Instagram ರೀಲ್ಸ್‌ಗಳಿಂದ ಲಕ್ಷ ಲಕ್ಷ ಸಂಪಾದಿಸಲು ಎಷ್ಟು ವಿವ್ಸ್, ಲೈಕ್ಸ್, ಫಾಲೋವರ್ಸ್ ಹೊಂದಿರಬೇಕು?
ಸೋಷಿಯಲ್ ಮೀಡಿಯಾ ರೀಲ್ಸ್‌ಗಳ ಮೂಲಕ ಹಣ ಗಳಿಸುವುದು ಈಗ ಸುಲಭವಾಗಿದೆ. ಕೇವಲ 10,000 ಫಾಲೋವರ್ಸ್ ಹೊಂದಿರುವವರು ಪ್ರತಿ ಪೋಸ್ಟ್‌ಗೆ ರೂ 3,725 ಗಳಿಸಿ, ಮಾಸಿಕ 2 ಲಕ್ಷ ರೂ.ಗಿಂತ ಹೆಚ್ಚು ಗಳಿಸಬಹುದು. ಇದು ಸರ್ಕಾರಿ ಉದ್ಯೋಗಗಳ ಸಂಬಳವನ್ನು ಮೀರಿಸುತ್ತದೆ. ಈ ಕೆಲ ಟಿಪ್ಸ್‌ಗಳನ್ನು ನೀವು ಅನುಸರಿಸಿ..
ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಸಮಯ ಸಿಕ್ಕಾಗೆಲ್ಲಾ ಸೋಷಿಯಲ್ ಮೀಡಿಯಾ ಸ್ಕ್ರೋಲ್ ಮಾಡ್ತಾರೆ. ಆದರೆ, ಗಣ ಗಳಿಕೆ ಮಾಡುವುದು ಹೇಗೆ ಎಂದು ತಿಳಿದುಕೊಂಡಿದ್ದೀರಾ.?
ಹೌದು, ಇನ್‌ಸ್ಟಾಗ್ರಾಂ ಬಳಸುವ ನೂರಕ್ಕೆ ಶೇ.95ಕ್ಕಿಂತ ಹೆಚ್ಚಿನ ಜನರು ಕಾಲಹರಣ ಮಾಡಲು ಮಾತ್ರ ಬಳಕೆ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಿಂದ ಹಣ ಗಳಿಕೆ ಮಾಡುವ ಬಗ್ಗೆ ಮಾಹಿತಿಯನ್ನೇ ತಿಳಿದುಕೊಂಡಿಲ್ಲ. ಪ್ರತಿದಿನ ಕಚೇರಿಯಲ್ಲಿ 9 ಗಂಟೆ ಕೆಲಸ ಮಾಡಲು ಸಾಕಾಗಿದ್ದರೆ. ನೀವು ಬೇರೆ ರೀತಿಯಲ್ಲಿ ಹಣ ಗಳಿಸಬಹುದು.
ಈಗ ಅನೇಕ ಜನರು ಸೋಷಿಯಲ್ ಮೀಡಿಯಾದಿಂದ ಸಾಕಷ್ಟು ಹಣ ಗಳಿಸುತ್ತಿದ್ದಾರೆ. ನೀವು ಬಯಸಿದರೆ, ನೀವು ಸಹ ಸೋಷಿಯಲ್ ಮೀಡಿಯಾದಲ್ಲಿ ವೃತ್ತಿ ಜೀವನವನ್ನು ನಿರ್ಮಿಸಿಕೊಳ್ಳಬಹುದು. ಆದರೆ, ಅದಕ್ಕೆ ಕೆಲವೊಂದು ಉಪಾಯಗಳನ್ನು ನೀವು ಬಳಸಬೇಕು.
ನಮ್ಮಲ್ಲಿ ಅನೇಕರು ಫೋನ್ ಸ್ಕ್ರೋಲ್ ಮಾಡುವಾಗ ವಿವಿಧ ರೀಲ್‌ಗಳನ್ನು ನೋಡುತ್ತೇವೆ. ಆ ರೀಲ್‌ಗಳಲ್ಲಿ ನಾವು 10k ಅಥವಾ 20k ಅಥವಾ ಕೆಲವೊಮ್ಮೆ ಹೆಚ್ಚಿನ ವೀಕ್ಷಣೆಗಳನ್ನು ನೋಡುತ್ತೇವೆ. ಅನೇಕರು ರೀಲ್‌ಗಳನ್ನು ಮಾಡುವ ಮೂಲಕ ಜನಪ್ರಿಯರಾಗಿದ್ದಾರೆ.
ಸೋಷಿಯಲ್ ಮೀಡಿಯಾ ಈ ರೀಲ್ ತಯಾರಕರಿಗೆ ಖ್ಯಾತಿಯನ್ನು ಮಾತ್ರ ನೀಡಿಲ್ಲ. ಇದು ಅವರಿಗೆ ಸಾಕಷ್ಟು ಹಣವನ್ನೂ ನೀಡುತ್ತದೆ. ಹೇಗೆ ಎಲ್ಲಿಂದ ಹಣ ಗಳಿಸಬಹುದು ಎಂಬ ಮಾಹಿತಿ ಇಲ್ಲಿದೆ.
ಸೋಷಿಯಲ್ ಮೀಡಿಯಾ ಈ ರೀಲ್ ತಯಾರಕರಿಗೆ ಖ್ಯಾತಿಯನ್ನು ಮಾತ್ರ ನೀಡಿಲ್ಲ. ಇದು ಅವರಿಗೆ ಸಾಕಷ್ಟು ಹಣವನ್ನೂ ನೀಡುತ್ತದೆ. ಹೇಗೆ ಎಲ್ಲಿಂದ ಹಣ ಗಳಿಸಬಹುದು ಎಂಬ ಮಾಹಿತಿ ಇಲ್ಲಿದೆ.
Instagram ಸ್ವತಃ ತನ್ನ ಬಳಕೆದಾರರಿಗೆ ವೀಕ್ಷಕರ ಸಂಖ್ಯೆಯ ಆಧಾರದ ಮೇಲೆ ನೇರವಾಗಿ ಪಾವತಿಸುವುದಿಲ್ಲ. ಬದಲಾಗಿ, ಇನ್ಫ್ಲುಯೆನ್ಸರ್ ಮಾರ್ಕೆಟಿಂಗ್, ಪ್ರಾಯೋಜಿತ ಪೋಸ್ಟ್‌ಗಳು, ಅಂಗಸಂಸ್ಥೆ ಮಾರ್ಕೆಟಿಂಗ್ ಮತ್ತು ಉತ್ಪನ್ನ ಮಾರಾಟದ ಮೂಲಕ ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಹಣ ಗಳಿಕೆಗೆ ಅವಕಾಶ ಮಾಡಿಕೊಟ್ಟಿದೆ.
ನಿಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸರಾಸರಿ, 10,000 ವೀಕ್ಷಕರನ್ನು ಹೊಂದಿರುವ ಖಾತೆಯು ಪ್ರತಿ ಪೋಸ್ಟ್‌ಗೆ ಸುಮಾರು $44 (3,725 ರೂ.) ಗಳಿಸಬಹುದು. ಅಂದರೆ, ನೀವೂ ಕೂಡ 10 ಸಾವಿರ ವೀಕ್ಷಕರನ್ನು ಹೊಂದಿದ್ದರೆ ಹಣ ಗಳಿಕೆಯನ್ನು ಇಂದಿನಿಂದಲೇ ಆರಂಭಿಸಬಹುದು.
ವಾರಕ್ಕೆ ಸುಮಾರು $616 ಮತ್ತು ತಿಂಗಳಿಗೆ $2640. ಅಂದರೆ, ವಾರಕ್ಕೆ ರೂ 52,162 ರಿಂದ ತಿಂಗಳಿಗೆ ರೂ 2,23,553 ವರೆಗೆ ಹಣ ಗಳಿಕೆ ಮಾಡಬಹುದು. ಸರ್ಕಾರಿ ನೌಕರರಿಗೆ ತಿಂಗಳಿಗೆ ಕನಿಷ್ಠ ರೂ 30,000 ರಿಂದ ರೂ 50,000 ಸಿಗುತ್ತದೆ. ಆದರೆ, ನೀವು ಆ ಹಣಕ್ಕೆ ರೀಲ್‌ಗಳನ್ನು ಮಾಡುವ ಮೂಲಕ ಖ್ಯಾತಿಯನ್ನು ಗಳಿಸಬಹುದಾದರೆ, ನಂತರ ನೀವು ತಿಂಗಳಿಗೆ ಲಕ್ಷ ಲಕ್ಷ ರೂಪಾಯಿಗಳವರೆಗೆ ಗಳಿಸಬಹುದು.