ಅಂಬರೀಶ್ ಪ್ರೀತಿಯ ಶ್ವಾನ ಕನ್ವರ್ ಇನ್ನಿಲ್ಲ!
ರೆಬೆಲ್ ಸ್ಟಾರ್ ಅಂಬರೀಶ್ ಪ್ರೀತಿಯ ಶ್ವಾನ ಕನ್ವರ್ ಇಂದು ನೆನಪು ಮಾತ್ರ. ಬೆಂಗಳೂರಿನಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಪ್ರೀತಿಯ ಶ್ವಾನ ಕನ್ವರ್ ಮೇ 24, 2021ರಂದು ಅನುನೀಗಿದೆ.
ಬೆಂಗಳೂರಿನಲ್ಲಿ ಕನ್ವರ್‌ನನ್ನು ಮಣ್ಣು ಮಾಡಲಾಗಿದೆ.
ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ತಮ್ಮ ಮುದ್ದಿನ ಶ್ವಾನ ಅಸುನೀಗಿದ್ದರಿಂದ, ದುಃಖದಲ್ಲಿದ್ದಾರೆ.
ಕನ್ವರ್ ಮನೆ ಮಂದಿಗೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೇ ಪರಿಚಯವಿದ್ದ ಶ್ವಾನ.
ಅದರಲ್ಲೂ ನಟ ದರ್ಶನ್ ಅಂಬಿ ನಿವಾಸಕ್ಕೆ ಭೇಟಿ ನೀಡಿದಾಗಲೆಲ್ಲಾ, ಕನ್ವರ್ ಜೊತೆ ಸಮಯ ಕಳೆಯುತ್ತಿದ್ದರು.
ಕನ್ವರ್ ಲಾಲ್ ಮತ್ತು ಬುಲ್ ಬುಲ್ ಎಂದು ಎರಡು ಶ್ವಾನ ಸಾಕಿದ್ದರು ರೆಬೆಲ್ ಸ್ಟಾರ್ ಅಂಬರೀಷೇ, ಇದೀಗ ಬುಲ್ ಬುಲ್ ಒಬ್ಬಂಟಿಯಾಗಿದೆ.