- Home
- Entertainment
- Sandalwood
- ಕನ್ನಡ ಕಿರುತೆರೆ, ಹಿರಿತೆರೆ ತಾರೆಯರ ಸಂಕ್ರಾಂತಿ ಸಂಭ್ರಮ ಬಲು ಜೋರು… ಫೋಟೋಸ್ ಇಲ್ಲಿವೆ
ಕನ್ನಡ ಕಿರುತೆರೆ, ಹಿರಿತೆರೆ ತಾರೆಯರ ಸಂಕ್ರಾಂತಿ ಸಂಭ್ರಮ ಬಲು ಜೋರು… ಫೋಟೋಸ್ ಇಲ್ಲಿವೆ
ಇಂದು ದೇಶದೆಲ್ಲೆಡೆ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ಕನ್ನಡ ಸಿನಿಮಾದ ನಟ, ನಟಿಯರು ಹಬ್ಬವನ್ನು ಹೇಗೆ ಆಚರಿಸಿದ್ದರು ನೋಡಿ…

ಸಪ್ತಮಿ ಗೌಡ : ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಎನ್ನುತ್ತಾ ಕಾಂತಾರಾ ಚೆಲುವೆ ಸಪ್ತಮಿ ಗೌಡ ಜನರಿಗೆ ಸಂಕ್ರಾಂತಿ ಶುಭಾಶಯ ಕೋರಿದ್ದಾರೆ.
ರಚನಾ ರೈ : ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ರಚನಾ ರೈ, ಸಂಕ್ರಾಂತಿಯ ಶುಭಾಶಯಗಳು. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ.
ರಂಜನಿ ರಾಘವನ್ : ಸೂರ್ಯದೇವನು ಪಥ ಬದಲಿಸುವ ಸಂಕ್ರಮಣದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ. ಎಳ್ಳು-ಬೆಲ್ಲದ ಜೊತೆಗೆ ಪ್ರೀತಿ ಸೌಹಾರ್ದತೆಯನ್ನು ಹಂಚೋಣ, ಎಲ್ಲೆಡೆ ಸುಖ-ಶಾಂತಿ, ಸಮೃದ್ಧಿ ನೆಲೆಸಲಿ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು...
ರುಕ್ಮಿಣಿ ವಸಂತ್ : ಸಪ್ತಸಾಗರದಾಚೆ ಚೆಲುವೆ ರುಕ್ಮಿಣಿ ವಸಂತ್, ಹೂವಿನ ಮಾರುಕಟ್ಟೆಯಲ್ಲಿ ನಿಂತುಕೊಂಡು ವಿವಿಧ ರೀತಿಯಲ್ಲಿ ಪೋಸ್ ಕೊಡುವ ಮೂಲಕ ಸಂಕ್ರಾಂತಿಯನ್ನು ಸಂಭ್ರಮಿಸಿದ್ದಾರೆ.
ಅಶ್ವಿನಿ : ಕನ್ನಡ ಕಿರುತೆರೆ ನಟಿ ಅಶ್ವಿನಿ ಸಾಂಪ್ರದಾಯಿಕ ಸೀರೆಯುಟ್ಟು ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದಿದ್ದಾರೆ.
ರಿಷಭ್ ಶೆಟ್ಟಿ : ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು ಎಂದು ರಿಷಭ್ ಶೆಟ್ಟಿ ಪತ್ನಿ ಮತ್ತು ಮಕ್ಕಳೊಂದಿಗಿನ ಫೋಟೊ ಶೇರ್ ಮಾಡಿದ್ದಾರೆ.
ಅನುಷಾ ರೈ : ಎಲ್ಲಾ ಸ್ನೇಹಿತರಿಗೆ, ಹಿರಿಯರಿಗೆ, ಗುರುಗಳಿಗೆ… ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು* ಸಂಕ್ರಾಂತಿ ಎಲ್ಲರ ಕಷ್ಟಗಳನ್ನುದೂರವಾಗಿಸಲಿ, ಸುಖ , ಸಮೃದ್ಧಿಯ ಸುಗ್ಗಿ ಪ್ರತಿ ಮನೆ - ಮನ ತುಂಬಲಿ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಸಂತೋಷ ನೆಮ್ಮದಿ ಹಾಗೂ ಸಕಲ ಐಶ್ವರ್ಯವನ್ನು ಕರುಣಿಸಲಿ, ನವಚೈತನ್ಯವನ್ನು ತರಲೆಂದು ಪ್ರಾರ್ಥಿಸುತ್ತೇವೆ...
ಅಮೃತಾ ರಾಮಮೂರ್ತಿ : ಎಳ್ಳು ಬೆಲ್ಲ ತಿಂದು ಸಿಹಿಯಾದ ಮಾತಾಡೋಣ.. ಎಲ್ಲಾ ಕಹಿ ಮರೆತು ಮಧುರವಾದ ಬಾಂಧವ್ಯ ವೃದ್ಧಿಸೋಣ.. ಮಕರ ಸಂಕ್ರಾಂತಿ 2025ರ ಶುಭಾಶಯಗಳು
ಶರಣ್ : ನಟ ಶರಣ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸುಗ್ಗಿ ಸಂಭ್ರಮ ಎಲ್ಲೆಡೆ ಮನೆ ಮಾಡಲಿ. ನಿಮ್ಮ ಪ್ರಯತ್ನಗಳೆಲ್ಲವೂ ಫಲ ಕೊಡಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಮೌನ ಗುಡ್ಡೆಮನೆ : ರಾಮಾಚಾರಿ ಖ್ಯಾತಿಯ ನಟಿ ಮೌನ ಗುಡ್ಡೆಮನೆ ಸೀರಿಯಲ್ ಸಂತೆಯಲ್ಲಿಯೇ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.
ರಾಮಾಚಾರಿ ಫ್ಯಾಮಿಲಿ : ರಾಮಾಚಾರಿ ಸೀರಿಯಲ್ ನ ಎಲ್ಲರೂ ಜೊತೆಯಾಗಿ ಸಂಕ್ರಾಂತಿ ಆಚರಿಸಿದ್ದು, ರಾಮಾಚಾರಿ ಖ್ಯಾತಿಯ ರಿತ್ವಿಕ್ ಕೃಪಾಕರ್, ಅಂಜಲಿ ಸುಧಾಕರ್, ಮೌನ ಗುಡ್ಡೆಮನೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಸಾನ್ಯಾ ಅಯ್ಯರ್ : ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಆಯ್ತಾ ಎನ್ನುತ್ತಾ ನೀಲಿ ಬಣ್ಣದ ಸೀರೆಯುಟ್ಟು ಪೋಸ್ ನೀಡಿದ್ದಾರೆ ಸಾನ್ಯಾ ಅಯ್ಯರ್.
ಸಂಯುಕ್ತ ಹೆಗ್ಡೆ : ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. May this new year bring us all the joy and peace of life ಎನ್ನುತಾ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ ಕಿರಿಕ್ ಬೆಡಗಿ ಸಂಯುಕ್ತ ಹೆಗ್ಡೆ.