ಇನ್ಮುಂದೆ ಪುಕ್ಕಟೆ ಇಂಟರ್ನೆಟ್ ಸಿಗಲ್ಲ; ಉಚಿತ ವೈ-ಫೈ ಯೋಜನೆಗೆ ಗುಡ್ಬೈ!
ಇಂದು ನಾವು ಇಂಟರ್ನೆಟನ್ನೇ ಉಸಿರಾಡುತ್ತಿದ್ದೇವೆ ಅಂದ್ರೆ ತಪ್ಪಾಗಲ್ಲ. ಅದು ಬೆಡ್ರೂಂ ಇರಲಿ ಅಥವಾ ವಿಮಾನ, ಇಂಟರ್ನೆಟ್ ಬೇಕೆ ಬೇಕು. ಉಚಿತ ವೈ-ಫೈ ಸಿಕ್ಕರೆ ಸಂತೋಷಕ್ಕೆ ಪಾರ ಇರಲ್ಲ. ಅಂತಹ ಒಂದು ಯೋಜನೆಗೆ ಈಗ ಬ್ರೇಕ್ ಬೀಳಲಿದೆ.
ಸೆಪ್ಟಂಬರ್ 2015ರಲ್ಲಿ ಆರಂಭವಾಗಿದ್ದ ಗೂಗಲ್ ಸ್ಟೇಷನ್ ಯೋಜನೆಗೆ ಬ್ರೇಕ್
ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ ಒದಗಿಸುವ ಗೂಗಲ್ ಸ್ಟೇಷನ್ ಯೋಜನೆ
ಭಾರತದ ಸುಮಾರು 400 ರೈಲು ನಿಲ್ದಾಣಗಳಲ್ಲಿ ಗೂಗಲ್ನಿಂದ ಈ ಸೇವೆ
ಜನಸಾಮಾನ್ಯರಿಗೆ ಇಂಟರ್ನೆಟ್ ಸಂಪರ್ಕ ಒದಗಿಸಲು 5 ವರ್ಷಗಳ ಹಿಂದೆ ಆರಂಭವಾಗಿದ್ದ ಮಹಾತ್ವಾಕಾಂಕ್ಷೆ ಯೋಜನೆ
2018ರಲ್ಲಿ ಗೂಗಲ್ ನೀಡಿದ್ದ ವರದಿ ಪ್ರಕಾರ, ಪ್ರತಿ ತಿಂಗಳು ಸುಮಾರು 8 ಮಿಲಿಯನ್ ಮಂದಿ ಈ ಸೇವೆಯನ್ನು ಬಳಸುತ್ತಿದ್ದರು.
ಅಗ್ಗವಾಗಿರುವ ಮೊಬೈಲ್ ಡೇಟಾ ಮತ್ತು ಉತ್ತಮ ಸಂಪರ್ಕ ಈಗ ಎಲ್ಲೆಡೆ ಲಭ್ಯ
ಈ ಹಿನ್ನೆಲೆಯಲ್ಲಿ, ಹಿಂದಿನ ವ್ಯವಸ್ಥೆ ಅಪ್ರಸ್ತುತವಾಗಿದೆ. ಅದನ್ನು ಮುಂದಕ್ಕೆ ಕೊಂಡೊಯ್ಯೋದು ಕೂಡಾ ಕಷ್ಟ ಎಂದು ಗೂಗಲ್ ಹೇಳಿದೆ.