ನಾನು ಚಿನ್ನದ ಹುಡುಗಿ, ನಿಮಗಿದು ಲುಕ್ ಇಷ್ಟನಾ: Rashmika Mandanna
ಸೋಷಿಯಲ್ ಮೀಡಿಯಾದಲ್ಲಿ ನಾನು ಗೋಲ್ಡನ್ ಗರ್ಲ್ ಎಂದು ಬರೆದುಕೊಂಡ ರಶ್ಮಿಕಾ ಮಂದಣ್ಣ. ವೈರಲ್ ಆಗುತ್ತಿದೆ ಕಾಲೆಳೆಯುವ ಕಾಮೆಂಟ್‌ಗಳು...
ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಮತ್ತು ಬಾಲಿವುಡ್ ಎರಡೂ ಕಡೆ ರಶ್ಮಿಕಾ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಕನ್ನಡ ಸಿನಿಮಾರಂಗದಿಂದ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ಕಿರಿಕ್ ಸುಂದರಿ ಸದ್ಯ ತೆಲುಗು, ತಮಿಳು ಮತ್ತೆ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮೊದಲ ಹಿಂದಿ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಗುಡ್‌ಬೈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಸಿನಿಮಾತಂಡ ಪ್ರಮೋಷನ್ ನಲ್ಲಿ ನಿರತವಾಗಿದೆ. ರಶ್ಮಿಕಾ ಮುಂಬೈನಲ್ಲಿ ಪ್ರಮೋನ್ ಮಾಡುತ್ತಿದ್ದಾರೆ.
ಪ್ರಚಾರಕ್ಕೆ ಧರಿಸಿರುವ ಡ್ರೆಸ್ ಫೋಟೋ ಹಂಚಿಕೊಂಡು 'ಇಂದು ನಾನು ಗೋಲ್ಡನ್ ಗರ್ಲ್. ಎಷ್ಟು ಕೂಲ್ ಆಗಿದೆ. ನಿಮಗಿದು ಲುಕ್ ಇಷ್ಟವಾಯ್ತಾ? ಗುಡ್‌ಬೈ ಪ್ರಚಾರ' ಎಂದು ಬರೆದುಕೊಂಡಿದ್ದಾರೆ.
'ರಶ್ಮಿಕಾ ಗೋಲ್ಡನ್ ಗರ್ಲ್ ಫಾರ್‌ಎವರ್' ಮತ್ತು 'ನೀವು ಎಂದಿಗೂ ಗೋಲ್ಡನ್ ಯಾವುದಕ್ಕೂ ಕಡಿಮೆ ಇಲ್ಲ' ಎಂದು ಅಭಿಮಾನಿಗಳು ಪಾಸಿಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ.
'ನೀವು ಗೋಲ್ಡನ್ ಗರ್ಲ್ ಆಗಿರುವುದು ಬಾಲಿವುಡ್ ಪ್ರವೇಶಿಸಿದ ನಂತರವೇ' ಮತ್ತು 'ಇಷ್ಟೊಂದು ಹಣ ಮಾಡುತ್ತಿರುವಾಗ ನೀವು ಗೋಲ್ಡನ್ ಗರ್ಲ್ ಆಗಿರಲೇ ಬೇಕು' ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ಈ ನಡುವೆ ರಶ್ಮಿಕಾ ಮಂದಣ್ಣ ಹಿಂದಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಸಾಮಿ ಸಾಮಿ ಅಂತ ಕುಣಿದು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ರಶ್ಮಿಕಾ ಡಾನ್ಸ್ ಸಖತ್ ವೈರಲ್ ಆಗಿದೆ. ಹೌದು ರಶ್ಮಿಕಾ ಹಿಂದಿಯ ಡಾನ್ಸ್ ಇಂಡಿಯಾ ಡಾನ್ಸ್ ಸೂಪರ್ ಮಾಮ್ 3 (DID Super Moms 3) ಶೋನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಶೋನಲ್ಲಿ ರಶ್ಮಿಕಾ ನಟ ಗೊವಿಂದ ಅವರ ಜೊತೆ ಮಸ್ತ್ ಡಾನ್ಸ್ ಮಾಡಿದ್ದಾರೆ. ಪುಷ್ಪ ಸಿನಿಮಾದ ಸೂಪರ್ ಹಿಟ್ ಸಾಮಿ ಸಾಮಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ರಶ್ಮಿಕಾ ಮತ್ತು ಗೊವಿಂದ ಅವರ ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.