ಅನಗತ್ಯ ಗರ್ಭಧಾರಣೆ : ಈ ವಿಷ್ಯ ಮನದಲ್ಲಿರಲಿ
ಹೆಣ್ಣಿಗೆ ತಾನು ತಾಯಿ ಆಗುವೆ ಎಂಬ ಖುಷಿ ಇದ್ದೇ ಇರುತ್ತದೆ. ತನ್ನ ಗರ್ಭದಲ್ಲಿ ಇನ್ನೊಂದು ಜೀವ ಇಟ್ಟುಕೊಳ್ಳುವ ಮತ್ತು ಜನ್ಮ ಕೊಡುವ ಶಕ್ತಿ ಅವಳಲ್ಲಿ ಇದೆ. ಆದರೆ ಈ ಖುಷಿ ನೋವಾಗಬಾರದು. ಅದೆಷ್ಟೋ ಸಲ ಹೆಣ್ಣು ತನ್ನ ಅರಿವಿಲ್ಲದೆ ಅಥವಾ ಯಾವುದೇ ಸುರಕ್ಷತೆ ಇಲ್ಲದೆ ನಡೆಸುವ ಸಂಭೋಗ ಇನ್ನೊಂದು ಜೀವ ಹುಟ್ಟಲು ಕಾರಣವಾಗಬಹುದು. ಕೆಲವೊಮ್ಮೆ ಅದು ಬೇಡವೆಂದು ಅನಿಸಿದಾಗ ಅದನ್ನು ತೆಗಿಸಬೇಕಾಗುತ್ತದೆ. ಇದು ಆಕೆಗೆ ಹಿಂಸೆ ನೀಡುತ್ತದೆ.
ಹೆಣ್ಣು ತನ್ನನ್ನು ದೋಷಿತಳಾಗಿ ಮಾರ್ಪಾಡು ಮಾಡುವ ಮುನ್ನ ತನ್ನ ಸುರಕ್ಷತೆ, ಭವಿಷ್ಯದ ಬಗ್ಗೆ ಆಲೋಚಿಸಿ ಕೆಲವು ನಿರ್ಧಾರ ಗಳನ್ನು ತೆಗೆದುಕೊಳ್ಳಬೇಕು. ಹೀಗಾಗಿ ಸುರಕ್ಷಿತ ಸಂಭೋಗಕ್ಕಾಗಿ ಹೆಣ್ಣು ಮತ್ತು ಗಂಡು ತೆಗೆದುಕೊಳ್ಳಬೇಕಾದ ಕೆಲವು ವಿಧಾನಗಳು.
ಕಾಂಡೋಮ್ : ಇದು ಸಾಮಾನ್ಯವಾಗಿ ಬಳಕೆಯಲ್ಲಿದ್ದು, ಸಂಭೋಗ ನಡೆಸುವಾಗ ಇದರ ಬಳಕೆ ಅತ್ಯಂತ ಸುರಕ್ಷಿತ. ಇದರಿಂದ ಯಾವುದೇ ಹಾರ್ಮೋನ್ ತೊಂದರೆಗಳು ಕಾಡುವುದಿಲ್ಲ ಹಾಗೂ ಗುಪ್ತ ರೋಗವುಬಾರದಂತೆ ತಡೆಯುತ್ತದೆ. ಮೊದಲ ಬಳಕೆ ಹಿತವೆನಿಸದಿದ್ದರೂ ಎರಡು ಮೂರನೇ ಬಾರಿ ಸರಿ ಹೊಂದುತ್ತದೆ.
ಕಾಂಡೋಮ್ ಅನ್ನು ಗಂಡು ಹೆಣ್ಣು ಇಬ್ಬರು ಬಳಸಬಹುದು. ಗಂಡು ಧರಿಸುವ ಕಾಂಡೊಮ್ ಶಿಶ್ನಕ್ಕೆ ಹಾಕುವಂತದ್ದು . ಹೆಣ್ಣು ಧರಿಸುವ ಕಾಂಡೊಮ್ ಯೋನಿಯೊಳಗೆ ಹಾಕುವಂತದ್ದು. ಗಂಡು ಧರಿಸುವ ಕಾಂಡೊಮ್ ಬಹಳ ಪರಿಣಾಮಕಾರಿ ಇದರಿಂದ ಸಂಪೂರ್ಣ ಸುರಕ್ಷತೆ ಇದೆ. ಇದನ್ನು ಒಮ್ಮೆ ಬಳಸಿದ ಬಳಿಕ ಮತ್ತೊಮ್ಮೆ ಬಳಸುವಂತಿಲ್ಲ.
ಗರ್ಭ ನೀರೋಧಕ ಮಾತ್ರೆ :ಇದರಲ್ಲಿ ಬೇರೆ ಬೇರೆ ವಿಧಗಳಿವೆ. ಇದರ ಆಯ್ಕೆ ಡಾಕ್ಟರ್ ಸಲಹೆ ಮೇರೆಗೆ ತೆಗೆದುಕೊಳ್ಳಬೇಕು. ಇಸ್ಟ್ರೋಜನ್ ಪ್ರೊಜೆಸ್ಟಿನ್ ಮತ್ತು ಹಾರ್ಮೋನ್ ಪ್ರೊಜೆಸ್ಟಿನ್ ಮಾತ್ರೆಗಳಲ್ಲಿ ಇರುತ್ತದೆ.
ಗರ್ಭ ನೀರೋಧಕ ಮಾತ್ರೆ ಇದರ ಬಳಕೆ ಹೆಣ್ಣಿಗೆ ಮಾತ್ರ. ಇದರಿಂದ ಮುಟ್ಟಿನ ಸಮಯದಲ್ಲಿ ಅತೀ ರಕ್ತ ಸ್ರಾವ ಆಗುತ್ತದೆ. ಇದರಿಂದ ಗುಪ್ತ ರೋಗ ಬರದಂತೆ ತಡೆಯಲು ಸಾಧ್ಯವಿಲ್ಲ .
IUD ಅಥವಾ ಕಾಪರ್ ಟ: ಇದು ಟಿ ಆಕಾರದಲ್ಲಿದ್ದು ಪ್ಲಾಸ್ಟಿಕ್ ಮತ್ತು ಕಾಪರ್‌ನಿಂದ ಮಾಡಲ್ಪಟ್ಟಿದೆ. ಇದನ್ನು ಹೆಣ್ಣಿನ ಯೋನಿಯ ಒಳಗೆ ಹಾಕಲಾಗುತ್ತದೆ. ಇದನ್ನು ನುರಿತ ಪ್ರಸೂತಿ ತಜ್ಞರಿಂದ ಮಾಡಿಸಬೇಕು.
ಕಾಪರ್ ಟಿ ಮೂರು ವರ್ಷದಿಂದ ಹತ್ತು ವರ್ಷಗಳ ತನಕ ಹಾಕಿಕೊಳ್ಳಬಹುದು. ತೆಗೆಯುವಾಗಲೂ ನುರಿತ ತಜ್ಞರ ಬಳಿಗೆ ಹೋಗಬೇಕು. ಇದು ಹಾಕಿ ಆರು ತಿಂಗಳು ಮುಟ್ಟಿನಲ್ಲಿ ಏರುಪೇರು ಆಗುತ್ತದೆ. ಹೆಚ್ಚು ಋತುಸ್ರಾವ ಆಗುತ್ತದೆ. ಬಳಿಕ ಸರಿ ಹೊಂದುತ್ತದೆ. ಇದರಿಂದ ಗುಪ್ತ ರೋಗದಿಂದ ರಕ್ಷಣೆ ಇಲ್ಲ.
ಗರ್ಭ ನಿರೋಧಕ ಇಂಜೆಕ್ಷನ್: ಇದರಲ್ಲಿ ಹಾರ್ಮೋನ್ ಪ್ರೊಜೆಸ್ಟೊಜನ್ ಇದ್ದು ಹೆಣ್ಣಿನ ತೋಳಿಗೆ ಅಥವಾ ಸೊಂಟಕ್ಕೆ ಕೊಡುವಂತಹದು. ಇದನ್ನು ತೆಗೆದುಕೊಂಡು 12 ದಿನಗಳ ಬಳಿಕ ರಕ್ತದಲ್ಲಿ ಸೇರುತ್ತದೆ ಇದರ ಅವಧಿ ಮೂರು ತಿಂಗಳು. ಇದನ್ನು ಬಳಸುವುದರಿಂದ ಮುಟ್ಟಿನಲ್ಲಿ ಏರುಪೇರು ಆಗುತ್ತದೆ.
ಗರ್ಭ ನಿರೋಧಕ ಇಂಜೆಕ್ಷನ್ ಪಡೆದು ಮೂರುತಿಂಗಳ ಬಳಿಕ ಪುನಃ ಮರೆಯದೆ ಹಾಕಿಕೊಳ್ಳಬೇಕು. ಇಲ್ಲವಾದಲ್ಲಿ ಗರ್ಭ ಧಾರಣೆ ಆಗುವ ಸಂಭವ ಇದೆ. ಇದರಿಂದ ಗುಪ್ತರೋಗಕ್ಕೆ ರಕ್ಷಣೆ ಇಲ್ಲ. ಇವೆಲ್ಲ ಬಹಳ ಪ್ರಚಲಿತದಲ್ಲಿ ಇರುವ ಹಾಗೂ ಬಳಕೆಯಲ್ಲಿ ಇರುವ ಗರ್ಭ ನಿರೋಧಕ ರಕ್ಷಣಾ ಕವಚ.