Independence Day : ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಈ ಧೀರ ನಾರಿಮಣಿಯರ ಬಗ್ಗೆ ಹೆಚ್ಚಿನ ಜನಕ್ಕೆ ತಿಳಿದೇ ಇಲ್ಲ
ಭಾರತಕ್ಕೆ ಸ್ವಾತಂತ್ರ್ಯ ಸಿಗೋದಕ್ಕೆ ಕಾರಣವಾದವರಲ್ಲಿ ಹಲವು ಮಹಿಳೆಯರೂ ಇದ್ದಾರೆ. ಅವರಲ್ಲಿ ಹೆಚ್ಚಿನವರ ಬಗ್ಗೆ ಜನರಿಗೆ ಗೊತ್ತೇ ಇಲ್ಲ. ಇಲ್ಲಿ ಅಂತಹ ಹೋರಾಟಗಾರರ ಬಗ್ಗೆ ಮಾಹಿತಿ ನೀಡಿದ್ದೇವೆ.
ಭಾರತವು ಇದೀಗ 78ನೇ ಸ್ವಾತಂತ್ರ್ಯೋತ್ಸವದ (Independence Day) ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗೋದಕ್ಕೆ ಕಾರಣರಾದ ಮಹಿಳಾ ಹೋರಾಟಗಾರರ ಬಗ್ಗೆ ನೀವೂ ತಿಳಿಯಿರಿ.
ಕಮಲಾದೇವಿ ಚಟ್ಟೋಪಾಧ್ಯಾಯ (Kamaladevi Chattopadhyay): ಭಾರತದಲ್ಲಿ ಮಹಿಳೆಯರ ಸ್ಥಾನಮಾನ ಹೆಚ್ಚಿಸಲು ಹಾಗೂ ಭಾರತದ ಹಾಂಡಿಕ್ರಾಫ್ಟ್, ಹ್ಯಾಂಡ್ಲೂಮ್ ಮತ್ತು ಥಿಯೇಟರ್ ಗಳಿಗೆ ಪ್ರಾಮುಖ್ಯತೆ ಸಿಗುವಂತೆ ಮಾಡಿದವರು ಕಮಲಾದೇವಿ.
ಲಕ್ಷ್ಮೀ ಸೆಹಗಲ್ (Lakshmi Sahgal): ಇವರು ಆಜಾದ್ ಹಿಂದ್ ಪೌಜ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅವರನ್ನ ಕ್ಯಾಪ್ಟನ್ ಲಕ್ಷ್ಮೀ ಎಂದೇ ಕರೆಯುತ್ತಾರೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಇವರನ್ನ ಬರ್ಮಾದಲ್ಲಿ ಸೆರೆ ಹಿಡಿದಿದ್ದರು.
ಬಿಕಾಜಿ ಕಾಮ (Bhikaji Cama) : 1907 ಆಗಸ್ಟ್ 22 ರಂದು ಮೊದಲ ಬಾರಿಗೆ ಭಾರತದ ಮೊದಲ ಬಾವುಟವನ್ನೌ ಹಾರಿಸಿದ ಮಹಿಳೆ ಇವರು, ಜೊತೆಗೆ ವಿದೇಶದಲ್ಲಿ ಭಾರತದ ಪತಾಕೆ ಹಾರಿಸಿದ ಮೊದಲ ಮಹಿಳೆ ಕೂಡ ಬಿಕಾಜಿ ಕಾಮ.
ವಿಜಯ ಲಕ್ಷ್ಮಿ ಪಂಡಿತ್ (Vijaya Laxmi Pandit): ನೆಹರೂರವರ ಸಹೋದರಿಯಾದ ವಿಜಯಲಕ್ಷ್ಮೀ ಪಂಡಿತ್, ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋರಾಡಿ, ಜೈಲು ಕೂಡ ಸೇರಿದ್ದರು. ಸ್ವಾತಂತ್ರ್ಯ ಸಿಗುವ ಮುನ್ನ ಭಾರತದ ಸಂಸತ್ತಿನಲ್ಲಿ ಸ್ಥಾನ ಪಡೆದ ಮೊದಲ ಮಹಿಳೆ ಇವರು.
ಅರುಣ ಆಸಫ್ ಆಲಿ (Aruna Asaf Ali): ಈಕೆಯ ಹೆಸರು ಹೆಚ್ಚಿನ ಜನಕ್ಕೆ ಗೊತ್ತಿಲ್ಲ. ತಮ್ಮ 33ನೇ ವಯಸ್ಸಿನಲ್ಲಿ ಅರುಣ ಮುಂಬೈನ ಗೊವಾಲಿಯಾ ಟ್ಯಾಂಕ್ ಮೈದಾನದಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ಸುದ್ದಿಯಾಗಿದ್ದರು.
ಮತಾಂಗಿನಿ ಹಜ್ರಾ (Matangini Hazra): ಹಜ್ರಾ ಕ್ವಿಟ್ ಇಂಡಿಯಾ ಚಳುವಳಿ ಮತ್ತು ಅಸಹಕಾರ ಚಳುವಳಿಯ ಭಾಗವಾಗಿದ್ದರು. ಒಂದು ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಆಕೆಯ ದೇಹದ ಮೇಲೆ ಮೂರು ಬಾರಿ ಗುಂಡಿನ ದಾಳಿಯಾದರೂ ಕುಗ್ಗದೆ ರಾಷ್ಟ್ರ ಧ್ವಜದೊಂದಿಗೆ ಮುನ್ನುಗ್ಗಿದ್ದರು ಇವರು.
ಉಷಾ ಮೆಹ್ತಾ (Usha Mehta): 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೋರಾಡಲು ಅಂಡರ್ ಗ್ರೌಂಡ್ ಸೀಕ್ರೆಟ್ ರೇಡಿಯೋ ಸ್ಟೇಷನ್ ಆರಂಭಿಸಿದ ದಿಟ್ಟ ಮಹಿಳೆ ಉಷಾ ಮೆಹ್ತಾ.