MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಕಡಿಮೆ ಖರ್ಚಿನಲ್ಲಿ ವಿದೇಶ ಪ್ರಯಾಣ… ಈ ಟಿಪ್ಸ್ ನಿಮ್ಮದಾಗಿಸಿ

ಕಡಿಮೆ ಖರ್ಚಿನಲ್ಲಿ ವಿದೇಶ ಪ್ರಯಾಣ… ಈ ಟಿಪ್ಸ್ ನಿಮ್ಮದಾಗಿಸಿ

ನೀವು ಭಾರತವನ್ನು ಹೊರತುಪಡಿಸಿ ವಿದೇಶಕ್ಕೆ ಪ್ರಯಾಣಿಸಲು ಯೋಚಿಸುತ್ತಿದ್ದರೆ, ಆದರೆ ಅಷ್ಟು ಹಣವಿಲ್ಲದಿದ್ದರೆ, ಇಂದು ನಾವು ನಿಮಗೆ ಕೆಲವು ಟ್ರಾವೆಲಿಂಗ್ ಟಿಪ್ಸ್ ನೀಡುತ್ತೇವೆ, ಅದರ ಮೂಲಕ ನೀವು ದೇಶದಲ್ಲಿ ಮಾತ್ರವಲ್ಲದೆ ವಿದೇಶಕ್ಕೂ ಬಜೆಟ್ ನಲ್ಲಿ ಪ್ರಯಾಣಿಸಬಹುದು.

2 Min read
Suvarna News
Published : Mar 13 2023, 05:16 PM IST
Share this Photo Gallery
  • FB
  • TW
  • Linkdin
  • Whatsapp
19

ಪ್ರಯಾಣಿಸುವುದು ಒಳ್ಳೆಯದು, ಆದರೆ ತಿಂಗಳ ಒಂದು ಪ್ರವಾಸ ನಿಮ್ಮ ಬಜೆಟ್ ಅನ್ನು ಹಾಳುಮಾಡಿದರೆ, ಮುಂದಿನ ಡೆಸ್ಟಿನೇಶನ್ ಬಗ್ಗೆ ಪ್ಲ್ಯಾನ್  (plan for new destination) ಮಾಡೋ ಮೊದಲು ನೀವು ಸಾಕಷ್ಟು ಯೋಚಿಸಬೇಕಾಗುತ್ತೆ. ಆದ್ದರಿಂದ ನೀವು ಯಾವುದೇ ರಾಜಿ ಮಾಡಿಕೊಳ್ಳದೇ ಪ್ರಯಾಣಿಸುವ ನಿಮ್ಮ ಹವ್ಯಾಸ ಪೂರೈಸಲು ಬಯಸಿದರೆ, ಇಲ್ಲಿ ನೀಡಲಾದ ಸಲಹೆಗಳು ನಿಮ್ಮ ಸಹಾಯಕ್ಕೆ ಬರಬಹುದು. ಹೇಗೆ ಕಡಿಮೆ ಹಣದಲ್ಲಿ ಟ್ರಾವೆಲ್ ಮಾಡೋದು ನೋಡೋಣ. 

29

ಮುಂಚಿತವಾಗಿ ಯೋಜನೆ ಮಾಡಿ (pre plan)
ಬಜೆಟ್ ಪ್ರಯಾಣಕ್ಕೆ ಎಲ್ಲಿಗೆ ಹೋಗಬೇಕೆಂದು ಮುಂಚಿತವಾಗಿ ಯೋಜಿಸಿ. ಎಲ್ಲಿಗೆ ಹೋಗಬೇಕು, ಅಲ್ಲಿ ಉಳಿಯಲು ಆಯ್ಕೆಗಳು ಯಾವುವು. ರೈಲು ಅಥವಾ ಬಸ್ ಮೂಲಕ ಹೋಗಬೇಕೆ? ಈ ಎಲ್ಲ ವಿಷಯಗಳನ್ನು ಪ್ಲ್ಯಾನ್ ಮಾಡಿ. ಅನೇಕ ಬಾರಿ ಬೆಳಿಗ್ಗೆ ಮತ್ತು ರಾತ್ರಿ ವಿಮಾನಗಳ ಬೆಲೆಗಳಲ್ಲಿ ವ್ಯತ್ಯಾಸವಿರುತ್ತದೆ, ಆದ್ದರಿಂದ ನೀವು ಇಲ್ಲಿ ಹಣವನ್ನು ಉಳಿಸಬಹುದು. 

39

ಆಫ್ ಸೀಸನ್ ನಲ್ಲಿ ಪ್ರಯಾಣ (off season travel)
ಹೌದು, ಇದನ್ನು ಕೇಳಲು ನಿಮಗೆ ವಿಚಿತ್ರವೆನಿಸುತ್ತದೆ, ಆದರೆ ನೀವು ಯಾವುದೇ ಡೆಸ್ಟಿನೇಶನ್ ಗೆ ಹೋಗಲು ಪ್ಲ್ಯಾನ್ ಮಾಡುತ್ತಿದ್ದರೂ, ನೀವು ಆಫ್ ಸೀಸನ್ ಗೆ ಹೋಗುವ ಮೂಲಕ ಸಾಕಷ್ಟು ಹಣವನ್ನು ಉಳಿಸಬಹುದು. ನೀವು ಹೋಟೆಲ್ ಗಳು ಅಥವಾ ಹೋಮ್ ಸ್ಟೇಗಳಲ್ಲಿ ಮಾತ್ರವಲ್ಲದೆ ವಿಮಾನ ದರಗಳಲ್ಲೂ ರಿಯಾಯಿತಿ ಪಡೆಯಬಹುದು.

49

ಹೋಟೆಲ್ ಗಳ ಬದಲು ಹಾಸ್ಟೆಲ್ ಗಳಲ್ಲಿ ಉಳಿಯಿರಿ (stay at hostel instead of hotel)
ಪ್ರವಾಸವನ್ನು ಬಜೆಟ್ ನಲ್ಲಿ ಮುಗಿಸಲು ಬಯಸಿದ್ರೆ, ಹಾಸ್ಟೆಲ್ ಗಳಲ್ಲಿ ಉಳಿಯಿರಿ, ಹೋಟೆಲ್ ಗಳಲ್ಲಿ ಅಲ್ಲ. ಇದಲ್ಲದೆ, ಲಾಡ್ಜ್ ಆಯ್ಕೆಯೂ ಇದೆ. ಅಂದಹಾಗೆ, ಇತ್ತೀಚಿನ ದಿನಗಳಲ್ಲಿ ಹೋಮ್ ಸ್ಟೇ ಆಯ್ಕೆಯು ಸಾಕಷ್ಟು ಜನಪ್ರಿಯವಾಗುತ್ತಿದೆ ಮತ್ತು ಇದು ಹೋಟೆಲ್ ಗಳಿಗಿಂತ ಅಗ್ಗದ ಮತ್ತು ಉತ್ತಮ ಆಯ್ಕೆಯಾಗಿದೆ. ಅಲ್ಲಿ ನೀವು ಉಳಿಯುವುದರ ಜೊತೆಗೆ ನಿಮಗೆ ಬೇಕಾದ ಅಡುಗೆಯನ್ನು ನೀವೇ ಮಾಡಬಹುದು.

59
Air travel

Air travel

ಸಾರ್ವಜನಿಕ ಸಾರಿಗೆಯನ್ನು ಬಳಸಿ (use public transport)
ಪ್ರವಾಸಿ ಸ್ಥಳಗಳನ್ನು ತಲುಪಲು ಟ್ಯಾಕ್ಸಿ ಅಥವಾ ಕ್ಯಾಬ್ ಕಾಯ್ದಿರಿಸಲು ಕಷ್ಟವಾಗುತ್ತದೆ ಅಂದರೆ ಸಾರ್ವಜನಿಕ ಸಾರಿಗೆಯನ್ನು ಬಳಸಿ. ಇದು ಪ್ರವಾಸದಲ್ಲಿ ನಿಮಗೆ ಸಾಕಷ್ಟು ಹಣವನ್ನು ಉಳಿಸುತ್ತದೆ. ಕಡಿಮೆ ಬಜೆಟ್ ನಲ್ಲಿ ನೀವು ಪಬ್ಲಿಕ್ ಟ್ರಾವೆಲ್ ಗಳಲ್ಲಿ ಸಖತ್ತಾಗಿ ಎಂಜಾಯ್ ಮಾಡಬಹುದು.

