ಮಳೆಯಿಂದ ಮಲೆನಾಡಿನ ಫಾಲ್ಸ್ಗಳಿಗೆ ಜೀವಕಳೆ; ಕಾಡಂಚಿನ ಜಲಪಾತ ಪ್ರವಾಸಿಗರ ಹಾಟ್ಸ್ಪಾಟ್!
ಮಳೆಯಿಂದ ಮಲೆನಾಡಿನ ಫಾಲ್ಸ್ ಗಳಿಗೆ ಜೀವಕಳೆ ಬಂದಿದೆ. ಕಳಸ ತಾಲೂಕಿನ ನಲ್ಲಿ ಪ್ರವಾಸಿಗರು ಎಂಜಾಯ್. ಮೂಲಭೂತ ಸೌಕರ್ಯ ಒದಗಿಸಿದ್ರೆ ಕಾಡಂಚಿನ ಜಲಪಾತ ಪ್ರವಾಸಿಗರ ಹಾಟ್ ಸ್ಪಾಟ್ ಆಗಲಿದೆ.
ಕಾಫಿನಾಡಿಗೆ ಮುಂಗಾರು ಎಂಟ್ರಿಯಾದ್ರೆ ಮಲೆನಾಡು ಹಚ್ಚಹಸಿರಿನಿಂದ ಶಾಶ್ವತ ಮುತ್ತೈದೆಯಂತೆ ಕಂಗೊಳಿಸುತಿರುತ್ತೆ. ಪಶ್ಚಿಮ ಘಟ್ಟಗಳ ಸಾಲಿನ ಜಿಟಿ-ಜಿಟಿ ಮಳೆ ಕಾಫಿನಾಡಲ್ಲಿ ಹೊಸದೊಂದು ಲೋಕವನ್ನೇ ಸೃಷ್ಟಿಸಿರುತ್ತೆ.
ಆ ಸೌಂದರ್ಯದ ಮಧ್ಯೆ ಕಾಡಿನ ನಡುವೆ ಹರಿಯೋ ಸಣ್ಣಪುಟ್ಟ ಹಳ್ಳಗಳು ಸೃಷ್ಟಿಸಿರೋ ಜಲಪಾತಗಳ ಕಾಫಿನಾಡ ಸೌಂದರ್ಯಕ್ಕೆ ಹಿಡಿದ ಕೈಗನ್ನಡಿ. ಆ ಸರಿಸಾಟಿ ಇಲ್ಲದ ಸೌಂದರ್ಯದ ಸಾಲಿನಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾಯನವನದ ತಪ್ಪಲಿನ ಅಬ್ಬುಗುಡಿಗೆ ಜಲಪಾತ ಕೂಡ ಸೇರ್ಕೊಂಡಿದೆ. ಸರ್ಕಾರ ಈ ಜಲಪಾತಕ್ಕೆ ಮೂಲಭೂತ ಸೌಕರ್ಯ ನೀಡಿದ್ರೆ ಕಾಡಂಚಿನ ಜಲಪಾತ ಪ್ರವಾಸಿಗರ ಹಾಟ್ ಸ್ಪಾಟ್ ಆಗೋದು ಗ್ಯಾರಂಟಿ
ಕಳಸದ ರಾಜ್ಯ ಹೆದ್ದಾರಿಯಿಂದ ನಾಲ್ಕು ಕಿ.ಮೀ. ಒಳಗೆ ಹೋದ್ರೆ ದಟ್ಟ ಕಾನನ. ಆ ಕಾಡಿನ ಮಧ್ಯೆ 1 ಕಿ.ಮೀ. ದೂರದಲ್ಲೇ ನೀರನ ಅಬ್ಬರದ ಸಪ್ಪಳ ಕಿವಿಗೆ ಬಡಿತಿರುತ್ತೆ.ಹಾಗೇ ಒಳ ಹೊದ್ರೆ ಎದುರಾಗೋದೆ ಈ ಅಬ್ಬಗುಡಿಗೆ ಪಾಲ್ಸ್. ಕೆಲವೊಂದು ಕಡೆ ಕಾಲ್ನಡಿಗೆಯಲ್ಲೇ ಹೋಗಬೇಕು. ಹರಿಯೋ ಹಳ್ಳವನ್ನೂ ದಾಟಬೇಕು. ಆ ಖುಷಿಯೇ ಬೇರೆ. ಕಾಡಿನ ಮಾರ್ಗದಲ್ಲಿ ಅಲ್ಲಲ್ಲೇ ನಾಮಫಲಕಗಳು ಇವೆ.ಆದ್ರೆ, ರೋಡ್ ಮಾತ್ರ ಸಮರ್ಪಕವಾಗಿಲ್ಲ ಅನ್ನೋದು ಪ್ರವಾಸಿಗರ ಮಾತು.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಅಬ್ಬುಗುಡಿಗೆ ಜಲಪಾತ ಇದೀಗ ಮಳೆಯಿಂದ ಮೈ ತುಂಬಿ ಹರಿಯುತ್ತಿದೆ. 20-30 ಅಡಿ ಎತ್ತರದಿಂದ ಧುಮ್ಮಿಕ್ಕುತ್ತೆ. ನೆಲಮಟ್ಟದಲ್ಲೇ ಇದೆ. ಮಹಿಳೆಯರು-ಮಕ್ಕಳು ಎಲ್ಲರೂ ಹೋಗ್ಬೋದು. ಆಟವಾಡ್ಬೋದು. ಎಂಜಾಯ್ ಮಾಡ್ಬೋದು. ಅಂತಹಾ ಸುಂದರ ಜಾಗದಲ್ಲಿ ಅಬ್ಬುಗುಡಿಗೆ ಜಲಪಾತವಿದೆ.
ವರ್ಷ ಪೂರ್ತಿ ನೀರಿದ್ರು ಮುಂಗಾರು ಎಂಟ್ರಿಯಾಗ್ತಿದ್ದಂತೆ ಈ ಜಲಪಾತದ ಗತ್ತು-ಗಮ್ಮತ್ತೆ ಬೇರೆ.ಬಂಡೆ ಮೇಲಿದ್ದು ಜಿಗಿಯೋ ನೀರು. ಅಲ್ಲಿಂದ ಮುಂದೇ ಹರಿಯೋ ಹಳ್ಳ. ಹಳ್ಳದಲ್ಲಿ ಹರಿಯೋ ನೀರಿನ ಜೊತೆ ಹಕ್ಕಿ-ಪಕ್ಷಿಗಳ ನಿನಾದ. ಎಲ್ಲವೂ ಮನಸ್ಸಿಗೆ ಮುದ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಅಬ್ಬುಗುಡಿಗೆ ಜಲಪಾತದ ವೈಭವ ಇಮ್ಮಡಿಗೊಂಡಿದೆ. ಹಾಗಾಗಿ, ನಿತ್ಯ ಕಳಸ ಹಾಗೂ ಹೊರನಾಡಿಗೆ ಬರುವ ಪ್ರವಾಸಿಗರು-ಭಕ್ತರಲ್ಲಿ ಬಹುತೇಕರು ಅಬ್ಬುಗುಡಿಗೆ ಜಲಪಾತಕ್ಕೆ ಭೇಟಿ ನೀಡಿ ಪ್ರಕೃತಿ ಮಧ್ಯೆ ಮಿಂದೆದ್ದು ಎಂಜಾಯ್ ಮಾಡ್ತಿದ್ದಾರೆ.
ಸಿಂಪಲ್ಲಾಗಿ-ಸಖತ್ತಾಗಿರೋ ಈ ಜಲಪಾತಕ್ಕೆ ಮೂಲಭೂತ ಸೌಕರ್ಯ ನೀಡಿದ್ರೆ ಅದ್ಭುತ ಅನ್ನೋದು ಪ್ರವಾಸಿಗರ ಅಭಿಪ್ರಾಯ. ಅಂತಾ ಏನು ಸೌಕರ್ಯವಿಲ್ಲದಿದ್ರು ಅಬ್ಬುಗುಡಿಗೆ ಜಲಪಾತವಂತೂ ಮಳೆಗಾಲದಲ್ಲಿ ಪ್ರವಾಸಿಗರ ಪಾಲಿನ ಸ್ವರ್ಗವೇ ಸರಿ. ಒಟ್ಟಾರೆ, ಅಬ್ಬುಗುಡಿಗೆ ಫಾಲ್ಸ್ ಸೌಂದರ್ಯಕ್ಕೆ ಸರಿಸಾಟಿಯೇ ಇಲ್ಲ. ಕಾಫಿ ನಾಡಲ್ಲಿರೋ ಪಾಲ್ಸ್ ಗಳಲ್ಲಿ ಅತೀ ಹೆಚ್ಚು ಪ್ರವಾಸಿಗರ ನೆಚ್ಚಿನ ಸ್ಪಾಟ್ ಗಳಲ್ಲಿ ಇದು ಒಂದು. ಮಕ್ಕಳಿಗೆ ಆಟವಾಡ್ಸೋದಕ್ಕೆ ಇದು ಹೇಳಿ ಮಾಡಿಸಿದ ಜಾಗ. ಮಳೆಗಾಲದಲ್ಲಂತೂ ಕಾಡಿನ ನಡುವೇ ಪಯಣ. ಮುಂದೆ ಸಾಗಿದ್ರೆ ಧುಮ್ಮಿಕ್ಕುವ ಜಲಪಾತ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಆದ್ರೆ, ಇಲ್ಲಿಗೆ ಬೇಕಾದ ಮೂಲಭೂತ ಸೌಕರ್ಯ ನೀಡಿದರೆ ಈ ಸುಂದರ ಪ್ರವಾಸಿ ತಾಣ ಪ್ರವಾಸಿಗರ ಹಾಟ್ ಸ್ಪಾಟ್ ಆಗೋದು ಗ್ಯಾರಂಟಿ ಅನ್ನೋದು ಪ್ರವಾಸಿಗರ ನಂಬಿಕೆ.