ಬಿಳಿ ಬಣ್ಣದ ಕೂದಲನ್ನು ಹೇರ್ ಡೈ ಇಲ್ಲದೆ ಈ 4 ವಿಧಾನಗಳ ಮೂಲಕ ಮರೆ ಮಾಚಿ
ಕೂದಲು ಬಿಳಿಯಾಗುವಿಕೆ ಒಂದು ನೈಸರ್ಗಿಕ ಪ್ರಕ್ರಿಯೆ. 30ನೇ ವಯಸ್ಸಿನ ನಂತರ ಪ್ರಾರಂಭವಾಗುತ್ತದೆ. ಮೆಲನಿನ್ ಎಂಬ ವರ್ಣ ದ್ರವ್ಯದ ಉತ್ಪಾದನೆಯಲ್ಲಿ ಹೆಚ್ಚು ಕಡಿಮೆಯಾಗುವುದು ಈ ಸಮಸ್ಯೆಗೆ ಮುಖ್ಯ ಕಾರಣ. ನೈಸರ್ಗಿಕ ಬಣ್ಣವನ್ನು ಪುನಃಸ್ಥಾಪಿಸಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬಣ್ಣಗಳು ಮತ್ತು ವಿಧಾನಗಳಿವೆ. ಇಂತಹ ಚಿಕಿತ್ಸೆಗಳು ಪರಿಣಾಮಕಾರಿಯಾದರೂ, ಕೂದಲುಗಳನ್ನು ಕಿತ್ತು ಹಾಕುತ್ತವೆ. ಇದನ್ನು ತಪ್ಪಿಸಲು ಮತ್ತು ಬಿಳಿ ಬಣ್ಣಗಳನ್ನು ಮುಚ್ಚಲು, ಕೂದಲಿಗೆ ಬಣ್ಣ ನೀಡಲು ಸಹಾಯ ಮಾಡುವ ವಸ್ತುಗಳ ಪಟ್ಟಿ ಇಲ್ಲಿವೆ. ಈ ಎಲ್ಲಾ ನೈಸರ್ಗಿಕ ಸಾಮಾಗ್ರಿಗಳು ಸುಲಭವಾಗಿ ದೊರೆಯುತ್ತದೆ, ಉತ್ತಮ ಬಣ್ಣ ಮತ್ತು ಕೂದಲಿಗೆ ಪೋಷಣೆಯನ್ನು ನೀಡುತ್ತವೆ. ಇದಕ್ಕಿಂತ ಇನ್ನೇನು ಬೇಕು?
ಆಲೂಗಡ್ಡೆ ಸಿಪ್ಪೆ
ಆ ಸಿಪ್ಪೆಗಳನ್ನು ಬಿಸಾಡಬೇಡಿ! ಪ್ರತಿ ಅಡುಗೆ ಮನೆಯಲ್ಲಿ ಸಿಗುವ ಅತ್ಯಂತ ಸಾಮಾನ್ಯ ತರಕಾರಿ ಎಂದರೆ ಆಲೂಗಡ್ಡೆ. ಆಲೂಗಡ್ಡೆಯಲ್ಲಿ ಹೆಚ್ಚಿನ ಪ್ರಮಾಣದ ಪಿಷ್ಟವಿದೆ. ಈ ಗುಣದಿಂದಾಗಿ, ಈ ಸಿಪ್ಪೆಗಳು ಕೂದಲಿನ ಬಣ್ಣವನ್ನು ಕಾಪಾಡಿಕೊಳ್ಳಲು ನೈಸರ್ಗಿಕ ಬಣ್ಣವಾಗಿ ಕಾರ್ಯನಿರ್ವಹಿಸುತ್ತವೆ.
ವಿಧಾನ:ಕೆಲವು ಆಲೂಗಡ್ಡೆಗಳಿಂದ ಸಿಪ್ಪೆಯನ್ನು ಸಂಗ್ರಹಿಸಿ, ಸುಮಾರು 2 ಕಪ್ ನೀರಿನಲ್ಲಿ ಕುದಿಸಿ. 10 ನಿಮಿಷ ಕಾಲ ಉರಿಯಿಂದ ಈ ಮಿಶ್ರಣವನ್ನು ತೆಗೆಯಿರಿ. ಮಿಶ್ರಣವನ್ನು ತಣ್ಣಗಾಗಲು ಬಿಡಿ ಮತ್ತು ಅದನ್ನು ಕೂದಲಿಗೆ ಹಾಕುವ ಮೊದಲು ಅದನ್ನು ಚೆನ್ನಾಗಿ ಕಲೆಸಿ.ಕೂದಲಿಗೆ ಇದನ್ನು ಹಚ್ಚಿ. ಮತ್ತು 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನೀರಿನಿಂದ ತೊಳೆಯಿರಿ.
ತುಪ್ಪ
ಈ ಸಮೃದ್ಧವಾದ ಪದಾರ್ಥವನ್ನು ಕೂದಲಿನ ಬಣ್ಣವನ್ನು ಕಾಪಾಡಲು ಬಳಸಬಹುದು. ತುಪ್ಪ ಕೂದಲಿಗೆ ಪೋಷಣೆಯನ್ನು ನೀಡುತ್ತದೆ ಮತ್ತು ನೈಸರ್ಗಿಕ ಬಣ್ಣವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ.
