MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಈ ದೇಶದಲ್ಲಿ ಕುಡಿಯೋದಕ್ಕೂ ಲೈಂಗಿಕ ಜೀವನಕ್ಕೂ ಸಂಬಂಧ ಕಲ್ಪಿಸುತ್ತಾರೆ!?

ಈ ದೇಶದಲ್ಲಿ ಕುಡಿಯೋದಕ್ಕೂ ಲೈಂಗಿಕ ಜೀವನಕ್ಕೂ ಸಂಬಂಧ ಕಲ್ಪಿಸುತ್ತಾರೆ!?

ಪ್ರಪಂಚದಾದ್ಯಂತ ಅನೇಕ ದೇಶಗಳಿವೆ, ಅಲ್ಲಿ ಮದ್ಯಪಾನದ ಸಂಪ್ರದಾಯವು (alcohol tradition) ಬಹಳ ವಿಶಿಷ್ಟವಾಗಿದೆ. ಇವುಗಳ ಬಗ್ಗೆ ಕೇಳಿದ್ರೆ ನಿಮಗೆ ಅಚ್ಚರಿಯಾಗಬಹುದು. ಹೀಗೂ ನಡೆಯುತ್ತಾ ಎಂದು ನೀವು ತಲೆಚಚ್ಚಿಕೊಳ್ಳಬಹುದು. ಹೌದು, ಎಲ್ಲೋ ಶೂಗಳಲ್ಲಿ ಡ್ರಿಂಕ್ಸ್ ಮಾಡುವ ಆಚರಣೆ ಇದ್ರೆ, ಮತ್ತೊಂದೆಡೆ ಚಿಯರ್ಸ್ ಎನ್ನುವಂತೆ ಇಲ್ಲ. ಬನ್ನಿ ಅವುಗಳ ಬಗ್ಗೆ ತಿಳಿಯೋಣ.

2 Min read
Author : Suvarna News
Published : Feb 01 2023, 05:52 PM IST
Share this Photo Gallery
  • FB
  • TW
  • Linkdin
  • Whatsapp
17
ನೈಜೀರಿಯಾದಲ್ಲಿ ವೈನ್ ಮದುವೆ (wine marriage in Nigeria)

ನೈಜೀರಿಯಾದಲ್ಲಿ ವೈನ್ ಮದುವೆ (wine marriage in Nigeria)

ನೈಜೀರಿಯಾದಲ್ಲಿ ಮದುವೆಯ ಸಮಯದಲ್ಲಿ, ಹೊಸ ವಧುವಿಗೆ ಅವಳ ತಂದೆ ಒಂದು ಕಪ್ ನಲ್ಲಿ ವೈನ್ ನೀಡುತ್ತಾರೆ. ಇದರ ನಂತರ, ಹುಡುಗಿ ಆ ಲೋಟವನ್ನು ಮದುವೆಗೆ ಬಂದ ಜನರ ನಡುವೆ ತನ್ನ ಗಂಡನಿಗೆ ನೀಡುತ್ತಾಳೆ. ಹುಡುಗಿ ತನ್ನ ಲೋಟವನ್ನು ಅವನಿಗೆ ನೀಡಿದಾಗ, ಅದನ್ನು ಮದುವೆ ಎಂದು ಪರಿಗಣಿಸಲಾಗುತ್ತದೆ.
 

27
ರಷ್ಯಾ ಮತ್ತು ಪೋಲೆಂಡ್ ನಲ್ಲಿ ವೋಡ್ಕಾ (Vodka in Russia and Poland)

ರಷ್ಯಾ ಮತ್ತು ಪೋಲೆಂಡ್ ನಲ್ಲಿ ವೋಡ್ಕಾ (Vodka in Russia and Poland)

ರಷ್ಯಾ ಮತ್ತು ಪೋಲೆಂಡ್‌ನಲ್ಲಿ ಇನ್ನೊಂದು ಸಂಪ್ರದಾಯವಿದೆ. ಇಲ್ಲಿ, ವೋಡ್ಕಾಗೆ ಜ್ಯೂಸ್ ಅಥವಾ ಮಿಕ್ಸರ್ ಸೇರಿಸುವುದು ಕೆಟ್ಟದು ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ನೀಟ್ ಕುಡಿಯುವುದು ಸರಿ ಎಂದು ಪರಿಗಣಿಸಲಾಗಿದೆ. 

