ಭರ್ಜರಿ ಬ್ಯಾಚುಲರ್ಸ್ಗೆ ಕಿಸ್ ಟಾಸ್ಕ್: ಮನೋಹರನಿಗೆ ಮಲೇಷ್ಯಾ ಹುಡ್ಗಿ ಲಿಪ್ಲಾಕ್, ಸುಂದ್ರಿಗೆ ಮುತ್ತಿಟ್ಟ ಸೂರಜ್
ಜೀ ಕನ್ನಡ ವಾಹಿನಿಯಿಂದ ನಡೆಸಲಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ತಂಡವು ಈಗ ಮಲೇಷ್ಯಾಗೆ ತೆರಳಿದ್ದು ಮೂರು ವಾರಗಳ ಟಾಸ್ಕ್ ಮುಗಿಸಿಕೊಂಡು ಬಂದಿದೆ. ಆದರೆ, ಭರ್ಜರಿ ಬ್ಯಾಚುಲರ್ಸ್ ಆಗಿ ಹೋಗಿರುವ ಕಂಟೆಸ್ಟಂಟ್ಗಳು ಮಲೇಷ್ಯಾ ಹುಡುಗಿಯರೇ ಮುತ್ತು ಕೊಡಿ ಎಂದು ಗೋಗರೆಯುತ್ತಿದ್ದಾರೆ.
ಭರ್ಜರಿ ಬ್ಯಾಚುಲರ್ಸ್ ಕಂಟೆಸ್ಟಂಟ್ಗಳಲ್ಲಿ ತಾರ್ಜಾನ್ ಮಹೋಹರ ಕಿಸ್ ಟಾಸ್ಕ್ನಲ್ಲಿ ಭರ್ಜರಿ ಮುತ್ತುಗಳನ್ನು ಪಡೆದಿದ್ದಾನೆ. ಜೊತೆಗೆ, ಒಂದು ಹುಡುಗಿ ಮನೋಹರ ತುಟಿ, ಕೆನ್ನೆಗೂ ಕಿಸ್ ಮಾಡಿದ್ದಾಳೆ.
ಕಿರುತೆರೆ ಇತಿಹಾಸದಲ್ಲೇ ವಿದೇಶ (ಮಲೇಷ್ಯಾ)ದಲ್ಲಿ ಚಿತ್ರೀಕರಣವಾದ ಮೊದಲ ರಿಯಾಲಿಟಿ ಶೋ ಇದಾಗಿದ್ದು, ಸೆಮಿ ಫಿನಾಲೆ ನಡೆಯುತ್ತಿದೆ. ಇದರಲ್ಲಿ ಎಲ್ಲ ಕಂಟೆಸ್ಟಂಟ್ಗಳಿಗೆ ಮಲೇಷ್ಯಾ ಹುಡುಗಿಯರಿಂದ ಕಿಸ್ ಕೊಡಿಸಿಕೊಂಡು ಬರಲು ಟಾಸ್ಕ್ ನೀಡಲಾಗಿದೆ.
ಮಲೇಷಿಯಾದಲ್ಲಿ 'ಭರ್ಜರಿ ಬ್ಯಾಚುಲರ್ಸ್' ಟೀಮ್ ಬೀಡುಬಿಟ್ಟಿದ್ದು, ಶೂಟಿಂಗ್ ನಡೆಸುತ್ತಾ, ಸುಂದರ ಲೋಕೇಶನ್ಸ್ ಕೂಡ ಎಂಜಾಯ್ ಮಾಡುತ್ತಿದ್ದಾರೆ. ಅದರ ಜೊತೆಗೆ ಸುಂದರ ಹುಡುಗಿಯರಿಂದ ಮುತ್ತು ತರುವ ಟಾಸ್ಕ್ ನೀಡಿದ್ದು, ಅವರು ಬೀದಿ ಬೀದಿಗಳಲ್ಲಿ ಮುತ್ತು ನೀಡುವಂತೆ ಹುಡುಗಿಯರ ಹಿಂದೆ ಬಿದ್ದಿದ್ದಾರೆ.
ಭರ್ಜರಿ ಬ್ಯಾಚುಲರ್ಸ್ ಕಂಟೆಸ್ಟಂಟ್ಗಳಲ್ಲಿ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಬಾರದ ಸಿಂಗರ್ ಹನುಮಂತ, ಗಿಲ್ಲಿ ನಟ, ಸೇರಿ ಹಲವರು ಕಿಸ್ ಕೊಡುವಂತೆ ಹುಡುಗಿಯರ ಹಿಂದೆ ದುಂಬಾಲು ಬೀಳುತ್ತಿದ್ದಾರೆ.
