ಟ್ರಾವೆಲ್ ಪ್ರಿಯರಿಗೆ ಇಷ್ಟವಾಗ್ತಿದೆ ‘Naked Flying’ ಟ್ರೆಂಡ್… ಫ್ಲೈಟ್ ಹತ್ತುವ ಮೊದಲು ಏನ್ ಮಾಡ್ತಾರೆ ಗೊತ್ತ?
ನೀವು ಪ್ರಯಾಣಿಸಲು ಇಷ್ಟಪಡುತ್ತಿದ್ದರೆ, ನಾವು ನಿಮಗೆ 'ನೇಕೆಡ್ ಫ್ಲೈಯಿಂಗ್' ಬಗ್ಗೆ ಹೇಳಲಿದ್ದೇವೆ, ಇದರ ಹೆಸರು ಕೇಳಿ ಶಾಖ್ ಆಗಬೇಡಿ. ವಾಸ್ತವವಾಗಿ, ಇದರರ್ಥ ಯಾವುದೇ ಸಾಮಾನುಗಳಿಲ್ಲದೆ ಟ್ರಾವೆಲ್ ಮಾಡೋದು. ಜನ ಇಷ್ಟಪಡುತ್ತಿರುವ ಈ ಟ್ರೆಂಡ್ ಬಗ್ಗೆ ಇಲ್ಲಿದೆ ಮಾಹಿತಿ.
ನಿಮಗೂ ಟ್ರಾವೆಲ್ ಮಾಡೋದು ಅಂದ್ರೆ ಇಷ್ಟಾನ?, ಹಾಗಿದ್ರೆ ಟ್ರೆಂಡ್ ಗಳನ್ನು ಅನುಸರಿಸುವುದು ಸಹ ಮುಖ್ಯ. ಇಂದು ನಾವು ನಿಮಗೆ 'ನೇಕೆಡ್ ಫ್ಲೈಯಿಂಗ್' (Naked Flying) ಟ್ರೆಂಡ್ ಬಗ್ಗೆ ಹೇಳಲಿದ್ದೇವೆ, ಇದು ಇತ್ತೀಚಿನ ದಿನಗಳಲ್ಲಿ ಟ್ರಾವೆಲ್ ಮಾಡುವವರು ಇಷ್ಟಪಟ್ಟು ಅನುಸರಿಸುತ್ತಿರುವ ಟ್ರೆಂಡ್. 'Naked Flying' ಹೆಸರು ಕೇಳಿದ ತಕ್ಷಣ ನಿಮ್ಮ ಮನಸ್ಸು ಏನೇನೋ ವಿಷ್ಯ ಓಡಾಡ್ತಿದೆ ಅಲ್ವಾ?, ನೀವು ಹೆಸರಿನಿಂದ ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ, ಏಕೆಂದರೆ ಇಲ್ಲಿ ಇದರರ್ಥ ಬಟ್ಟೆಗಳಿಲ್ಲದೆ ಪ್ರಯಾಣಿಸುವುದು ಎಂದಲ್ಲ. ಇದರ ನಿಜವಾದ ಅರ್ಥ ಯಾವುದೇ ಸಾಮಾನುಗಳಿಲ್ಲದೆ ಪ್ರಯಾಣಿಸುವುದು. ವಿಮಾನಗಳಲ್ಲಿ ಪ್ರಯಾಣಿಸುವಾಗ ಲಗೇಜ್ ಶುಲ್ಕದ ದರಗಳು ಗಗನಕ್ಕೇರುತ್ತಿವೆ, ಆದ್ದರಿಂದ ಈಗ ಹೆಚ್ಚಿನ ಪ್ರಯಾಣಿಕರು ಕನಿಷ್ಠ ಲಗೇಜ್ಗಳೊಂದಿಗೆ ಪ್ರಯಾಣಿಸುವ ಪ್ಲ್ಯಾನ್ ಮಾಡಿದ್ದಾರೆ. ಬನ್ನಿ ಇದರ ಬಗ್ಗೆ ತಿಳಿದುಕೊಳ್ಳೋಣ.
'Naked Flying' ಎಂದರೇನು?
