ಮಕ್ಕಳ ವಿದ್ಯಾಭ್ಯಾಸದ ಒತ್ತಡವನ್ನು ಕಡಿಮೆ ಮಾಡಲು ವಾಸ್ತು
ವಿದ್ಯಾಭ್ಯಾಸ ಅಥವಾ ಪರೀಕ್ಷೆಗಳ ಕಾರಣದಿಂದಾಗಿ ಮಕ್ಕಳು ಭಯಭೀತರಾಗುತ್ತಾರೆ ಮತ್ತು ಒತ್ತಡಕ್ಕೊಳಗಾಗುತ್ತಾರೆ. ಇದು ಒಂದು ಅಥವಾ ಎರಡು ಮಕ್ಕಳ ವಿಷಯವಲ್ಲ. ಆದರೆ ದುಃಖಕರವೆಂದರೆ ಈಗ ಪ್ರತಿ ಮಗುವಿಗೂ ಒತ್ತಡ ಕಾಡುತಿದ್ದು ಮತ್ತು ಇದು ಕೇವಲ ಅಧ್ಯಯನದ ಹೆಚ್ಚು ಒತ್ತಡದಿಂದಾಗಿ ಎಂದು ಹೇಳಬಹುದು. ವಾಸ್ತು ಪ್ರಕಾರ ಗಮನಿಸಿದರೆ ತಪ್ಪಾದ ಅಧ್ಯಯನದ ಸ್ಥಳ ‘ಒತ್ತಡ’ ಹೆಚ್ಚಲು ಮೂಲ ಕಾರಣ ಎಂದು ವಾಸ್ತು ಹೇಳುತ್ತದೆ.
ಇಂದು ಯುವ ಹದಿಹರೆಯದವರು ಸೇರಿದಂತೆ ವಯಸ್ಕರಲ್ಲಿ ಹೆಚ್ಚಿನ ಮಕ್ಕಳು, ಎಲ್ಲರೂ ಕಡಿಮೆ ಕಾನ್ಸಂಟ್ರೇಶನ್ ಜೊತೆಗೆ ಆತಂಕ, ಒತ್ತಡದಿಂದ ಬಳಲುತ್ತಿದ್ದಾರೆ. ‘ಅವರು ಹೆಚ್ಚು ಸಮಯದವರೆಗೆ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳುವುದನ್ನು ಆಗಾಗ್ಗೆ ಕೇಳಿರಬಹುದು. ಮಕ್ಕಳ ಕೋಣೆಯಲ್ಲಿ ವಾಸ್ತು ದೋಷಗಳ ಸಮಸ್ಯೆ ಇದ್ದರೆ, ಅಲ್ಲಿ ಸ್ಟಡಿ ಟೇಬಲ್, ಅಧ್ಯಯನ ನಡೆಸುವ ಸ್ಥಾನ, ಮಲಗುವ ಸ್ಥಾನ ಇತ್ಯಾದಿಗಳು ಬಹಳ ಮುಖ್ಯ.ಅವೆಲ್ಲವೂ ಸರಿಯಾಗಿದ್ದರೆ ಮಕ್ಕಳ ಏಕಾಗ್ರತೆ ಶಕ್ತಿ ಕೂಡ ಹೆಚ್ಚುತ್ತದೆ.
ಕೆಲವು ಉತ್ತಮ ವಾಸ್ತು ನಿಯಮಗಳನ್ನು ಅಳವಡಿಸಿದರೆ ಮಕ್ಕಳ ಒತ್ತಡವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಪರೀಕ್ಷೆಯ ಬಗ್ಗೆ ಮಗು ಭಯ ಮತ್ತು ಒತ್ತಡವಿಲ್ಲದೆ ಅಧ್ಯಯನ ಮಾಡಲು ಅವಕಾಶ ನೀಡಿದಂತಾಗುತ್ತದೆ.