ವಿಧಾನ:ತುಪ್ಪ (ದೇಸೀ ಹಸುಗಳ ಹಾಲಿನಿಂದ ಮಾಡಿದ) ಬಳಸಿ ತಲೆ ಮಸಾಜ್ ಮಾಡಿ. ಒಂದು ಗಂಟೆ ಕಾಲ ಹಾಗೆ ಬಿಡಿ ಮತ್ತು ಎಂದಿನಂತೆ ತೊಳೆಯಿರಿ. ಅಪೇಕ್ಷಿತ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಇದನ್ನು ಪುನರಾವರ್ತಿಸಿ.
ಕಾಫಿ
ಬಿಳಿ ಕೂದಲನ್ನು ಮುಚ್ಚಲು ಕಾಫಿ ಒಂದು ಯಶಸ್ವಿ ಡೈಯಿಂಗ್ ಏಜೆಂಟ್ ಆಗಿದೆ. ನಿಯಮಿತವಾಗಿ ಬಳಸುವುದರಿಂದ ಕೂದಲಿನ ಬಣ್ಣದಲ್ಲಿ ಗಮನಾರ್ಹ ವ್ಯತ್ಯಾಸವನ್ನು ಉಂಟುಮಾಡುತ್ತದೆ, ಇದು ನೈಸರ್ಗಿಕ ಮತ್ತು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ.
ವಿಧಾನ:ನಿಯಮಿತ ಪುಡಿ ಮಾಡಿದ ಕಾಫಿಯನ್ನು ಖರೀದಿಸುವ ಮೂಲಕ ಪ್ರಾರಂಭಿಸಿ, ಯಾವುದೇ ಹೆಚ್ಚುವರಿ ಬಣ್ಣ ಅಥವಾ ಸುವಾಸನೆ ಇಲ್ಲದ ಅತ್ಯಂತ ಗಾಢವಾದ ಕಾಫಿಯನ್ನು ಖರೀದಿಸಲು ಖಚಿತಪಡಿಸಿಕೊಳ್ಳಿ. 2-3 ಟೇಬಲ್ ಸ್ಪೂನ್ ಕಾಫಿಯನ್ನು 100-150 ಮಿಲಿ ನೀರಿನೊಂದಿಗೆ ಬೆರೆಸಿ.
ಈ ಮಿಶ್ರಣವನ್ನು ದಪ್ಪವಾದ ಗಟ್ಟಿಯೊಂದಿಗೆ ಗಾಢವಾದ ದ್ರವ ದೊರೆಯುವವರೆಗೆ ಕುದಿಸಿ. ಇದನ್ನು ತಣ್ಣಗಾಗಲು ಬಿಡಿ ಮತ್ತು ಕೂದಲಿಗೆ ಸಮನಾಗಿ ಹಚ್ಚಿಕೊಳ್ಳಿ. ಈ ಮಿಶ್ರಣವನ್ನು ಸುಮಾರು 45 ನಿಮಿಷಗಳ ಕಾಲ ಕೂದಲಿನಲ್ಲಿ ಇರಿಸಿ, ಎಂದಿನಂತೆ ತೊಳೆದುಕೊಳ್ಳಿ.
ನೆಲ್ಲಿಕಾಯಿ
ವಿಟಮಿನ್ ಸಿ ಸಮೃದ್ಧವಾಗಿರುವ ಈ ಹಣ್ಣು ಕೂದಲಿನ ಬೆಳವಣಿಗೆಗೆ ಪೂರಕ. ನೆಲ್ಲಿಕಾಯಿಯು ಕೂದಲಿನ ಬಣ್ಣಗಳನ್ನು ಬಣ್ಣಗೊಳಿಸಲು ಬಳಸುವ ಅತ್ಯುತ್ತಮ ಪದಾರ್ಥ. ಇದು ತುಂಬಾ ಸುರಕ್ಷಿತ. ಅಧಿಕ ಮಟ್ಟದ ಮೆಲನಿನ್ ಅಂಶವಿರುವ ನೆಲ್ಲಿಕಾಯಿಯು ಗ್ರೇಯಿಂಗ್ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ನಿಮ್ಮ ಕೂದಲಿನ ವಾಲ್ಯೂಮ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ವಿಧಾನ: ತೆಂಗಿನ ಎಣ್ಣೆಯೊಂದಿಗೆ ಸ್ವಲ್ಪ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ. ಈ ಮಿಶ್ರಣವನ್ನು ಬಾಣಲೆಗೆ ಹಾಕಿ ಎಣ್ಣೆ ಕುದಿಯಲು ಪ್ರಾರಂಭವಾಗುವವರೆಗೂ ಬಿಸಿ ಮಾಡಿ. ಈ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ ಮತ್ತು 30-40 ನಿಮಿಷಗಳ ಕಾಲ ಕೂದಲಿಗೆ ಹಚ್ಚಿಕೊಳ್ಳಿ. ನಂತರ ತಣ್ಣೀರಿನಿಂದ ತೊಳೆಯಿರಿ.
ಈ ನೈಸರ್ಗಿಕ ವಿಧಾನಗಳನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ಆದರೆ ಇದರ ಫಲಿತಾಂಶ ಸಿಗಲು ಸ್ವಲ್ಪ ಸಮಯ ಬೇಕಾಗಬಹುದು, ಆದರೆ ಉತ್ತಮ ಫಲಿತಾಂಶ ಸಿಗುವುದು ಖಚಿತ.