ಸೀರೆಯಲ್ಲಿದ್ದರೂ ಶ್ವೇತಾ ಚಂಗಪ್ಪ ವಿರುದ್ಧ ವೀಕ್ಷಕರು ಗರಂ ಆಗಿದ್ದೇಕೆ?
ಓಪನಿಂಗ್ ಎಪಿಸೋಡ್ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಶ್ವೇತಾ. ಬಟ್ಟೆ ಬಗ್ಗೆ ಸಲಹೆ ಕೊಟ್ಟ ನೆಟ್ಟಿಗರು.....
ಜೀ ಕನ್ನಡ ವಾಹಿನಿಯಲ್ಲಿ ಜೋಡಿ ನಂ 1 ಸೀಸನ್ 2 ರಿಯಾಲಿಟಿ ಶೋ ಆರಂಭವಾಗಿ. ಶ್ವೇತಾ ಚಂಗಪ್ಪ ಮತ್ತು ಕುರಿ ಪ್ರತಾಪ್ ನಿರೂಪಣೆ ಮಾಡುತ್ತಿದ್ದಾರೆ.
ಓಪನಿಂಗ್ ಎಪಿಸೋಡ್ ಅದ್ಭುತವಾಗಿ ಮೂಡಿ ಬಂದಿದ್ದು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಶ್ವೇತಾ ಮೇಲೆ ಕೊಂಚ ಮುನಿಸಿದೆ.
ಓಪನ್ ಎಪಿಸೋಡ್ಗೆ ಶ್ವೇತ ಬಣ್ಣದ ಬ್ಲೌಸ್ಗೆ ಕೆಂಪು ಬಣ್ಣ ಲೆಹೆಂಗಾ ಧರಿಸಿದ ಶ್ವೇತಾ ಚಂಗಪ್ಪ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದರು.
ಆದರೆ, ಶ್ವೇತಾ ಲೆಹೆಂಗಾವನ್ನು ಸಖತ್ ಮಾಡರ್ನ್ ಆಗಿ ಧರಿಸಿ ಬಿಟ್ಟಿದ್ದರು, ಅದಕ್ಕೆ ವೀಕ್ಷಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಅಲ್ಲದೆ ಇನ್ಸ್ಟಾಗ್ರಾಂನಲ್ಲಿ ಶ್ವೇತಾ ಫೋಟೋ ಅಪ್ಲೋಡ್ ಮಾಡಿದ್ದಾರೆ. ನಾವು ಇರುವ ಹಾಗೆ ಇದ್ದರೆ ಅದೇ ಸ್ಟೈಲ್ ಹೇಳುವ ಅಗತ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.
ಶ್ವೇತಾ ಚಂಗಪ್ಪ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ದಿನದಿಂದ ಅದೆಷ್ಟೋ ಮಂದಿ ನಮ್ಮ ಮನೆ ಮಗಳು ಎನ್ನುವಷ್ಟು ಪ್ರೀತಿ ಕೊಟ್ಟಿದ್ದಾರೆ.
ಅಲ್ಲದೆ ಈ ಕಾರ್ಯಕ್ರಮವನ್ನು ವಯಸ್ಸಿನ ಲಿಮಿಟ್ ಇಲ್ಲದೆ ನೋಡುತ್ತಾರೆ. ನಿಮ್ಮಿಂದ ಒಳ್ಳೆತನ ಕಲಿಯಬೇಕು ದಯವಿಟ್ಟು ಫ್ಯಾಷನ್ ಬಗ್ಗೆ ಹೆಚ್ಚಿನ ಗಮನ ಇರಲಿ ಅಂತಿದ್ದಾರೆ ನೆಟ್ಟಿಗರು.