ವಾಸ್ತುವಿನಿಂದ ಮಕ್ಕಳು ಭಯವಿಲ್ಲದೆ ವಿಶ್ವಾಸದಿಂದ ಪರೀಕ್ಷೆ ಬರೆಯಲು ಮಾತ್ರವಲ್ಲದೆ ಓದಿನಲ್ಲಿ ಏಕಾಗ್ರತೆ ಹೆಚ್ಚಿಸಲು ಸಾಧ್ಯವಾಗುತ್ತದೆ. ಒತ್ತಡ, ಉದ್ವೇಗ ಕಡಿಮೆ ಮಾಡಿ ಮತ್ತು ಕಾನ್ಸಂಟ್ರೇಶನ್ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಕೆಲವು ವಾಸ್ತು ನಿಯಮಗಳು ಇಲ್ಲಿವೆ :
ಮಕ್ಕಳಿಗೆ ಉತ್ತರ / ಪೂರ್ವ ಅಥವಾ ಪಶ್ಚಿಮ ದಿಕ್ಕಿನ ಕೊಠಡಿಗಳನ್ನು ನೀಡಬೇಕು. ಮಕ್ಕಳು ದಕ್ಷಿಣ ಅಥವಾ ಪೂರ್ವಕ್ಕೆ ತಲೆ ಇಟ್ಟು ಮಲಗಬೇಕು. ಪಶ್ಚಿಮ ಅಥವಾ ಉತ್ತರದ ಕಡೆಗೆ ತಲೆಯಿಟ್ಟು ಮಲಗುವುದನ್ನು ತಪ್ಪಿಸಿ.
ಉತ್ತರ ಅಥವಾ ಪೂರ್ವಕ್ಕೆ ಎದುರಾಗಿ ಅಧ್ಯಯನವನ್ನು ಮಾಡಿ. ಸ್ಟಡಿ ಟೇಬಲ್ ಅನ್ನು ಜಂಕ್ ಮೆಟೀರಿಯಲ್ ಅಥವಾ ಬೇಡವಾದ ಪುಸ್ತಕಗಳೊಂದಿಗೆ ಅಸ್ತವ್ಯಸ್ತಗೊಳಿಸಬೇಡಿ. ಸುತ್ತ ಸಕಾರಾತ್ಮಕ ಶಕ್ತಿಯನ್ನು ನೀಡಲು ಅದನ್ನು ಸ್ವಚ್ಛವಾಗಿಡಿ.
ಮೀನು ಅಕ್ವೇರಿಯಂ ಅಥವಾ ನೀರಿನ ಕಾರಂಜಿ ಮುಂತಾದ ಕೆಲವು ನೀರಿನ ಮೂಲವನ್ನು ಈಶಾನ್ಯದಲ್ಲಿ ಇರಿಸಿ. ಇದರಿಂದ ಏಕಾಗ್ರತೆ ಹೆಚ್ಚುತ್ತದೆ.
ಅಧ್ಯಯನ ಮಾಡುವಾಗ ಯಾವಾಗಲೂ ಒಂದು ಗ್ಲಾಸ್ ನೀರನ್ನು ಸ್ಟಡಿ ಟೇಬಲ್ ಮುಂದೆ ಇರಿಸಿ. ಉತ್ತರ ಗೋಡೆಯ ಮೇಲಿನ ಲೋಲಕದ ಗಡಿಯಾರಗಳು ಸಹ ಕಾನ್ಸಂಟ್ರೇಶನ್ ಹೆಚ್ಚಿಸುತ್ತದೆ.
ಸ್ಟಡಿ ಟೇಬಲ್ ಆಕಾರವು ಮಾಮೂಲಾಗಿರಬೇಕು. ಸ್ಟಡಿ ಟೇಬಲ್ ಗೋಡೆಗೆ ಅಂಟಿಕೊಳ್ಳಬಾರದು. ಗೋಡೆ ಮತ್ತು ಮೇಜಿನ ನಡುವೆ ಕನಿಷ್ಠ 3 ಇಂಚುಗಳಷ್ಟು ಜಾಗ ಬಿಡಿ.
ಮಕ್ಕಳ ಕೋಣೆಯಲ್ಲಿ ಯಾವುದೇ ರೀತಿಯ ವಿದ್ಯುನ್ಮಾನ ಸಾಧನಗಳನ್ನು ತಪ್ಪಿಸಿ. ಅವು ಇದ್ದರೆ, ಬಳಕೆಯಲ್ಲಿಲ್ಲದಿದ್ದಾಗ ಅವುಗಳನ್ನು ಸ್ವಿಚ್ ಆಫ್ ಮಾಡಲು ಪ್ರಯತ್ನಿಸಿ.
ಸೂರ್ಯಕಾಂತಿ ಹಳದಿ ಬಣ್ಣದ ಯಾವುದೇ ವಸ್ತುವನ್ನು ಕೋಣೆಯಲ್ಲಿ ಇರಿಸಿ, ಇದು ಒಟ್ಟಾರೆ ಗ್ರಹಿಸುವ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ.