ಟೇಕಾಫ್ ಅದ್ಮೇಲೆ ವಿಮಾನದಲ್ಲಿ ಹೇಗೆ ವೈಫೈ ವರ್ಕ್ ಆಗುತ್ತೆ?
ವಿಮಾನಗಳು 30 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದರೂ ವೈಫೈ ಸೌಲಭ್ಯವನ್ನು ಹೇಗೆ ಒದಗಿಸುತ್ತವೆ ಎಂಬುದನ್ನು ಈ ಲೇಖನ ವಿವರಿಸುತ್ತದೆ. ಎರಡು ಪ್ರಮುಖ ತಂತ್ರಜ್ಞಾನಗಳ ಮೂಲಕ ವಿಮಾನದಲ್ಲಿ ಇಂಟರ್ನೆಟ್ ಸಂಪರ್ಕ ಸಾಧ್ಯವಾಗುತ್ತದೆ.

ವಿಮಾನಗಳು 30 ಸಾವಿರಕ್ಕೂ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತವೆ. ಆದ್ರೂ ವಿಮಾನದಲ್ಲಿ ವೈಫೈ ಸೌಲಭ್ಯ ನೀಡಲಾಗುತ್ತದೆ. ಈ ಲೇಖನದಲ್ಲಿ ಹೇಗೆ ವೈಫೈ ವರ್ಕ್ ಆಗುತ್ತೆ ಎಂಬುದರ ಮಾಹಿತಿ ಇಲ್ಲಿದೆ.
ವಿಮಾನ ಪ್ರಯಾಣದಲ್ಲಿ ಆಸನಗಳ ಮುಂಭಾಗದಲ್ಲಿರುವ ಸ್ಕ್ರೀನ್‌ನಲ್ಲಿ ನಿಮ್ಮಿಷ್ಟದ ವಿಡಿಯೋಗಳನ್ನು ಬಳಸಬಹುದು. ಹಾಗೆ ಅಲ್ಲಿಯ ವೈಫೈ ಬಳಸಿ ಮೊಬೈಲ್‌ನಲ್ಲಿ ಸಂದೇಶ/ ಮೇಲ್ ಸಹ ಕಳುಹಿಸಬಹುದು. ಯಾವ ರೀತಿಯಲ್ಲಿ ವಿಮಾನಗಳು ನೆಟ್‌ವರ್ಕ್ ಜೊತೆ ಸಂಪರ್ಕ ಸಾಧಿಸುತ್ತೇವೆ ಎಂಬುದನ್ನು ನೋಡೋಣ.
ವೈಫೈ ಅಂದ್ರೆ ವೈರ್ಲೆಸ್ ನೆಟ್‌ವರ್ಕ್ ಎಂದರ್ಥ ಮನೆಯಲ್ಲಿ ಟಿವಿ. ಲ್ಯಾಪ್‌ಟಾಪ್‌ಗಳು, ಗೇಮಿಂಗ್ ಕನ್ಸೋಲ್‌ಗಳು, ಸ್ಮಾರ್ಟ್ ಅಸಿಸ್ಟೆಂಟ್‌ಗಳು, ವೈರ್‌ಲೆಸ್ ಡೋರ್‌ಬೆಲ್‌ಗೂ ವೈಫ್ ಬಳಕೆ ಮಾಡಲಾಗುತ್ತದೆ. ಈ ಮೂಲಕ ಎಲ್ಲಾ ಸಾಧನಗಳಿಗೂ ಯಾವುದೇ ವೈರ್ ಜೋಡಣೆ ಇಲ್ಲದೇ ಇಂಟರ್‌ನೆಟ್ ಸಂಪರ್ಕವನ್ನು ಕಲ್ಪಿಸಲಾಗುತ್ತದೆ.