‘Naked Flying' ಎಂದರೆ ಸಣ್ಣ ಅಥವಾ ಯಾವುದೇ ಸಾಮಾನುಗಳಿಲ್ಲದೆ ಪ್ರಯಾಣಿಸುವ ಕಲೆ. ಈ ಟ್ರೆಂಡ್ ಅನುಸರಿಸುವ ಪ್ರಯಾಣಿಕರು ಸಣ್ಣ ಬ್ಯಾಗ್ ಅಥವಾ ಫೋನ್, ವ್ಯಾಲೆಟ್ ಅಥವಾ ಚಾರ್ಜರ್ ನಂತಹ ತಮ್ಮ ಜೇಬಿನಲ್ಲಿ ಹೊಂದಿಕೊಳ್ಳುವ ವಸ್ತುಗಳನ್ನು ಮಾತ್ರ ಒಯ್ಯುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಟ್ರೆಂಡನ್ನು ಜನ ತುಂಬಾ ಇಷ್ಟಪಡುತ್ತಾರೆ. ಇದನ್ನು ಮಾಡೋದ್ರಿಂದ, ಪ್ರಯಾಣಿಕರು ಲಗೇಜ್ ಶುಲ್ಕವನ್ನು (luggage fare)ಪಾವತಿಸುವುದನ್ನು ತಪ್ಪಿಸಬಹುದು ಮತ್ತು ಆ ಮೂಲಕ ತಮ್ಮ ಹಣ ಉಳಿತಾಯ ಮಾಡ್ತಾರೆ, ಜೊತೆಗೆ ಅವರು ತಪಾಸಣೆಯ ಸಮಯದಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬೇಕಾಗಿಲ್ಲ ಮತ್ತು ಸಾಮಾನುಗಳನ್ನು ಕಳೆದುಕೊಳ್ಳುವ ಭಯ ಕೂಡ ಇರೋದಿಲ್ಲ.
ಹಣ ಉಳಿಸುವ ಟ್ರೆಂಡ್
ಅಂಕಿಅಂಶಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳು 2023 ರಲ್ಲಿ ಲಗೇಜ್ ಶುಲ್ಕದಿಂದ 33 ಬಿಲಿಯನ್ ಡಾಲರ್ ಗಳಿಸಿವೆ. ಅಂತಹ ಪರಿಸ್ಥಿತಿಯಲ್ಲಿ, ಪ್ರಯಾಣಿಕರು ಕನಿಷ್ಠ ಸಾಮಾನುಗಳೊಂದಿಗೆ ಪ್ರಯಾಣಿಸಲು ಪ್ರಾರಂಭಿಸುವ ಮೂಲಕ ಹೆಚ್ಚುವರಿ ಲಗೇಜ್ ಶುಲ್ಕವನ್ನು ಉಳಿಸಲು (saving money)ಪ್ರಾರಂಭಿಸಿದರು. ಜನರು ಇದರ ಬಗ್ಗೆ ತಿಳಿದುಕೊಳ್ಳಲು ಪ್ರಾರಂಭಿಸುತ್ತಿದ್ದಂತೆ, ಇದು ಜನಪ್ರಿಯವಾಗಲು ಪ್ರಾರಂಭಿಸಿತು.
'ಫ್ಲೈಯಿಂಗ್ ನೇಕೆಡ್' ಟ್ರೆಂಡ್ (flying naked trend) ಅನುಸರಿಸಿ ಪ್ರಯಾಣಿಸುವ ಪ್ರಯೋಜನವೆಂದರೆ, ಲಗೇಜ್ ಇಲ್ಲದಿದ್ದರೆ, ಚೆಕ್-ಇನ್ನಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಅಥವಾ ಲಗೇಜ್ ಕಳೆದುಕೊಳ್ಳುವ ಭಯ ಇರುವುದಿಲ್ಲ. ಅಷ್ಟೇ ಅಲ್ಲ ವಿಮಾನದಲ್ಲಿ ಬೋರ್ಡಿಂಗ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಯಾವುದೇ ಉದ್ವಿಗ್ನತೆ ಇರೋದಿಲ್ಲ. ಹಾಗಾಗಿ ಪ್ರಯಾಣಿಕರು ಒತ್ತಡ ಮುಕ್ತವಾಗಿ ಪ್ರಯಾಣಿಸಬಹುದು.
ಕನಿಷ್ಠ ಸಾಮಾನುಗಳೊಂದಿಗೆ ಪ್ರಯಾಣಿಸಬಹುದು ಎಂದು ಭಾವಿಸುವವರು 'ಫ್ಲೈಯಿಂಗ್ ನೇಕೆಡ್' ಟ್ರೆಂಡ್ ಅನುಸರಿಸುತ್ತಿದ್ದಾರೆ. ಆದರೆ ಎಲ್ಲರಿಗೂ ಈ ಟ್ರೆಂಡ್ ಫಾಲೋ ಮಾಡಲು ಸಾಧ್ಯ ಆಗೋದಿಲ್ಲ. ದೀರ್ಘ ಪ್ರಯಾಣ (long journey) ಮಾಡಲು ನೀವು ಯೋಚಿಸುತ್ತಿದ್ದರೆ ಕನಿಷ್ಠ ಪ್ಯಾಕ್ ಮಾಡಲು ಸಾಧ್ಯವಾಗದಿರಬಹುದು. ಹಣವನ್ನು ಉಳಿಸಲು, ಕೆಲವು ಪ್ರಯಾಣಿಕರು ತಮ್ಮ ಸಾಮಾನುಗಳನ್ನು ಸಾಗಿಸುವ ಮೊದಲು ಟ್ರಾನ್ಸ್ ಪೋರ್ಟ್ ಆಯ್ಕೆ ಮಾಡುತ್ತಾರೆ ಮತ್ತು ಇತರರು ಬ್ಯಾಗ್ ಒಯ್ಯುವುದನ್ನು ತಪ್ಪಿಸಲು ಅನೇಕ ಲೇಯರ್ ಗಳಲ್ಲಿ ಬಟ್ಟೆಗಳನ್ನು (layared clothes) ಧರಿಸುತ್ತಾರೆ. ಆದಾಗ್ಯೂ, ಅಂತಹ ಪ್ರಯಾಣಿಕರು ತಪಾಸಣೆಯ ಸಮಯದಲ್ಲಿ ತೊಂದರೆಯನ್ನು ಎದುರಿಸಬೇಕಾಗಿ ಬರುತ್ತೆ.
ಸೋಷಿಯಲ್ ಮೀಡಿಯಾದಲ್ಲಿ ಜನರ ಪ್ರತಿಕ್ರಿಯೆ ಏನು?
ಈ ಟ್ರೆಂಡ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಮಾನಗಳಲ್ಲಿ ಬ್ಯಾಗ್ ರಹಿತ ಪ್ರಯಾಣಿಸುವ ಪ್ರಯಾಣಿಕರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, "ಇದು ಹೊಸ ನಗರಕ್ಕೆ ಲೋಕಲ್ ಬಸ್ ತೆಗೆದುಕೊಳ್ಳುವಂತೆ ಕಾಣುತ್ತೆ" ಎನ್ನುತ್ತಾರೆ ಕೆಲವರು. ಕೆಲವರು ಈ ಟ್ರೆಂಡ್ ಇಷ್ಟಪಟ್ಟರೆ, ಇನ್ನೂ ಕೆಲವರು ಇದರಿಂದ ತೊಂದರೆಗಳೇ ಜಾಸ್ತಿ ಎನ್ನುತ್ತಾರೆ.
ಸ್ಮಾರ್ಟ್ ಪ್ಯಾಕಿಂಗ್ ಮಾಡುವುದು ಹೇಗೆ?
ಪ್ರಯಾಣಿಸುವಾಗ ನೀವು ಸೂಟ್ಕೇಸ್ನಲ್ಲಿ ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಪ್ಯಾಕ್ ಮಾಡುವ ಬದಲು, ನೀವು '5-4-3-2-1 ಪ್ಯಾಕಿಂಗ್ ವಿಧಾನ' (packing format) ಮೂಲಕ ಸ್ಮಾರ್ಟ್ ಪ್ಯಾಕಿಂಗ್ ಮಾಡಬಹುದು. '5-4-3-2-1 ಪ್ಯಾಕಿಂಗ್ ವಿಧಾನ'ವನ್ನು ಆಗಾಗ್ಗೆ ಓವರ್ಪ್ಯಾಕ್ ಮಾಡುವ ಮತ್ತು ನಂತರ ಪ್ರವಾಸದಲ್ಲಿ ಟೆನ್ಶನ್ ಮಾಡಿಕೊಳ್ಳುವವರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ವಿಧಾನಗಳ ಮೂಲಕ, ಒಂದು ಟ್ರಿಪ್ ಗೆ ಎಷ್ಟು ಬಟ್ಟೆಗಳು ಅಗತ್ಯ ಇದೆ ಅನ್ನೋದನ್ನು ವಿಂಗಡಣೆ ಮಾಡಲಾಗುತ್ತೆ.
ಉದಾಹರಣೆಗೆ, ಪ್ಯಾಕಿಂಗ್ ವಿಧಾನದಲ್ಲಿ, '5' ಎಂದರೆ ಒಂದು ನಿರ್ದಿಷ್ಟ ಸಂದರ್ಭದಲ್ಲಿ ನೀವು ಧರಿಸಬಹುದಾದ 5 ಬಟ್ಟೆಗಳನ್ನು ಪ್ಯಾಕ್ ಮಾಡುವುದು. '4' ಎಂದರೆ ಪಾದರಕ್ಷೆಗಳನ್ನು ಸೂಚಿಸುತ್ತದೆ. '3' ಎಂದರೆ ಅಕ್ಸೆಸರಿಗಳು. '2' ಎಂದರೆ ಸೋಪ್ ಅಥವಾ ವಿಶೇಷ ವಸ್ತುಗಳು. ಪ್ಯಾಕಿಂಗ್ ವಿಧಾನದಲ್ಲಿ, '1' ನೀವು ನಿಮ್ಮೊಂದಿಗೆ ಕೊಂಡೊಯ್ಯಬಹುದಾದ ವೈಲ್ಡ್ ಕಾರ್ಡ್ ಐಟಂ ಅನ್ನು ಸೂಚಿಸುತ್ತದೆ. ಈ ವಿಧಾನ ಅನುಸರಿಸಿದ್ರೆ ನಿಮ್ಮ ಪ್ರವಾಸ ಸಖತ್ ಆಗಿರುತ್ತೆ.