ಶಿವಾಂಗಿ ಸಿಂಗ್ - ರಫೇಲ್ ಸ್ಕ್ವಾಡ್ರನ್‌ನ ಮೊದಲ ಮಹಿಳಾ ಪೈಲಟ್!
ಯುದ್ಧ ವಿಮಾನ ರಫೆಲ್ ಸ್ಕ್ವಾಡ್ರನ್ ಗೋಲ್ಡನ್ ಆ್ಯರೋದ ಮೊದಲ ಮಹಿಳಾ ಫ್ಲೈಟ್ ಲೆಫ್ಟಿನೆಂಟ್ ಆಗಿ ವಾರಾಣಾಸಿಯ ಶಿವಾಂಗಿ ಸಿಂಗ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಮಿಗ್ -21 ಹಾರಿಸಿದ ಅನುಭವ ಇವರೀಗ ರಫೇಲ್ 17 ಗೋಲ್ಡನ್ ಆ್ಯರೋ ಸ್ಕ್ವಾಡ್ರನ್ ತಂಡವನ್ನು ಸೇರಿದ್ದಾರೆ. ಶಿವಾಂಗಿಗೆ ಅಂಬಾಲಾ ವಾಯುಪಡೆ ನಿಲ್ದಾಣದಲ್ಲೂ ತರಬೇತಿ ನೀಡಲಾಗುತ್ತಿದೆ. 2017ರಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಶಿವಾಂಗಿಯ ಈ ಯಶಸ್ಸಿನ ಬಗ್ಗೆ ತಾಯಿ ಸೀಮಾ ಸಿಂಗ್, ತಾವು ಕಂಡ ಕನಸನ್ನು ಮಗಳು ಈಡೇರಿಸಿದ್ದಾಳೆ ಎಂದು ಹೇಳಿದರು. ನೆರೆಹೊರೆಯವರು ವಾರಣಾಸಿಯ ಫುಲ್ವೇರಿಯಾದಲ್ಲಿರುವ ಶಿವಾಂಗಿಯ ಮನೆಯಲ್ಲಿ ಈ ಖುಷಿಯನ್ನು ಸೆಲೆಬ್ರೆಟ್ ಮಾಡುತ್ತಿದ್ದಾರೆ.
ಯುದ್ಧ ವಿಮಾನ ರಫೆಲ್ ಸ್ಕ್ವಾಡ್ರನ್ ಗೋಲ್ಡನ್ ಆ್ಯರೋದ ಮೊದಲ ಮಹಿಳಾ ಫ್ಲೈಟ್ ಲೆಫ್ಟಿನೆಂಟ್ ಆಗಿ ವಾರಾಣಾಸಿಯ ಶಿವಾಂಗಿ ಸಿಂಗ್ ಆಯ್ಕೆಯಾಗಿದ್ದಾರೆ.
2017ರಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಶಿವಾಂಗಿ.
ಪ್ರಸ್ತುತ ರಾಜಸ್ಥಾನದಲ್ಲಿ ಪೋಸ್ಟಿಂಗ್‌ನಲ್ಲಿದ್ದಾರೆ.
ಮೊದಲಿನಿಂದಲೂ ಭರವಸೆಯ ವಿದ್ಯಾರ್ಥಿನಿ ಎಂದು ಬಾಲ್ಯದ ಬಗ್ಗೆ ತಾಯಿ ನೆನಪಿಸಿಕೊಳ್ಳುತ್ತಾರೆ.
ಆರಂಭಿಕ ಶಾಲಾ ಶಿಕ್ಷಣದ ನಂತರ ಉನ್ನತ ಶಿಕ್ಷಣಕ್ಕಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸೇರಿದರು. ಒಂದು ತಿಂಗಳ ತಾಂತ್ರಿಕ ತರಬೇತಿಗೆ ಅರ್ಹತೆ ಪಡೆದ ನಂತರ, ಈಗ ರಫೇಲ್ ತಂಡದ ಭಾಗವಾಗಿದ್ದಾರೆ.
ವಿಂಗ್ ಕಮಾಂಡರ್ ಅಭಿನಂದನ್ ಜೊತೆ ಸಹ ಕೆಲಸ ಮಾಡಿದ್ದಾರೆ ಇವರು.
ಶಿವಾಂಗಿಯ ತಂದೆ ಕಾಮೇಶ್ವರ ಸಿಂಗ್ ಟ್ರಾವೆಲ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. 2016 ರ ಜುಲೈನಲ್ಲಿ ಮೈಸೂರಿನಲ್ಲಿ ನಡೆದ ಕಾಮನ್ ಆಪ್ಟಿಟ್ಯೂಡ್ ಟೆಸ್ಟ್‌ಗೆ ಅರ್ಹತೆ ಪಡೆದರು ಶಿವಾಂಗಿ. ಇಲ್ಲಿಂದಲೇ ಅವರು ವಾಯುಪಡೆಯ ತರಬೇತಿಯನ್ನೂ ಪ್ರಾರಂಭಿಸಿದರು.
ಫ್ಲೈಯಿಂಗ್ ಏರ್‌ಕ್ರಾಫ್ಟ್‌ನಲ್ಲಿ ಪರಿಣತಿ ಹೊಂದಿದ್ದಾರೆ ಶಿವಾಂಗಿ.
ಬೆಳಿಗ್ಗೆ 6 ಗಂಟೆಮನೆ ಬಿಟ್ಟರೆ ರಾತ್ರಿ 8 ಗಂಟೆಗೆ ಮನೆಗೆ ಬರುತ್ತಿದ್ದರು. ಜನರು ಸಾಕಷ್ಟು ಮಾತನಾಡುತ್ತಿದ್ದರು. ಅವಳು ಅಲೆಯುತ್ತಾಳೆ ಎಂದು ತಪ್ಪು ತಿಳಿದಿದ್ದರು. ಇಂದು ಅದೇ ಜನರು ಅಭಿನಂದನೆಗಳನ್ನು ನೀಡುತ್ತಿದ್ದಾರೆ ಎಂದು ಕಸಿನ್ ಸುಧೀರ್ ಸಿಂಗ್ ಹೇಳುತ್ತಾರೆ.
ಬಿಎಚ್‌ಯುನಿಂದ ಪದವಿ ಪಡೆದಿರುವ ಶಿವಾಂಗಿ, ಉತ್ತಮ ಕ್ರೀಡಾಪಟು ಜೊತೆಗೆ ಗಿಟಾರ್ ನುಡಿಸುತ್ತಾರೆ. ಶಿವಾಂಗಿಯ ಮನೆ ಕಂಟೋನ್ಮೆಂಟ್ ಪ್ರದೇಶದಲ್ಲಿದೆ. ಸೈನಿಕರನ್ನು ನೋಡಿದ ಅವರು ಬಾಲ್ಯದಿಂದಲೂ ದೇಶಕ್ಕೆ ಸೇವೆಯ ಪ್ರಜ್ಞೆಯನ್ನು ಬೆಳೆಸಿಕೊಂಡಿದ್ದರು.
ಅವರ ಅಜ್ಜ ಸಹ ಸೈನಿಕರಾಗಿದ್ದರು. ಅವಳು 9ನೇ ತರಗತಿಯಲ್ಲಿದ್ದಾಗ ದೆಹಲಿಯಲ್ಲಿದ್ದರು. ಅಜ್ಜ ನಂತರ ಏರ್ ಬೇಸ್ ಮತ್ತು ಮ್ಯೂಸಿಯಂಗೆ ಶಿಫ್ಟ್ ಆದಾಗ ವಿಮಾನವನ್ನು ನೋಡಿ ನಾನು ಕೂಡ ಅದನ್ನು ಹಾರಿಸಲು ಬಯಸುತ್ತೇನೆ ಎಂದಿದ್ದಳು. ಅವಳಿಗೆ ಏನು ಬೇಕೋ ಅದನ್ನು ನಾವೆಲ್ಲರೂ ಪೂರೈಸಿದ್ದೇವೆ, ಎನ್ನುತ್ತಾರೆ ತಂದೆ ಕಾಮೇಶ್ವರ ಸಿಂಗ್.
ಮಗಳು ನಮ್ಮ ಗೌರವ ಹೆಚ್ಚಿಸಿದ್ದಾರೆ. ಒಂದು ದಿನ ಮೊದಲು ಮಗಳು ವಿಷಯ ತಿಳಿಸಿದಳು. ನಮ್ಮ ಮಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಅವರು ಇತರ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ. ಇದು ಜೀವನದ ಅತಿದೊಡ್ಡ ಸಾಧನೆ, ಈಗ ಒಂದೇ ಕನಸು ರಫೇಲ್ ವಿಮಾನವನ್ನು ಮಗಳು ಹಾರಿಸುವುದನ್ನು ನೋಡುವುದು, ಅದೂ ಈಡೇರುತ್ತದೆ ಎಂದು ಶಿವಾಂಗಿ ತಂದೆ ಹೇಳಿದರು.
ತಾಯಿ ಸೀಮಾ ಸಿಂಗ್ ಗೃಹಿಣಿ ಮತ್ತು ಸಹೋದರ ಮಾಯಾಂಕ್ ಬನಾರಸ್‌ನಲ್ಲಿ 12ನೇ ತರಗತಿಯ ವಿದ್ಯಾರ್ಥಿನಿ.