ಬೇರೆಯವರ ವಸ್ತು ಬಳಸೋದ್ರಿಂದ ದರಿದ್ರ ಕಾಡೋದು ಗ್ಯಾರಂಟಿ
ಭಾರತೀಯರು ವಾಸ್ತುವನ್ನು ಹೆಚ್ಚಾಗಿ ನಂಬುತ್ತಾರೆ, ಜೊತೆಗೆ ಪಾಲಿಸುತ್ತಾರೆ. ವಾಸ್ತು ಪ್ರಕಾರ ನಕಾರಾತ್ಮಕ ಶಕ್ತಿ ಅನೇಕ ರೀತಿಯಲ್ಲಿ ಮನೆಯೊಳಗೆ ಬರಬಹುದು. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಶಕ್ತಿ ಇದೆ, ಇದು ಬಳಸುವ ವಸ್ತುಗಳ ಮೇಲೂ ಪರಿಣಾಮ ಬೀರುತ್ತದೆ. ಬೇರವರ ಕೆಲವು ವಸ್ತುಗಳನ್ನು ಬಳಸಿದರೆ ದರಿದ್ರವನ್ನು ನಾವೇ ಕರದಂತೆ. ಅಷ್ಟಕ್ಕೂ ಯಾವ ವಸ್ತುಗಳನ್ನು ಬಳಸಬಾರದು?
ಕೆಲವು ವಸ್ತುಗಳನ್ನು ನಮ್ಮಲ್ಲಿ ಇಲ್ಲದಿದ್ದರೆ ಇನ್ನೊಬ್ಬರದ್ದನ್ನು ಬಳಸುತ್ತೇನೆ. ವಾಸ್ತು ಶಾಸ್ತ್ರದ ಪ್ರಕಾರ ಬಳಸಬಾರದ ಕೆಲವು ವಿಷಯಗಳಿವೆ. ಇವುಗಳ ಬಳಕೆಯಿಂದ ದುರಾದೃಷ್ಟ ಮತ್ತು ಆರ್ಥಿಕ ತೊಂದರೆ ಎದುರಿಸಬೇಕಾಬಹದು.
ಬೇರೆಯವರ ಹಾಸಿಗೆ ಮೇಲೆ ಯಾರೂ ಮಲಗಬಾರದು ಎಂದು ಹೇಳಲಾಗುತ್ತದೆ. ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ.
ಏನಾಗುತ್ತದೆ?: ಬೇರೆಯವರ ಹಾಸಿಗೆ ಮೇಲೆ ಮಲಗಿದರೆ ಆ ವ್ಯಕ್ತಿಗೆ ಹಣಕ್ಕೆ ಸಂಬಂಧಿಸಿದ ತೊಂದರೆ ಎದುರಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಕೈಗಳಲ್ಲಿ ಧರಿಸುವ ವಾಚ್ ಅನ್ನು ಕೂಡ ಬೇರೆಯವರು ಧರಿಸಬಾರದು. ನಿಮ್ಮ ವಾಚ್ ಬೇರೆಯವರಿಗೆ ಕೊಡಬಾರದು, ಬೇರೆಯವರ ವಾಚ್ ನೀವು ಧರಿಸಬಾರದು.
ಏನಾಗುತ್ತದೆ?: ಇದು ಸ್ವಂತ ಕಾರ್ಯಗಳಲ್ಲಿ ವೈಫಲ್ಯ ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಗಡಿಯಾರವನ್ನು ಯಾವಾಗಲೂ ನಿಮಗಾಗಿ ಕೊಂಡುಕೊಂಡದ್ದನ್ನು ಮಾತ್ರ ಧರಿಸಿ.
ಅದೇ ರೀತಿ, ಬೇರೆ ಯಾವುದೇ ವ್ಯಕ್ತಿಯ ಬಟ್ಟೆಗಳು ಮತ್ತು ಕರವಸ್ತ್ರಗಳನ್ನು ಬಳಸಬಾರದು. ಬೇರೆಯವರು ಧರಿಸುವ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ.
ಏನಾಗುತ್ತದೆ ?: ಬೇರೆಯವರ ಬಟ್ಟೆ ಧರಿಸಿದರೆ ಇದು ಇಬ್ಬರ ನಡುವೆ ಉದ್ವಿಗ್ನತೆ ಮತ್ತು ಹೋರಾಟದ ಸಾಧ್ಯತೆಯನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ.
ಬೇರೊಬ್ಬರಿಂದ ಹಣವನ್ನು ಪಡೆದರೆ, ಅದನ್ನು ಸಾಧ್ಯವಾದಷ್ಟೂ ಬೇಗನೆ ಹಿಂದಿರುಗಿಸಬೇಕು ಎಂಬುದನ್ನು ಎರವಲು ಪಡೆಯಬೇಕಾದಾಗಲೆಲ್ಲಾ ನೆನಪಿನಲ್ಲಿಡಿ. ನೀವು ಅದನ್ನು ಸಮಯಕ್ಕೆ ಸರಿಯಾಗಿ ಹಿಂದಿರುಗಿಸಬೇಕು.
ಮಾಡದಿದ್ದರೆ ಏನಾಗುತ್ತದೆ?: ಒಂದು ವೇಳೆ ಹಣವನ್ನು ಸರಿಯಾದ ಸಮಯಕ್ಕೆ ಹಿಂದಿರುಗಿಸದಿದ್ದರೆ ಅದು ನಿಮಗೆ ಕೆಟ್ಟದಾಗಿ ಪರಿಣಮಿಸುತ್ತದೆ. ಮುಂದೆ ಸಾಲ ಹೆಚ್ಚಾಗುವ ಸಾಧ್ಯತೆ ಇದೆ.
ವಾಸ್ತು ಶಾಸ್ತ್ರದಲ್ಲಿ ಈ ಒಂದು ನಂಬಿಕೆ ಸಹ ಬಲವಾಗಿದೆ. ಅದೇನೆಂದರೆ ಶಾಸ್ತ್ರದ ಪ್ರಕಾರ ಇತರರ ಲೇಖನಿಯನ್ನು ಅಂದರೆ ಪೆನ್ ಅನ್ನು ಯಾವತ್ತೂ ಬಳಸಬಾರದು.
ಬಳಸಿದರೆ ಏನಾಗುತ್ತದೆ?: ಇತರರ ಪೆನ್ ಬಳಸಿದರೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.