ಹೋಟೆಲ್, ಕಾಫಿಶಾಪ್, ಕಚೇರಿ ಅಥವಾ ಇನ್ನಿತರ ಯಾವುದೇ ಸ್ಥಳಗಳಲ್ಲಿಯೂ ವೈಫೈ ಸೌಲಭ್ಯವನ್ನು ನೀಡಲಾಗಿರುತ್ತದೆ. ಈ ಸೌಲಭ್ಯ ಪಡೆಯಲು ವೈಫೈ ಪಾಸ್‌ವರ್ಡ್ ಎಂಟ್ರಿ ಮಾಡಬೇಕಾಗುತ್ತದೆ. ಆದರೆ ವಿಮಾನಗಳು ಮೊಬೈಲ್ ಟವರ್‌ಗಳಿಗಿಂತ ಮೇಲೆ ಹಾರಾಟ ನಡೆಸಿದ್ರೂ ಸಂಪರ್ಕ ಸಾಧಿಸುತ್ತವೆ. ಎರಡು ಮಾರ್ಗಗಳ ಮೂಲಕ ವಿಮಾನಗಳು ನೆಟ್‌ವರ್ಕ್ ಸಂಪರ್ಕ್ ಪಡಯುತ್ತವೆ.
1.ಏರ್-ಟು-ಗ್ರೌಂಡ್ (ATG) ನೆಟ್‌ವರ್ಕ್
ವಿಮಾನದ ಕೆಳಭಾಗದಲ್ಲಿ ಆಂಟೆನಾ ಇರುತ್ತದೆ. ಈ ಆಂಟೆನಾ ಸಮೀಪದ ಮೊಬೈಲ್ ಟವರ್ ಜೊತೆ ಸಂಪರ್ಕ ಸಾಧಿಸುತ್ತದೆ. ಆಂಟೆನಾದಿಂದ ಸಿಗ್ನಲ್ ಕ್ಯಾಬಿನ್ ಸರ್ವರ್‌ಗೆ ಹೋಗುತ್ತದೆ, ನಂತರ ಆನ್-ಬೋರ್ಡ್ ರೂಟರ್‌ಗೆ, ವಿಮಾನವನ್ನು ಪ್ರಯಾಣಿಕರಿಗೆ ಹಾಟ್‌ಸ್ಪಾಟ್ ಆಗಿ ಪರಿವರ್ತಿಸುತ್ತದೆ. ಏರ್-ಟು-ಗ್ರೌಂಡ್ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಬೇಕಾದ್ರೆ ಭೂಮಿಗೆ ಸಮೀಪದಲ್ಲಿಯೇ ಹಾರಾಟ ನಡೆಸಬೇಕಾಗುತ್ತದೆ.
2.ಉಪಗ್ರಹ ಜಾಲ
ಈ ವಿಧಾನದಲ್ಲಿಯೂ ವಿಮಾನಗಳಿಗೆ ಆಂಟೆನಾ ಬಳಕೆ ಮಾಡಲಾಗುತ್ತದೆ. ಆದ್ರೆ ಇಲ್ಲಿ ವಿಮಾನದ ಮೇಲ್ಭಾಗದಲ್ಲಿ ಆಂಟೆನಾ ಜೋಡಣೆ ಮಾಡಲಾಗಿರುತ್ತದೆ. ವಿಮಾನ ಹಾರುವಾಗ ಆಂಟೆನಾ ಸಮೀಪದ ಉಪಗಹ್ರದಿಂದ ಇಂಟರ್‌ನೆಟ್ ಸಂಪರ್ಕ ಸಾಧಿಸುತ್ತದೆ. ಸಿಗ್ನಲ್ ಆನ್-ಬೋರ್ಡ್ ಸರ್ವರ್‌ಗೆ, ವೈ-ಫೈ ರೂಟರ್ ಮೂಲಕ ಮತ್ತು ನಂತರ ಪ್ರಯಾಣಿಕರಿಗೆ ಸರ್ವರ್ ಸಿಗುತ್ತದೆ. ಸಂಪೂರ್ಣ ಇಂಟರ್ನೆಟ್ ಪ್ರವೇಶ ಪಡೆಯಲು ಉಪಗ್ರಹ ಸೇವೆಯು ನ್ಯಾರೋಬ್ಯಾಂಡ್ ಮತ್ತು ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್‌ಗಳನ್ನು ಬಳಸುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.