ಮುದ್ದು ಮುಖದ ಸಿಹಿನ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಅಂತ ಕೇಳ್ತಿದ್ದಾರೆ ವೈಷ್ಣವಿ ಗೌಡ….
ಸೀತಾ ರಾಮ ಖ್ಯಾತಿಯ ವೈಷ್ಣವಿ ಗೌಡ ಸಿಹಿ ಜೊತೆಗಿನ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಎಷ್ಟು ಮಿಸ್ ಮಾಡ್ತಿದ್ದೀರಾ ಅಂತ ಕೇಳ್ತಿದ್ದಾರೆ.
ಝೀ ಕನ್ನಡದ ಜನಪ್ರಿಯ ಧಾರಾವಾಹಿ ಸೀತಾ ರಾಮದಲ್ಲಿ (Seetha Rama) ಸದ್ಯ ಕಳೆದ ಕೆಲವು ದಿನಗಳಿಂದ ವೀಕ್ಷಕರೇ ಕಣ್ಣೀರಿಡುವಂತಹ ಎಪಿಸೋಡ್ ಗಳು ಪ್ರಸಾರವಾಗುತ್ತಿವೆ. ಆಕ್ಸಿಡೆಂಟ್ ನಡೆದಿದ್ದು, ಪುಟ್ಟ ಸಿಹಿ ಸಾವನ್ನಪ್ಪಿದ್ದಾಳೆ, ಸೀತಾ ಆಸ್ಪತ್ರೆಯಲ್ಲಿ ಪ್ರಜ್ಞೆ ಇಲ್ಲದೇ ಮಲಗಿದ್ದಾಳೆ.
ಇನ್ನು ಮುಂದೆ ಸಿಹಿ ಪಾತ್ರ ಇರೋದಿಲ್ಲ, ಆದರೆ ಸಿಹಿ ಆತ್ಮ ಯಾವಾಗಲೂ ಇರತ್ತೆ ಅನ್ನೋದನ್ನು ಈಗಾಗಲೇ ತೋರಿಸಿಯಾಗಿದೆ. ಆದ್ರೂ ಸಿಹಿ ಇಲ್ಲದ ಧಾರಾವಾಹಿಯನ್ನು ನೋಡೋದಕ್ಕೆ ವೀಕ್ಷಕರು ಸಹ ಇಷ್ಟಪಡುತ್ತಿಲ್ಲ. ತುಂಬಾನೆ ಸುಂದರವಾದ ಕಥೆಯನ್ನು ಹಾಳು ಮಾಡಿದ್ರಿ, ಸಿಹಿಯನ್ನು ವಾಪಾಸ್ ಕರೆತನ್ನಿ ಅಂತಾನೆ ಹೇಳ್ತಿದ್ದಾರೆ ಜನ.
ಸಿಹಿ ಪಾತ್ರದ ಕೊನೆಯಾದ ಹಿನ್ನೆಲೆಯಲ್ಲಿ ಸೀತಾ ಅಂದರೆ ವೈಷ್ಣವಿ ಗೌಡ (Vaishnavi Gowda), ತಮ್ಮ ಇನ್’ಸ್ಟಾಗ್ರಾಂನಲ್ಲಿ ಸಿಹಿ ಅಂದ್ರೆ ರಿತು ಸಿಂಗ್ ಜೊತೆಗಿನ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದು, ನೀವು ಸಿಹಿನ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದು ಕೇಳಿದ್ದಾರೆ.
ರಿತು ಸಿಂಗ್ ಜೊತೆಗೆ ತೆಗೆಸಿಕೊಂಡಿರುವ ತುಂಬಾನೆ ಮುದ್ದು ಮುದ್ದಾದ ಫೋಟೊಗಳನ್ನು ಶೇರ್ ಮಾಡಿರುವ ವೈಷ್ಣವಿ How much are you guys missing this cute face. Sihi S capital ಎಂದು ಬರೆದುಕೊಂಡಿದ್ದಾರೆ. ಇದು ಕೊನೆಯ ಎಪಿಸೋಡ್ ಶೂಟ್ ಮಾಡುವಾಗ ತೆಗೆಸಿಕೊಂಡಂತಹ ಫೋಟೊ ಅನ್ನೋದು ಅವರಿಬ್ಬರ ಡ್ರೆಸ್ ನೋಡಿದ್ರೆನೆ ತಿಳಿಯುತ್ತೆ.
ವೈಷ್ಣವಿ ಗೌಡ ಫೋಟೊ ನೋಡಿ ಅಭಿಮಾನಿಗಳು ಸಹ ಉತ್ತರಿಸಿದ್ದು, ಸಿಹಿ ಸಾಯುವ ಪ್ರೊಮೊ ಯಾವಾಗ ಬಂತೋ ಆವಾಗಿನಿಂದ ಸೀರಿಯಲ್ ನೋಡೋದೆ ಬಿಟ್ಟಿರೋದಾಗಿ ಹೇಳಿದ್ದಾರೆ. ಇನ್ನು ಕೆಲವರು ಇನ್ನು ಮುಂದೆ ಸೀತಾ ರಾಮ ನೋಡೋದೆ ಇಲ್ಲ ಎಂದಿದ್ದಾರೆ.
ಒಬ್ಬರಂತೂ ರೀತು ಸಿಂಗ್ (Rithu Singh) ತಾಯಿಗೆ ಬೈದಿದ್ದಾರೆ. ಸಿಹಿ ಸಾಯೋದು ಇಷ್ಟು ಓವರ್ ಆಗಿ ತೋರಿಸಬಾರದು. ಅವರ ಅಮ್ಮನಿಗೆ ಫಸ್ಟ್ ಬೈಬೇಕು. ಇರೋದು ಒಬ್ಬಳೇ ಮಗಳು, ಸೀರಿಯಲ್ ಗೋಸ್ಕರ ಇಂಥ ಆಕ್ಟಿಂಗ್ ಮಾಡೋಕೆ ಬಿಟ್ಟಿದ್ದಾರೆ. ಅಂತಾ ಚೆನ್ನಾಗಿರೋ ಹುಡುಗಿಗೆ ಬಿಳಿ ಬಟ್ಟೆ ಸುತ್ತಿಸಿ, ಅಂತ್ಯಕ್ರಿಯೆ ಮಾಡಿಸೋಕೆ ಅದು ಹೇಗಾದ್ರೂ ಮನಸು ಬರುತ್ತೋ. ನಮಗೆ ನೋಡೊದಕ್ಕೆ ಆಗ್ತಿಲ್ಲ ಎಂದಿದ್ದಾರೆ.