69

ಟ್ರಾವೆಲ್ ಇನ್ಶುರೆನ್ಸ್  (travel insurance)
ಬಜೆಟ್ ನಲ್ಲಿ ಪ್ರಯಾಣಿಸಲು ಪ್ರಮುಖ ಸಲಹೆ ಎಂದರೆ ಟ್ರಾವೆಲ್ ಇನ್ಶುರೆನ್ಸ್ ಪಡೆಯೋದು, ಇದು ಆರಂಭದಲ್ಲಿ ಹೆಚ್ಚುವರಿ ವೆಚ್ಚವಾಗಿದೆ, ಆದರೆ ನಿಮ್ಮ ಪ್ರವಾಸವು ರದ್ದಾದರೆ ಅಥವಾ ನೀವು ವಿದೇಶದಲ್ಲಿ ಅನಾರೋಗ್ಯಕ್ಕೆ ಒಳಗಾದರೆ ಟ್ರಾವೆಲ್ ಇನ್ಶುರೆನ್ಸ್ ನಿಂದ ನೀವು ಹಲವಾರು ಲಾಭ ಪಡೆಯಬಹುದು. 

79

ಶಾಪಿಂಗ್ ಕಡಿಮೆ ಮಾಡಿ (less shopping)

ನೀವು ಹೋದ ಜಾಗದಲ್ಲೆಲ್ಲಾ ಶಾಪಿಂಗ್ ಮಾಡುತ್ತಾ ಕೂರಬೇಡಿ. ಯಾಕಂದ್ರೆ ಇದರಿಂದ ಹಣವೂ ನಷ್ಟವಾಗುತ್ತೆ, ಜೊತೆಗೆ ನಿಮ್ಮ ಲಗೇಜ್ ಕೂಡ ಹೆಚ್ಚಾಗುತ್ತೆ. ಹಾಗಾಗಿ ಸಾಧ್ಯವಾದಷ್ಟು ಕಡಿಮೆ ಶಾಪಿಂಗ್ ಮಾಡಿ, ಅದೇ ವಸ್ತುಗಳು ನಿಮ್ಮ ಊರಲ್ಲಿ ಕಡಿಮೆ ದರದಲ್ಲೇ ಸಿಗಬಹುದು. 

89

ಟ್ರಾವೆಲಿಂಗ್ ಜಾಗವನ್ನುಎಚ್ಚರಿಕೆಯಿಂದ ಆಯ್ಕೆ ಮಾಡಿ (travelling place)
ಕೆಲವು ಸ್ಥಳಗಳಲ್ಲಿ ನಿಮ್ಮ ಊರಿಗಿಂತ ಹೆಚ್ಚು ದುಬಾರಿ ಅಥವಾ ಅಗ್ಗವಾಗಿವೆ. ಬಜೆಟ್ ನಲ್ಲಿ ಪ್ರಯಾಣಿಸಲು ಬಯಸಿದ್ರೆ, ನೀವು ಬಜೆಟ್ ನಲ್ಲಿ ಪ್ರಯಾಣಿಸಲು ಉತ್ತಮವಾದ ಸ್ಥಳಗಳನ್ನು ಹುಡುಕೋದು ಮುಖ್ಯ. ಇದು ಅಗ್ಗದ ಮತ್ತು ಸುಲಭವಾಗಿ ತಲುಪಬಹುದಾದ ಯಾವುದೇ ತಾಣವಾಗಿರಬಹುದು, ವಿನಿಮಯ ದರದಿಂದಾಗಿ ಕರೆನ್ಸಿ ನಿಮಗೆ ಉತ್ತಮ ಮೌಲ್ಯ ನೀಡುತ್ತದೆ, ಅಥವಾ ಎಲ್ಲಿ ರೂಪಾಯಿ ಮೌಲ್ಯ ಹೆಚ್ಚಿದೆಯೋ ಅಲ್ಲಿ ಟ್ರಾವೆಲ್ ಮಾಡಿ. 

99

ಸ್ಟ್ರೀಟ್ ಫುಡ್ ಪ್ರಯತ್ನಿಸಿ (try street food)
ನೀವು ಎಲ್ಲಿಗೆ ಹೋದರೂ, ದುಬಾರಿ ಹೋಟೆಲ್ ಬದಲು ಸ್ಥಳೀಯ ಬೀದಿ ಆಹಾರ ತಿನ್ನಲು ಪ್ರಯತ್ನಿಸಿ. ಅವು ರೆಸ್ಟೋರೆಂಟ್ ಗಳಿಗಿಂತ ಕಡಿಮೆ ಬೆಲೆಯಲ್ಲಿವೆ, ಜೊತೆಗೆ ನೀವು ಆ ಸ್ಥಳದ ಅಧಿಕೃತ ಆಹಾರವನ್ನು ಸಹ ಸವಿಯಬಹುದು. 

About the Author

SN
Suvarna News
ಪ್ರವಾಸ
ಜೀವನಶೈಲಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved