲಿ ಎರಡು ನವಜಾತ ಶಿಶು ಸೇರಿ, ನರ್ಸ್ ಹಾಗೂ ಅನೇಕ ಬಾಣಂತಿಯರು ಮೃತಪಟ್ಟಿದ್ದಾರೆ. ಇದಾದ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟ ತಾಯಿಯರ ಅನಾಥ ಮಕ್ಕಳಿಗೆ ಫಿರೋಜಾ ತಾಯಿಯಾಗಿದ್ದಾರೆ.

ಇನ್ನು ಫಿರೋಜಾ ಅಫ್ಘಾನಿಸ್ತಾನದ ಆರ್ಥಿಕ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ 14 ತಿಂಗಳ ಒಂದು ಪುಟ್ಟ ಮಗುವಿದೆ. ಮಂಗಳವಾರ ನಡೆದ ಈ ಘಟನೆ ಬಳಿಕ ದಿನ ನಿತ್ಯ ಆಸ್ಪತ್ರೆಗೆ ಆಗಮಿಸುವ ಫಿರೋಜಾ ಅಲ್ಲಿರುವ ಕುರ್ಚಿಯಲ್ಲಿ ಕುಳಿತು ಒಂದಾದ ಬಳಿಕ ಮತ್ತೊಂದರಂತೆ ಎಲ್ಲಾ ಮಕ್ಕಳಿಗೂ ಹಾಲುಣಿಸುತ್ತಾರೆ.

ನಿತ್ಯ ಬೆಳಗ್ಗೆ ಕಬೂಲ್‌ನ ಅತಾತುರ್ಕ್ ಆಸ್ಪತ್ರೆಗೆ ತೆರಳುವ ಫಿರೋಜಾ, ಹಸಿವಿನಿಂದ ನರಳುವ ಮಕ್ಕಳನ್ನು ಪ್ರೀತಿಯಿಂದ ಎದೆಗಪ್ಪಿಕೊಂಡು ಹಾಲುಣಿಸುತ್ತಾರೆ.

ಸದ್ಯ ಆಸ್ಪತ್ರೆಯಲ್ಲಿರುವ ನರ್ಸ್ ಈ ಮಕ್ಕಳ ನಿಗಾ ವಹಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಸ್ನಾನ ಮಾಡಿಸಿ, ಆರೈಕೆ ಮಾಡಲಾಗುತ್ತದೆ.

ಇನ್ನು ಆಸ್ಪತ್ರೆಯಲ್ಲಿ ನಡೆದ ದಾಳಿಯಲ್ಲಿ ಮೂವರು ಐಸಿಸ್ ಉಗ್ರರಿದ್ದರು. ಇನ್ನು ದಾಳಿ ವೇಳೆ ಸುಮಾರು ಎಂಬತ್ತಕ್ಕೂ ಅಧಿಕ ಮಂದಿ ಅಲ್ಲಿಂದ ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆನ್ನಲಾಗಿದೆ.

ಬಹಳ ಹೊತ್ತು ನಡೆದ ಈ ಗುಂಡಿನ ದಾಳಿಯಲ್ಲಿ ಕೊನೆಗೂ ಪೊಲೀಸರು ಈ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಆಧರೆ ಇಪ್ಪತ್ತು ಶಿಶುಗಳು ಅನಾಥರಾಗಿವೆ.

ಈ ದಾಳಿ ನಡೆಸಲು ಕಾರಣವೇನೆಂಬುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇಡೀ ಮ್ಯಾಟರ್ನಿಟಿ ವಾರ್ಡ್ ಗುಂಡು ಹಾಗೂ ಸಿಡಿಮದ್ದುಗಳ ಹೊಗೆಯಿಂದ ತುಂಬಿತ್ತು. ಒಂದೆಡಡೆ ಉಗ್ರರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಇತ್ತ ಫಿರೋಜಾರವರ ಮಮತೆಯನ್ನೂ ಜನ ಹಾಡಿ ಹೊಗಳುತ್ತಿದ್ದಾರೆ.

loader