ಸೂರಜ್ ಕೂಡ ಹುಡುಗಿಯರ ಬಳಿ ಕಿಸ್ ಪಡೆಯುವಲ್ಲಿ ಯಶಸ್ವಿ ಆಗಿದ್ದಾನೆ. ಕೆಲವರು ಕೆನ್ನೆಗೂ ಮುತ್ತು ಕೊಟ್ಟು ಕಳುಹಿಸಿದ್ದಾರೆ.
ಡ್ಯಾನ್ಸ್ ಮಾಸ್ಟರ್ ರುದ್ರನಿಗೆ ಸಿಕ್ಕ ಮಲೇಷಿಯಾ ಚೆಲುವೆಯರ ಮುತ್ತಿನ ಮುದ್ರೆಗಳು ಎಷ್ಟು ಗೊತ್ತಾ? ಕರ್ನಾಟಕದಲ್ಲಿ ಆಗಿದ್ರೆ ಟೀಶರ್ಟ್ ಸಾಲದಷ್ಟು ಕಿಸ್ ಕೊಡ್ತಿದ್ರಂತೆ ಹುಡ್ಗೀರು..
ಕಿಸ್ ಕೇಳೋದಕ್ಕಿಂತ ಕುರಿ ಕಾಯೋದೇ ಮೇಲು ಅಂತಾವ್ನೆ ಹನುಮಂತ! ನಾಳೆ ಮದುವೆ ಆದ್ರೆ ತಾನಾಗೇ ಕಿಸ್ ಪಸ್ ಎಲ್ಲಾ ಆಗ್ತಾವೆ ಇದೆಲ್ಲಾ ಬೇಕಿತ್ತಾ ಎಂದು ಸಿಂಗರ್ ಹನುಮಂತ ಗೋಳು ತೋಡಿಕೊಂಡಿದ್ದಾನೆ.
ಇನ್ನು ರಾಘವೇಂದ್ರ ಕೂಡ ಅತಿ ಹೆಚ್ಚು ಕಿಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ, ವಿನ್ನರ್ ಸ್ಥಾನಕ್ಕೆ ತಾರ್ಜಾನ್ ಮನೋಹರ ಪೈಪೋಟಿ ನೀಡಿದ್ದಾನೆ.
ಮಲೇಷಿಯಾದಲ್ಲಿ ಮುತ್ತಿನ ಮುದ್ರೆ ಪಡೆಯಲು ರಾಕೇಶ್ ಸಖತ್ ಸರ್ಕಸ್ ಮಾಡುತ್ತಿದ್ದಾನೆ. ಆದರೂ, ಬೀದಿಗಳಲ್ಲಿ ಅಲೆದಾಡಿ ಹುಡುಗಿಯರು, ಆಂಟಿಯರಿಂದ ಕಿಸ್ ಪಡೆದುಕೊಂಡಿದ್ದಾನೆ.
ಒನ್ಲೈನ್ ಡೈಲಾಗ್ ಕಿಂಗ್ ನವಾಜ್ ಕೂಡ ಅರ್ಧಂಬರ್ಧ ಕಂಗ್ಲೀಷ್ನಲ್ಲಿ ಕಿಸ್ಗಾಗಿ ಹುಡುಗಿಯರ ಬಳಿ ಗೋಗರೆಯುತ್ತಿದ್ದಾನೆ. ಆದರೆ, ಈತನ ಪ್ಲಾನ್ ಹೆಚ್ಚು ವರ್ಕೌಟ್ ಆಗುತ್ತಿಲ್ಲ.
ಮಲೇಶಿಯಾದಲ್ಲಿ ನಡೆಯುತ್ತಿರುವ ಭರ್ಜರಿ ಬ್ಯಾಚುಲರ್ಸ್ನ ಸಮುದ್ರ ದಂಡೆಯ ಟಾಸ್ಕ್ನಲ್ಲಿ 5 ಹಂತಗಳನ್ನು ಗೆದ್ದಿದ್ದ ಜಗಮಗ ಜಗ್ಗಪ್ಪ ಕಿಸ್ ಟಾಸ್ಕ್ನಲ್ಲಿ ಸೋಲು ಕಂಡಿದ್ದಾರೆ.