ವಾಸ್ತು ಶಾಸ್ತ್ರ , ಸಂಪ್ರದಾಯ ಮಾತ್ರವಲ್ಲ ಸಂಸಾರದ ಸಂತೋಷದ ಕೀಲಿ ಕೈ
ಎಲ್ಲರಿಗೂ ತಮ್ಮದೇ ಆದ ಸ್ವಂತ ಮನೆಯ ಕನಸು ಇದ್ದೇ ಇರುತ್ತದೆ. ಹಾಗಿರಬೇಕು, ಹೀಗಿರಬೇಕು ಎನ್ನುವ ಸಾವಿರ ಆಲೋಚನೆಗಳು. ಹಾಗೆಯೇ ಲಕ್ಷ ಲಕ್ಷ ಹಣವನ್ನು ಮನೆ ಕೊಳ್ಳಲು ಹಾಕುತ್ತೇವೆ. ಮನೆ ಸುಂದರವಿದ್ದರೆ ಸಾಲದು ಅದು ವಾಸ್ತು ಪ್ರಕಾರವಿರಬೇಕು. ವಾಸ್ತು ಪ್ರಕಾರವಿದ್ದರೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ ಎಂದು ಹೇಳುತ್ತಾರೆ.
ಆಧುನಿಕ ಯುಗದಲ್ಲಿ ಮನೆ ಕೊಳ್ಳುವಾಗ ವಾಸ್ತು ವಿಷಯವನ್ನು ಅಷ್ಟಾಗಿ ಗಮನ ಕೊಡೋದಿಲ್ಲ. ಆದರೆ ವಾಸ್ತು ಶಾಸ್ತ್ರ ಕೇವಲ ನಮ್ಮ ಸಂಪ್ರದಾಯವಲ್ಲ ವೈಜ್ಞಾನಿಕವಾಗಿ ಇದರ ಫಲಾನುಫಲ ಇದ್ದೇ ಇರುತ್ತದೆ. ಅದರ ಬಗ್ಗೆ ತಿಳಿದುಕೊಂಡರೆ ಮುಂದೆ ಮನೆಯಲ್ಲಿ ಸಂತೋಷ, ನೆಮ್ಮದಿಯಾಗಿ ಇರಲು ಸಾಧ್ಯ.
ಅಗ್ನಿ ಮೂಲೆ, ಜಲಮೂಲೆ (ನೀರಿನ ಸಂಪ್ ಇರುವ ಜಾಗ ), ಕುಬೇರ ಮೂಲೆ, ದೇವಮೂಲೆ, ವಾಯು ಮೂಲೆ ( ಲೀವಿಗ್ ರೂಮ್ ) ಹೀಗೆ ಅನೇಕ ವಿಷಯಗಳು ಮನೆ ಕಟ್ಟುವಾಗ ಅಥವಾ ತೆಗೆದು ಕೊಳ್ಳುವಾಗ ನೋಡಬೇಕಾದ ಸಂಗತಿಗಳು. ಈ ವಾಸ್ತು ನಮ್ಮ ದೈನಂದಿನ ಚಟುವಟಿಕೆ ಮೇಲು ಪ್ರಭಾವ ಬೀರುತ್ತದೆ. ಮನೆ ವಾಸ್ತುವಿನ ಬಗ್ಗೆ ಕೆಲವು ವಿಷಯಗಳು ತಿಳಿದುಕೊಳ್ಳೋಣ.
ಮನೆಯ ಪ್ರವೇಶದ್ವಾರ ಉತ್ತರ ಅಥವಾ ಪೂರ್ವ ದಲ್ಲಿದ್ದರೆ ಒಳ್ಳೆಯದು, ಪ್ರವೇಶದ್ವಾರ ಒಳ್ಳೆಯ ಮರದ ಬಾಗಿಲಿನಿಂದ ಮಾಡಿದ್ದರೆ ಒಳ್ಳೆಯದು.
ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ಮಕ್ಕಳು ಓದುವ ಕೊಠಡಿಯಲ್ಲಿ ಉತ್ತರಕ್ಕೆ ಮುಖಮಾಡಿ ಕೂತು ಓದಬೇಕು. ಉತ್ತರ ದಿಕ್ಕಿನ ಗೋಡೆಯಲ್ಲಿ1, 3 ಅಥವಾ 5 ಸಂಖ್ಯೆಗಳಲ್ಲಿ ಕಿಟಕಿ ಇಡಬೇಕು. ಇದರಿಂದ ಮಕ್ಕಳಲ್ಲಿ ಏಕಾಗ್ರತೆಯಿಂದ ಓದಿನಲ್ಲಿ ಒಳ್ಳೆಯ ಗ್ರೇಡ್ ಸಿಗುವುದರಲ್ಲಿ ಸಂಶಯವಿಲ್ಲ
ಮನೆಯ ಸ್ನಾನ ಗೃಹ ಮನೆಯ ಪೂರ್ವ ಭಾಗದಲ್ಲಿ ಇರಬೇಕು ಹಾಗೆ ಗಾಳಿ ಬೆಳಕು ಬೀಳಬೇಕು. ಇಲ್ಲಿ ಋಣಾತ್ಮಕ ಅಂಶಗಳು ಹೆಚ್ಚಾಗಿ ಇರುವ ಕಾರಣ ವಾಸ್ತು ಪ್ರಕಾರ ಇರಬೇಕು ಇನ್ನು ಮನೆಯ ಚರಂಡಿ ವ್ಯವಸ್ಥೆ ವಾಯುವ್ಯ ಭಾಗದಲ್ಲಿರಬೇಕು.
ಮನೆಯ ಅಡುಗೆ ಕೋಣೆ ಆಗ್ನೇಯ ದಿಕ್ಕಲ್ಲಿ ಇರಬೇಕು ಅಡುಗೆ ಮಾಡುವಾಗ ಯಾವಾಗಲೂ ಪೂರ್ವಕ್ಕೆ ಮುಖ ಮಾಡಿ ಕೊಂಡಿದ್ದರೆ ಮನೆಯಲ್ಲಿ ಇರುವವರಲ್ಲಿ ಆರೋಗ್ಯ ಭಾಗ್ಯ ಇರುತ್ತದೆ.
ವಾಸ್ತುಪ್ರಕಾರ ಕನ್ನಡಿ ಮನೆಯ ಮಲಗುವ ಕೊನೆಯಲ್ಲಿ ಇರಬಾರದು ಎನ್ನುತ್ತಾರೆ. ಅದರಲ್ಲೂ ಮಲಗುವ ಮಂಚಕ್ಕೆ ಮುಖ ಮಾಡಿ ಇರಲೇ ಬಾರದು. ಅದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ ಕನ್ನಡಿಯನ್ನು ಸ್ವಚ್ಛವಾಗಿಟ್ಟುಕೊಂಡರೆ ಧನ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ.
ಮನೆಯ ಹಣ ಇಡುವ ಬೀರುವನ್ನು ಉತ್ತರಕ್ಕೆ ಇಟ್ಟರೆ ಒಳ್ಳೆಯದು. ಕುಬೇರನ ವಾಸ ಇರುವ ಜಾಗ ಉತ್ತರವಾದ ಕಾರಣ ಬೀರುವನ್ನು ಉತ್ತರಕ್ಕೆ ಮುಖ ಮಾಡಿ ಇಡಬೇಕು. ವಾಸ್ತು ಶಾಸ್ತ್ರ ಇದು ಕೇವಲ ನಮ್ಮ ಸಂಪ್ರದಾಯ ಮಾತ್ರವಲ್ಲ ಇದು ಸಂಸಾರದ ಸಂತೋಷದ ಕೀಲಿ ಕೈ .