3 ವರ್ಷ 8 ತಿಂಗಳು 7 ದಿನಗಳ ಬಳಿಕ ನಿಲ್ದಾಣ ತಲುಪಿತಾ ರೈಲು? ಮಾಹಿತಿ ನೀಡಿದ ಇಂಡಿಯನ್ ರೈಲ್ವೆಸ್
ವಿಶಾಖಪಟ್ಟಣದಿಂದ ಉತ್ತರ ಪ್ರದೇಶದ ಬಸ್ತಿಗೆ ಹೋಗಬೇಕಿದ್ದ ಸರಕು ರೈಲು ತನ್ನ ಗಮ್ಯಸ್ಥಾನ ತಲುಪಲು ಸುಮಾರು ನಾಲ್ಕು ವರ್ಷಗಳನ್ನು ತೆಗೆದುಕೊಂಡಿತು. ಇದು ಭಾರತೀಯ ರೈಲ್ವೆ ಇತಿಹಾಸದಲ್ಲಿಯೇ ಅತಿ ಹೆಚ್ಚು ತಡವಾದ ರೈಲು ಪ್ರಯಾಣ ಎಂದು ವರದಿಯಾಗಿದೆ. ಆದ್ರೆ ಇದೀಗ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.
ತಡವಾದ ರೈಲು
ಕೆಟ್ಟ ಹವಾಮಾನ, ತಾಂತ್ರಿಕ ದೋಷಗಳಿಂದ ರೈಲುಗಳು ತಡವಾಗುವುದು ಸಾಮಾನ್ಯ. ಆದರೆ ಒಂದು ರೈಲು ಸುಮಾರು 3.8 ವರ್ಷ ತಡವಾಗಿ ಬಂದರೆ ನಂಬಲು ಸಾಧ್ಯವೇ? ಹೌದು, ನಿಜ. 1,316 ಚೀಲಗಳ ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ಗೊಬ್ಬರವನ್ನು ಹೊತ್ತ ಸರಕು ರೈಲು ನವೆಂಬರ್ 10, 2014 ರಂದು ತನ್ನ ನಿಲ್ದಾಣದಿಂದ ಹೊರಟು, ಜುಲೈ 25, 2018 ರಂದು ಉತ್ತರ ಪ್ರದೇಶದ ಬಸ್ತಿ ರೈಲು ನಿಲ್ದಾಣವನ್ನು ತಲುಪಿತು ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸರಕು ರೈಲು
ವೈರಲ್ ಸುದ್ದಿ ಏನು?
ವಿಶಾಖಪಟ್ಟಣದಿಂದ ಉತ್ತರ ಪ್ರದೇಶದ ಬಸ್ತಿಗೆ ಹೋಗಬೇಕಿದ್ದ ಸರಕು ರೈಲು ತನ್ನ ಗಮ್ಯಸ್ಥಾನ ತಲುಪಲು ಸುಮಾರು ನಾಲ್ಕು ವರ್ಷಗಳನ್ನು ತೆಗೆದುಕೊಂಡಿತು. ಭಾರತೀಯ ರೈಲ್ವೆ ಇತಿಹಾಸದಲ್ಲಿಯೇ ಅತಿ ಹೆಚ್ಚು ತಡವಾದ ರೈಲು ಇದು. ಒಟ್ಟು 3 ವರ್ಷ 8 ತಿಂಗಳು 7 ದಿನಗಳು ಬೇಕಾಯಿತು.
ಬಸ್ತಿಯ ಉದ್ಯಮಿ ರಾಮ್‌ಚಂದ್ರ ಗುಪ್ತಾ ಅವರ ಹೆಸರಿನಲ್ಲಿ 2014 ರಲ್ಲಿ ವಿಶಾಖಪಟ್ಟಣದಿಂದ ಇಂಡಿಯನ್ ಪೊಟ್ಯಾಷ್ ಲಿಮಿಟೆಡ್ (ಐಪಿಎಲ್) ಮೂಲಕ ವ್ಯಾಗನ್ ಬುಕ್ ಮಾಡಲಾಗಿತ್ತು.
ವೈರಲ್ ಸುದ್ದಿ ಏನು?
14 ಲಕ್ಷಕ್ಕೂ ಹೆಚ್ಚು ಮೌಲ್ಯದ ಸರಕುಗಳನ್ನು ಹೊತ್ತು, 42 ಗಂಟೆಗಳಲ್ಲಿ ಪ್ರಯಾಣ ಮುಗಿಸಬೇಕಿದ್ದ ರೈಲು, ವೇಳಾಪಟ್ಟಿಯಂತೆ ವಿಶಾಖಪಟ್ಟಣದಿಂದ ಹೊರಟಿತು. ಆದರೆ, ನಿರೀಕ್ಷೆಗೆ ವಿರುದ್ಧವಾಗಿ ರೈಲು ಸರಿಯಾದ ಸಮಯಕ್ಕೆ ಬರಲಿಲ್ಲ.
2014ರ ನವೆಂಬರ್‌ನಲ್ಲಿ ಬಸ್ತಿಗೆ ತಲುಪದ ಕಾರಣ, ರಾಮಚಂದ್ರ ಗುಪ್ತಾ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿ ಹಲವು ಬಾರಿ ದೂರು ನೀಡಿದರು. ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ. ಆಗ ರೈಲು ಕಾಣೆಯಾಗಿದೆ ಎಂದು ತಿಳಿದುಬಂದಿದೆ.
ವೈರಲ್ ಸುದ್ದಿ ಏನು?
ಈಶಾನ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂಜಯ್ ಯಾದವ್, “ಕೆಲವೊಮ್ಮೆ, ಕೆಲವು ಬೋಗಿಗಳಲ್ಲಿ ದೋಷ ಕಂಡುಬಂದಾಗ ಅದನ್ನು ಯಾರ್ಡ್‌ಗೆ ಕಳುಹಿಸಲಾಗುತ್ತದೆ, ಈ ವಿಷಯದಲ್ಲೂ ಅದೇ ಆಗಿದೆ ಎಂದು ತೋರುತ್ತದೆ. ವಿಚಾರಣೆಯ ನಂತರ, ಗೊಬ್ಬರವನ್ನು ಸಾಗಿಸುತ್ತಿದ್ದ ರೈಲು ಕೊನೆಗೂ ಜುಲೈ 2018 ರಲ್ಲಿ ಉತ್ತರ ಪ್ರದೇಶದ ಬಸ್ತಿ ರೈಲು ನಿಲ್ದಾಣಕ್ಕೆ ಬಂದಿತು. ಆದರೆ, ಈ ಅವಧಿಯಲ್ಲಿ ರೈಲು ಎಲ್ಲಿ, ಹೇಗೆ, ಏಕೆ ತಡವಾಯಿತು ಅಥವಾ ಕಾಣೆಯಾಯಿತು ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.
ಸ್ಪಷ್ಟನೆ ಏನು?
ಸ್ಪಷ್ಟನೆ ಏನು? ಗೂಡ್ಸ್ ರೈಲು ತನ್ನ ಗಮ್ಯಸ್ಥಾನವನ್ನು ತಲುಪಲು ಮೂರು ವರ್ಷಗಳನ್ನು ತೆಗೆದುಕೊಂಡಿದೆ ಎಂದು ಹಲವಾರು ಸುದ್ದಿ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಭಾರತೀಯ ರೈಲ್ವೇಯಲ್ಲಿನ ಯಾವುದೇ ಸರಕು ರೈಲು ತನ್ನ ಗಮ್ಯಸ್ಥಾನವನ್ನು ತಲುಪಲು ಇಷ್ಟು ಸಮಯವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದೆ.