ಇದೇನ್ ಭಾನುಮತಿ ಹೀಗಾಗ್ಬಿಟ್ಟೆ?; ಗೀತಾ ಅತ್ತೆ ತುಂಡುಬಟ್ಟೆ ನೋಡಿ ಶಾಕ್ ಆದ ನೆಟ್ಟಿಗರು!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಭಾನುಮತಿ ಹೊಸ ಬೋಲ್ಡ್ ಲುಕ್. ಅತ್ತೆಯಂದಿರು ಇಷ್ಟು ಹಾಟ್ ಇರ್ತಾರಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಸೀರಿಯಲ್ನಲ್ಲಿ ಸಖತ್ ಹಾಟ್ ಅತ್ತೆ ಪಾತ್ರದಲ್ಲಿ ಮಿಂಚುತ್ತಿರುವ ಭಾನುಮತಿ.
ಹೌದು! ಖಡಕ್ ಆಂಡ್ ಹಾಟ್ ಅತ್ತೆ ಭಾನುಮತಿ ಪಾತ್ರದಲ್ಲಿ ಮಿಂಚುತ್ತಿರುವ ಶರ್ಮಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಅಗಿದ್ದಾರೆ.
ಬೇಜ್ ಬಣ್ಣದ ಪ್ರಿಂಟ್ ಇರುವ ಪ್ಯಾಂಟ್ಗೆ ಶರ್ಮಿತಾ ಬ್ಲ್ಯಾಕ್ ಕ್ರಾಪ್ ಟಾಪ್ ಧರಿಸಿದ್ದಾರೆ. ಇದು ಸೈಮಾ ಅವಾರ್ಡ್ಗೆಂದು ದುಬೈಗೆ ತೆರಳಿದ ಲುಕ್ ಎನ್ನಲಾಗಿದೆ.
'ನಾನು ನಾನಾಗಿರುವುದಕ್ಕೆ ಯಾವ ಭಯನೂ ಇಲ್ಲ. ಡಿಫರೆಂಟ್ ಆಗಿದ್ದರೂ ಚಿಂತೆ ಇಲ್ಲ' ಎಂದು ಶರ್ಮಿತಾ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ಅಂಗನಾ ಫ್ಯಾಷನ್ ಡಿಸೈನರ್ ಮಾಡಿರುವ ಉಡುಪು ಇದಾಗಿದ್ದು ಅಭಿಷೇಕ್ ಫೋಟೋ ಕ್ಲಿಕ್ ಮಾಡಿದ್ದಾರೆ. ಬ್ಲಾಕ್ ಹೀಲ್ಸ್ಗೆ ಬ್ಲಾಕ್ ಬ್ಯಾಗ್ ಕ್ಯಾರಿ ಮಾಡಿದ್ದಾರೆ.
ವಯಸ್ಸು ನಿಮಗೆ ಒಂದು ನಂಬರ್ ಅಷ್ಟೆ, ನೋಡಲು ಎಷ್ಟು ಹಾಟ್ ಆಗಿದ್ದೀರಾ, ನಿಮ್ಮಂತ ಅತ್ತೆ ನಮಗೂ ಬೇಕು ಎಂದು ಆದಷ್ಟು ಪಾಸಿಟಿವ್ ಕಾಮೆಂಟ್ ಬಂದಿದೆ.
ನಿನ್ನ ಸೌಂದರ್ಯ ರಾಯಲ್ ರಾಯಲ್...ನನ್ನ ಹೃದಯ ಗಾಯಲ್ ಗಾಯಲ್ ...ನಿನ್ನ ಕನಸಲ್ಲಿ ಪಾಗಲ್ ಪಾಗಲ್ ....ನಿನ್ನ ನಗೆಯೇ ಸಿಹಿ ಪೊಂಗಲ್ ಪೊಂಗಲ್ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.