37
ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಐ ಕಾಂಟಾಕ್ಟ್ (Eye contact in France and Germany)

ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಐ ಕಾಂಟಾಕ್ಟ್ (Eye contact in France and Germany)

ಫ್ರಾನ್ಸ್ ಮತ್ತು ಜರ್ಮನಿಯಲ್ಲಿ, ನೀವು ಚಿಯರ್ಸ್ ಹೇಳುವಾಗ ಐ ಕಾಂಟಾಕ್ಟ್ ಮಾಡದಿದ್ದರೆ ಅಥವಾ ಐ ಕಾಂಟಾಕ್ಟ್ ಮುರಿದರೆ ಅದರಿಂದ ಲೈಂಗಿಕ ಜೀವನದ ಮೇಲೆ 7 ವರ್ಷಗಳವರೆಗೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತೆ. ಇದನ್ನು Seven Years Of Bad Sex ಎಂದೂ ಕರೆಯಲಾಗುತ್ತದೆ.

47
ಜರ್ಮನಿಯಲ್ಲಿ ವಧು ಅಪಹರಣ (Kidnaping bride in Germany)

ಜರ್ಮನಿಯಲ್ಲಿ ವಧು ಅಪಹರಣ (Kidnaping bride in Germany)

ಜರ್ಮನಿಯಲ್ಲಿ, ವರನ ಸ್ನೇಹಿತ ವಧುವನ್ನು ಅಪಹರಿಸಿ ಬಾರ್ ಗೆ ಕರೆದೊಯ್ಯುತ್ತಾನೆ, ವರನ ಆಗಮನಕ್ಕಾಗಿ ಕಾಯುತ್ತಾನೆ. ನಂತರ ವರನು ಬಂದು ವಧುವನ್ನು ಕರೆದೊಯ್ಯಬೇಕು ಅಂದ್ರೆ ಎಲ್ಲರಿಗೂ ಡ್ರಿಂಕ್ಸ್ ತೆಗೆಸಿ ಕೊಡಬೇಕು ಆ ನಂತರವಷ್ಟೇ ವಧುವನ್ನು ಕರೆದೊಯ್ಯುತ್ತಾನೆ.

57
ವಧುವಿನ ಬೂಟುಗಳಲ್ಲಿ ಡ್ರಿಂಕ್ಸ್ ಮಾಡೋದು (Drinking alcohol in brides shoes)

ವಧುವಿನ ಬೂಟುಗಳಲ್ಲಿ ಡ್ರಿಂಕ್ಸ್ ಮಾಡೋದು (Drinking alcohol in brides shoes)

ಭಾರತದಲ್ಲಿ, ಶೂಗಳನ್ನು ಕದಿಯುವ ಸಂಪ್ರದಾಯದಲ್ಲಿ, ವರನ ಶೂ ಕದಿಯಲಾಗುತ್ತದೆ, ಆದರೆ ಉಕ್ರೇನ್‌ನಲ್ಲಿ ವಧುವಿನ ಶೂ ಕಳ್ಳತನವಾಗುತ್ತದೆ. ಅದರ ನಂತರ ಮದುವೆಗೆ ಬರುವ ಜನರು ಬೂಟುಗಳಲ್ಲಿ ಆಲ್ಕೋಹಾಲ್ ಕುಡಿಯಬೇಕು. ಆಸ್ಟ್ರೇಲಿಯಾದಲ್ಲಿ, ಸಂತೋಷದ ಸಂದರ್ಭಗಳಲ್ಲಿ ಬೂಟುಗಳಲ್ಲಿ ಆಲ್ಕೋಹಾಲ್ ಕುಡಿಯಲಾಗುತ್ತೆ.

67
ಚಿಯರ್ಸ್ ಹೇಳೋದು ನಿಷಿದ್ಧ (Saying cheers is banned)

ಚಿಯರ್ಸ್ ಹೇಳೋದು ನಿಷಿದ್ಧ (Saying cheers is banned)

ಜನರು ಡ್ರಿಂಕ್ಸ್ ಮಾಡುವ ಮೊದಲು ಚಿಯರ್ಸ್ ಹೇಳಲು ಬಯಸುತ್ತಾರೆ, ಆದರೆ ಹಂಗೇರಿಯಲ್ಲಿ ಗ್ಲಾಸ್ ಹಿಡಿದು ಚಿಯರ್ಸ್ ಹೇಳೋದನ್ನು ನಿಷೇಧಿಸಲಾಗಿದೆ. 1849 ರಲ್ಲಿ, ಕೆಲವು ಹಂಗೇರಿಯನ್ ಕ್ರಾಂತಿಕಾರಿಗಳನ್ನು ಹತ್ಯೆ ಮಾಡಲಾಯಿತು, ನಂತರ ಆಸ್ಟ್ರಿಯಾದ ಸೈನ್ಯವು ಡ್ರಿಂಕ್ಸ್ ಮಾಡುತ್ತಾ ಚಿಯರ್ಸ್ ಎಂದು ಹೇಳಿ ಸಂಭ್ರಮಿಸಿತು, ಅಂದಿನಿಂದ ಹಂಗೇರಿಯಲ್ಲಿ ಹಾಗೆ ಮಾಡುವುದನ್ನು ನಿಷೇಧಿಸಲಾಗಿದೆ.

77
ಸ್ಪರ್ಶಿಸದೆ ಶಾಟ್ ಕುಡಿಯೋದು (having shot without touching the glass)

ಸ್ಪರ್ಶಿಸದೆ ಶಾಟ್ ಕುಡಿಯೋದು (having shot without touching the glass)

ನೆದರ್ಲ್ಯಾಂಡ್‌ನಲ್ಲಿ ಕೋಪ್-ಸ್ಟೋ-ಚೆ ಎಂಬ ಪದ್ಧತಿಯಿದೆ, ಇದರಲ್ಲಿ ಬಾರ್ ಎಟೆಂಡರ್‌ಗಳು ಜಿನೀವರ್ ನ್ನು ಒಂದು ಲೋಟದಲ್ಲಿ ಮತ್ತು ಬಿಯರ್ ಅನ್ನು ಮತ್ತೊಂದು ಲೋಟದಲ್ಲಿ ಸುರಿಯುತ್ತಾರೆ. ಡ್ರಿಂಕ್ಸ್ ಮಾಡುವವರು ಮೊದಲು ಕೈಗಳಿಂದ ಸ್ಪರ್ಶಿಸದೆ ಜಿನೀವರ್ ನ್ನು ಕುಡಿಯಬೇಕು ಮತ್ತು ನಂತರ ಬಿಯರ್ ಕುಡಿಯಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಮದ್ಯ
ಮದುವೆ

Latest Videos
Recommended Stories
Recommended image1
ಭಾರತದಲ್ಲಿದೆ ‘Mini Iran’... ಈ ಗಾಜಿನ ದೇಗುಲ ಪ್ರವೇಶಿಸಿದರೆ ಇರಾನ್’ಗೆ ಕಾಲಿಟ್ಟ ಅನುಭವ!
Recommended image2
99 ದೇಶಗಳನ್ನು ಸುತ್ತಿದ ಬಳಿಕ Dr. Bro ಹಾದಿ ಹಿಡಿದ Flying Passport ಜೋಡಿ
Recommended image3
ಅಗ್ಗದ ದರದರಲ್ಲಿ ವಿದೇಶ ಪ್ರವಾಸಕ್ಕೆ Flight Book ಮಾಡೋದು ಹೇಗೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved