ಬಲು ದುಬಾರಿ ತಾಜ್ ಹೊಟೇಲ್… ಒಂದು ರಾತ್ರಿ ಉಳಿಯಲು ಬಾಡಿಗೆ ಎಷ್ಟು ಗೊತ್ತಾ?
ದೇಶದ ಮೊದಲ ಫೈವ್ ಸ್ಟಾರ್ ಹೊಟೇಲ್ ಮುಂಬೈನ ತಾಜ್ ಹೊಟೇಲಲ್ಲಿ ಒಂದು ದಿನ ಕಳೆಯಬೇಕಾದರೆ ಎಷ್ಟು ಬಾಡಿಗೆ ಕೊಡಬೇಕಾಗುತ್ತೆ ಎಂದು ಕೇಳಿದ್ರೆ ನಿಮಗೆ ಅಚ್ಚರಿಯಾಗೋದು ಖಚಿತಾ.
ದೇಶದ ಮೊದಲ 5 ಸ್ಟಾರ್ ಹೋಟೆಲ್ (First five star hotel of India) ಹೆಸರು ನಿಮಗೆ ತಿಳಿದಿದೆಯೇ? ಹೌದು, ನೀವು ಸರಿಯಾಗಿ ಯೋಚಿಸುತ್ತಿದ್ದೀರಿ. ಮುಂಬೈನ ತಾಜ್ ಹೋಟೆಲ್ ಭಾರತದ ಮೊದಲ ಪಂಚತಾರಾ ಹೋಟೆಲ್ ಆಗಿದೆ. ಈ ಹೊಟೇಲ್ ದೇಶದ ಹೆಮ್ಮೆಯೂ ಹೌದು, ಕರಳಾ ನೆನಪುಗಳನ್ನು ಸಹ ಹೊಂದಿರುವ ದೇಶದ ಪ್ರತಿಷ್ಠಿತ ಹೊಟೇಲ್ ಇದು.
ಮುಂಬೈನ ಸಮುದ್ರ ತೀರದಲ್ಲಿ ನಿಂತಿರುವ ಈ ಹೋಟೆಲ್ ನ ಸೌಂದರ್ಯ ಹಾಗೂ ಲಕ್ಸುರಿಗೆ ಹೆಸರುವಾಸಿಯಾಗಿದೆ. ಒಂದೆಡೆ ಗೇಟ್ ವೇ ಆಫ್ ಇಂಡಿಯಾ, ಮತ್ತೊಂದೆಡೆ ಹೊಟೇಲ್ ತಾಜ್ (Hotel Taj) ಇವುಗಳನ್ನು ನೋಡುವುದೇ ಚೆಂದ. ತಾಜ್ ಹೊಟೇಲ್ ನೋಡಿದ್ರೆ, ಒಂದು ದಿನ ಆದ್ರೂ ನಾವು ಆ ಹೊಟೇಲ್ ನಲ್ಲಿ ತಂಗಬಾರದೇ ಎಂದು ಅನಿಸದೇ ಇರದು.
ನೀವು ಮುಂಬೈನ ವಿಶ್ವಪ್ರಸಿದ್ಧ ತಾಜ್ ಹೋಟೆಲ್ನಲ್ಲಿ ಒಂದು ರಾತ್ರಿ ಕಳೆಯಲು ಬಯಸಿದರೆ, ಇದಕ್ಕಾಗಿ ನೀವು ಸಾಕಷ್ಟು ಹಣವನ್ನು ಪಾವತಿಸಬೇಕಾಗುತ್ತದೆ. ಯಾಕಂದ್ರೆ ಇದು ಅಂತಿಂಥ ಹೊಟೇಲ್ ಅಲ್ವೇ ಅಲ್ಲ. ಇದು ದುಬಾರಿ ಹೊಟೇಲ್ ಆಗಿದ್ದು, ಇಲ್ಲಿ ಒಂದು ರಾತ್ರಿ ಉಳಿಯೋದಕ್ಕೂ ನೀವು ಸಾಕಷ್ಟು ಖರ್ಚು ಮಾಡಬೇಕು.
ತಾಜ್ ವೆಬ್ಸೈಟ್ (Taj website) ಪ್ರಕಾರ, ನೀವು ಇಲ್ಲಿ ಕೋಣೆಯನ್ನು ಕಾಯ್ದಿರಿಸಿದರೆ, ಅದಕ್ಕಾಗಿ ನೀವು ಕನಿಷ್ಠ 34 ಸಾವಿರ ಖರ್ಚು ಮಾಡಬೇಕಾಗುತ್ತದೆ. ಆದರೂ, ಹೋಟೆಲ್ ಕೋಣೆಯ ದರವು ವಿಭಿನ್ನ ದಿನಾಂಕಗಳಲ್ಲಿ ವಿಭಿನ್ನವಾಗಿರುತ್ತದೆ. ಹೊಟೇಲ್ ನಲ್ಲಿ ಉಳೀಯೋದಕ್ಕೆ ನೀವು ಯೋಚನೆ ಮಾಡ್ತಿದ್ರೆ, ಅದಕ್ಕಾಗಿ ಎಷ್ಟು ಖರ್ಚಾಗುತ್ತೆ ಅನ್ನೋದನ್ನು ಹೇಳ್ತೀವಿ ಕೇಳಿ.
ಜನವರಿ ತಿಂಗಳ ದರ ಚಾರ್ಟ್ ಅನ್ನು ನೋಡಿದಾಗ, ಐಷಾರಾಮಿ ಕೋಣೆಯ (Luxury room) ಕನಿಷ್ಠ ಬಾಡಿಗೆ 34,000 ರೂ. ಆಗಿದೆ. ಕೊಠಡಿಯನ್ನು ಕಾಯ್ದಿರಿಸುವ ಸಮಯದಲ್ಲಿ ನೀವು ತೆರಿಗೆ ಪಾವತಿಸಬೇಕಾಗುತ್ತದೆ ಮತ್ತು ಅದು ಸೇರಿದ್ರೆ ನೀವು ಒಂದು ರಾತ್ರಿಗಾಗಿ ಬರೋಬ್ಬರಿ 36-37 ಸಾವಿರ ರೂಪಾಯಿಗಳನ್ನು ವ್ಯಯ ಮಾಡಬೇಕಾಗಿ ಬರುತ್ತೆ.
ಇನ್ನು ಹೊಟೇಲ್ ನ ವೆಬ್ ಸೈಟ್ ನಲ್ಲಿ ವಿವಿಧ ರೀತಿಯ ಕೊಠಡಿಗಳ ಬೆಲೆಗಳನ್ನು ಉಲ್ಲೇಖಿಸಲಾಗಿದ್ದು, ಅದು ಲಕ್ಸುರಿ ಬೆಡ್ ರೂಮ್ (luxury bedroom) ನಿಮಗೆ ಬೇಕು ಎಂದಾದರೆ, ಕೇವಲ ಒಂದು ರಾತ್ರಿಗಾಗಿ ನೀವು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗಿ ಬರುತ್ತೆ, ಹೌದು, ಇದು ಸುಳ್ಳಲ್ಲ.
ಗ್ರಾಂಡ್ ಐಷಾರಾಮಿ ಸೂಟ್ (grand luxury sute) ಒನ್ ಬೆಡ್ ರೂಮ್ ಸೀ ವ್ಯೂ ರೂಮ್ ಆಗಿದೆ. ವೆಬ್ಸೈಟ್ ಪ್ರಕಾರ ಈ ಐಷಾರಾಮಿ ಸೂಟ್ನಲ್ಲಿ ಒಂದು ರಾತ್ರಿ ಉಳಿಯುವ ವೆಚ್ಚ ಸುಮಾರು 2 ಲಕ್ಷ 7 ಸಾವಿರ ರೂಪಾಯಿಗಳು. ತೆರಿಗೆ ಎಲ್ಲಾ ಸೇರಿದ್ರೆ, ಕೇವಲ ಒಂದು ರಾತ್ರಿಗಾಗಿ ನೀವು ಬರೋಬ್ಬರಿ 2 ಲಕ್ಷ 35 ಸಾವಿರ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.